ಶಿವಮೊಗ್ಗದಲ್ಲೂ ಆಪರೇಷನ್ ಹಸ್ತ !??

0
166
  • ಬಿಎಸ್‌ವೈ ಪುತ್ರನ ಮಣಿಸಲು ಮತ್ತೊಬ್ಬ ಮಾಜಿ ಸಿಎಂ ಮಗನ ಅಖಾಡಕ್ಕಿಳಿಸುತ್ತಾ ‘ಕೈ’ ?
    ಲೋಕಸಭೆ ಸೀಟು ಗೆಲ್ಲಲು ಶಿವಮೊಗ್ಗದಲ್ಲೂ ಆಪರೇಷನ್
    ಹಸ್ತ..?
    ಬಿಜೆಪಿ ಮಾಜಿ ಶಾಸಕ ಕುಮಾರ್ ಬಂಗಾರಪ್ಪಗೆ ಕಾಂಗ್ರೆಸ್ ಗಾಳ..?

ಕಾಂಗ್ರೆಸ್‌ಗೆ ಕರೆತಂದು ಲೋಕಸಭೆ ಟಿಕೆಟ್ ನೀಡವ ಬಗ್ಗೆ ಚರ್ಚೆ


ಲೋಕಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್ ಈಗಿನಿಂದಲೇ ತಯಾರಿ ಆರಂಭಿಸಿದೆ. ಗೆಲ್ಲಬೇಕಾದ ಕ್ಷೇತ್ರಗಳನ್ನು ಗುರುತಿಸಿ ರಣತಂತ್ರ ರೂಪಿಸುತ್ತಿದೆ. ಅಷ್ಟೇ ಅಲ್ಲದೇ ಕಾಂಗ್ರೆಸ್(Congress) ಅಭ್ಯರ್ಥಿಗಳನ್ನು ಸಿದ್ಧ ಮಾಡಿಕೊಳ್ಳುತ್ತಿದೆ. ಇದರ ಜೊತೆಗೆ ಶಿವಮೊಗ್ಗ ಲೋಕಸಭಾ(Loksabha) ಕ್ಷೇತ್ರ ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರನನ್ನು ಮಣಿಸಲು ಮತ್ತೊಬ್ಬ ಮಾಜಿ ಸಿಎಂ ಪುತ್ರನನ್ನು ಅಖಾಡಕ್ಕೆ ಇಳಿಸುವ ಸಾಧ್ಯತೆ ಇದೆ. ಇನ್ನೂ ಬೆಳಗಾವಿಯಲ್ಲಿ(Belagavi) ವಿಧಾನಸಭೆ ಬಳಿಕ ಲೋಕಸಭೆಯಲ್ಲೂ ದಿಗ್ವಿಜಯಕ್ಕೆ ಪ್ಲಾನ್ ಮಾಡಲಾಗುತ್ತಿದೆ. ಬೆಳಗಾವಿಯಲ್ಲಿ ಗೆಲುವಿನ ಕಹಳೆ ಮೊಳಗಿಸಲು ಸಿದ್ಧತೆ ನಡೆಸಲಾಗುತ್ತಿದ್ದು, ಇಲ್ಲಿಯೂ ಆಪರೇಷನ್ ಹಸ್ತ ನಡೆಯಬಹುದು ಎನ್ನಲಾಗ್ತಿದೆ.ಇಲ್ಲಿನ ಬಿಜೆಪಿ ಅಭ್ಯರ್ಥಿಗಳನ್ನು ಸೆಳೆಯಲು ಪ್ಲಾನ್ ಮಾಡಲಾಗುತ್ತಿದೆ. ತುಮಕೂರಿನಲ್ಲಿ ತಮ್ಮ ನಾಯಕರಿಗೆ ಟಿಕೆಟ್ ಕೊಡಿಸಲು ನಾಕಯರು ಒತ್ತಾಡ ಹೇರುತ್ತಿದ್ದು, ಇದನ್ನು ವಶಕ್ಕೆ ಪಡೆಯಲು ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ. ತುಮಕೂರಿನಲ್ಲೂ ಆಪರೇಷನ್ ಹಸ್ತ ನಡೆಯುವ ಸಾಧ್ಯತೆ ಇದೆ.