Wednesday, September 25, 2024
spot_img

50ರ ವಸಂತಕ್ಕೆ ಕಾಲಿಟ್ಟ ಸಂಸದ ಬಿ ವೈ ರಾಘವೇಂದ್ರ

ಬಿ ವೈ ಆರ್ 50ನೇ ಹುಟ್ಟುಹಬ್ಬದ ಸಲುವಾಗಿ ಇಂದು ಪತ್ರಿಕಾಗೋಷ್ಠಿಯಲ್ಲಿ ಡಿಎಸ್ ಅರುಣ್ ರವರು ಮಾತನಾಡುತ್ತಾ ಬಿ ವೈಆರ್ ರವರು ಆಗಸ್ಟ್ 1973 ರಂದು ಜನಿಸಿದ ಇವರಿಗೆ ಐವತ್ತು ವರ್ಷವಾಗಿದೆ ಆದ್ದರಿಂದ ಅಭಿಮಾನಿ ಬಳಗ ಹಾಗೂ ಹಿತೈಷಿಗಳ ಬಳಗ ದಿಂದ ವಿನೂತನ ರೀತಿಯಲ್ಲಿ ಆಚರಿಸಲು ನಿರ್ಧರಿಸಿದ್ದೇವೆ ಬಿವೈ ಆರ್ ರವರು ಹೈ ಸ್ಕೂಲ್ ಶಿಕ್ಷಣವನ್ನು ನಮ್ಮ ಶಿವಮೊಗ್ಗದ ಡಿ ವಿ ಎಸ್ ಶಾಲೆಯಲ್ಲಿ ಪಡೆದು ಕಾಲೇಜು ಶಿಕ್ಷಣವನ್ನು ಎ ಟಿ ಎನ್ ಸಿ ಕಾಲೇಜಿನಲ್ಲಿ ಪಡೆದು ಕಾಲೇಜು ದಿನದಲ್ಲೇ ಸೆನಟ್ ಸದಸ್ಯರಾಗಿ ಆಯ್ಕೆಯಾಗಿ 2007 ರಲ್ಲಿ ಶಿಕಾರಿಪುರ ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ರಾಜಕೀಯಕ್ಕೆ ಎಂಟ್ರಿ ಪಡೆಯುತ್ತಾರೆ ಇದಾದ ನಂತರ ಇಡೀ ಶಿವಮೊಗ್ಗ ಕ್ಷೇತ್ರದ ಜವಾಬ್ದಾರಿಯನ್ನು ವಹಿಸಿಕೊಂಡು ಜನರ ನಾಡಿ ಮಿಡಿತವನ್ನು ಗಮನಿಸಿ 2009 ಜನರ ಇಚ್ಛೆಯಂತೆ ಲೋಕಸಭೆಗೆ ಬಂಗಾರಪ್ಪನವರ ವಿರುದ್ಧ 50000 ಮತಗಳಿಂದ ಜಯಗಳಿಸುತ್ತಾರೆ ಮುಂದಿನ ದಿನಗಳಲ್ಲಿ ಶಿಕಾರಿಪುರದಿಂದ ವಿಧಾನ ಸಭೆಗೆ ಸ್ಪರ್ಧಿಸಿ ಜಯಶೀಲರಾಗುತ್ತಾರೆ ಈ ಎಲ್ಲಾ ಅನುಭವ ಹೊಂದಿರುವ ಬಿ ವೈ ಆರ್ ರವರು ಕೇಂದ್ರದ 40,000 ಬಜೆಟ್ ನಲ್ಲಿ ಕರ್ನಾಟಕಕ್ಕೆ ಅತಿ ಹೆಚ್ಚು ಅನುದಾನವನ್ನು ತರವಲ್ಲಿ ಯಶಸ್ವಿಯಾಗಿದ್ದಾರೆ ಪ್ರತಿ ಹಂತದಲ್ಲೂ ಯಡಿಯೂರಪ್ಪ ಅವರ ತಂದೆಗೆ ತಕ್ಕ ಮಗನಾಗಿ ಕರ್ನಾಟಕದ ಎಲ್ಲಾ ಸಂಸದರ ಪರ್ಫಾರ್ಮೆನ್ಸ್ ನೋಡುವುದಾದರೆ ಬಿವೈ ಆರ್ ರವರು ನಂಬರ್ ಒನ್ ಆಗಿದ್ದಾರೆ ಈ ಹಿಂದೆ ನಮ್ಮ ಶಿವಮೊಗ್ಗದಲ್ಲಿ ದಿನಕ್ಕೆ 10 ರೈಲುಗಳು ಮಾತ್ರ ಓಡಾಡುತ್ತಿದ್ದವು ರಾಘವೇಂದ್ರ ಅವರು ಸ್ವಂತ ಇಚ್ಚ ಶಕ್ತಿಯಿಂದ ಇಂದು 27 ರೈಲುಗಳು

