Wednesday, September 25, 2024
spot_img

Vhp jin samaja protest

Vishwa Hindu Parishad
Jain samaj Shimoga
ಇವರುಗಳ ಸಯೋಗದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ
ದಿನಾಂಕ 06-07-2023ರಂದು ಬೆಳಗಾವಿ ಜಿಲ್ಲೆ, ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿ ಗ್ರಾಮದ, ನಂದಿ ಪರ್ವತ ಆಶ್ರಮದಲ್ಲಿದ್ದ ಜೈನಾಚಾರ್ಯಶ್ರೀ 108 ಕಾಮಕುಮಾರ ನಂದಿ ಮಹಾರಾಜರನ್ನು ಕೀಡಿಗೇಡಿಗಳು ಅಪಹರಿಸಿ ಘೋರವಾಗಿ ಹತ್ಯೆಮಾಡಿ ಅವರ ದೇಹವನ್ನು 9 ತುಂಡು ತುಂಡಾಗಿ ಅಮಾನುಷವಾಗಿ ಕತ್ತರಿಸಿ ಕೊಳವೆ ಬಾವಿಯಲ್ಲಿ ಎಸೆಯಲಾಗಿದ್ದು, ಈ ಘೋರ ಕೃತ್ಯದ ಹಿಂದೆ ಅನೇಕರ ಕೈವಾಡವಿದ್ದು ಕಲಿಕಾಲದಲ್ಲಿ ಜೈನರಿಗೆ ನಡೆದಾಡುವ ದೇವರೆಂದೇ ಪೂಜಿಸುವ ನಮಗೆ ಅತೀವ ದುಃಖವಾಗಿರುತ್ತದೆ.

 

ಪಾ.ದೂ, ಆಚಾರ್ಯಶ್ರೀ 108 ಕಾಮಕುಮಾರ ನಂದಿ ಮಹಾರಾಜರು 25 ವರ್ಷಗಳ ಹಿಂದೆ ಶಿವಮೊಗ್ಗ ನಗರಕ್ಕೆ ಸಹ ಆಗಮಿಸಿದ್ದರು. ಕಳೆದ ಹಲವಾರು ವರ್ಷಗಳಿಂದ ಈ ಆಶ್ರಮದಲ್ಲಿ ಜಾತಿ ಬೇಧವಿಲ್ಲದೆ ಬಡಮಕ್ಕಳಿಗೆ ಓದಲು ಶಾಲೆಯನ್ನು ತೆರೆದಿದ್ದರು. ತತ್ವಜ್ಞಾನಿಗಳಾದ ಇವರು ಜೈನರ ಮಹಾಸ್ತೋತ್ರವಾದ ಭಕ್ತಾಮರ ಸ್ತೋತ್ರದ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಭಕ್ತಾಧಿಗಳಿಗೆ ಇದರ ಮಹತ್ವವನ್ನು ತಿಳಿಸಿ ಅದರಂತೆ ಧರ್ಮದ ಆಚರಣೆ ಮಾಡಲು ಹೇಳುತ್ತಿದ್ದರು.
ಅಹಿಂಸೆಯೇ ಪರಮ ಧರ್ಮವೆಂದು ಮಹಾವೃತವನ್ನು ಆಚರಿಸುತ್ತಿದ್ದ ಈ ಆಚಾರ್ಯಶ್ರೀಯವರ ಈ ಘೋರ ಹತ್ಯೆಯನ್ನು ಶಿವಮೊಗ್ಗ ಜೈನ ಸಮಾಜದವರು ತೀವ್ರವಾಗಿ ಖಂಡಿಸುತ್ತೇವೆ. ಇದು ನಮ್ಮ ಜೈನ ಸಮಾಜಕ್ಕೆ ತುಂಬಲಾರದ ನಷ್ಟವಾಗಿದ್ದು ಈ ಘೋರ ಕೃತ್ಯದ ಹಿಂದೆ ಅನೇಕ ಕೈವಾಡಗಳಿದ್ದು, ಹೆಸರಿಗೆ ಮಾತ್ರ ಇಬ್ಬರನ್ನು ಬಂಧಿಸಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಮಂತ್ರಿಗಳು ಹಾಗೂ ಗೃಹ ಮಂತ್ರಿಗಳು ಇದನ್ನು ನಿಷ್ಪಪಕ್ಷವಾಗಿ ತನಿಖೆ ಮಾಡಿ ತಪ್ಪಿತಸ್ಥರಿಗೆ ಕಾನೂನು ರೀತಿ ಕಠಿಣವಾದ ಶಿಕ್ಷೆಯನ್ನು ನೀಡಬೇಕೆಂದು ಆಗ್ರಹಿಸುತ್ತೇವೆ. ಇದಲ್ಲದೆ ನಮ್ಮ ಕೋರಿಕೆಗಳು ಈ ಕೆಳಕಂಡಂತೆ ಇದೆ.

