By Raghavendra press meet

0
108

Home


ಶಿವಮೊಗ್ಗ ಜಿಲ್ಲೆಯ ಆನ್ ಗೋಯಿಂಗ್ ವಕ್ಸ್ ಬಗ್ಗೆ
ಇಂದಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದ ಬಿ ವೈ ರಾಘವೇಂದ್ರ ರವರು


ಕ್ಷೇತ್ರದ ಕಾಮಗಾರಿಯನ್ನ ಫಾಲೋ ಮಾಡಲಾಗುತ್ತಿದೆ. ಕಳೆದ ಬಾರಿ ಚುನಾವಣೆಯಲ್ಲಿ ಆಕಾಶವಾಣಿ ಭದ್ರಾವತಿಗೆ ಎಫ್ ಎಂ ರೇಡಿಯೋ ತರುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಲಾಗಿತ್ತು. ಈ ಹಿಂದೆ ಕೇವಲ ಒಂದು ಕಿಲೋ ವ್ಯಾಟ್ ಟ್ರಾನ್ಸ್ಮಿಟರ್ ಮಾತ್ರ ವಿತ್ತು ಆದರಿಂದ
ನೆಟ್ವರ್ಕ್ ವ್ಯಾಪ್ತಿ ತುಂಬಾನೇ ಕಡಿಮೆ ಇತ್ತು ಆದ್ದರಿಂದ ಇದನ್ನು 10 ಕಿಲೋ ವ್ಯಾಟ್ ನ ಟ್ರಾನ್ಸ ಮೀಟರ್ ಈಗ ಅಳವಡಿಸಿದಿಂದ ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗಕ್ಕೆ ಅನುಕೂಲವಾಗಲಿದೆ. ಭದ್ರಾವತಿಯಿಂದ ಆಕಾಶವಾಣಿ ಕೇಂದ್ರ ಶಿಫ್ಟ್ ಆಗೊಲ್ಲ. ಟ್ರಾನ್ಸ್ ಮೀಟರ್ ಹೆಚ್ಚಿಸಲಾಗುತ್ತಿದೆ. ಉಡುಪಿ, ಕಾರವಾರದಲ್ಲಿ 1 ಟ್ರಾನ್ಸ್ ಮೀಟರ್ ಇತ್ತು. ಶಿವಮೊಗ್ಗದಲ್ಲಿ 10 ಕೆವಿ ಟ್ರಾನ್ಸ್ ಮೀಟರ್ ಬಿಡುಗಡೆಯಾಗುತ್ತಿದೆ ಎಂದರು. ಕೇಂದ್ರದಿಂದ ಸುಮಾರು 10 ಕೋಟಿ ಅನುದಾನವನ್ನು ನೀಡಿದೆ ಇದಕ್ಕಾಗಿ ಮಾನ್ಯ ಪ್ರಧಾನ ಮಂತ್ರಿಗಳಿಗೂ ಹಾಗೂ ಸಂಬಂಧಪಟ್ಟ ಕೇಂದ್ರ ಸಚಿವರಿಗೂ ಮತ್ತು ಅಧಿಕಾರಿಗಳಿಗೂ ಅಭಿನಂದಿಸಿದರು,

ಡಿಸೆಂಬರ್ ಒಳಗೆ ಟೆಂಡರ್ ಕರೆಯಲಾಗುವುದು, ಗ್ಲೋಬಲ್ ಟೆಂಡರ್ ಕರೆಯಲಾಗುತ್ತಿದೆ. ಸೇವೆ ಆರಂಭಿಸಲು ಸೂಚಿಸಲಾಗಿದೆ. ರೈತರು, ರೋಟರಿ, ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಒತ್ತಡವಿತ್ತು. ಆಕಾಶವಾಣಿಯ ಸ್ಟ್ಯೂಡಿಯೋ, ರೆಕಾರ್ಡಿಂಗ್ ಸಹ ಅಪ್ ಗ್ರೇಡ್ ಆಗಲಿದೆ ಎಂದರು.
ಶಿವಮೊಗ್ಗದ ವಿಮಾನ ನಿಲ್ದಾಣದ ಬಗ್ಗೆ ಮಾತನಾಡಿ

ವಿಮಾನ ಹಾರಾಟ ಆ.11 ಅಂತ ಇತ್ತು. ದೆಹಲಿ ತಲುಪಿದಾಗ ,BTCB ಪರವಾನಿಗೆ ಹಿಂಪಡೆದ ಕಾರಣ ವಿಮಾನ ಹಾರಾಟ ನಿಗದಿತ ಸಮಯದಿಂದ 15 ದಿನ ಮುಂದು ಹೋಗಿದೆ. ಗುಲ್ಬರ್ಗ, ಬೆಳಗಾವಿ ಮೈಸೂರು ನಲ್ಲಿ ಬಾಂಬ್ ಸ್ಕ್ಯಾಡ್ ವ್ಯವಸ್ಥೆ ಇಲ್ಲ. HUBLI DHARWAD ವಿಮಾನ ನಿಲ್ದಾಣದಿಂದ ಅವಶ್ಯಕತೆ ಇದ್ದಾಗ ಬಾಂಬ್ ಸ್ಕ್ವಾಡ್ ನವರನ್ನು ಕರೆಸಿಕೊಳ್ಳುವಂತ ವ್ಯವಸ್ಥೆಯ ಯೋಚನೆ ಇತ್ತು ಈಗ ಶಿವಮೊಗ್ಗದಲ್ಲಿ ಇದ್ದಾರೆ. ತರಬೇತಿ ಹೊಂದಿದವರು, ಇರುತ್ತಾರೆ ಎಂದರು.

