Thursday, September 26, 2024
spot_img

ಕುರುಬ ಸಮಾಜ, ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ.

ಕುರುಬ ಸಮುದಾಯವನ್ನು ಎಸ್.ಟಿ ಮೀಸಲಾತಿಗೆ ಸೇರಿಸಲು ಶಿಫಾರಸ್ಸು ರಾಜ್ಯ ಸರ್ಕಾರಗಳಿಗೆ ಅಭಿನಂದನೆ. ಕೇಂದ್ರ ಸರ್ಕಾರಕ್ಕೆ ಹಕ್ಕೊತ್ತಾಯ.

ಇಂದಿನ ಪತ್ರಿಕಾಗೋಷ್ಠಿಯಲ್ಲಿ ಸಾಹಿತಿಗಳಾದ ಲಿಂಗದಳ್ಳಿ ಹಾಲಪ್ಪ ಮಾತನಾಡಿ ಸ್ವಾತಂತ್ರ್ಯ ಪೂರ್ವದಿಂದ ಹಾಗೂ ಇಂದಿನ ಎಸ್. ಟಿ. ಮೀಸಲಾತಿ ಪಟ್ಟಿಯಲ್ಲಿರುವ ಕುರುಬ ಸಮುದಾಯವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿಸ್ತಾರ ಮಾಡದೇ, ಅನ್ಯಾಯವನ್ನು ಸರಿಪಡಿಸಲು, ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ ಮಾರ್ಗದರ್ಶನದೊಂದಿಗೆ, 2015ರಿಂದ ನಿರಂತರವಾದ ಹೋರಾಟ, ಸಮಾವೇಶ, ಧರಣಿಗಳ ಮೂಲಕ ಅಂದಿನ ಕಾಂಗ್ರೇಸ್ ಸರ್ಕಾರಕ್ಕೆ ಮತ್ತು ಸಮ್ಮಿಶ್ರ ಸರ್ಕಾರಕ್ಕೆ ಮನವಿ ಮತ್ತು ಒತ್ತಾಯದಿಂದಾಗಿ ಸಮ್ಮಿಶ್ರ ಸರ್ಕಾರದಲ್ಲಿ ಕುರುಬರ ಎಸ್. ಟಿ. ಮೀಸಲಾತಿಗಾಗಿ ಕುಲಶಾಸ್ತ್ರೀಯ ಅಧ್ಯಯನಕ್ಕೆ ಆದೇಶ ನೀಡಲಾಗಿತ್ತು. 2019ರಿಂದ ರಾಜ್ಯದ 25ಜಿಲ್ಲೆಗಳಲ್ಲಿ
ನಡೆದ ಕುಲಶಾಸ್ತ್ರೀಯ ಅಧ್ಯಯನದ ವರದಿಯನ್ನು ಕಳೆದ ಸರ್ಕಾರ ದಿನಾಂಕ 24-03-2023 ರಂದು ನಡೆದ ಸಚಿವ ಸಂಪುಟದಲ್ಲಿ ಅಂಗೀಕರಿಸಿ, ಭಾರತ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸರ್ಕಾರಿ ಆದೇಶ ಮಾಡಿದ್ದರು. ಆ ಆದೇಶವನ್ನು ದಿನಾಂಕ 20-7-2023ರಂದು ಇಂದಿನ ಕರ್ನಾಟಕ ಸರ್ಕಾರವು, ಭಾರತ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಮೂಲತಃ ಬುಡಕಟ್ಟು ಸಮುದಾಯವಾಗಿರುವ ಇಂದಿಗೂ ಸಹ ಬುಡಕಟ್ಟು ಸಂಸ್ಕೃತಿ, ಆಚರಣೆಗಳು ಹೊಂದಿರುವಂತಹ ಕುರುಬ ಸಮುದಾಯದ ಬೇಡಿಕೆಯನ್ನು ಪರಿಗಣಿಸಿ, ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು, ಸಹಕಾರ ನೀಡಿದ್ದ ಕಾಂಗ್ರೇಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಹಾಗೂ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿ, ಭಾರತ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ಶ್ರೀ ಬಸವರಾಜ ಬೊಮ್ಮಾಯಿಯವರಿಗೆ ಹಾಗೂ ಶಿಫಾರಸ್ಸನ್ನು ಭಾರತ ಸರ್ಕಾರಕ್ಕೆ ಕಳುಹಿಸಿಕೊಟ್ಟಿರುವ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ಸರ್ಕಾರಕ್ಕೂ ಹಾಲುಮತ ಮಹಾಸಭಾ ಧನ್ಯವಾದಗಳನ್ನು ಸಲ್ಲಿಸುತ್ತಿದೆ.

