Wednesday, September 25, 2024
spot_img

ಇಂದಿನ ಪತ್ರಿಕಾಗೋಷ್ಠಿ

 

ಡಿ ಎಸ್ ಎಸ್ ಗುರುಮೂರ್ತಿ ಅಭಿಮಾನಿ ಬಳಗದಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಿವ ಬಸಪ್ಪನವರು ಮಾತನಾಡುತ್ತಾ,

ಎಂ.ಗುರುಮೂರ್ತಿಯವರು ದಲಿತ ಚಳುವಳಿಗೆ ಧುಮುಕಿ ಇಲ್ಲಿಗೆ 42 ವರ್ಷಗಳು ಕಳೆದಿವೆ. 80ರ ದಶಕದ ಆರಂಭದಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಚಳುವಳಿಗೆ ಪ್ರವೇಶಿಸಿದ ಶ್ರೀ ಎಂ ಗುರುಮೂರ್ತಿ ಅವರು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರೊಫೆಸರ್ ಬಿ ಕೃಷ್ಣಪ್ಪನವರ ನೇತೃತ್ವದಲ್ಲಿ ನಡೆದ ಅನೇಕ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ, 1986 ರಲ್ಲಿ ನಡೆದ ಚಂದ್ರಗುತ್ತಿ ಬೆತ್ತಲೆ ಸೇವೆ ವಿರೋಧಿ ಹೋರಾಟ, ಬಗೈರ್ ಹುಕುಂ ಚಳುವಳಿ, ಜೀನಳ್ಳಿ ಭೂ ಹೋರಾಟ, ಕ್ಯಾಸಿನಕೆರೆ ದಲಿತ ತಿಪ್ಪೇಸ್ವಾಮಿ ಕೊಲೆ ಖಂಡಿಸಿ ನಡೆದ ಕಾಲ್ನಡಿಗೆ ಜಾತ, 1982ರಲ್ಲಿ ಕೋಲಾರದಲ್ಲಿ ನಡೆದ ಪ್ರಥಮ ದಲಿತ ವಿದ್ಯಾರ್ಥಿ ಸಮ್ಮೇಳನ ಸೇರಿದಂತೆ ಪ್ರೊಫೆಸರ್ ಬಿ.ಕೃಷ್ಣಪ್ಪನವರು
ನಡೆಸಿದ ಅನೇಕ ಬೆಳೆದವರು ನಾಯಕರಾಗಿ
ಹೋರಾಟಗಳಲ್ಲಿ ಭಾಗವಹಿಸಿ ಎಂ.ಗುರುಮೂರ್ತಿಯವರು.
ಸಂಚಾಲಕರಾಗಿ ನೇಮಕಗೊಂಡ 1993ರಲ್ಲಿ ಪ್ರೊಫೆಸರ್ ಬಿ.ಕೃಷ್ಣಪ್ಪನವರಿಂದ ಶಿವಮೊಗ್ಗ ಜಿಲ್ಲಾ ಎಂ.ಗುರುಮೂರ್ತಿಯವರು ಸತತ 21 ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿದರು ಜಿಲ್ಲಾ ಸಂಚಾಲಕರ ಅವಧಿಯಲ್ಲಿ ಅನೇಕ ಭೂ ಹೋರಾಟಗಳು ಸಾಮಾಜಿಕ ಬಹಿಷ್ಕಾರದ ವಿರುದ್ಧ ನಡೆದ ಹೋರಾಟಗಳು ಸ್ಮಶಾನಭೂಮಿಗಾಗಿ ನಡೆಸಿದ ಹೋರಾಟಗಳು ಅತ್ಯಂತ ಪ್ರಮುಖವಾಗಿವೆ, 2005ರಲ್ಲಿ ಶಿವಮೊಗ್ಗ ತಾಲೂಕು ಸೂಗೂರು ಸಾಮಾಜಿಕ ಬಹಿಷ್ಕಾರದ ವಿರುದ್ಧ ಶಿವಮೊಗ್ಗದವರೆಗೆ ನಡೆಸಿದ ಕಾಲು ನಡುಗೆ ಜಾತ, ಭದ್ರಾವತಿ ತಾಲೂಕು ಮಂಗೋಟೆ ಗ್ರಾಮದಲ್ಲಿ ನಡೆದ ಸಾಮಾಜಿಕ ಬಹಿಷ್ಕಾರದ ವಿರುದ್ಧ ಮತ್ತು ದಲಿತರ ಭೂಮಿಗಾಗಿ ಮಂಗೋಟೆಯಿಂದ ಶಿವಮೊಗ್ಗದವರಿಗೆ ಕಾಲು ನಡಿಗೆ ಜಾತ, 2014 ಮತ್ತು 15 ರಲ್ಲಿ ಭದ್ರಾವತಿ ತಾಲೂಕು ಕಾಚಗೊಂಡನಹಳ್ಳಿಯಲ್ಲಿ ದಲಿತರ ಪಿ.ಟಿ.ಪಿ.ಯಲ್ ಜಮೀನಿಗಾಗಿ ನಡೆದ ಹೋರಾಟ ಮತ್ತು ಕಾಲ್ನಡಿಗೆ ಜಾತ, ಸ್ಮಶಾನ ಭೂಮಿಗಾಗಿ ನಡೆದ ಹೋರಾಟಗಳು ಮತ್ತು ಶಿವಮೊಗ್ಗ ನಗರದ ಹೃದಯ ಭಾಗದಲ್ಲಿ ಡಾಕ್ಟರ್ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಒತ್ತಾಯಿಸಿ 1999ರಲ್ಲಿ ಡಿಸಿ ಕಚೇರಿಯವರ ಆವರಣದಲ್ಲಿ ನಡೆಸಿದ ತಮಟೆ ಚಳುವಳಿ, 2014ರಲ್ಲಿ ನಗರದಲ್ಲಿ ಡಾಕ್ಟರ್‌ ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆಗಾಗಿ ಡಿಸಿ ಕಚೇರಿ ಮುಂಭಾಗ ವಾರಗಟ್ಟಲೆ ನಡೆಸಿದ ಆಹೋರಾತ್ರಿ ಧರಣಿ ಸತ್ಯಾಗ್ರಹ ಮತ್ತು ಶಿವಮೊಗ್ಗ ನಗರದ ಸಾಗರ ರಸ್ತೆಯ ಆಲ್ಕೋಳ ಸರ್ಕಲ್ಲಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಪ್ರೊಫೆಸರ್ ಬಿ ಕೃಷ್ಣಪ್ಪನವರ ಸರ್ಕಲ್ ನಾಮಕರಣಕ್ಕಾಗಿ ನಡೆದ ಹೋರಾಟ ಮತ್ತು 2016ರಲ್ಲಿ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಬಿ.ಕೃಷ್ಣಪ್ಪನವರ ಅಧ್ಯಯನ ಕೇಂದ್ರ ಸ್ಥಾಪನೆಗಾಗಿ ಎಂ ಗುರುಮೂರ್ತಿ ಅವರ ನೇತೃತ್ವದಲ್ಲಿ ನಡೆಸಿದ ಎಲ್ಲಾ ಹೋರಾಟಗಳು ಯಶಸ್ವಿಯಾಗಿವೆ.
2014ರಲ್ಲಿ ರಾಜ್ಯ ಸಂಚಾಲಕರಾಗಿ ಅಧಿಕಾರ ವಹಿಸಿಕೊಂಡ ಎಂ.ಗುರುಮೂರ್ತಿಯವರು ವಿವಿಧಕಾರಣಗಳಿಗಾಗಿ ಒಡೆದು ಹೋಗಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳನ್ನು ಒಂದುಗೂಡಿಸಲು ಶ್ರಮಿಸಿದರು ರಾಜ್ಯ ಪ್ರವಾಸ ಮಾಡಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಒಗ್ಗೂಡಿಸಿದರು.
