ಶಿವ ಬ್ಯಾಂಕ್‍ನ ಅಧ್ಯಕ್ಷರಾಗಿ ಟಿ.ಬಿ. ಜಗದೀಶ್ ಅವಿರೋಧ ಆಯ್ಕೆ

0
159

ಶಿವಮೊಗ್ಗ: ಶಿವ ಬ್ಯಾಂಕ್ ಎಂದೇ ಪ್ರಸಿದ್ಧಿ ಪಡೆದಿರುವ ಜಿಲ್ಲೆಯ ಪ್ರತಿಷ್ಠಿತ ಶಿವ ಪತ್ತಿನ ಸಹಕಾರ ಸಂಘ ನಿಯಮಿತದ ಆಡಳಿತ ಮಂಡಳಿ ಚುನಾವಣೆಯಲ್ಲಿ ಟಿ.ಬಿ. ಜಗದೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇನ್ನುಳಿದಂತೆ ಉಪಾಧ್ಯಕ್ಷರಾಗಿ ಇ.ಜಿ. ರುದ್ರೇಶಪ್ಪ, ನಿರ್ದೇಶಕರಾಗಿ ಪಿ.ಡಿ. ಮಂಜಪ್ಪ, ಸಿ. ಚಂದ್ರಪ್ಪ, ಹೆಚ್.ವಿ. ಅರುಣ್, ಕೆ.ಜಿ. ವೀಣಾ, ಹೆಚ್.ಇ. ಗಡ್ಲಬಸಪ್ಪ, ಎಸ್.ಹೆಚ್. ಷಣ್ಮುಖಪ್ಪ, ಎಸ್.ಜಿ. ಮಲ್ಲಿಕಾರ್ಜುನ್, ಹೆಚ್.ಬಿ. ಸುರೇಶ್, ಎಂ.ಎಲ್. ರಾಜಶೇಖರ್, ಸಿ.ಇ. ರೂಪ ಆಯ್ಕೆಯಾಗಿದ್ದಾರೆ.
ನೂತನ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ನಾಗರಾಜ್ ಹುಬ್ಬಳ್ಳಿ, ಬಸವರಾಜಪ್ಪ ಹೆಚ್., ರವಿಕುಮಾರ್, ಜಗದೀಶ್ ಮುದುವಾಲ, ವಿವೇಕ್ ತ್ಯಾಜವಳ್ಳಿ, ರಾಜೀವ್ ಪಾಟೀಲ್, ವೀರೇಶಪ್ಪ ಟಿ.ಎಂ., ಡಿ.ಕೆ. ಸುರೇಶ್, ಟಿ.ವಿ. ಗಿರೀಶ್, ವೀರೇಶ್ ಎಂ.ಎಸ್., ಯುವರಾಜ್ ಕೆ., ಸತೀಶ್ ಮುಂಚೆಮನೆ ಮೊದಲಾದವರು ಅಭಿನಂದಿಸಿದರು.