ಮೆಗ್ಗಾನ್ನ್ ಟೆಂಡರ್ ಗೋಲ್ಮಾಲ್ ವೇತನ ಕಡಿತ

0
395

ಮೆಗ್ಬೋಗಾನ್ನ್ ಬೊಧನಾ ಆಸ್ಪತ್ರೆ ಯಲ್ಲಿಸುಮಾರು 45 ಜನ ಹೊರ ಗುತ್ತಿಗೆ ಸಿಬ್ಬಂದಿ (ಸ್ವೀಪರ್ಸ್)2006 ನೇ ಸಾಲಿನಿಂದಲೂ ನಾವು ಮೆಡಿಕಲ್ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇವೆ. ಪ್ರಾರಂಭದಲ್ಲಿ 100 ರೂ. ವೇತನವಿತ್ತು. ಅಂದಿನಿಂಲೂ ಕಸಗುಡಿಸುವುದು,ಬಾತ್ ರೂಮ್, ತೊಳೆಯುವುದು ರೋಗಿಗಳನ ಸ್ವಚ್ಛಗೊಳಿಸುವುದು, ಇಡೀ ಆಸ್ಪತ್ರೆಯನ್ನು ಸ್ವಚ್ಛಗೊಳಿಸುವುದು, ಕರೋನ ಸಮಯದಲ್ಲಿ ಮೆಗಾನ್ ಭೋದನಾ ಆಸ್ಪತ್ರೆಯಲ್ಲಿ ಯಾವುದೇ ರೀತಿಯ ಆಕ್ಷೇಪಣೆಯಿಲ್ಲದೆ ನಾವುಗಳು ನಮಗೆ ಹಾಕಿದ

ಡ್ಯೂಟಿಎನ್ನು ನಮ್ಮ ಜೀವದ ಹಂಗು ತೊರೆದು ತಪ್ಪದೇ, ಕರ್ತವ್ಯ ನಿರ್ವಹಿಸಿರುತ್ತೇವೆ. ನಾವುಗಳೆಲ್ಲರೂ, ನಮಗೆ ನೀಡುವ ವೇತನದ ಮೇಲೆ ನಮ್ಮ ಕುಟುಂಬವು ಅವಲಂಬಿತವಾಗಿರುತ್ತದೆ. ನಮಗೆ ಬರುವ ವೇತನದಿಂದಲೇ ಜೀವನ ನಡೆಯುತ್ತಿದೆ.ಮಕ್ಕಳ ವಿದ್ಯಾಭ್ಯಾಸವೂ, ಸಹ ಇದರಿಂದಲೇ ನಡೆಯುತ್ತಿದೆ. ನಮಗೆ ಪಿ ಎಫ್ ಮತ್ತು ಇ.ಎಸ್. ಇತರೆ ಸೌಲಭ್ಯಗಳು ಹಾಗೂ 17500 ವೇತನ ಸಿಗುತ್ತಿತ್ತು ಆದರೆ ಈಗ ಹೊಸದಾಗಿ ಟೆಂಡರ್‌ ಆಗಿ ಬಂದಂತಹ ಏಜೆನ್ನಿದಾರರು ನಾವು ಇದುವರೆಗೂ ತೆಗೆದುಕೊಳ್ಳುತ್ತಿದ್ದ ವೇತನವನ್ನು ಈಗ 12700 ರೂಪಾಯಿಳಿಗೆ ಇಳಿಸಿ ನಮ್ಮ ಅಕೌಂಟ್ದು ಗಳಿಗೆ ಜಮೆ ಮಾಡಿರುತ್ತಾರೆ, ಕಾರಣ ಹೊಸದಾಗಿ ಹತ್ತು ಜನಕ್ಕೆ ಉದ್ಯೋಗಾವಕಾಶ ಮಾಡಿಕೊಳ್ಳಲಾಗಿದೆ ಅವರಿಂದಲೂ ಒಬ್ಬರಿಗೆ 150000 ಲಕ್ಷ, ಪೀಕಿದ್ದಾರೆ ಅಂತೆ??, ನಾವು ಸದರಿ ಉದ್ಯೋಗವಲ್ಲದೆ ಬೇರೆ ಯಾವುದೇ ಉದ್ಯೋಗ ಮಾಡುತ್ತಿಲ್ಲ.ಬಾಡಿಗೆ ಮನೆಯಲ್ಲಿರುತ್ತೇವೆ. ಮಕ್ಕಳಿದ್ದರು. ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನಮ್ಮ ಕುಟುಂಬವು ನಮ್ಮ ವೇತನದ ಮೇಲೆಯೆ ಅವಲಂಬಿತವಾಗಿರುತ್ತದೆ ಈಗ ಬದಲಾವಣೆಯಾಗಿರುವ ವೇತನ ಕಡಿತದಿಂದ ಮನೆಯ ಮಕ್ಕಳ ವಿದ್ಯಾಭ್ಯಾಸ, ಆಸ್ಪತ್ ಖರ್ಚು,ದಿನನಿತ್ಯದ ಅವಶ್ಯಕತೆಗಳನ್ನು ಪೂರೈಸಲು ಕಷ್ಟಕರವಾಗುತ್ತದೆ ಅದುದರಿಂದ ನಮಗೆ ಈಗ ಆಗುತ್ತಿರುವ ಅನ್ಯಾಯವನ್ನು ದಯಾಮಾಡಿ ತಡೆದು,ನಮಗೆ ಇಲ್ಲಿಯವರೆಗೆ ನೀಡುತ್ತಿದ್ದ ವೇತನ ಬಗ್ಗೆ ಜಿಲ್ಲಾಧಿಕಾರಿಗೆ ಗಮನಕ್ಕೆ  ತರಲಾಗಿದ್ದು, ಅವರು ನಮ್ಮ ಮನವಿಗೆ ತಕ್ಷಣವೇ ಸ್ಪಂದಿಸಿ ಕಾರ್ಮಿಕ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಇದರ ಬಗ್ಗೆ ಗಮನಹರಿಸಲು ಹೇಳಿದ್ದಾರೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮುಂದಿನ ದಿನದಲ್ಲಿ ಸರಿಪಡಿಸುವ ವ್ಯವಸ್ಥೆಯನ್ನು ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಭರವಸೆ ಭರವಸೆಯಾಗಿ ಉಳಿಯುತ್ತದೆಯೊ ಅಥವಾ ವೇತನ ತಾರತಮ್ಯವನ್ನು ಸರಿಪಡಿಸುತ್ತಾರ ಕಾದು ನೋಡಬೇಕಾಗಿದೆ.