ಈ ಮೇಲ್ಕಂಡ ಎಲ್ಲಾ ಅಂಶಗಳನ್ನು ಮನಗಂಡು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ಶಿವಮೊಗ್ಗ ಹಾಗೂ ಡಿಎಸ್‌ಎಸ್ ಗುರುಮೂರ್ತಿಯವರ ಅಭಿಮಾನಿ ಬಳಗ ಶಿವಮೊಗ್ಗ ಇವರ ಸಂಯುಕ್ತಶ್ರಯದಲ್ಲಿ ಡಿ ಎಸ್‌ಎಸ್‌ ಗುರುಮೂರ್ತಿಯವರ 60ನೇ ವರ್ಷದ ಹುಟ್ಟುಹಬ್ಬ ಹಾಗೂ ಸಮುದ್ರ ಸಂಗಮ” ಅಭಿನಂದನ ಗ್ರಂಥ ಬಿಡುಗಡೆ ಸಮಾರಂಭವನ್ನು ದಿನಾಂಕ:27-08-2023 ಸಂಭ್ರಮಾಚರಣೆಯನ್ನು ಹಮ್ಮಿಕೊಂಡಿದ್ದು ಗುರುಮೂರ್ತಿ ಅವರ ಜೀವನ ಚರಿತ್ರೆ ಅವರ ಸಂದರ್ಶನ ಅವರ ನೇತೃತ್ವದಲ್ಲಿ ನಡೆದ ಹೋರಾಟಗಳು ಅವರ ಒಡನಾಡಿಗಳ ಅಭಿಪ್ರಾಯಗಳನ್ನು ಈ ಗ್ರಂಥ ಒಳಗೊಂಡಿದೆ. ಅಲ್ಲದೆ ದಲಿತ ಚಳುವಳಿಯ ಕುರಿತು ಹೆಸರಾಂತ ಲೇಖಕರು ವಿಮರ್ಶಕರು ಬರೆದ ಲೇಖನಗಳನ್ನು ಒಳಗೊಂಡಿದೆ. ಸುಮಾರು400 ಪುಟಗಳ ಅಭಿನಂದನಾ ಗ್ರಂಥ “ಸಮುದ್ರ ಸಂಗಮ” ವನ್ನು ಬಿಡುಗಡೆಗೊಳಿಸುವ ಮೂಲಕ ಗುರುಮೂರ್ತಿಯವರ ಹುಟ್ಟುಹಬ್ಬವನ್ನು ಆಚರಿಸಲು ತೀರ್ಮಾನಿಸಲಾಗಿದೆ. ಈ ಅಭಿನಂದನ ಗ್ರಂಥವನ್ನು ಪ್ರಕಟಿಸಿವು ಕಾರಣದಿಂದಾಗಿ ಇದೇ ತಿಂಗಳು ಆಗಸ್ಟ್ 12ರಂದು ಆಚರಿಸಬೇಕಾಗಿದ್ದ ಗುರುಮೂರ್ತಿಯವರ ಹುಟ್ಟುಹಬ್ಬವನ್ನು ಇದೇ ತಿಂಗಳು ಆಗಸ್ಟ್ 27ನೇ ತಾರೀಕಿಗೆ ಈಡಿಗರ ಭವನ ಸಾಗರ ರಸ್ತೆಯಲ್ಲಿ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಅನೇಕ ಗಣ್ಯರು ಕೂಡ ಆಗಮಿಸಲಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಲಿದ್ದಾರೆ. ಶಿವಮೊಗ್ಗದ ಸಾರ್ವಜನಿಕರು ಆಗಮಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಎಂದರು.

ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ

 

ಶಿವಮೊಗ್ಗ ನಾಗರಿಕ ಹಿತ ರಕ್ಷಣಾ ವೇದಿಕೆಗಳ ಒಕ್ಕೂಟದ ಪರವಾಗಿ ವಸಂತ್ ಕುಮಾರ್ ರವರು ಮಾತನಾಡುತ್ತಾ
ಶಿವಮೊಗ್ಗ ನಗರದಲ್ಲಿ ಕಳೆದ ಐದು ವರ್ಷಗಳಿಂದ ಸ್ಕಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ 1000 ಕೋಟಿ ಹಣದಲ್ಲಿ ವಿವಿಧ ಪ್ಯಾಕೇಜ್‌ಗಳ ಅಡಿಯಲ್ಲಿ ಆಯ್ದ ವಾರ್ಡ್‌ಗಳಲ್ಲಿ ಅನೇಕ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ರಸ್ತೆ, ಚರಂಡಿ, ಫುಟ್ಬಾತ್, ಪಾರ್ಕ್, ಬಸ್ ಶೆಲ್ಟರ್, ಕನ್ಸರ್ವೆನ್ಸಿ, ಸರ್ಕಲ್ ಅಭಿವೃದ್ಧಿ, ಶೌಚಾಲಯಗಳು ಹಾಗೂ ಇವುಗಳ ಜೊತೆಗೆ ಮೆಸ್ಕಾಂ ಜೊತೆಗೂಡಿ ಯುಜಿ ಕೇಬಲ್ ಇವೇ ಮುಂತಾದ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ.
ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟವು ಈ ಕಾಮಗಾರಿಗಳ ಅನುಷ್ಠಾನದ ಪ್ರತಿ ಹಂತದಲ್ಲೂ ಲೋಪ ದೋಷಗಳನ್ನು ಎತ್ತಿ ತೋಸಿರಿ ಇವುಗಳನ್ನು ಸರಿಪಡಿಸುವಂತೆ ಪ್ರತಿಭಟನೆಗಳನ್ನು ನಡೆಸಿ ಸ್ಮಾರ್ಟ್ ಸಿಟಿ ಎಂ.ಡಿ ಅವರಿಗೆ, ಜಿಲ್ಲಾಧಿಕಾರಿಗಳಿಗೆ, ಮಹಾನಗರ ಪಾಲಿಕೆ ಆಯುಕ್ತರಿಗೆ, ಮೆಸ್ಕಾಂ ಕಾರ್ಯಪಾಲಕ ಇಂಜಿನಿಯರ್‌ ಹಾಗೂ ನಗರ ನೀರು ಸರಬರಾಜು ಮಂಡಳಿಯ ಕಾರ್ಯಪಾಲಕ ಇಂಜಿನಿಯರ್ ಇವರುಗಳಿಗೆ ಸುಮಾರು 60 ದೂರುಗಳನ್ನು ಅಧಿಕೃತವಾಗಿ ನೀಡಿದ್ದರೂ ಇಲ್ಲಿಯವರೆಗೆ ಈ ಲೋಪದೋಷಗಳನ್ನು ಸರಿಪಡಿಸುವ ಯಾವುದೇ ಪ್ರಯತ್ನಗಳು ನಡೆದಿರುವುದಿಲ್ಲ.
ಮೆಸ್ಕಾಂ ಇಲಾಖೆ ವತಿಯಿಂದ ಅನುಷ್ಠಾನಗೊಂಡಿರುವ ಯುಜಿ ಕೇಬಲ್ ಕಮಗಾರಿಗಳಿಗೆ ಬಳಸಲಾಗಿರುವ ಕೇಬಲ್‌ಗಳು ಅತ್ಯಂತ ಕಳಪೆ ಗುಣಮಟ್ಟದ್ದಾಗಿದೆ. ಶಿವಮೊಗ್ಗ ನಗರದಾದ್ಯಂತ ಈಗಾಗಲೆ ಹಲವು ಬಡಾವಣೆಗಳಲ್ಲಿ ಫೀಡರ್ ಬಾಕ್ಸ್ಗಳಿಗೆ ಬೆಂಕಿ ತಗುಲಿ ಆಗಿರುವ ಅನಾಹುತಗಳು ಪ್ರತಿನಿತ್ಯ ಕೇಳಿ ಬರುತ್ತಿವೆ. ವಿದ್ಯುತ್ ಕಾಮಗಾರಿಗಳನ್ನು ಅನುಸರಿಸದೇ ಕಾಮಗಾರಿಯನ್ನು ನಡೆಸಲಾಗಿದೆ. ಈ ಕಾರಣಕ್ಕಾಗಿ ವ್ಯಾಪಕವಾಗಿ ಕಂಡುಬರುತ್ತಿರುವ ವಿದ್ಯುತ್ ಅನಾಹುತಗಳಿಗೆ ಹೊಣೆಗಾರರು ಯಾರು?
ಯೋಜನೆ ಅನುಷ್ಠಾನದಲ್ಲಿ ಕಂಡುಬಂದ ಅನೇಕ ಲೋಪದೋಷಗಳನ್ನು ಶಿವಮೊಗ್ಗದ ಈ ಹಿಂದನ ಶಾಸಕರ ಸಮ್ಮುಖದಲ್ಲಿಯೇ ಹಲವು ಬಾರಿ ಚರ್ಚೆ ನಡೆದು ಅವೆಲ್ಲವುಗಳನ್ನು ಸರಿಪಡಿಸಿಕೊಳ್ಳುವಂತೆ ಸೂಚನೆ ಮತ್ತು ಮಾರ್ಗದರ್ಶನ ನೀಡಿದ್ದರೂ ಇದು ಯಾವುದೂ ಅನುಷ್ಠಾನಕ್ಕೆ ಬಾರದೇ ಶಿವಮೊಗ್ಗದ ಜನರ ಹಿಡಿ ಶಾಪಕ್ಕೆ ಈ ಇಲಾಖೆ ಗುರಿಯಾಗಿದೆ. ಈ ನಿಯೋಜಕ ಯೋಜನೆ ಮತ್ತು ಕಾಮಗಾರಿಗಳ ಲೋಪ ದೋಷಕ್ಕೆ ಯಾರು ಹೊಣೆ?

