ನಾಳೆ ಶಿವಮೊಗ್ಗಕ್ಕೆ ಬರುವ ವಿಮಾನಕ್ಕೆ ಹೇಗಿರುತ್ತೆ, ಸ್ವಾಗತ!?

0
135

Satvika nudi LIVE
Shivamogga-Bengaluru-Indigo-Airlines-ATR-72-Flight
August 30, 2023
ಶಿವಮೊಗ್ಗಕ್ಕೆ ವಿಮಾನ, ಮೊದಲ ದಿನ ಯಾರೆಲ್ಲ ಪ್ರಯಾಣಿಸಲಿದ್ದಾರೆ? ಹೇಗಿರುತ್ತೆ ವಿಮಾನಕ್ಕೆ ವೆಲ್‌ಕಮ್‌

SHIMOGA : ಬೆಂಗಳೂರು–ಶಿವಮೊಗ್ಗ ನಡುವೆ ಆ.31ರಿಂದ ವಿಮಾನಯಾನ ಸೇವೆ (Flight Operation) ಆರಂಭವಾಗಲಿದೆ. ಮೊದಲ ದಿನ ವಿಮಾನದಲ್ಲಿ ಯಾರೆಲ್ಲ ಪ್ರಯಾಣಿಸಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.

ಯಾರೆಲ್ಲ ಪ್ರಯಾಣ ಮಾಡಲಿದ್ದಾರೆ?

ಇಂಡಿಗೋ ಸಂಸ್ಥೆಯ ವಿಮಾನ ಗುರುವಾರ ಬೆಳಿಗ್ಗೆ 9.50ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು 11.05ಕ್ಕೆ ಶಿವಮೊಗ್ಗ ತಲುಪಲಿದೆ. ಮೊದಲ ಯಾನದಲ್ಲಿ, ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್‌, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಮಾಜಿ‌ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಮಲೆನಾಡು ಭಾಗದ ಜನಪ್ರತಿನಿಧಿಗಳು ಇರಲಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಳಿದೊಡನೆಯೇ ವಾಟರ್‍‌ ಸೆಲ್ಯೂಟ್‌ ಮೂಲಕ ಸಂಭ್ರಮಾಚರಣೆ ಮಾಡಲಾಗುವುದು.