 

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಂಬಂಧಪಟ್ಟಂತೆ ಮೊನ್ನೆ ದೆಹಲಿಯಲ್ಲಿ
ಡಿಜಿ ಡಿಸಿಎಸ್ ಜುಲ್ಫಿಕರ್, ಕಾರ್ಯದರ್ಶಿ, S ರಾಜೂ ಬನ್ಸಾಲ್ ಭೇಟಿ ನಿಗದಿಪಡಿಸಿದ್ದ ದಿನಾಂಕ ಮುಂದೆ ಹೋಗಿದ್ದರಿಂದ ಈ ಬಗ್ಗೆ ಚರ್ಚಿಸಿ ದಿನಾಂಕ ನಿಗದಿ ಬಗ್ಗೆ ಒತ್ತಾಯ ಮಾಡಿದಾಗ ಮೂರು ದಿನ ಹಿಂದೆ ಇಂಡಿಗೋ ವೆಬ್ ಸೈಟ್ ನಲ್ಲಿ ಪ್ರಕಟವಾಗಿದೆ. ಉಡಾನ್ ಯೋಜನೆಯಲ್ಲಿ ಟೆಂಡರ್ ಕರೆದಾಗ ಮೂರು ಮಾರ್ಗದಲ್ಲಿ ಅರ್ಜಿ ಹಾಕಿದ್ದಕ್ಜೆ ಅನುಕೂಲವಾಗಿದೆ. ಇದಾದ ನಂತರ 90 ದಿನಗಳಲ್ಲಿ ಗೋವಾ, ತಿರುಪತಿ, ಹೈದ್ರಾಬಾದ್ ಕಡೆ ಶಿವಮೊಗ್ಗದಿಂದ ವಿಮಾನ ಹಾರಾಟ ಶುರುವಾಗಲಿದೆ ಎಂದರು.

ವಿಮಾನ ಪ್ರಯಾಣ ದರ ಏರಿಕೆಯಾಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಂಸದರು, ವಿಮಾನ ಬೇಡಿಕೆ ನೋಡಿ ಸಾಫ್ಟವೇರ್ ಬದಲಾಗುತ್ತದೆ. ಸೆಪ್ಟಂಬರ್ ಅಕ್ಟೋಬರ್ ವರೆಗೆ ಬುಕ್ಕಿಂಗ್ ಆಗಿದೆ. ಶಿವಮೊಗ್ಗದ ವಿಮಾನ ನಿಲ್ದಾಣ ಕರ್ಚು ವೆಚ್ಚವನ್ನ ರಾಜ್ಯ ಸರ್ಕಾರ ವಹಿಸಿಕೊಂಡಿದೆ, ಗುಲ್ಬರ್ಗ ವಿಮಾನ‌ನಿಲ್ದಾಣದ ಮೇಲುಉಸ್ತುವಾರಿಯನ್ನ ಕೇಂದ್ರ ಸರ್ಕಾರವಹಿಸಿಕೊಂಡಿದೆ ಎಂದರು.
BSNL ಟವರ್ ಅಳವಡಿಸಲು ಕೇಂದ್ರದಿಂದ
250 ಕೋಟಿ ಅನುದಾನ ತರಲಾಗಿದ್ದು 250 ಮೊಬೈಲ್ ನೆಟ್ ವರ್ಕ್ ಅಳವಡಿಸಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ದೆಹಲಿಯಿಂದಲೇ ಅರಣ್ಯದ ಎನ್ ಒಸಿ ಬೇಕಿದೆ. ಅದರ ಕುರಿತು ಇಂದು ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚರ್ಚೆ ನಡೆಸಲಾಗುವುದು.
ರೈಲ್ವೆ ಬಗ್ಗೆ ಮಾತನಾಡಿ ಹಾರನಹಳ್ಳಿ ಹಾಗೂ ಅರಸಳುನಲ್ಲಿ ರೈಲು ನಿಲುಗಡೆಯ ಬಗ್ಗೆ ರೈಲ್ವೆ ಕೇಂದ್ರ ಸಚಿವರಲ್ಲಿ ಪ್ರಸ್ತಾಪ ಮಾಡಿದ್ದು ಒಪ್ಪಿಗೆಯು ನೀಡಿರುತ್ತಾರೆ ಹಾಗಾಗಿ ರೈಲ್ವೆ ಸಚಿವರಿಗೆ ಅಭಿನಂದನೆ ತಿಳಿಸಿದರು.