ಇನ್ನು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಕೈಗೊಳ್ಳಲಾಗಿರುವ ರಸ್ತೆ, ಚರಂಡಿ, ಕನ್ಸರ್ವೆನ್ಸಿ, ಬಸ್ ಶೆಲ್ಟರ್, ಸಾರ್ವಜನಿಕ ಶೌಚಾಲಯಗಳು, ಸಿಗ್ನಲ್ ಲೈಟ್ ಹೀಗೆ ಹಲವು ಹತ್ತು ಕಾಮಗಾರಿಗಳನ್ನು ನಡೆಸಲಾಗಿದೆ. ಕಳೆದ ಮೂರು ವರ್ಷಗಳಿಂದ ವೇದಿಕೆಯು ನಿರಂತರವಾಗಿ ಸರಣಿ ಹೋರಾಟಗಳ ಮೂಲಕ ಲೋಪದೋಷಗಳ ಬಗ್ಗೆ ಎಚ್ಚರಿಸುತ್ತಲೇ ಬಂದಿದ್ದರೂ ಇದ್ಯಾವುದನ್ನು ಪರಿಗಣಿಸದೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಅದರ ಸಂಪೂರ್ಣ ವರದಿಯನ್ನು ಸರಕಾರಕ್ಕೆ ಸಲ್ಲಿಸುವ ಹುನ್ನಾರ ನಡೆಯುತ್ತಿದೆ. ಅವರು ನಡೆಸಿದಂತಹ ಇಲ್ಲಾ ಭ್ರಷ್ಟಾಚಾರಗಳು ಬಯಲಿಗೆ ಬರುವ ಹಂತದಲ್ಲಿಯೇ ಈ ಹಿಂದಿನ ಎಂ.ಡಿ ಅವರು ಶಿವಮೊಗ್ಗದಿಂದ ವರ್ಗಾವಣೆಗೊಂಡು ಪಲಾಯನಗೈದಿದ್ದಾರೆ. ಈ ಹಿಂದಿನ ಎಂ.ಡಿ ಚಿದಾನಂದ ವಟಾರೆಯವರ ಕರ್ಮಕಾಂಡಗಳನ್ನು ಮುಚ್ಚಲೇಬೇಕಾದ ಪರಿಸ್ಥಿತಿಯಲ್ಲಿ ತಾತ್ಕಾಲಿಕವಾಗಿ ಈ ಹುದ್ದೆಯನ್ನು ಅಲಂಕರಿಸಿರುವ ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀ ಮಾಯಣ್ಣ ಗೌಡ ಅವರು ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿದ್ದಾರೆ.