1. ಈ ಕೃತ್ಯದ ತನಿಖೆಯನ್ನು ಸಿ.ಬಿ.ಐ.ಗೆ ನೀಡುವುದು.

2. ಜೈನಾಚಾರ್ಯರು ಮುನಿ ಮಹಾರಾಜರು, ಮಾತಾಜಿಯವರು, ಇವರ ರಕ್ಷಣೆ ಹೊಣೆಯನ್ನು ರಾಜ್ಯ ಸರ್ಕಾರ ವಹಿಸಬೇಕು.

3.ಜೈನಾಚಾರ್ಯರ ಮುನಿಮಹಾರಾಜರ ಹಾಗೂ ಮಾತಾಜಿಯವರ ವಿಹಾರ ಸಮಯದಲ್ಲಿ ಅವರಿಗೆ ರಕ್ಷಣೆ ನೀಡಬೇಕು. ಹಾಗೂ ಕರ್ನಾಟಕ ರಾಜ್ಯಾದ್ಯಂತ ಇರುವ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಅವರು ತಂಗಲು ಹಾಗೂ ಅವರ ಆಹಾರದ ವ್ಯವಸ್ಥೆಗೆ ಅನುವು ಮಾಡಿಕೊಡಬೇಕು.

4. ಅಹಿಂಸಾವಾದಿಗಳಾದ ಅವರುಗಳು ತಂಗುವ ಶಾಲಾ ಕಾಲೇಜುಗಳಲ್ಲಿ ಅಹಿತಕರ ಘಟನೆ ನಡೆಯದಂತೆ ರಕ್ಷಣೆ ನೀಡಬೇಕಾಗಿ
ಆಗ್ರಹಿಸುತ್ತೇವೆ.

ಜಿಲ್ಲಾಧಿಕಾರಿಗಳ ಮೂಲಕ
1. ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ, ಬೆಂಗಳೂರು
2. ಮಾನ್ಯ ಗೃಹಮಂತ್ರಿಗಳು, ಕರ್ನಾಟಕ ಸರ್ಕಾರ, ಬೆಂಗಳೂರು

ತಮ್ಮ ವಿಶ್ವಾಸಿಗಳು, ವಿಶ್ವ ಹಿಂದೂ ಪರಿಷತ್ತು ಜಿಲ್ಲಾಧ್ಯಕ್ಷರಾದ, ಜೆ ವಾಸುದೇವ್, ಮಾಜಿ ಉಪಮುಖ್ಯ ಮಂತ್ರಿಯಾದ ಕೆಎಸ್ ಈಶ್ವರಪ್ಪ,
ಬ್ಲಡ್ ಬ್ಯಾಂಕ್ ಧರಣೇಂದ್ರ, ದತ್ತಾತ್ರಿ, ವಿಕೆ ಜೈನ್, ನಾರಾಯಣ ವರ್ಣೇಕರ್, ಆನಂದ್ ನಗರವಿಹಿಂಪ ಉಪಾಧ್ಯಕ್ಷರು, ಹಾಗೂ ಜೈನ ಸಮಾಜದ
ಅಧ್ಯಕ್ಷರುಗಳಾದ
1. ಶ್ರೀ ದೇವಿಚಂದ್ ಜೈನ್ 2. ಶ್ರೀ ಚಂದನ್‌ಮಲ್ ಜೈನ್ 3. ಶ್ರೀ ಮೋಹನ್‌ಲಾಲ್ ಜೈನ್ 4, ಶ್ರೀ ಪ್ರಭಾಕರ್ ಗೋಗಿ ಭಾಜಪ ಕಾರ್ಯಕರ್ತರು ಇನ್ನು ಮುಂತಾದವರು ಇದ್ದರು

Related Articles

Stay Connected

0FansLike
3,912FollowersFollow
0SubscribersSubscribe

Latest Articles