ಕಾರ್ ಚಾಲಕ ಹನುಮಂತ ಹಣಕ್ಕೆ ಇಟ್ಟ ಸ್ಕೆಚ್ಚು ಇಂಜಿನಿಯರ್ ಹೆಂಡತಿ ಫಿನಿಶ್

0
338

ಕಾರ್ ಚಾಲಕ ಹನುಮಂತ ಹಣಕ್ಕೆ ಇಟ್ಟ ಸ್ಕೆಚ್ಚು
ಇಂಜಿನಿಯರ್ ಹೆಂಡತಿ ಫಿನಿಶ್
ನೀರಾವರಿ ಇಲಾಖೆ ಇಂಜಿನಿಯರ್ ಹತ್ತಿರ ಹನುಮಂತ ನಾಯಕ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದು ಇಂಜಿನಿಯರ್ ಗೆ ಬರುವ ಹಣವನ್ನು ನೋಡಿ ಹನುಮಂತ ನಾಯಕ ಹಾಕಿದ ಸ್ಕೆಚ್ಚು ಉರುಳಿಸಿದ್ದು ಒಂದು ಹೆಣ

ನೀರಾವರಿ ಇಲಾಖೆಯಲ್ಲಿ ಇಂಜಿನಿಯರ್ ಪತ್ನಿ ಕಮಲಮ್ಮನವರ ಕೊಲೆ ಪ್ರಕರಣದಲ್ಲಿ 7 ಜನ ಕೊಲೆ ಆರೋಪಿಗಳಿದ್ದಾರೆ ಎಂದು ಎಸ್ಪಿ ಮಿಥುನ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಕೊಲೆ ಆರೋಪಿಗಳು 7 ಜನ-ದೋಚಿಕೊಂಡು ಹೋಗಿದ್ದು 35 ಲಕ್ಷ ರೂ, ಆದರೆ ಇಂಜಿನಿಯರ್ ಗಳ ಆಪ್ತ ವಲಯದಲ್ಲಿ ಕೋಟಿ ಲೆಕ್ಕಚಾರದಲ್ಲಿ ಹಣವಿತ್ತು ಎಂದು ಗುಸು ಗುಸು ಪಿಸು ಪಿಸು ???


ಆದರೆ ಖರ್ಚು ಮಾಡಿರುವುದು,125,200. ರೂ. 1 ಲಕ್ಷದ ಇಪ್ಪತ್ತೈದು ಸಾವಿರದ 200 ರೂಪಾಯಿಗಳು, ಕೊಲೆ ಮಾಡಿದ ನಂತರ ಆರೋಪಿಗಳು ತಮ್ಮ ಹಳೆಯ ಮೊಬೈಲ್ ಮತ್ತು ನಂಬರ್ಗಳನ್ನು ಬಿಸಾಕಿ ತೆಗೆದುಕೊಂಡರು ಹೊಸ ಮೊಬೈಲ್ ಗಳನ್ನು ಕೊಲೆ ಮಾಡಿ ದರೋಡೆ ಮಾಡಿದ ಹಣವನ್ನು ಏಳು ಜನರು ಹಂಚಿಕೊಂಡು ಒಬ್ಬೊಬ್ಬರು ಒಂದು ಕಡೆ ಓಡಿ ಹೋದರು ಆದರೂ ಬೆನ್ನು ಬಿಡದ ನಮ್ಮ ಶಿವಮೊಗ್ಗ ಪೊಲೀಸರು, ಮೆಚ್ಚಲೇಬೇಕು ಪೊಲೀಸ್ ತನಿಖೆಯನ್ನ ಇಂಟಲಿಜನ್ಸಿ ಕ್ರೈಂ ಪೊಲೀಸ್ ನವರ ಕರ್ತವ್ಯ ನಿಷ್ಠೆ ಸ್ಥಳೀಯ ಮಾಹಿತಿದಾರ ನಿಷ್ಠೆ
ಎಲ್ಲವನ್ನು ಬಳಸಿಕೊಂಡು ಎಡೆಮುರಿ ಕಟ್ಟಿ ತಂದು ನಿಲ್ಲಿಸಿದರು ಆರೋಪಿಗಳನ್ನ,

