Wednesday, September 25, 2024
spot_img

ಮಧುಬಂಗಾರಪ್ಪ ರವರಿಗೆ ಮೈನ್ ಮಿಡ್ಲ್ ಸ್ಕೂಲ್ ಹಳೇ ವಿದ್ಯಾರ್ಥಿಗಳ ಮನವಿ!

ಸಚಿವ ಮಧುಬಂಗಾರಪ್ಪ ರವರಿಗೆ ಮೈನ್ ಮಿಡ್ಲ್ ಸ್ಕೂಲ್ ಹಳೇ ವಿದ್ಯಾರ್ಥಿಗಳ ಮನವಿ!

05/08/2023 ಶನಿವಾರ ಬೆಳಗ್ಗೆ ಶಿವಮೊಗ್ಗ ನಗರದ ಜಿಲ್ಲಾ ಪಂಚಾಯತ್ ಕಛೇರಿಯಲ್ಲಿ, ಕರ್ನಾಟಕ ರಾಜ್ಯ ಸರ್ಕಾರದ, ಮಾನ್ಯ ಶ್ರೀ ಮಧುಬಂಗಾರಪ್ಪ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಮೈನ್ ಮಿಡ್ಲ್ ಸ್ಕೂಲ್ (ಸರ್ಕಾರಿ ಪ್ರಧಾನ ಹಿರಿಯ ಪ್ರಾಥಮಿಕ ಶಾಲೆ) ಹಳೇ ವಿದ್ಯಾರ್ಥಿಗಳು, ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮಕ್ಕೆ ಅವಕಾಶ ನೀಡುವ ಕುರಿತು, 6 ಮತ್ತು 7ನೇ ತರಗತಿಗೆ ಆಂಗ್ಲ ಮಾಧ್ಯಮಕ್ಕೆ ಆದೇಶ ನೀಡಿದ್ದು, ಅದಕ್ಕೆ ಶಿಕ್ಷಕರು ನೀಡದೆ ನಿಂತಿದೆ, ಪುನಃ ನೀಡುವಂತೆ ಹಾಗೂ ಈ ಶಾಲೆ ಪುರಾತನ ಪಾರಂಪರಿಕ ಕಟ್ಟಡ ನವೀಕರಣ ಗೊಂಡಿದೆ, ಶಾಲೆಯ ಹಳೇ ವಸ್ತು ಏನಾದವು ಎಂಬುವುದರ ಬಗ್ಗೆ ತನಿಖೆಯಾಗುವ ಕುರಿತು ಮನವಿ ಸಲ್ಲಿಸಿದರು,

ಈ ಶಾಲೆ ಶತಮಾನೋತ್ಸವ ಕಂಡಿರುತ್ತದೆ, ಮೊದಲು ಕನ್ನಡ ಮಾಧ್ಯಮ ವಾಗಿದ್ದು, ನಂತರ 2012 ಹಾಗೂ 2013ನೇ ಸಾಲಿನಲ್ಲಿ 6 ಮತ್ತು 7ನೇ ತರಗತಿಗೆ ಆಂಗ್ಲ ಮಾಧ್ಯಮಕ್ಕೆ ಶಿಕ್ಷಣ ಇಲಾಖೆ ಅವಕಾಶ ನೀಡಿದ್ದು, ಆದರೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಶಿಕ್ಷಕರು ಆಂಗ್ಲ ಮಾಧ್ಯಮದಲ್ಲಿ ಪಾಠ ಮಾಡಲು ಬರದೆ, 6ಮತ್ತು7ನೇ ತರಗತಿಯ ಆಂಗ್ಲ ಮಾಧ್ಯಮ ಮಕ್ಕಳ ಶಿಕ್ಷಣ ಎರಡೇ ವರ್ಷಗಳಲ್ಲಿ, ಮುಚ್ಚಿಸಿರುವರು, ಆದರೆ ಹಿಂದಿನ ಸಾಲಿನ ಶೈಕ್ಷಣಿಕ ಅವಧಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ, ಹಿಂದಿನಂತೆ 6ಮತ್ತು7ನೇ ತರಗತಿಗೆ ಆಂಗ್ಲ ಮಾಧ್ಯಮ ಶಿಕ್ಷಕರ ನೀಡಿ ಹಾಗೆ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮಕ್ಕೆ ಅವಕಾಶ ಕಲ್ಪಿಸಿ ಎಂದು ಹಲವು ಬಾರಿ ಮಂತ್ರಿಗಳಿಗೆ, ಶಾಸಕರಿಗೆ, ಡಿಡಿಪಿಐ ಹಾಗೂ ಬಿಇಓ ರವರಿಗೂ ಮನವಿ ಮಾಡಲಾಗಿದೆ, ಎಲ್ಲರಿಂದ ಸಕಾರಾತ್ಮಕ ಸ್ಪಂದನೆಯಾದರು, ಕೂಡ ಇದುವರೆಗೂ ಯಾವುದು ಜಾರಿಯಾಗಿಲ್ಲ,