ಕೇಂದ್ರ ಸರ್ಕಾರದ ಕನಸಿನ ಯೋಜನೆಯಾದ ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ಯಾವುದೇ ಗುಣಮಟ್ಟಗಳನ್ನು ಕಾಪಾಡಿಕೊಳ್ಳದೆ ಕಳೆದ ಐದು ವರ್ಷಗಳಿಂದ ಸಾರ್ವಜನಿಕರಿಗೆ ಕಿರಿಕಿರಿಯಾದ ಹಾಗೂ ಭ್ರಷ್ಟಾಚಾರದ ಕೂಪವಾಗಿ ಪರಿಣಮಿಸಿರುವ ಈ ಯೋಜನೆಯ ವೈಫಲ್ಯಕ್ಕೆ ಹೊಣೆಗಾರರು ಯಾರು?

ಆದ್ದರಿಂದ ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಸರಿಸುಮಾರು 11 ಪೂರ್ಣ ವಾರ್ಡ್‌ಗಳು ಹಾಗೂ ಐದು ಭಾಗಶಃ ವಾರ್ಡ್‌ಗಳಲ್ಲಿ ಕೈಗೊಳ್ಳಲಾಗಿರುವ ಎಲ್ಲಾ ರೀತಿಯ ಕಾಮಗಾರಿಗಳಲ್ಲಿ ಕಂಡುಬಂದಿರುವ ಲೋಪದೋಷಗಳನ್ನು ಬರವಣಿಗೆಯ ಮೂಲಕ ಅಥವಾ ಫೋಟೋ ಮೂಲಕ ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಯ ಕಛೇರಿಯ ವಿಳಾಸಕ್ಕೆ ಅಥವಾ ಖುದ್ದಾಗಿ ಸಾರ್ವಜನಿಕರು ಪತ್ರವನ್ನು ನೀಡಲು ಈ ಮೂಲಕ ವಿನಮ್ರವಾಗಿ ಕೋರುತ್ತೇವೆ. ಹಾಗೆ ಸ್ಮಾರ್ಟ್ ಸಿಟಿ ವತಿಯಿಂದ ಆಯೋಜನೆಗೊಳ್ಳುವ ಸಾರ್ವಜನಿಕ ಸಭೆಗೂ ಕೂಡ ತಾವುಗಳು ತಪ್ಪದೆ ಬಂದು ಭಾಗವಹಿಸಿ ತಮ್ಮ ಮನೆಗಳ ಮುಂದೆ ಅಥವಾ ವಾರ್ಡ್‌ಗಳಲ್ಲಿ ನಡೆದಿರುವ ಕಾಮಗಾರಿಗಳಲ್ಲಿನ ಲೋಪದೋಷಗಳ ಬಗ್ಗೆ ತಿಳಿಸಲು ಅವಕಾಶ ನೀಡಲಾಗಿದೆ. ಶಿವಮೊಗ್ಗದ ಸಾರ್ವಜನಿಕರು ಸಹಕರಿಸಬೇಕು ಎಂದರು

