Wednesday, September 25, 2024
spot_img

45 ಡಿವೈಎಸ್ಪಿಗಳ (ಸಿವಿಲ್​) ಪೊಲೀಸ್ ವರ್ಗಾವಣೆ

  1. ಬೆಂಗಳೂರು: ಕರ್ನಾಟಕ ಗೃಹ ಇಲಾಖೆಯು ಮೇಜರ್​​ ಸರ್ಜರಿ ಮಾಡಿದ್ದು, ಇಂದು (ಜುಲೈ 31) ಒಂದೇ ದಿನದಲ್ಲಿ ಬರೋಬ್ಬರಿ 45 ಡಿವೈಎಸ್ಪಿಗಳ (ಸಿವಿಲ್​) ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಇತ್ತೀಚೆಗೆ ತಮ್ಮ ಶಿಫಾರಸುಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ಶಾಸಕರು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರನ್ನು ಸಮಾಧಾನ ಪಡಿಸುವಲ್ಲಿ ಹೈರಾಣಾಗಿದ್ದರು. ಸಿಎಲ್​​ಪಿ ಸಭೆಯ ನಂತರ ಒಂದೊಂದಾಗಿ ಎಲ್ಲ ಇಲಾಖೆಗಳಲ್ಲಿ ವರ್ಗಾವಣೆ ಜೋರಾಗಿ ನಡೆಯುತ್ತಿದೆ. ಇಂದು ಗೃಹ ಇಲಾಖೆಯಲ್ಲಿ 45 ಡಿವೈಎಸ್ಪಿಗಳ ವರ್ಗಾವಣೆ ಮಾಡಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ. ಬೆಂಗಳೂರಿನ ಆಯಕಟ್ಟಿನ ಮತ್ತು ಸೂಕ್ಷ್ಮ ಸ್ಥಳಗಳಲ್ಲಿಯೂ ಹೊಸಬರನ್ನು ನೇಮಕ ಮಾಡಲಾಗಿದೆ.

ದೇವನಹಳ್ಳಿ ಉಪ ವಿಭಾಗದಲ್ಲಿದ್ದ ಬಾಲಕೃಷ್ಣ.ಸಿ ಅವರನ್ನು ಬೆಂಗಳೂರು ವಿಭಾಗದ ಕಬ್ಬನ್ ಪಾರ್ಕ್ ಗೆ, ಹಲಸೂರು ಗೇಟ್ ಉಪ ವಿಭಾಗಕ್ಕೆ ಶಿವಾನಂದ ಹೆಚ್. ಚಲವಾದಿ ಮತ್ತು ಜಯನಗರ ಉಪ ವಿಭಾಗಕ್ಕೆ ನಾರಾಯಣಸ್ವಾಮಿ.ವಿ ಅವರನ್ನು ವರ್ಗಾಯಿಸಲಾಗಿದೆ.

ಕೃಷ್ಣಮೂರ್ತಿ ಎಚ್. ಅವರನ್ನು ಮಲ್ಲೇಶ್ವರಂ ಉಪ ವಿಭಾಗಕ್ಕೆ, ಮಾರತ್ ಹಳ್ಳಿ ಉಪ ವಿಭಾಗಕ್ಕೆ ಪ್ರಿಯದರ್ಶಿನಿ ಈಶ್ವರ್ ಸಾನಿಕೊಪ್ಪ ಅವರನ್ನು ಸಂಪಿಗೆಹಳ್ಳಿ ಉಪ ವಿಭಾಗಕ್ಕೆ ಮುರುಗೇಂದ್ರಯ್ಯ ಎಂ ಅವರನ್ನು ನೇಮಿಸಲಾಗಿದೆ.

ಬಿ ಎಂ ಟಿ ಎಫ್ ಗೆ ಶ್ರೀಧರ್.ಕೆ.ವಿ. ಅವರನ್ನು ವರ್ಗಾಯಿಸಲಾಗಿದೆ. ಬೆಂಗಳೂರು ನಗರ ಸಂಚಾರ ಉಪ ವಿಭಾಗಕ್ಕೆ ಕಿಶೋರ್ ಭರಣಿ ಮತ್ತು ಬೆಂಗಳೂರು ನಗರ ಸಂಚಾರ ಈಶಾನ್ಯ ಉಪ ವಿಭಾಗಕ್ಕೆ ನಾಗರಾಜ್.ಕೆ.ಎಸ್. ಅವರನ್ನು ವರ್ಗಾಯಿಸಲಾಗಿದೆ.

