ಶಶಿಕುಮಾರ್ ಗೌಡ ಸಾಮಾಜಿಕ ಹೋರಾಟಗಾರರ ಆರೋಪ,

0
11

ಶಶಿಕುಮಾರ್ ಗೌಡ ಸಾಮಾಜಿಕ ಹೋರಾಟಗಾರರ ಆರೋಪ,


ಭದ್ರಾವತಿ ಆಹಾರ ಇಲಾಖೆಯಲ್ಲಿ ಭ್ರಷ್ಟಚಾರವೆಸಗಿರುವ ಅಧಿಕಾರಿಗಳ ವಿರುದ್ಧ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಹೋರಾಟ,
ದಿನಾಂಕ 11.04.2023 ರಂದು ಹಳೇನಗರ ಠಾಣೆ ವ್ಯಾಪ್ತಿಯಲ್ಲಿ ಸಂಜೆ 05.30ರ ಸಮಯದಲ್ಲಿ ಭದ್ರಾವತಿ,ಕೆ.ಎಫ್ ಸಿ ಐ (ಪಡಿತರ ಗೋಡನ್) ನಿಂದ ಪಡಿತರ ಸಾಗಣಿಕೆಯ ಟೆಂಡರ್‌ ವಾಹನ ಸಂಖ್ಯೆ KA5LA9241 ಯನ್ನು ಭದ್ರಾವತಿ ಹಳೇನಗರ ಪೋಲಿಸ್ ಠಾಣೆಯ ಸಿಬ್ಬಂದಿಗಳು ವಶಕ್ಕೆ ತೆಗೆದುಕೊಂಡಿರುತ್ತಾರೆ, ಕಾರಣ ಆಹಾರ ಇಲಾಖೆಯ ಗೋದಾಮಿನ ರಸೀದಿಯಲ್ಲಿ 423 ಅಕ್ಕಿ ಚೀಲ ಇದೆಎಂದು ನಮೂದಿಸಿದ್ದು, ಸದರಿ ವಾಹನದಲ್ಲಿ ಕೆವಲ 340 ಅಕ್ಕಿ ಚೀಲವಿರುತ್ತದ್ದೆ. ಉಳಿದ 83 ಚೀಲ ಅಕ್ಕಿಯ ಕೊರತೆ ಇರುತ್ತದೆ,

 

ಇಂತಹ ಅನೇಕ ಭ್ರಷ್ಟಚಾರಗಳು ಭದ್ರಾವತಿಯ ಆಹಾರ ಇಲಾಖೆಯಲ್ಲಿ ನಿರಂತರವಾಗಿ ನಡೆಯುತ್ತಿದೆ. ಗೋದಾಮಿನಲ್ಲಿ ಕಾರನಿರ್ವಹಿಸುತ್ತೀರುವ ಮ್ಯಾನೇಜರ್ ರವರು ಹಾಗೂ ಕೆಲವು ಪಡಿತರ ನ್ಯಾಯ ಬೆಲೆ ಅಂಗಡಿ ಮಾಲಿಕರಿಂದ ಅಕ್ಕಿ ಖರಿದಿಸಿ ಆಹಾರ ಇಲಾಖೆಯ ಅಧಿಕಾರಿಗಳ ಜೊತೆ ಶಾಮಿಲಾಗಿ ಬಡವರಿಗೆ ನೀಡುವ ಅಕ್ಕಿಯನ್ನು ಖಾಸಗಿ ರೈಸ್‌ಮಿಲ್ ಮಾಲಿಕರಿಗೆ ಕಾಳ ಸಂತೆಯಲ್ಲಿ ಮಾರಟ ಮಾಡುತ್ತಿದ್ದಾರೆಂದು ಸಾರ್ವಜನಿಕರಿಂದ ಮಾಹಿತಿ ತಿಳಿದು ಬಂದಿದೆ. 11.04.2023 ರಂದು ಗೋದಾಮಿನ ವಾಹನದ ಸಂಖ್ಯೆ KASLA9241 ಗಾಡಿಯಲ್ಲಿ 83 ಚೀಲ ಅಕ್ಕಿ ಕಡಿಮೆ ಇರುವುದರಿಂದ ಇಲಾಖೆ ಹಂತದಲ್ಲಿ ತನಿಖೆ ನಡೆಸಿ ಸಂಬಂಧಪಟ್ಟ ಗೋದಾಮಿನ ವ್ಯವಸ್ಥಾಪಕ ಹಾಗೂ ವಾಹನದ ಟೆಂಡರ್‌ದಾರ ಭದ್ರಾವತಿ ನಗರ ಪ್ರದೇಶದ ಆಹಾರ ಇಲಾಖೆಯ ಅಧಿಕಾರಿಗಳು ಮತ್ತು ಪಡಿತರವನ್ನು ಸಾಗಿಸಲಾಗುತ್ತಿದ್ದ, ನ್ಯಾಯ ಬೆಲೆ ಅಂಗಡಿ ಮಾಲಿಕನ ವಿರುದ್ದ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು
ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.