ವಿನೂತನ ಒಕ್ಕೂಟ ಉದ್ಘಾಟನೆ

0
148

ಪ್ರಜಾ ಜಾಗೃತಿ ವೇದಿಕೆ
“ಜಾಗೃತ ಪ್ರಜೆಗಳ ಒಕ್ಕೂಟ”

ಉದ್ಘಾಟನಾ ಸಮಾರಂಭದ ಆಹ್ವಾನ

ನಾಳೆ ಬುಧವಾರ
09-08-2023ನೇ
ಸಮಯ : ಬೆಳಿಗ್ಗೆ 10-30ಕ್ಕೆ

ಸರ್ಕಾರಿ ನೌಕರರ ಸಭಾ ಭವನ, ಆರ್.ಟಿ.ಓ. ರಸ್ತೆ, ಶಿವಮೊಗ್ಗ

ಶಿವಮೊಗ್ಗ ನಗರದಲ್ಲಿ ವಿನೂತನ ವಿಚಾರಗಳನ್ನು ಒಳಗೊಂಡ ಪ್ರಜಾ ಜಾಗೃತಿ ವೇದಿಕೆ, ಜಾಗೃತ ಪ್ರಜೆಗಳ ಒಕ್ಕೂಟ ಸಂಘದ ಉದ್ಘಾಟನೆಗೆ ನಗರದ ಯುವಕ ಯುವತಿಯರು ನಗರದ ಮಹಾ ಜನತೆಗೆ ಆದರದ ಸುಸ್ವಾಗತ ಬನ್ನಿ ಪಾಲ್ಗೊಳ್ಳಿ,

ಒಕ್ಕೂಟದ ದೇಯ ಮತ್ತು ಉದ್ದೇಶಗಳು

ಸಮಾಜದ ಪ್ರತಿಯೊಬ್ಬರಲ್ಲಿಯೂ ಏಕತೆ, ಸಮಗ್ರತೆ ಹಾಗೂ ಸಹೋದರತ ಮತ್ತು ಸಾಮರಸ್ಯ ಭಾವನೆಯನ್ನು ಬೆಳೆಸುವುದು.
ಪ್ರತಿ ಜಿಲ್ಲಾ ವ್ಯಾಪ್ತಿಯಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸುವುದರ ಮೂಲಕ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಸಹಕರಿಸುವುದು,

ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಸಂಸ್ಥೆಗಳ ಸಹಯೋಗದೊಂದಿಗೆ ಬಡಾವಣೆ ಮತ್ತು ಮೊಹಲ್ಲಗಳಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸುವುದು ಹಾಗೂ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸುವುದು.
ಯುವ ಪೀಳಿಗೆಗಳು ಹೆಚ್ಚಾಗಿ ಬಲಿಯಾಗುತ್ತಿರುವ ಮಾದಕ ವ್ಯಸನದ ಬಗ್ಗೆ ಜಾಗೃತಿ ಮೂಡಿಸುವುದು.
ವಿದ್ಯಾರ್ಥಿಗಳಲ್ಲಿ ಉದ್ಯೋಗ ಸಂದರ್ಶನಗಳನ್ನು ಎದುರಿಸಲು, ಆತ್ಮಸ್ಥೆರ್ಯ ಹೆಚ್ಚಿಸಲು ವಿಶೇಷ ತರಬೇತಿ ಶಿಬಿರಗಳನ್ನು ಏರ್ಪಡಿಸುವುದು.
ಸರ್ಕಾರದ ಅನುಮತಿಯೊಂದಿಗೆ ಆಯ್ದ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಮಕ್ಕಳಿಗೆ ವಿಶೇಷ ಕೌಶಲ್ಯ ತರಬೇತಿ ಶಿಬಿರಗಳನ್ನು ಏರ್ಪಡಿಸುವುದು,

ಎಲ್ಲಾ ವರ್ಗದ ಗ್ರಾಮೀಣ ಮತ್ತು ನಗರ ಪ್ರದೇಶಗಳ ಶೋಷಣೆಗೆ ಒಳಗಾದ ಮಹಿಳೆಯರಿಗೆ ಕಾನೂನಿನ ಅರಿವು ಮೂಡಿಸುವುದರ ಜೊತೆಗೆ ನೈತಿಕ ಬೆಂಬಲ ನೀಡುವುದು.
ಯುವಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಸಮಾನತೆ, ಸಾಮಾಜಿಕ ನ್ಯಾಯದ ವೈಚಾರಿಕತೆ, ಜಾತ್ಯತೀತತೆ, ರಾಷ್ಟ್ರೀಯ ಏಕೀಕರಣದ ನಿಜವಾದ ಪ್ರಜ್ಞೆಯನ್ನು ಮೂಡಿಸುವುದು.