ಚಾಲಕ ಹನುಮಂತ ನಾಯ್ಕ್, ಪ್ರದೀಪ್ ವಿ, ಅಪ್ಪು ನಾಯ್ಕ್, ಪ್ರಭುನಾಯ್ಕ್, ಸತೀಶ್, ರಾಜು ವೈ ಯಾನೆ ತೀರ್ಥ ಹಾಗೂ ಏಳನೇ ಆರೋಪಿ ಕೌಶಿಕ್ ಎಂಬುವನು ಪತ್ತೆಯಾಗಿದ್ದು, ಇದರಲ್ಲಿ ಕೆಲವರಿಗೆ ಕಸ್ಟಡಿಯಾಗಿದೆ. ಕೌಶಿಕ್ ಎಂಬುವನು ಕಾರು ಕೊಟ್ಟಿರುತ್ತಾನೆ. ಅವನು ನಿನ್ನೆ ಪತ್ತೆಯಾಗಿದ್ದಾನೆ ಎಂದರು.

ಇವರು ಮೊದಲಿನಿಂದಲೂ ಸ್ನೇಹಿತರೇ, ಯಾವಾಗಲೂ ಎಣ್ಣೆ ಪಾರ್ಟಿ ಮಾಡುತ್ತಿದ್ದರು ಪಾರ್ಟಿ ಮಾಡುವಾಗ ಸ್ನೇಹಿತರ ಸಂಭಾಷಣೆ ತಕ್ಷಣಕ್ಕೆ ಸೌಕಾರರಾಗುವ ಆಸೆ
ಈ ಆಸೆಗೆ ಹನುಮಂತ ನಾಯಕ ಇಟ್ಟ ಭರ್ಜರಿ ಬೇಟೆಯ ಅಸಲಿ ಕಹಾನಿ, ಎಣ್ಣೆ ಪಾರ್ಟಿಯಲ್ಲಿ ಫಿಕ್ಸ್ ಆಯಿತು ಹಣದೋಚುವ ಐಡಿಯಾ, ಮಾಲೀಕರಾದ ಇಂಜಿನಿಯರಿಗೆ ಹಣ ಬಂದ ವಿಷಯ ಹನುಮಂತ್ ನಾಯಕನಿಗೆ ಗೊತ್ತಾಗಿ ಸ್ನೇಹಿತರ ಜೊತೆಗೋಡಿ ಇಟ್ಟೆಬಿಟ್ಟ ಮುಹೂರ್ತ ,
ಜೂ.16 ರಂದು ಜೋಮೋಟೋ ಟೀ ಶರ್ಟ್ ಹಾಕಿಕೊಂಡು ಬಂದು ಕೊಲೆ ಮಾಡಲು ಯತ್ನಿಸಿ ವಾಪಾಸಾಗಿರುತ್ತಾರೆ ನಂತರ ಮಾರನೆಯ ದಿನ
ಜೂ.17ರಂದು ಬಂದು ಮಧ್ಯಾಹ್ನದಿಂದ ಹೊಂಚು ಹಾಕಿ ಮಧ್ಯಾಹ್ನ ಕಮಲಮ್ಮನವರು ಒಬ್ಬಂಟಿಯಾಗಿರುವುದನ್ನ‌ ಈ ಗ್ಯಾಂಗ್ ಗಮನಿಸಿ ಹನುಮಂತ ನಾಯ್ಕ್ ಕಮಲಮ್ಮರ ಬಳಿ ಬಂದು ಹಣ ಕೇಳ್ತಾನೆ. ಕಮಲಮ್ಮ ಹಣ ಕೊಡಲು ಒಪ್ಪಿರಲ್ಲ. ಕುಡಿಯಲು ನೀರು ಕೇಳಿದಾಗ

