ಕೇಂದ್ರ ಸಚಿವರಾಗ್ತಾರಾ ಬಿ. ವೈ. ರಾಘವೇಂದ್ರ..?

0
91

ಮುಖ್ಯಾಂಶಗಳ Sathvika nudi News Shivamogga Mp Raghavendra May be Become Central Minister
ಕೇಂದ್ರ ಸಚಿವರಾಗ್ತಾರಾ ಬಿ. ವೈ. ರಾಘವೇಂದ್ರ..?
ಕರ್ನಾಟಕದ ವಿಧಾನಸಭೆ ಫಲಿತಾಂಶ ನೋಡಿ ಬೆಚ್ಚು ಬಿದ್ದ ಕೇಂದ್ರ ಬಿಜೆಪಿಯವರು???

ಸ್ಪರ್ಧಾತ್ಮಕ ರಾಜಕೀಯದಲ್ಲಿ ಸ್ಥಾನಮಾನಗಳಿಗೆ ಕೇವಲ ಅರ್ಹತೆಯೊಂದಿದ್ದರೆ ಸಾಕಾಗುವುದಿಲ್ಲ. ಜತೆಗೆ ಸಂಘಟನೆಯ ಶಕ್ತಿ, ಕರ್ನಾಟಕಕ್ಕೇ ಕೇಂದ್ರದಿಂದ ತಂದಿರುವ ಕೆಲಸಗಳೇ ಸಾಕ್ಷಿ ಅದರಲ್ಲಿ ಮುಖ್ಯವಾಗಿ ಶಿವಮೊಗ್ಗ ವಿಮಾನ ನಿಲ್ದಾಣ,
ಈ ಹಿಂದಿನ ಸಂಸದರು ಹೆಸರಿಗೆ ಮಾತ್ರ ಸಂಸದರಾಗಿದ್ದರು ಆದರೆ ಬಿ ವೈ ಆರ್
ಕರ್ನಾಟಕಕ್ಕೆ ತಂದಿರುವ ಕೆಲಸಗಳ ಪಟ್ಟಿ ಮಾಡಿದರೆ
ಸಾಕ್ಷಿ ಸಿಗುತ್ತದೆ,

ಸದ್ಯದ ಪರಿಸ್ಥಿತಿಯಲ್ಲಿ
ವೀರಶೈವ ಸಮಾಜದ ಪ್ರಬಲ ನಾಯಕರಾಗಿ ಹೊರಹೊಮ್ಮಿರುವ ರಾಘವೇಂದ್ರ
ಹಲವು ಅಭಿವೃದ್ಧಿ ಯೋಜನೆಗಳ ಜಾರಿಗೆ ಶ್ರಮಿಸಿರುವ ಬಿವೈಆರ್
ವೀರಶೈವ-ಲಿಂಗಾಯತ ಸಮುದಾಯ ಹಾಗೂ ಎಲ್ಲಾ ಸಮುದಾಯದ ಕರ್ನಾಟಕದ ಬೆನ್ನೆಲುಬಾಗಿ ನಿಂತಿರುವ ರಾಘವೇಂದ್ರ ಅವರನ್ನು ಕೇಂದ್ರ ಸಚಿವರಾಗಿ ನೋಡಬೇಕೆನ್ನುವುದು ಹಲವು ಸಮುದಾಯ ಹಾಗೂ ಮಠ ಮಂದಿರದ ಪ್ರಮುಖರ ಅಭಿಪ್ರಾಯವಾಗಿದೆ
ಶಿವಮೊಗ್ಗ: ಅಭಿವೃದ್ಧಿ ಕೆಲಸಗಳ ಮೂಲಕವೇ ಜನರಿಗೆ ಹತ್ತಿರವಾದ ಸಂಸದ ಬಿ. ವೈ. ರಾಘವೇಂದ್ರ ಅವರಿಗೆ ಈ ಬಾರಿ ಕೇಂದ್ರ ಸಂಪುಟದಲ್ಲಿ ಪ್ರಾತಿನಿಧ್ಯ ದೊರೆತರೆ ಶಿವಮೊಗ್ಗದ ಮಟ್ಟಿಗೆ ಅದೊಂದು ದಾಖಲೆಯಾಗಲಿದೆ.