ಉಳಿದಂತೆ ಈ ಕೆಳಕಂಡ ಡಿವೈಎಸ್‌ಪಿ (ಸಿವಿಲ್) ರವರುಗಳನ್ನು ಆವರಣದಲ್ಲಿ ತೋರಿಸಿರುವ ಸ್ಥಳಕ್ಕೆ ವರ್ಗಾವಣೆ ಮಾಡಲಾಗಿದೆ

ಚಂದನ್ ಕುಮಾರ್. ಎನ್ (ವಿಜಯನಗರ ಉಪ ವಿಭಾಗ ಬೆಂಗಳೂರು), ಪುಟ್ಟಮ್ಮ,ಕೆ.ಎಸ್.(ಸಂಚಾರ ಪಶ್ಚಿಮ ಉಪ ವಿಭಾಗ, ಬೆಂಗಳೂರು ನಗರ), ಪಂಪನಗೌಡ(ಬಾಗಲಕೋಟೆ ಉಪ ವಿಭಾಗ, ಬಾಗಲಕೋಟೆ ಜಿಲ್ಲೆ), ಅನುಷಾ.ಜಿ (ಬೆಸ್ಕಾಂ, ಬೆಂಗಳೂರು), ನಾಗರಾಜ್.ಕೆ.ಆರ್ (ಭದ್ರಾವತಿ ಉಪ ವಿಭಾಗ,ಶಿವಮೊಗ್ಗ ಜಿಲ್ಲೆ), ಹಾಲಮೂರ್ತಿ ರಾವ್. ವಿ.ಎಸ್(ತರೀಕೆರೆ ಉಪ ವಿಭಾಗ,ಚಿಕ್ಕಮಗಳೂರು ಜಿಲ್ಲೆ), ಶಿವಾನಂದ ಪವಾಡಶೆಟ್ಟಿ (ಬಾಲ್ಕಿ ಉಪ ವಿಭಾಗ, ಬೀದರ್ ಜಿಲ್ಲೆ), ರಾಜಣ್ಣ.ಟಿ.ಬಿ (ಚಳ್ಳಕೆರೆ ಉಪ ವಿಭಾಗ, ಚಿತ್ರದುರ್ಗ ಜಿಲ್ಲೆ), ಲಕ್ಷ್ಮಯ್ಯ, ವಿ (ಚಾಮರಾಜನಗರ ಉಪ ವಿಭಾಗ, ಚಾಮರಾಜನಗರ), ಸಿದ್ದಲಿಂಗಪ್ಪ ಗೌಡ ಪಾಟೀಲ್ (ಗಂಗಾವತಿ ಉಪ ವಿಭಾಗ, ಕೊಪ್ಪಳ ಜಿಲ್ಲೆ), ಮುರಳೀಧರ್.ಪಿ.ಕೆ (ಹಾಸನ ಉಪ ವಿಭಾಗ, ಹಾಸನ ಜಿಲ್ಲೆ), ಮುತ್ತಪ್ಪ ಎಸ್.ಪಾಟೀಲ್ (ಹಾವೇರಿ ಉಪ ವಿಭಾಗ, ಹಾವೇರಿ ಜಿಲ್ಲೆ), ವೆಂಕಟಪ್ಪ ನಾಯಕ (ಹೊಸಪೇಟೆ ಉಪ ವಿಭಾಗ, ವಿಜಯನಗರ ಜಿಲ್ಲೆ),

