ಕೇಶವ್ ಹೆಗಡೆ ರವರು ಹೃದಯಾಘಾತದಿಂದ ನಿಧನ

0
48

ವಿಶ್ವ ಹಿಂದು ಪರಿಷತ್ತಿನ ಹಿರಿಯ ಹಾಗೂ ಕ್ಷೇತ್ರಿಯ
ಮುಖಂಡ
ಸಂಘಟನಾ ಮಂತ್ರಿ ಕೇಶವ ಹೆಗಡೆ( 63) ಹೃದಯಾಘಾತದಿಂದ ಬೆಂಗಳೂರಿನಲ್ಲಿ
ಬುಧವಾರ ನಿಧನರಾದರು. ಶಂಕರಪುರದಲ್ಲಿರುವ
ವಿಶ್ವ ಹಿಂದು ಪರಿಷತ್ಕಾರ್ಯಾಲಯದಲ್ಲಿದ್ದ
ಕೇಶವ ಹೆಗಡೆ ನೆನ್ನೆ ಅವರಿಗೆ ಮಧ್ಯಾಹ್ನ ಸುಮಾರು 2 ಗಂಟೆಗೆ ಹೃದಯಾಘಾತ ವಾಗಿದೆ ಕೂಡಲೇ ಅವರನ್ನು
ಸಮೀಪದಲ್ಲಿರುವ ರಂಗಾದೊರೈ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಮಾರ್ಗಮಧ್ಯದಲ್ಲೇ
ಇಯಲೋಕ ತ್ಯಜಿಸಿದ್ದರು
ಪಾರ್ಥಿವ ಶರೀರವನ್ನು ಚಾಮರಾಜಪೇಟೆಯಲ್ಲಿರುವ ಕೇಶವ ಶಿಲ್ಪ ಸಭಾಂಗಣದಲ್ಲಿ ಬುಧವಾರ ಸಂಜೆಯವರೆಗೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಮೂಲತಃ ಶಿರಸಿಯವರಾದ ಕೇಶವ ಹೆಗಡೆ ಅವರು ವಿದ್ಯಾರ್ಥಿ ಯಾಗಿದ್ದಾಗಿನಿಂದಲೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು. ನಂತರ ಪೂರ್ಣಾವಧಿ ಪ್ರಚಾರಕರಾಗಿ ತಮ್ಮನ್ನು ತೊಡಗಿಸಿ ಕೊಂಡವರು. ನಂತರ ಅವರನ್ನು ವಿಶ್ವ ಹಿಂದೂ ಪರಿಷತ್‌ಗೆ ನಿಯೋಜನೆ ಮಾಡಲಾಯಿತು. ರಾಮಮಂದಿರ ಹೋರಾಟ ಸೇರಿ ವಿಹಿಂಪದ ಎಲ್ಲ ಹೋರಾಟ, ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.

ವಿಶ್ವಹಿಂದು ಪರಿಷತ್ ಮೂಲಕ ಕರ್ನಾಟಕ ತೆಲಂಗಾಣ
ಆಂಧ್ರ ಮೊದಲಾದ ಕಡೆಗಳಲ್ಲಿ ಗೋರಕ್ಷಾ ಚಳವಳಿ ಮತಾಂತರ ಹೋರಾಟಗಳಲ್ಲಿ
ವಿರೋಧಿ ಸಕ್ರಿಯವಾಗಿ ದುಡಿದ ಕೇಶವ್ ಹೆಗಡೆಯವರು ಇತ್ತೀಚೆಗೆ ಶಿವಮೊಗ್ಗದ ವಿಶ್ವ ಹಿಂದು ಪರಿಷತ್ತಿನ ಜಿಲ್ಲಾ ಕ್ಷೇತ್ರ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು

ಪರ್ಯುತ ಸಂಘದ ‘ಜೀವನ ವಿಚಾರ, ಸಿದ್ಧಾಂತಗಳನ್ನೇ ಉಸಿರಾಡಿದ್ದ ವಿಹಿಂಪ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಅವರು ಕೆಲ ಸಮಯದಿಂದ ಹೃದಯಸಮಸ್ಯೆಯಿಂದಬಳಲುತ್ತಿದ್ದರು ನಿನ್ನೆ ಹೃದಯಾಘಾತದಿಂದ ಕೊನೆಯುಸಿರೆಳೆದರು

ಪಾರ್ಥಿವ ಶರೀರವನ್ನು ಚಾಮರಾಜಪೇಟೆಯಲ್ಲಿರುವ ಕೇಶವ ಶಿಲ್ಪ ಸಭಾಂಗಣದಲ್ಲಿ ಸಾರ್ವಜನಿಕರ
ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಪಾರ್ಥಿವ ಶರೀರದ ದರ್ಶನ ಪಡೆದ ಶಿವಮೊಗ್ಗದ ಪಟ್ಟಾಭಿ ರಾಮ್ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು, ಬಸವರಾಜ್ ಜಿ ಪ್ರಾಂತ ಸಂಘಟನಾ ಕಾರ್ಯದರ್ಶಿ ವಿಶ್ವ ಹಿಂದೂ ಪರಿಷತ್ , ಶಿವಮೊಗ್ಗ ಜಿಲ್ಲಾಅಧ್ಯಕ್ಷರಾದ ಜೆ ವಾಸುದೇವ್, ನಾರಾಯಣ್ ವರ್ಣೇಕರ್ ಕುಮಾರಸ್ವಾಮಿ ಹಾಗೂ ರಾಷ್ಟ್ರೀಯ ಸ್ವಯಂಸೇವಕಪ್ರಮುಖರು ಬಾಜಪದ ಪ್ರಮುಖರು
ಕೇಶವ್ ಹೆಗಡೆಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.