ಕೊನಗವಳ್ಳಿಯ ಮೊಮ್ಮಗ ಹೀರೋ ಆಗ್ತಾನ?

0
70

ಬೆಂಗಳೂರು: ಕನ್ನಡ ಪತ್ರಿಕೋದ್ಯಮದ ಖ್ಯಾತ ಪತ್ರಕರ್ತರಾಗಿದ್ದ ಲಂಕೇಶ್ ಪತ್ರಿಕೆಯ ಸಂಪಾದಕರಾಗಿದ್ದ ದಿವಂಗತ ಪಿ ಲಂಕೇಶ್ ಅವರ ಪುತ್ರ ಇಂದ್ರಜಿತ್
ಲಂಕೇಶ್ ಅವರ ಮಗ ಸಮರ್ಜಿತ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದು ಫೋಟೋ ಶೂಟ್ ನಡೆದಿದೆ. ಈ
ಮೂಲಕ ಕನ್ನಡ ಚಿತ್ರರಂಗಕ್ಕೆ ನೂತನ ನಾಯಕನ ಎಂಟ್ರಿ ಆಗಿದೆ. ಆರಡಿ ಎತ್ತರದ ಹೀರೋ ಕನ್ನಡ ಚಿತ್ರರಂಗದಲ್ಲಿ ತಮ್ಮ ಛಾಪನ್ನು ಮೂಡಿಸುತ್ತಾರಾ
ಕಾದು ನೋಡಬೇಕು.

ಏಕೆಂದರೆ ಇವರ ತಂದೆ ಇಂದ್ರಜಿತ್ ಲಂಕೇಶ್ ಪತ್ರಕರ್ತರಾಗಿ ನಿರ್ದೇಶಕರಾಗಿ ಈಗಾಗಲೇ ಖ್ಯಾತನಾಮರಾಗಿದ್ದಾರೆ.

ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ನಿರ್ದೇಶನ ಮಾಡಿರುವಂತಹ ಇಂದ್ರಜಿತ್ ಲಂಕೇಶ್ ಈ ಬಾರಿ ತಮ್ಮ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.

“ಗೌರಿ’ ಸಿನಿಮಾದ ಮೂಲಕ ಸಮರ್ಜಿತ್ ಲಂಕೇಶ್ ಎಂಟ್ರಿ ನೀಡುತ್ತಿದ್ದು.

ನಾಳೆ ಆಗಸ್ಟ್ 31 ರಂದು ಸಿನಿಮಾದ ಮುಹೂರ್ತದೊಡ್ಡ ಗಣಪತಿ ದೇವಸ್ಥಾನದಲ್ಲಿ ಸಿನಿಮಾಗೆ ಚಾಲನೆ ದೊರೆಯಲಿದ್ದು”ಗೌರಿ’ ಸಿನಿಮಾಗಾಗಿ ಸಮರ್ಜಿತ್ ಈಗಾಗಲೇ ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಂಡಿದ್ದಾರೆ

ಸಮರ್ಜಿತ್ ಗೆ ಸಾನ್ಯಾ ಐಯ್ಯರ್
ನಾಯಕಿ

ಸಿನಿಮಾ ಮುಹೂರ್ತಕ್ಕೂ ಮುನ್ನವೇ ಸಮರ್ಜಿತ್ ಹಾಗೂ ಸಾನ್ಯಾ ಅವರ ಫೋಟೋಶೂಟ್ ನಡೆದಿದ್ದು ಸ್ಯಾಂಡಲ್ ವುಡ್ ನ ಖ್ಯಾತ ಸಿನಿಮಾಟೋಗ್ರಾಫರ್ ಭುವನ್ ಗೌಡೆ ಸಮರ್ಜಿತ್ ಅವರ ಫೋಟೋಶೂಟ್ ಮಾಡಿ ಲುಕ್ ಟೆಸ್ಟ್ ಮಾಡಿದ್ದಾರೆ…



ಭುವನ್ ಮಾತ್ರವಲ್ಲದೆ ಎಜೆ ಶೆಟ್ಟಿ ಅನ್ನಿಂದಲೂ ಫೋಟೋ ಶೂಟ್ ಮಾಡಿಸಿದ್ದು ಸಾನ್ಯಾ ಹಾಗೂ ಸಮರ್ಜಿತ್
ಶೂಟ್ ನಲ್ಲಿ
ಇಬ್ಬರ ಕೆಮಿಸ್ಟ್ರಿ ಫೋಟೋ ಸಖತ್ತಾಗಿ ವರ್ಕ್ ಆಗಿದೆ.

ಈಗಾಗಲೇ ಚಿತ್ರರಂಗದಲ್ಲಿ ನಿರ್ದೇಶಕರಾಗಿ
ಇಂದ್ರಜಿತ್
ಗುರುತಿಸಿಕೊಂಡಿರುವಂತಹ ತಮ್ಮ ಮಗ ಯಾವ ಯಾವ ಪಾತ್ರದಲ್ಲಿ ಯಾವ ರೀತಿ ಕಾಣಿಸುತ್ತಾರೆ ಎಂಬುದನ್ನು ಚೆಕ್ ಮಾಡಲು ಸುಮಾರು ನಾಲ್ಕೆದು ಲುಕ್ ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ…

ಫೋಟೋ ಶೂಟ್ ಮಾತ್ರವಲ್ಲದೇ ಕೆಲ ಹಳೆ ಸಿನಿಮಾ ಸೀನ್ ಗಳನ್ನ ರೀ ಕ್ರಿಯೇಟ್ ಮಾಡುವ ಮೂಲಕ ಮಗನ ಆಕ್ಟಿಂಗ್ ಅನ್ನೂ ಕೂಡ ಟೆಸ್ಟ್ ಮಾಡಿದ್ದಾರೆ.

ಲುಕ್ ಹಾಗೂ ಆಕ್ಟಿಂಗ್, ಸ್ಟಂಟ್, ಡ್ಯಾನ್ಸ್ ಎಲ್ಲಾ ವಿಚಾರದಲ್ಲಿಯೂ ಸಮರ್ಜಿತ್ ಪರ್ಫೆಕ್ಸ್ ಅನ್ನಿಸುತ್ತಿದ್ದು ಮುಹೂರ್ತದ ಬಳಿಕ ನೇರವಾಗಿ ಶೂಟಿಂಗ್ ಹೋಗಲಿದ್ದಾರೆ ಗೌರಿ ಸಿನಿಮಾ ಟೀಂ ಆರಡಿ ಎತ್ತರದ ಹೀರೋ ಕನ್ನಡ ಚಿತ್ರರಂಗದಲ್ಲಿ ತಮ್ಮ ಛಾಪನ್ನು ಮೂಡಿಸುತ್ತಾರಾ ಕಾದು ನೋಡಬೇಕು.