ಈಗ ಚೆಂಡು ಕೇಂದ್ರ ಸರ್ಕಾರದ ಅಧೀನದಲ್ಲಿರುವುದರಿಂದ ಕೇಂದ್ರ ಸರ್ಕಾರದ ಏನು 5 ಮಾನದಂಡವು ಇದ್ದವು ಐದು ಮಾನದಂಡದ ಪರಿಶೀಲನೆ ನಡೆಸಿದ್ದಾರೆ16 ಜಿಲ್ಲೆಗಳಲ್ಲಿ ಕೂಡ ಕುಲ ಶಾಸ್ತ್ರದ ಅಧ್ಯಯನ ಕೊಡುವ ನಡೆದಿವೆ ಕೇಂದ್ರ ಸರ್ಕಾರವು, ಆದ್ದರಿಂದ ರಾಜ್ಯ ಸರ್ಕಾರದ ಶಿಫಾರಸ್ಸನ್ನು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಂಗೀಕರಿಸಿ, ರಾಜ್ಯದ ಎಲ್ಲಾ ಕುರುಬರಿಗೆ ಎಸ್. ಟಿ. ಮೀಸಲಾತಿ ಪಟ್ಟಿಗೆ ಸೇರಿಸಿ, ಸಮುದಾಯಕ್ಕೆ ನ್ಯಾಯ ಒದಗಿಸಿಬೇಕಾಗಿ ಕೇಂದ್ರ ಸರ್ಕಾರಕ್ಕೆ ‘ಹಕ್ಕೊತ್ತಾಯ ಮಾಡುತ್ತಿದೆ. ನಂತರ ಮಾತನಾಡಿದ ಹಾಲುಮತ ಮಹಾಸಭಾ ಕಾರ್ಯದರ್ಶಿಯರಾದ ಗಣೇಶ್ ಬಿಳಿಗೆಯವರು ನಮ್ಮ ಸಮಾಜದ ಬಂಧುಗಳು ಹಾಗೂ ರಾಜಕೀಯ ಪಕ್ಷದವರು ಪಕ್ಷಭೇದ ಮರೆತು ಒಗ್ಗೂಡಬೇಕು ಎಂದರು

ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಡಾ| ಪ್ರಶಾಂತ್, ಜಿಲ್ಲಾಧ್ಯಕ್ಷರಾದ ದಾನೇಶ್, ಸಿ, ಕಾರ್ಯಾಧ್ಯಕ್ಷರಾದ ಗಣೇಶ್ ಬಿಳಿಗಿ, ಕಾರ್ಯದರ್ಶಿಯಾದ ಸುಹಾಸ್‌ಬಾಬು, ಸಂಚಾಲಕರಾದ ವಿನಯ್ ನಾರಾಯಣಸ್ವಾಮಿ, ಮೋಹನ ದೊಡ್ಡಪ್ಪ, ವಾಟಾಳ್ ಮಂಜುನಾಥ್, ರಾಜ್ಯ ಮಹಿಳಾ ಉಪಾಧ್ಯಕ್ಷರಾದ ರತ್ನಮ್ಮ, ಸ್ವಪ್ನ ಸುರೇಶ್ ಭಾಗವಹಿಸಿದ್ದರು.

ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪಿಸಲು
ಇಂದಿನ ಪತ್ರಿಕಾ ಪತ್ರಿಕಾಗೋಷ್ಠಿಯಲ್ಲಿ ವಾಟಳ ಮಂಜುನಾಥ್ ಮಾತನಾಡುತ್ತಾ ಶಿವಮೊಗ್ಗ ನಗರದಲ್ಲಿ ಹಲವು ವರ್ಷಗಳಿಂದ ಸಂಗೊಳ್ಳಿ ರಾಯಣ್ಣ ವೃತ್ತ ಇದ್ದು, ರಾಯಣ್ಣನವರ ಪ್ರತಿಮೆ ಇರುವುದಿಲ್ಲ. ಈಗ ಶಿವಮೊಗ್ಗ ನಗರದ ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿಯವರು ಕೆಲವು ದಿನಗಳ ಹಿಂದೆ ಸಂಗೊಳ್ಳಿರಾಯಣ್ಣನ ವೃತ್ತದಲ್ಲಿ ಕತ್ತಿ, ಗುರಾಣಿ ಇಟ್ಟಿರುತ್ತಾರೆ. ಅದರ ಬಗ್ಗೆ ಸಾರ್ವಜನಿಕರಿಗೆ ಯಾವ ರಾಜರದ್ದೋ? ಯಾವ ಕಾಲದ್ದೋ? ಏನೂ ಮಾಹಿತಿ ತಿಳಿದಿರುವುದಿಲ್ಲ. ದಯವಿಟ್ಟು ಶಿವಮೊಗ್ಗ ನಗರದ ಮಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿಯವರು ಆ ಕತ್ತಿ, ಗುರಾಣಿ ತೆರವುಗೊಳಿಸಿ ಕ್ರಾಂತಿವಿದ, ಸ್ವಾತ್ರ್ಯ ಹೋರಗಾರ, ಸಂಗೊಳ್ಳಿ ರಾಯಣ್ಣನವರು ಕಿತ್ತೂರು ಸಂಸ್ಥಾನದಲ್ಲಿ ತಮ್ಮ ನಾಡಿನ ಉಕವಿಗಾಗಿ ೭ಷರ ವಿರುದ್ಧ ಹೋರಾಡಿ ತನ್ನ ಪ್ರಾಣವನ್ನೇ ಅರ್ಪಿಸಿದ ಮಹಾನ್ ವೀರ ಸೇನಾನಿ, ಆದ್ದರಿಂದ ಕ್ರಾಂತಿ, ಸಂಗೊಳ್ಳಿ ರಾಯಣ್ಣನ ಬೃಹತ್ ಪ್ರತಿಮೆ ಸ್ಥಾಪಿಸಬೇಕೆಂದು ದಿನಾಂಕ: 25-07-2023 ರಂದು ಮಂಗಳವಾರ ಬೆಳಗ್ಗೆ 10.00 ಗಂಟೆಗೆ ಖಾಸಗಿ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟು ಬಿ.ಹೆಚ್, ರಸ್ತೆ ಮೂಲಕ ಶಿವಪ್ಪ ನಾಯಕ ವೃತ್ತ ತಲುಪಿ, ನೆಹರು ರಸ್ತೆ-ಗೋಪಿ ವೃತ್ತ- ಮೂಲಕ ಜಿಲ್ಲಾಧಿಕಾರಿಗಳ ಕಛೇರಿ ತಲುಪಿ, ಜಿಲ್ಲಾಧಿಕಾರಿಗಳಿಗೆ ಮನು ಸಲ್ಲಿಸಲಾಗುವುದು. ಈ ಮೆರವಣಿಗೆಯಲ್ಲಿ ನಮ್ಮ 1000 ಜನ ಕಾರ್ಯಕರ್ತರು ಭಾಗವಹಿಸುತ್ತಿದ್ದು, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪಿಸುವ ಈ ಹೋರಾಟಕ್ಕೆ ಶಿವಮೊಗ್ಗ ಜಿಲ್ಲೆಯ ರೈತಸಂಘಟನೆ ದಲಿತ ಸಘಟನೆ, ಕಾರ್ಮಿಕ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಕುರುಬ ಸಮಾಜದ ಸಂಘಟನೆಗಳು, ಶಾಶ್ವತಿ ಮಹಿಳಾ ವೇದಿಕೆ(ರಿ) ಇನ್ನು ಮುಂತಾದ ಹಲವಾರು ಸಂಘಟನೆಗಳು ನಮ್ಮ ಹೋರಾಟಕ್ಕೆ ಬಲ ನೀಡುತ್ತಿದ್ದು, ಹಾಗೂ ನಮ್ಮ ಹೋರಾಟದ ಮೆರವಣಿಗೆಯಲ್ಲಿ ಈ ಎಲ್ಲಾ ಸಂಘಟನೆಗಳು ಭಾಗವಹಿಸುತ್ತಿವೆ ಎಂದು ಹೇಳಿದರು

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಲಿಂಗರಾಜು ಅರ್ಚನ ಲೋಕೇಶ್ ವಸಂತ್ ನಾಗರಾಜ್ ಗಣೇಶ್ ಬೀಳಗಿ ನವಲೆ ಮಂಜುನಾಥ್ ದೇವೇಂದ್ರಪ್ಪ ಇನ್ನೂ ಮುಂತಾದವರು ಇದ್ದರು.

Related Articles

Stay Connected

0FansLike
3,912FollowersFollow
0SubscribersSubscribe

Latest Articles