Wednesday, September 25, 2024
spot_img

ಸಿ ಎಸ್ ಷಡಕ್ಷರಿ ಅವರ ಹುಟ್ಟುಹಬ್ಬ

 

ಸರ್ಕಾರಿ ನೌಕರರ ಭವನದಲ್ಲಿ ನೂತನವಾಗಿ , ಮೂರನೇ ಅಂತಸ್ತಿನಲ್ಲಿ ನಾಲಕ್ಕು ವಿಐಪಿ ಹವಾ ನಿಯಂತ್ರಿತ ಸುಸಜ್ಜಿತ ವಸತಿ ಗೃಹಗಳನ್ನು ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿ ಹಾಗೂ ಅಶ್ವಥ್ ನಾರಾಯಣ ಶೆಟ್ಟಿಯವರು ಉದ್ಘಾಟಿಸಿದರು

 

ಸಿ ಎಸ್ ಷಡಕ್ಷರಿ ಅವರ ಹುಟ್ಟುಹಬ್ಬ ಅತ್ಯಂತ ವಿಜ್ರಂಭಣೆಯಿಂದ ಸರ್ಕಾರಿ ನೌಕರ ಸಂಘದ ಸದಸ್ಯರುಗಳು ಆಚರಿಸಿದರು ಈ ಸಮಯದಲ್ಲಿ ಮಾತನಾಡಿದ ಷಡಕ್ಷರಿ ಯವರು ಎನ್‌ಪಿಎಸ್ ನೌಕರ  ಪ್ರಭಾಕರ್ ಕೆಲ ದಿನಗಳ ಹಿಂದೆ ಕಾಣೆಯಾಗಿದ್ದು ಕೆಲವರ ಚಿತ್ತಾವಣೆಯಿಂದ ನನ್ನ ಹಾಗೂ ನೌಕರ ಸಂಘದ ಹೆಸರನ್ನು ಬರೆದಿಟ್ಟು ಕಾಣೆಯಾಗಿದ್ದರು ಈ ಪ್ರಕರಣವನ್ನು ಸ್ವತಃ ನಾನೇ ಹೋಗಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ನೀಡಿದ್ದು ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆದು ತಪ್ಪಿಸ್ತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಕಂಪ್ಲೇಂಟ್ ದಾಖಲಿಸಿದ್ದೇನೆ ಎಂದು ಹೇಳಿದರು ಅದೇನೆ ಇರಲಿ ನನ್ನ ಹುಟ್ಟುಹಬ್ಬ ದಿನದಂದೇ ಪ್ರಕರಣಸುಖಾಂತ್ಯಗೊಂಡಿರುವುದರಿಂದ ನನಗೆ ಹಾಗೂ ಅವರ ಕುಟುಂಬಕ್ಕೆ ಸಂತೋಷವಾಗಿದೆ ಎಂದು ಹೇಳಿದರು ನಾನು ನನ್ನ ಜೀವನದಲ್ಲಿ ಯಾರಿಗೂ ತೊಂದರೆ ಕೊಟ್ಟಿಲ್ಲ ಎಲ್ಲರಿಗೂ ಒಳ್ಳೆಯದನ್ನೇ ಮಾಡಿದ್ದೇನೆ ಇನ್ನು ಮುಂದು ಒಳ್ಳೆಯದನ್ನು ಮಾಡುತ್ತೇನೆ ಎಂದರು ಕೆ ಇ ಬಿ ವೃತ್ತದಲ್ಲಿ ನಿರ್ಮಿಸುತ್ತಿರುವ ನೌಕರರ ಭವನಕ್ಕೆ ಡಾಕ್ಟರ್ ಬಿಎಸ್ ಯಡಿಯೂರಪ್ಪನವರು ಸರ್ಕಾರದಿಂದ 22 ಕೋಟಿಯನ್ನು ಬಿಡುಗಡೆ ಮಾಡಿದ್ದರು ಆದಕಾರಣ ಸುಸರ್ಜಿತವಾದ 1200 ಒಟ್ಟಿಗೆ ಕೂರಬಹುದಾದ ಸರ್ಜಿ ಕನ್ವೆಷನ್ ಹಾಲ್ಗಿಂತ ಉತ್ತಮ ಹಾಲನ್ನು ನಿರ್ಮಿಸಿದ್ದೇವೆ ಆದ್ದರಿಂದ ಯಡಿಯೂರಪ್ಪ ಸಮುದಾಯ ಭವನ ಎಂದು ನಾಮಕರಣ ಮಾಡಬೇಕು ಎನ್ನುವ ಇಚ್ಛೆಯನ್ನು ವ್ಯಕ್ತಪಡಿಸಿದರು.

ಈ ಸಮಯದಲ್ಲಿ ರಾಜ್ಯ ಅಧ್ಯಕ್ಷರಿಗೆ ನೆಹರು ಸ್ಟೇಡಿಯಂನ ಅವರ ಅಭಿಮಾನಿ ಬಳಗ ಹಾಗೂ ಸರ್ಕಾರಿ ನೌಕರ ಸಂಘದ ತಾಲೂಕು ನಿರ್ದೇಶಕರುಗಳು, ಸದಸ್ಯರುಗಳು ವಾರ್ತಾ ಇಲಾಖೆಯ ಮಾರುತಿ ಅವರು ಇನ್ನು ಮುಂತಾದವರು ಸಿಎಸ್ ಷಡಕ್ಷರಿಯವರ ಹುಟ್ಟುಹಬ್ಬಕ್ಕೆ ಅಭಿನಂದಿಸಿದರು.

 

Related Articles

Stay Connected

0FansLike
3,912FollowersFollow
0SubscribersSubscribe

Latest Articles