ಕೊನಗವಳ್ಳಿ ಪಂಚಾಯತ್ ಚುನಾವಣೆ

0
269
  1. ಸಾತ್ವಿಕ ನುಡಿ ನ್ಯೂಸ್ ಶಿವಮೊಗ್ಗ
    ಶಿವಮೊಗ್ಗ ತಾಲೂಕು ಕೊನಗವಳ್ಳಿ ಗ್ರಾಮಪಂಚಾಯತ್,

ನೂತನ ಅಧ್ಯಕ್ಷರಾಗಿ ಯೋಗೇಶ್ ಮುಧವಲಾ ಉಪಾಧ್ಯಕ್ಷರಾಗಿ ಲತಾ ಜಯಪ್ಪರವರು ಆಯ್ಕೆಯಾದರು.
13 ಜನ ಸದಸ್ಯರ ಕೋರಂ ಹೊಂದಿದ್ದ ಗ್ರಾಮ ಪಂಚಾಯಿತಿಯಲ್ಲಿ ಇಂದು 11 ಸದಸ್ಯರು ಮಾತ್ರ ಉಪಸ್ಥಿತರಿದ್ದರು ಸದಸ್ಯರ ಉಮ್ಮತದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡಲಾಯಿತು ಬಿಜೆಪಿ ಬೆಂಬಲಿತ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆಯಿತು.

ಗ್ರಾಮ ಪಂಚಾಯಿತಿ ಕಾರ್ಯಾಲಯ ಕೊನಗವಳ್ಳಿ

ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಯೋಗೇಶ ರವರು ಸುದ್ದಿಗಾರರೊಂದಿಗೆ ಮಾತನಾಡಿ ಗ್ರಾಮಪಂಚಾಯತ್ ಸದಸ್ಯರ ಒಮ್ಮತದಿಂದ ನನ್ನನ್ನು ಆಯ್ಕೆ ಮಾಡಿರುವುದರಿಂದ ಇಂದು ಅಧ್ಯಕ್ಷ ಸ್ಥಾನ ಲಭಿಸಿದೆ. ಕೊನಗವಳ್ಳಿ ಗ್ರಾಮ ಪಂಚಾಯಿತಿಯನ್ನು ಇನ್ನಷ್ಟು ಅಭಿವೃದ್ಧಿಯ ಗ್ರಾಮ ಪಂಚಾಯಿತಿ ಯನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.

ನೂತನ ಉಪಾಧ್ಯಕ್ಷರು ಲತಾಜಯಪ್ಪ ಮಾತನಾಡಿ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಪ್ರತಿಷ್ಠೆಯ ಕಣವಾಗಿದ್ದ ಗ್ರಾಮ ಪಂಚಾಯಿತಿ: ಕೊನಗವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಇಂದು ನಾವು ಅಭೂತಪೂರ್ವ ಗೆಲುವನ್ನು ಸಾಧಿಸಿದ್ದೇವೆ. ಇತರ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಹೋಲಿಸಿದರೆ ಪಿ ಲಂಕೇಶ್ ಹುಟ್ಟೂರೂ ( ಲಂಕೇಶ್ ಪತ್ರಿಕೆ) ಖ್ಯಾತಿಯ ಗ್ರಾಮ ಪಂಚಾಯಿತಿ ಆದರಿಂದ ಇದು ಹಲವು ನಾಯಕರುಗಳಿಗೆ ಹೆಚ್ಚಿನ ಪ್ರತಿಷ್ಠೆಯ ಕಣವಾಗಿತ್ತು, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಗೆಲವು ಸಾಧಿಸಲು ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಹುಬ್ಬಳ್ಳಿ ನಾಗರಾಜ್ ಹಾಲು ಪ್ರಕೋಸ್ಟ ಜಿಲ್ಲಾ ಉಪಾಧ್ಯಕ್ಷರು ಬಿಜೆಪಿ ಹಾಗೂ ಚಂದ್ರಪ್ಪ ಗ್ರಾಮ ಪಂಚಾಯಿತಿ ಸದಸ್ಯರು ತ್ಯಾಜವಳ್ಳಿ,
ಜಗದೀಶ್ ಮುಧ್ವಾಲಾ, ಗಿರೀಶ್ ನಾಯಕ್ ಸೇವಾಲಾಲ್ ನಗರ,
ರಾಮುನಾಯ್ಕ ಸೇವಾಲಾಲ್ ನಗರ,
ದೇವಬಾಳು ಕುಮಾರ ನಾಯಕ,
ವಿಜಯ್ ಸಂದೀಪ್ ಇನ್ನು ಮುಂತಾದವರು ಅಭಿನಂದಿಸಿದರು.