ಎಲ್ಲಾ ಕಡೆ ಪೋಷಕರಿಗೆ ಮಕ್ಕಳಿಗೆ ಇಂಗ್ಲಿಷ್ ಕಲಿಸಲು ವ್ಯಾಮೋಹ ಜಾಸ್ತಿಯಾಗಿದೆ, ಕನ್ನಡ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ, ಆದರಿಂದ ಕನ್ನಡದ ಜತೆ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮಕ್ಕೆ ಅವಕಾಶ ಕಲ್ಪಿಸಿ ಶಾಲೆ ಮುಚ್ಚುವುದನ್ನು ತಡೆಯ ಬೇಕು, ಈಗಾಗಲೇ ರಾಜ್ಯದಲ್ಲಿ ಪತ್ರಿಕೆಗಳಲ್ಲಿ 1500ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಮುಚ್ಚಿವೆ ಎಂದು ವರದಿಗಳು ಓದಿರುತ್ತೇವೆ, ಈ ಶಾಲೆ ಮುಚ್ಚದಿರಲಿ,

ಈ ಶಾಲೆ 135 ವರ್ಷಗಳ ಪುರಾತನ ಪಾರಂಪರಿಕ ಕಟ್ಟಡ ವಾಗಿದ್ದು, ಒಂದು ಚೂರು ಕೂಡ ತನ್ನ ವೈಭವವನ್ನು ಕಳೆದು ಕೊಂಡಿಲ್ಲ, ಆದರೆ ಸ್ಮಾರ್ಟ್ ಸಿಟಿಯಿಂದ 3.5 ಕೋಟಿಗೆ ನವೀಕರಣ ಗೊಂಡಿದೆ, ಈ ಶಾಲೆ ನವೀಕರಣ ಗೊಳ್ಳುವ ಮುಚ್ಚೆ ಕಟ್ಟಡದ ಯಾವ ಬದಲಾವಣೆ ಅಗುವುದಿಲ್ಲ, ನವೀಕೃತ ಗೊಳ್ಳವಾಗ ಆಳಾದ ವಸ್ತುಗಳು ಬದಲಿಸಿ ಬೇರೆ ಹೊಸ ವಸ್ತುಗಳು ಆಕಿ, ಹಳೇ ವಸ್ತುಗಳನ್ನು ಶಾಲೆಯ ಎಸ್.ಡಿ.ಎಂ.ಸಿ ಗೆ ನೀಡುತ್ತೇವೆ ಎಂದವರು, ಯಾವ, ಯಾವ ವಸ್ತುಗಳು ಬದಲಾವಣೆ ಮಾಡಿ ನೀಡಿರುವರು, ಅವರು ಕಾಮಗಾರಿಯ ಮುಂಚೆ ಹೇಳಿದಂತೆ ಮಾಡಿರುವರಾ ಹಳೇ ಕಟ್ಟಡದ ಮರಗಳು ಏನು ಅದವು ಸೂಕ್ತ ತನಿಖೆಯಾಗಬೇಕು, ಶಾಲೆಯ ಕಟ್ಟಡದ ಹಳೇ ಸಾಮಾಗ್ರಿಗಳು ಎಸ್.ಡಿ.ಎಂ.ಸಿ ಗೆ ನೀಡಿದ್ದಾರೆ ಎಂದರೆ, ಯಾವ ಯಾವ ಸಾಮಾಗ್ರಿಗಳು ನೀಡಿದ್ದಾರೆ ಎಂಬುದು ತನಿಖೆಯಾಗಲಿ, ಎಂದು ಮನವಿ ಮಾಡಿಕೊಂಡರು,

ಈ ಸಂದರ್ಭದಲ್ಲಿ ಮೈನ್ ಮಿಡ್ಲ್ ಸ್ಕೂಲ್ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಚನ್ನವೀರಪ್ಪ ಗಾಮನಗಟ್ಟಿ, ಉಪಾಧ್ಯಕ್ಷ ಪರಶುರಾಮ, ಸುರೇಶ್, ಹಾಗೂ ಇನ್ನೂ ಇತರರೂ ಉಪಸ್ಥಿತರಿದ್ದರು

Related Articles

Stay Connected

0FansLike
3,912FollowersFollow
0SubscribersSubscribe

Latest Articles