ಹನುಮಂತ ನಾಯ್ಕ್, ಪ್ರದೀಪ್, ಅಪ್ಪು ನಾಯ್ಕ್ ಒಳಗಿದ್ದು ಕಮಲಮ್ಮರ ಮೇಲೆ ತೆಂಗಿನ ಕಾಯಿ ಸಿಪ್ಪೆ ಸುಲಿಯುವ ಆಯುಧದಿಂದ ದಾಳಿ ನಡೆಸಿ 35‌ಲಕ್ಷ ರೂ. ಹೊತ್ತಿಕೊಂಡು ಹೋಗಿರುತ್ತಾರೆ. ಪ್ರಭುನಾಯ್ಕ್, ಸತೀಶ್ ಮತ್ತು ರಾಜು ಯಾನೆ ತೀರ್ಥ ಗೋಪಾಳ ವೃತ್ತದ ಬಳಿ ಕಾಯ್ತಾ ಇರ್ತಾರೆ ಮೊದಲೇ ರೆಡಿಯಾಗಿದ್ದ ಕಾರಿನಲ್ಲಿ ಎಸ್ಕೇಪ್,
ಇಂಜಿನಿಯರ್ ಕಂಪ್ಲೇಂಟ್ ನಲ್ಲಿ ಹೇಳಿರುವ ಪ್ರಕಾರ
ಇಂಜಿನಿಯರ್ ಮಲ್ಲಿಕಾರ್ಜುನ್ ಮಗನನ್ನ ಎಂಡಿಗೆ ಸೇರಿಸಲು ಹಣವನ್ನ ಸಂಬಂಧಿಕರು, ಸ್ನೇಹಿತರಿಂದ ಹಣ ಪಡೆದು ಮನೆಯಲ್ಲಿ ಇಟ್ಟಿದ್ದೆ ಎಂದು

35 ಲಕ್ಷದಲ್ಲಿ 33, 74,800 ರೂ ಪತ್ತೆಯಾಗಿದೆ. ಕೃತ್ಯಕ್ಕೆ ಬಳಸಿದ ಇಂಡಿಕಾ‌ಕಾರು, 7 ಹೊಸ ಮೊಬೈಲ್, ಮೂರು ಬೈಕು, ಕೊಲೆ‌ಮಾಡಿದ ಆಯುಧ‌ಸೇರಿ 41 ಲಕ್ಷದ 14 ಸಾವಿರದ ರೂ‌ಮೌಲ್ಯದ ವಸ್ತುಗಳು ಜಪ್ತಿಯಾಗಿದೆ. ದೋಚಿದ ಹಣವನ್ನ 7 ಜನ ಆರೋಪಿಗಳು ಹಂಚಿಕೊಂಡು ಒಂದೊಂದು ದಿಕ್ಕಿನಲ್ಲಿ ಪರಾರಿಯಾಗಿದ್ದರು. ಪ್ರಕರಣ ಪತ್ತೆಎಗಾಗಿ 3 ತಂಡ ರಚಿಸಲಾಗಿತ್ತು ಎಂದರು. ತಕ್ಷಣಕ್ಕೆ ಪತ್ತೆ ಹಚ್ಚಿದ ಪೊಲೀಸರಿಗೆ ಎಸ್ ಪಿ ಯವರು ಧನ್ಯವಾದವನ್ನು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಜಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ, ಡಿವೈಎಸ್ಪಿ ಬಾಲರಾಜ್, ತುಂಗನಗರ ಪೊಲೀಸ್ ಠಾಣೆಯ ಮಂಜುನಾಥ್, ಪಿಎಸ್ಐ ಕುಮಾರ್ ಕುರುಗುಂದ,
ರಘುವೀರ್ ಎಂ, ಸಿಬ್ಬಂದಿಗಳಾದ ಕಿರಣ್ ಮೋರೆ, ರಾಜು, ಅರುಣ್ ಕುಮಾರ್ ಅಶೋಕ್, ಮೋಹನ್,
ಕೇಶ್ ಕುಮಾರ್ ಕಾಂತರಾಜು, ನಾಗಪ್ಪ ಹರೀಶ್ ನಾಯ್ಕ್ ಮೊದಲಾದವರು ಮಾಧ್ಯಮದ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.