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹೆಚ್ ಆರ್ ಬಸವರಾಜಪ್ಪನವರು ಇಂದಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ
ಕರ್ನಾಟಕದಲ್ಲಿ 130 ತಾಲ್ಲೂಕುಗಳನ್ನು ಬರಗಾಲವೆಂದು ಘೋಷಣೆ ಮಾಡಬೇಕು…
ಕರ್ನಾಟಕದಲ್ಲಿ ಈ ವರ್ಷ ತೀವ್ರತರವಾದ ಬರಗಾಲವಿದೆ. ಸುಮಾರು 25ದಿನಗಳಿಗೂ ಹೆಚ್ಚಿಗೆ ಮಳೆ ಬಾರದೆ ರೈತ ಹಾಕಿದ ಬೆಳೆಗಳಲ್ಲಿ 75ಭಾಗ ಬೆಳೆ ಸಂಪೂರ್ಣ ನಾಶವಾಗಿದೆ. ಒಂದು ವೇಳೆ ಈಗ ಮಳೆ ಬಂದರೂ ಬೆಳೆ ಚೇತರಿಸಿಕೊಳ್ಳುವುದಿಲ್ಲ. ರಾಜ್ಯ ಸರ್ಕಾರದ ಕಂದಾಯ ಸಚಿವರೆ 120 ತಾಲ್ಲೂಕುಗಳಲ್ಲಿ ಬರಗಾಲದ ಛಾಯೆ ಇದೆ ಎಂದು ತಿಳಿಸಿದ್ದಾರೆ. ಪ್ರತಿ ಜಿಲ್ಲೆ ತಾಲ್ಲೂಕುಗಳಲ್ಲಿ ರೈತ ಸಂಘಟನೆಗಳು ಬರಗಾಲವೆಂದು ಘೋಷಿಸುವಂತೆ ಒತ್ತಾಯಿಸಿ ನಿರಂತರ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಆದ್ದರಿಂದ ತತಕ್ಷಣ ಸರ್ಕಾರ 130ತಾಲ್ಲೂಕುಗಳನ್ನು ಬರಗಾಲ ಎಂದು ಘೋಷಣೆ ಮಾಡಿ ಬರಗಾಲ ಪರಿಹಾರ ಕಾಮಗಾರಿಗಳನ್ನ ಪ್ರಾರಂಭಿಸಬೇಕು. ಬರಗಾಲ ಪರಿಹಾರವಾಗಿ ಕನಿಷ್ಟ ಎಕರೆಗೆ 25ಸಾವಿರ ರೂ.ಗಳನ್ನು ನೀಡಬೇಕು, ಫಸಲ್ ವಿಮಾ ಮಾಡಿಸಿದ ರೈತರಿಗೆ ಮಧ್ಯಂತರ ಪರಿಹಾರವನ್ನು ಕೊಡಬೇಕು ಮತ್ತು ಜನ ಜಾನುವಾರುಗಳಿಗೆ ಕುಡಿಯುವ ನೀರನ್ನು ಪೂರೈಸಬೇಕು.