ಓಡಾಡಲಾರಂಭಿಸಿವೆ, ಮುಂದುವರಿದ ಭಾಗವಾಗಿ ಎಲೆಕ್ಟ್ರಿಕಲ್ ರೈಲು ಬೀರೂರು ಶಿವಮೊಗ್ಗ ವಿದ್ಯುತ್ತಿಂದ ಈಗಾಗಲೇ ಓಡುತ್ತಿದೆ,
ಅಭಿವೃದ್ಧಿಯ ಪರವಾಗಿ ಸಂಸತ್ ಸದಸ್ಯರ ಪ್ರವೇಶ ಅಭಿವೃದ್ಧಿ, ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ 6.50 ಕೋಟಿ ಕರ್ನಾಟಕಕ್ಕೆ ಕೊಡಿಸಿದ್ದಾರೆ 15 ಸ್ಟೇಟ್ ಹೈವೇ, 16 ನ್ಯಾಷನಲ್ ಹೈವೇ,crf ಕೇಂದ್ರ ರಸ್ತೆ ನಿಧಿ, ಗ್ರಾಮ ಸಡಕ್ ಯೋಜನೆ ಶಿವಮೊಗ್ಗಕ್ಕೆ ರಿಜನಲ ಪಾಸ್ಪೋರ್ಟ್ ಸೇವಾ ಕೇಂದ್ರ, ಕೇಲೋ ಇಂಡಿಯಾದಲ್ಲಿ ವಾಜಪೆಯಿ ಲೇಔಟ್ ನಲ್ಲಿ ಸ್ಟೇಡಿಯಂ ಜೋಗದಲ್ಲಿ ಜಿಪ್ ಲೈನ್, ಭದ್ರಾವತಿಯಲ್ಲಿ ವಿಎಸ್‌ಎಲ್ ಕೈಗಾರಿಕೆ ಸೆಲ್ ರವರಿಂದ ಪುನರ್ ಆರಂಭ, ಜಿಲ್ಲೆಯಲ್ಲಿ ,BSNL ಟವರ್ ಸ್ಥಾಪನೆ, REF ರಾಪಿಡ್ ಆಕ್ಷನ್ ಫೋರ್ಸ್ ಭದ್ರಾವತಿಯಲ್ಲಿ,
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ, ನೀರಾವರಿಯ ಏಳು ಯೋಜನೆಗಳು, ಸಿಗಂದೂರು ಸೇತುವೆಯು ದೇಶದ ಎರಡನೇ ತೂಗು ಸೇತುವೆ ಎಂಬ ಪ್ರಸಿದ್ಧಿ, ಮುಂದಿನ ದಿನದಲ್ಲಿ ಆಯುಷ್ ಯುನಿವರ್ಸಿಟಿ ನಿರ್ಮಿಸಲು ಉದ್ದೇಶಿಸಿರುವ ಸಂಸದರಿಗೆ 50ನೇ ಹುಟ್ಟುಹಬ್ಬ ಆಚರಿಸಲು ಒಂದಷ್ಟು ನಗೋಣ ಬನ್ನಿ ಹರಟೆ ಕಾರ್ಯಕ್ರಮವನ್ನು ಪಿ ಎಸ್ ಕಾಲೇಜು ಸಭಾಂಗಣ ಸಾಗರ ರಸ್ತೆ ಶಿವಮೊಗ್ಗ ದಿನಾಂಕ 16-08-2023 ಬುಧವಾರ ಸಂಜೆ 5:30ಕ್ಕೆ ಬನ್ನಿ ಶಿವಮೊಗ್ಗದ ನಾಗಾರೀಕರೆ, ಉಪಸ್ಥಿತಿ ನಿಕಟ ಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರೊಂದಿಗೆ ನಿಮ್ಮ ಕುಟುಂಬ ಸದಸ್ಯರೆಲ್ಲರೂ ಸೇರಿ ಮೌಲ್ಯಯುತ ಹರಟೆ ಕಾರ್ಯಕ್ರಮವನ್ನು ಕುಟುಂಬದೊಂದಿಗೆ ನಗೋಣ ಬನ್ನಿ ಎಂದು ಡಿಎಸ್ ಅರುಣ್ ರವರು ಹೇಳಿದರು,


ಸಂತೋಷ್ ಬಳಕೆರೆಯವರು ಮಾತನಾಡಿ ಆಗಸ್ಟ್ 16ರ ಬೆಳಗ್ಗೆ 8:30 ಕ್ಕೆ ರವೀಂದ್ರನಗರ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆಯೊಂದಿಗೆ ಸಂಸದರಿಗೆ ಅಭಿನಂದನೆ ತಿಳಿಸೋಣ ಬನ್ನಿ ಭಾಗವಹಿಸಿ ಎಂದರು. ಪತ್ರಿಕಾಗೋಷ್ಠಿಯಲ್ಲಿ ಜ್ಯೋತಿ ಪ್ರಕಾಶ್
ಡಿ ಎಸ್ಅರುಣ್ ದಿವಾಕರ್ ಶೆಟ್ರು ಸಂತೋಷ್ ಬಳ್ಳೇಕೆರೆ ಮಾಲ್ತೇಶ್ ಉಮೇಶ್ ಅಣ್ಣಪ್ಪ ತೀರ್ಥೇಶ್ ರಾಜೇಶ್ ಕಾಮತ್ ಇನ್ನು ಮುಂತಾದವರು ಉಪಸ್ಥಿತರಿದ್ದರು.

Related Articles

Stay Connected

0FansLike
3,912FollowersFollow
0SubscribersSubscribe

Latest Articles