ಶಿವಮೊಗ್ಗದ ಅಭಿವೃದ್ಧಿಗೆ ರಿಂಗ್ ರೋಡ್ ಅಭಿವೃದ್ಧಿ ಕುಂಠಿತವಾಗಿರುವುದರಿಂದ ಖುದ್ದಾಗಿ ಕೇಂದ್ರದ ಸಚಿವರನ್ನು ಭೇಟಿ ಮಾಡಿ ತಕ್ಷಣಕ್ಕೆ ಅನುದಾನವನ್ನು ಬಿಡುಗಡೆ ಮಾಡಿಸಿ, ಹಾಗೂ ರಾಷ್ಟ್ರೀಯ ಹೆದ್ದಾರಿ ತುಮಕೂರು ಶಿವಮೊಗ್ಗ ಯೋಜನೆಗಳು ರೈಲ್ವೆ ಯೋಜನೆಗಳು,, ಸಿಗಂದೂರು ಸೇತುವೆಯಂತಹ ಯೋಜನೆಗಳನ್ನು ಶಿವಮೊಗ್ಗಕ್ಕೆ ತಂದು ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶಿವಮೊಗ್ಗದ ಸಮಗ್ರ ಅಭಿವೃದ್ಧಿಗೆ ಏನೇನು ಯೋಜನೆಗಳನ್ನು ಕೈಗೊಳ್ಳಬಹುದು ಎಂಬುದನ್ನು ತಜ್ಞರೊಂದಿಗೆ ಚರ್ಚಿಸುವುದು, ಅದಕ್ಕೆ ಪೂರಕವಾಗಿ ಯೋಜನೆಗಳು ಮತ್ತು ಅನುದಾನವನ್ನು ತರುವುದು ಅವರ ವಿಶಿಷ್ಟ ಗುಣ. ಈ ಗುಣಗಳೇ ಅವರಿಗೆ ಸಚಿವ ಸ್ಥಾನಕ್ಕೆ ಅರ್ಹತೆಯನ್ನು ತಂದುಕೊಟ್ಟಿವೆ.

ಸಂಪುಟ ವಿಸ್ತರಣೆಯಲ್ಲಿ ರಾಜ್ಯದಿಂದ ಬಿ. ವೈ. ರಾಘವೇಂದ್ರ ಅವರ ಹೆಸರು ಮುಂಚೂಣಿಯಲ್ಲಿದೆ. ರಾಜ್ಯದಿಂದ ಇಬ್ಬರು ಸಚಿವರಾಗುವುದು ಖಾತ್ರಿ ಎಂದು ಹೇಳಲಾಗುತ್ತಿದೆ. ಅದರಲ್ಲಿ ಒಂದು ಸ್ಥಾನವು ರಾಘವೇಂದ್ರ ಅವರಿಗೆ ಒಲಿದು ಬರಲಿದೆ ಎಂಬ ಮಾತುಗಳು ಕೇಂದ್ರದ ಬಿಜೆಪಿ ವಲಯದಲ್ಲಿ ಕೇಳಿಬಂದಿದೆ.

ಲೋಕಸಭೆಯಲ್ಲಿ ಶಿವಮೊಗ್ಗ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿರುವ ರಾಘವೇಂದ್ರ, ಕೇಂದ್ರ ಸಚಿವರಾಗಲು ಸಂಘಟನೆ, ಸಮಾಜ, ಕೆಲಸ, ಸೇರಿದಂತೆ ಬಹಳಷ್ಟು ಸಂಗತಿಗಳು ಅವರ ಬೆನ್ನಿಗಿವೆ. ರಾಘವೇಂದ್ರ ಅವರಿಗೆ ಕೇಂದ್ರ ಸಚಿವ ಸ್ಥಾನ ವಂಚಿತರಾದರೆ ಕರ್ನಾಟಕದಲ್ಲಿ ಸಂಸದರ ಸಂಖ್ಯೆ 12 ಈಳೀದರು ಅಚ್ಚರಿ ಇಲ್ಲ????
ಕಾರಣ ಯಡಿಯೂರಪ್ಪರವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ನಂತರ ಏನಾಗಿದೆ ಎಂಬುದು ಕೇಂದ್ರದವರಿಗೆ ಮಾನದಟ್ಟಾಗಿದೆ ಈಗಲೂ ಈ ತಪ್ಪನ್ನು ಮುಂದುವರಿಸಿದರೆ ಮುಂದಾಗುವ ಅನಾಹುತಕ್ಕೆ ಎಡೆ ಮಾಡೋಕೊಡಲು ಕೇಂದ್ರದ ನಾಯಕರು ರೆಡಿ ಇಲ್ಲ ಆದಕಾರಣ ಕೇಂದ್ರ ಸಚಿವರಾಗಲು ಯಾವುದೇ ಬಿ ವೈ ಆರ್ ಗೇ ಅಡೆತಡೆ ಇಲ್ಲ.