ರೈತರ ಐ.ಪಿ ಸೆಟ್‌ಗಳಿಗೆ ಹಗಲು ಕನಿಷ್ಟ 10ಗಂಟೆ ಸಮರ್ಪಕ ವಿದ್ಯುತ್ ನೀಡಬೇಕು… ರಾಜ್ಯದಲ್ಲಿ ಮಳೆಬಾರದೇ ಬರಗಾಲ ಆವರಿಸಿದೆ. ಐ.ಪಿ ಸೆಟ್‌ಗಳನ್ನ ಉಪಯೋಗಿಸಿ ಬೆಳೆ ಬೆಳೆಯುತ್ತಿರುವ ಕೆಲವು ರೈತರಿಗೂ ಸಮರ್ಪಕ ವಿದ್ಯುತ್ ಚಕ್ತಿ ಕೊಡದೆ ಬೆಳೆಗಳು ಒಣಗುತ್ತಿವೆ. ಸರ್ಕಾರ ಐ.ಪಿ ಸೆಟ್‌ಗಳಿಗೆ 7ಗಂಟೆ 3 ಫೇಸ್ ವಿದ್ಯುತ್ ಕೊಡುವುದಾಗಿ ಪ್ರಕಟಣೆ ಮಾಡಿದೆ. ಆದರೆ ದಿನಕ್ಕೆ 3-4 ಗಂಟೆಗಳು ಸಹ ಕೊಡುತ್ತಿಲ್ಲ. ವಿದ್ಯುತ್ ನೀಡುವ ಒಂದು ನಿರ್ದಿಷ್ಟ ಸಮಯ ಕೂಡ ಇಲ್ಲದೆ ಬಂದು ಹೋಗುತ್ತದೆ. ಈ ರೀತಿ ಅಸಮರ್ಪಕ ವಿದ್ಯುತ್ ಸರಬರಾಜಿನಿಂದ ಹಗಲು ರಾತ್ರಿ ಎನ್ನದೆ ರೈತರು ಐ.ಪಿ ಸೆಟ್‌ಗಳ ಬಳಿ ಯಾವಾಗ ವಿದ್ಯುತ್ ಬರತ್ತದೆ ಎಂದು ಕಾದು ಕುರುವಂತಾಗಿದೆ. ವೋಲ್ಪೆಜ್ ಸಮಸ್ಯೆಯಿಂದ ಐ.ಪಿ ಸೆಟ್‌ಗಳ ಮೋಟರ್ ಸುಟ್ಟು ಹೋಗಿ ಸಾವಿರಾರು ಕೋಟಿ ನಷ್ಟವಾಗುತ್ತಿದೆ.
ಐ.ಪಿ ಸೆಟ್‌ಗಳಿಗೆ ಆಧಾರ್‌ ಕಾರ್ಡ್‌ ಜೋಡಣೆ ಮಾಡುವಂತೆ ಒತ್ತಾಯಿಸಬಾರದು..
ಐ.ಪಿ ಸೆಟ್‌ಗಳಿಗೆ ಆಧಾರ್ ಕಾರ್ಡ್ ಜೋಡಣೆಯ ಹಿಂದೆ ಖಾಸಗೀಕರಣದ ಹುನ್ನಾರವಡಗಿದೆ. ಆಧಾರ್ ಕಾರ್ಡ್ ಜೋಡಣೆ ಮಾಡಲು ಇಲಾಖೆಯವರು ಒತ್ತಾಯಿಸುತ್ತಿದ್ದಾರೆ. ಆಧಾರ್ ಕಾರ್ಡ್ ಜೋಡಣೆ ಮಾಡಿದರೆ ಮುಂದಿನ ದಿನಗಳಲ್ಲಿ ಮೊಬೈಲ್‌ಗಳಿಗೆ ಕರೆನ್ಸಿ ಹಾಕಿಸಿಕೊಂಡು ಉಪಯೋಗಿಸುವ ರೀತಿಯಲ್ಲಿ ವಿದ್ಯುತ್ ಉಪಯೋಗಿಸಬೇಕಾದಂತಹ ಪರಿಸ್ಥಿತಿ ಬರುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ರೈತರು ಐ.ಪಿ ಸೆಟ್‌ಗಳಿಗೆ ಆಧಾರ್ ಕಾರ್ಡ್ ಜೋಡಣೆ ಮಾಡಬಾರದು ಸರ್ಕಾರ ತಕ್ಷಣವೇ ಇದನ್ನು ಕೈಬಿಡಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದು ಹೇಳಿದರು.

Related Articles

Stay Connected

0FansLike
3,912FollowersFollow
0SubscribersSubscribe

Latest Articles