Thursday, September 26, 2024
spot_img

ಎನ್‍ಹೆಚ್‍ಎಂ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Menu
Satvikanudi.com
Search for

Home/ಉದ್ಯೋಗ
ಉದ್ಯೋಗ
ಎನ್‍ಹೆಚ್‍ಎಂ ಅಡಿಯಲ್ಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಸಾತ್ವಿಕ ನುಡಿ/ಶಿವಮೊಗ್ಗ

2023-24 ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನ(ಎನ್.ಹೆಚ್.ಎಂ & ಎನ್‍ಯುಹೆಚ್‍ಎಂ) ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಜಿಲ್ಲೆಯ ವ್ಯಾಪ್ತಿಯಲ್ಲಿ ಖಾಲಿ ಇರುವ ಆರೋಗ್ಯ ಸಂಸ್ಥೆಗಳಿಗೆ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಇಎನ್‍ಟಿ ಸರ್ಜನ್, ಜನರಲ್ ಫಿಸಿಷಿಯನ್, ಸೈಕಿಯಾಟ್ರಿ ಹಾಗೂ ವೈದ್ಯರ ಹುದ್ದೆಗಳಿಗೆ
ದಿ: 15-07-2023 ರಂದು ಹಾಗೂ ನೇತ್ರ ಸಹಾಯಕರು, ಆಡಿಯೋಮೆಟ್ರಿಕ್ ಅಸಿಸ್ಟೆಂಟ್, ತಾಲ್ಲೂಕು ಮೇಲ್ವಿಚಾರಕರು, ಕಿ.ಮ.ಆ ಸಹಾಯಕಿಯರು, ಶುಶ್ರೂಷಕಿಯರು, ಕಿ.ಪು.ಆ.ಸಹಾಯಕರ ಹುದ್ದೆಗಳಿಗೆ ದಿ: 18-07-2023 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಅರ್ಜಿ ನಮೂನೆಗಳನ್ನು ಎನ್‍ಹೆಚ್‍ಎಂ ವಿಭಾಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣ, ಬಿಹೆಚ್‍ರಸ್ತೆ, ಶಿವಮೊಗ್ಗ ಇಲ್ಲಿ ವಿತರಿಸಲಾಗುವುದು. ಹಾಗೂ ಅದೇ ದಿನ ಎಲ್ಲಾ ಹುದ್ದೆಯ ಮೂಲ ದಾಖಲಾತಿಗಳ ಪರಿಶೀಲನೆಯನ್ನು ಸಂಜೆ 5.30 ರವರೆಗೆ ನಡೆಸಲಾಗುವುದು.

ತಜ್ಞವೈದ್ಯರು ಮತ್ತು ವೈದ್ಯರು 70 ವರ್ಷಕ್ಕಿಂತ ಕಡಿಮೆ ಇದ್ದು ದೈಹಿಕವಾಗಿ ಎಲ್ಲಾ ಕರ್ತವ್ಯಗಳನ್ನು ನಿಭಾಯಿಸಲು ಅರ್ಹರಿರಬೇಕು ಹಾಗೂ ದೈಹಿಕ ಪ್ರಮಾಣ ಪತ್ರ ನೀಡುವುದು. ಕೆಎಂಸಿಯ ನೋಂದಣಿಯನ್ನು ಹೊಂದಿರತಕ್ಕದ್ದು. ಹಾಗೂ ಸರ್ಕಾರದ ನಿಯಮಾವಳಿಯಂತೆ ಎನ್‍ಹೆಚ್‍ಎಂ/ಎನ್‍ಯುಹೆಚ್‍ಎಂ ಮಾರ್ಗಸೂಚಿಯಂತೆ ಹುದ್ದೆವಾರು ವಯೋಮಿತಿ ಪರಿಗಣಿಸಲಾಗುವುದು.

ಹುದ್ದೆಗಳಿಗೆ ನಮೂದಿಸಿರುವ ವೇತನದಲ್ಲಿ ತಜ್ಞವೈದ್ಯರಿಗೆ ಮತ್ತು ವೈದ್ಯರಿಗೆ ಆದಾಯ ತೆರಿಗೆ ಹಾಗೂ ಉಳಿದ ಹುದ್ದೆಗಳಿಗೆ ಭವಿಷ್ಯನಿಧಿ/ವೃತ್ತಿ ತೆರಿಗೆ ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಿರುವ ಪ್ರಕಾರ ತೆರಿಗೆ ಇತ್ಯಾದಿ ಕಟಾವಣೆ ಮಾಡಲಾಗುವುದು.

ಎನ್‍ಹೆಚ್‍ಎಂ/ಎನ್‍ಯುಹೆಚ್‍ಎಂ ಮಾರ್ಗಸೂಚಿಯಂತೆ ನೇಮಕಾತಿಯ ಮೆರಿಟ್ ಕಂ ರೋಸ್ಟರ್ ಆಧಾರದ ಮೇಲಿನ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಸಂಬಂಧಪಟ್ಟ ಹುದ್ದೆಯ ಸ್ವಯಂ ದೃಢೀಕರಿಸಿದ ದಾಖಲೆಗಳ ನಕಲು ಪ್ರತಿ, ಇತ್ತೀಚಿನ ಭಾವಚಿತ್ರ, 2-5 ವರ್ಷಘಳ ಅನುಭವ ಪ್ರಮಾಣ ಪತ್ರ, ಗುರುತಿನ ಚೀಟಿ, ಜಾತಿ ಪ್ರಮಾಣ ಪತ್ರ, ಖಾಯಂ ವಿಳಾಸ ಹಾಗೂ ಕಿ.ಪು.ಆ ಸಹಾಯಕರ ಹುದ್ದೆಗೆ ಸಂಬಂಧಿಸಿದಂತೆ ವಾಸಸ್ಥಳದ ಬಗ್ಗೆ ಪಾಲಿಕೆ/ಸಂಬಂಧಿಸಿದ ಪಂಚಾಯತ್‍ನಿಂದ ದೃಢೀಕರಣ ಪತ್ರ ಮತ್ತು ಸ್ವವಿವರದೊಂದಿಗೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂ: 08182-200337 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ತಿಳಿಸಿದ್ದಾರೆ.

ಇನ್ನು ಹೆಚ್ಚಿನ ಸುದ್ದಿಗಾಗಿ ಸಂಪರ್ಕಿಸಿ
Sathvikanudi.com

Related Articles

Stay Connected

0FansLike
3,912FollowersFollow
0SubscribersSubscribe

Latest Articles