ರಾಜ್ಯದಲ್ಲಿ ವೀರಶೈವ-ಲಿಂಗಾಯಿತ ಸಮಾಜದ ಮುಖಂಡ, ಮಾಜಿ ಸಚಿವ ಸುರೇಶ್‌ ಅಂಗಡಿ ಮೃತಪಟ್ಟ ಬಳಿಕ ಕೇಂದ್ರ ಸಂಪುಟದಲ್ಲಿ ಈ ಸಮಾಜಕ್ಕೆ ಪ್ರಾತಿನಿಧ್ಯ ಇಲ್ಲದಂತಾಗಿದೆ. ವೀರಶೈವ ಸಮಾಜದ ಸದಸ್ಯರಿಗೆ ಸಚಿವ ಸ್ಥಾನ ನೀಡಬೇಕೆಂಬುದು ಅಂತಿಮವಾದರೆ ಅದರಲ್ಲಿ ರಾಘವೇಂದ್ರ ಅವರ ಹೆಸರು ಮುಂಚೂಣಿಗೆ ಬರುತ್ತದೆ.

ಮಧ್ಯ ಕರ್ನಾಟಕಕ್ಕೆ ಆದ್ಯತೆ: ಮತ್ತೊಂದು ಕಡೆ ವಲಯವಾರು ವಿಷಯದಲ್ಲೂ ರಾಘವೇಂದ್ರ ಅವರ ಹೆಸರೇ ಮತ್ತೆ ಮುಂಚೂಣಿಗೆ ಬರುತ್ತದೆ. ಮಧ್ಯ ಕರ್ನಾಟಕದಿಂದ ಕೇಂದ್ರ ಸಂಪುಟದಲ್ಲಿ ಪ್ರಾತಿನಿಧ್ಯ ಇಲ್ಲ. ವಿಶೇಷವೆಂದರೆ ರಾಜ್ಯಸಭೆಯನ್ನು ಪ್ರತಿನಿಧಿಸಿದ ಸಿಎಂ ಇಬ್ರಾಹಿಂ ಹೊರತಾಗಿ ಇದೂವರೆಗೆ ಶಿವಮೊಗ್ಗದಿಂದ ಲೋಕಸಭೆಯನ್ನು ಪ್ರತಿನಿಧಿಸಿದ ಒಬ್ಬರೇ ಒಬ್ಬರೂ ಸಚಿವರಾಗಿಲ್ಲ.

ಕರ್ನಾಟಕದಲ್ಲಿ ಈ ಹಿಂದೆ ಅತಿ ಹೆಚ್ಚು ಸಂಸದರನ್ನು ಆಯ್ಕೆ ಮಾಡಿದೆ ಅದರಲ್ಲೂ ಶಿವಮೊಗ್ಗ ರಾಜ್ಯ ಬಿಜೆಪಿಯ ಶಕ್ತಿ ಕೇಂದ್ರ ಎನಿಸಿಕೊಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರು ಶಿವಮೊಗ್ಗದಲ್ಲಿ ಬಿಜೆಪಿಯ ಕಾರ್ಯಕರ್ತ ಎಂಎಲ್ಎ ಆಗಿ ಆಯ್ಕೆ ಮಾಡಲು ಶಿವಮೊಗ್ಗದ ಜನತೆ ಕೈ ಬಿಡಲಿಲ್ಲ ಬಿಜೆಪಿ ಪಕ್ಷದ ಬೆಳವಣಿಗೆಗೆ ಶಿವಮೊಗ್ಗದ ಕೊಡುಗೆ ಮರೆಯುವಂತಿಲ್ಲ. ಹೀಗಿದ್ದರೂ ಕೇಂದ್ರ ಸಂಪುಟದಲ್ಲಿ ಈ ಹಿಂದಿನ ನಿಂದಲೂ ಶಿವಮೊಗ್ಗದ ಸಂಸದರಿಗೆ ಸಚಿವ ಸ್ಥಾನ ನೀಡಿಲ್ಲ. ಹಿಂದಿನ ಅವಧಿಯಲ್ಲಿ ಯಡಿಯೂರಪ್ಪ ಅವರಿಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆಂಬ ವಿಶ್ವಾಸ ಸುಳ್ಳಾಗಿತ್ತು. ಈ ಬಾರಿ ಆ ನ್ಯೂನತೆಯನ್ನು ಸರಿಪಡಿಸಿಕೊಳ್ಳಬಹುದು. ರಾಘವೇಂದ್ರ ಅವರನ್ನು ಸಚಿವರನ್ನಾಗಿ ಮಾಡುವುದರಿಂದ ಶಿವಮೊಗ್ಗ ಮತ್ತು ಮಧ್ಯ ಕರ್ನಾಟಕಕ್ಕೆ ಆದ್ಯತೆ ನೀಡಿದಂತಾಗುತ್ತದೆ ಸಂಸದ ಬಿ. ವೈ. ರಾಘವೇಂದ್ರ, ‘ಕೇಂದ್ರದಲ್ಲಿ ಸಚಿವ ಸ್ಥಾನ ವಂಚಿತರಾದರೆ ಕರ್ನಾಟಕದಲ್ಲಿ ಬಿಜೆಪಿಯ ಕಥೆ ಮುಗಿದಂತೆ?????