ಪ್ರಶಾಂತ್ ಜಿ ಮುನೋಳ್ಳಿ (ಹುನಗಂದ ಉಪ ವಿಭಾಗ, ಬಾಗಲಕೋಟೆ ಜಿಲ್ಲೆ) ಮತ್ತು ಮಲ್ಲೇಶ್.ಟಿ(ಕೋಲಾರ ಉಪ ವಿಭಾಗ, ಕೋಲಾರ ಜಿಲ್ಲೆ) ಶಿವಕುಮಾರ್ ಎಸ್ (ಚಿಕ್ಕಬಳ್ಳಾಪುರ ಉಪ ವಿಭಾಗ, ಚಿಕ್ಕಬಳ್ಳಾಪುರ), ರಾಜೇಂದ್ರ ಡಿ ಎಸ್(ಕರ್ಣಾಟಕ ಲೋಕಾಯುಕ್ತ), ಬಸವರಾಜ್ ಬಿ ಎಸ್ (ದಾವಣಗೆರೆ ಗ್ರಾಮಾಂತರ ಉಪ ವಿಭಾಗ, ದಾವಣಗೆರೆ). ಪ್ರವೀಣ್.ಎಮ್(ಮಾಗಡಿ ಉಪ ವಿಭಾಗ, ರಾಮನಗರ ಜಿಲ್ಲೆ), ನಂದ ಕುಮಾರ್‌.ಡಿ.ಸಿ (ಮುಳಬಾಗಿಲು ಉಪ ವಿಭಾಗ, ಕೋಲಾರ ಜಿಲ್ಲೆ), ಡಾ. ಗಿರೀಶ್ ಬೋಜಣ್ಣನವರ್ (ರಾಣಿಬೆನ್ನೂರು ಉಪ ವಿಭಾಗ, ಹಾವೇರಿ ಜಿಲ್ಲೆ), ಬಾಳಪ್ಪ ಶಿವಪ್ಪ ತಳವಾರ್ (ಸಿಂಧನೂರು ಉಪ ವಿಭಾಗ, ರಾಯಚೂರು ಜಿಲ್ಲೆ), ವಿಜಯ್ ಕುಮಾರ್ ವಿ ತಳವಾರ್(ದಕ್ಷಿಣ ಉಪ ವಿಭಾಗ, ಹುಬ್ಬಳ್ಳಿ -ಧಾರವಾಡ ನಗರ), ಪ್ರಸಾದ್ ಗೋಖಲೆ (ತೋರಣಗಲ್ಲು ಉಪ ವಿಭಾಗ (ಹಂಪಿ), ಬಳ್ಳಾರಿ ಜಿಲ್ಲೆ), ವಿನಾಯಕ್ ಎನ್ ಶೆಟ್ಟಗೇರಿ(ತಿಪಟೂರು ಉಪ ವಿಭಾಗ, ತುಮಕೂರು ಜಿಲ್ಲೆ),

ಮೊಹಮ್ಮದ್ ಹಶ್ಯತ್ ಖಾನ್.ಐ (ಸಂಚಾರ ಉಪ ವಿಭಾಗ, ಮೈಸೂರು ನಗರ), ವನಿತಾ.ಜಿ.(ಹೈಕೋರ್ಟ್ ವಿಚಕ್ಷಣಾ ದಳ, ಬೆಂಗಳೂರು), ಅನಿಲ್ ಕುಮಾರ್. ಎಮ್(ಕೊಪ್ಪ ಉಪ ವಿಭಾಗ, ಚಿಕ್ಕಮಗಳೂರು ಜಿಲ್ಲೆ), ಬಾಬಾ ಸಾಹೇಬ್ ಹುಲ್ಲಣ್ಣನವರ್(ಡಿಸಿಆರ್‌ಬಿ, ಹಾವೇರಿ ಜಿಲ್ಲೆ), ಗೋಪಾಲಕೃಷ್ಣ ತಿಮ್ಮಣ್ಣ ನಾಯಕ್(ಸಾಗರ ಉಪ ವಿಭಾಗ, ಶಿವಮೊಗ್ಗ ಜಿಲ್ಲೆ), ಜಾವೀದ್ ಇನಾಂದಾರ್ (ಶೋರಾಪುರ (ಸುರಪುರ) ಉಪ ವಿಭಾಗ, ಯಾದಗಿರಿ ಜಿಲ್ಲೆ), ಪ್ರಕಾಶ್, ಆರ್.(ಶೇಷಾದ್ರಿಪುರಂ ಉಪ ವಿಭಾಗ, ಬೆಂಗಳೂರು ನಗರ), ಮೇರಿ ಶೈಲಜಾ (ಯಶವಂತಪುರ ಉಪ ವಿಭಾಗ, ಬೆಂಗಳೂರು ನಗರ), ಬಸವರಾಜ್ ಎಲಿಗಾರ್ (ವಿಜಯಪುರ ಉಪ ವಿಭಾಗ, ವಿಜಯಪುರ ಜಿಲ್ಲೆ), ಮೊಹಮ್ಮದ್ ಇಸ್ಮಾಯಿಲ್ (ಸಂಚಾರ ಉಪ ವಿಭಾಗ, ಕಲಬುರಗಿ ನಗರ)

Related Articles

Stay Connected

0FansLike
3,912FollowersFollow
0SubscribersSubscribe

Latest Articles