ಶಿವಮೊಗ್ಗದ ಪ್ರತಿಷ್ಠಿತ ಮೆಡಿಕಲ್ ಸ್ಟೂಡೆಂಟ್ಸ್ ನ ಗಾಂಜಾ ಪ್ರಕರಣ

0
777

ಶಿವಮೊಗ್ಗದ ಪ್ರತಿಷ್ಠಿತ ಮೆಡಿಕಲ್ ಸ್ಟೂಡೆಂಟ್ಸ್ ನ ಗಾಂಜಾ ಪ್ರಕರಣ
ಸಾತ್ವಿಕ ನುಡಿ.
ಗಾಂಜಾ ಪ್ರಕರಣವನ್ನ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಬೇಧಿಸಿದ್ದಾರೆ. ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಮೊನ್ನೆ ಮತ್ತು ನಿನ್ಬೆ ಸೇರಿ ಒಟ್ಟು ಎರಡು ಪ್ರಕರಣ ದಾಖಲಾಗಿದೆ.


ಮೊನ್ನೆ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಗಾಂಜಾ ಪ್ರಕರಣದಲ್ಲಿ ಪತ್ತೆಯಾದರೆ ನಿನ್ನೆ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಮನೆಯಲ್ಲೇ ಗಾಂಜಾ ಬೆಳೆದಿದ್ದನ್ನ‌ ಗ್ರಾಮಾಂತರು ಪೊಲೀಸರು ಬೇಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.

ಪಿಐ ಅಭ್ಯಯ್ ಪ್ರಕಾಶ್ ಸೋಮನಾಳ್ ವಿಶೇಷ ಕಾಳಜಿಯಿಂದ ಈ ಪ್ರಕರಣವನ್ನು ತಕ್ಷಣಕ್ಕೆ ಭೇದಿಸಿದ್ದಾರೆ

ಇನ್ನೂ ಹಲವಾರು ಕಾಲೇಜು ವಿದ್ಯಾರ್ಥಿಗಳ ಡ್ರಗ್ ಆಡಿಟ್ ಆಗುವುದನ್ನು ತಪ್ಪಿಸಿದ್ದಾರೆ, ಶಿವಮೊಗ್ಗದ ಜನತೆಯು ಅಭಯ್ ಪ್ರಕಾಶ್ ಸೋಮನಾಥ್ ರವರಿಗೆ ಬಹುಪರಾಕ್ ಎನ್ನುತ್ತಿದ್ದಾರೆ
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಎಸ್ಪಿ ಮಿಥುನ್ ಕುಮಾರ್ ಎರಡು ದಿನದ ಹಿಂದೆ ಗಾಂಜಾ ಪ್ರಕರಣದಲ್ಲಿ ಮೆಡಿಕಲ್ ಕಾಲೇಜಿನ ಅಬ್ದುಲ್ ಖಯ್ಯೂಮ್ ಮತ್ತು ಅರ್ಪಿತಾ ಎಂಬುವರನ್ನ‌ ಬಂಧಿಸಲಾಗಿತ್ತು. 450 ಗಾಂಜಾ ಮಾರಾಟ ಮಡಿರುವುದು ಪತ್ತೆಯಾಗಿತ್ತು.

ನಿನ್ನೆ ಮೂರು ಜನ ಅರೆಸ್ಟ್ ಆಗಿದ್ದಾರೆ. ಮನೆಯಲ್ಲೇ ಗಾಂಜಾ ಬೆಳೆದ ವಿಘ್ನರಾಜ್ ವಿನೋದ್ ಪಾಂಡು ದೊರೆ ಎಂಬ 27-28 ವಿದ್ಯಾರ್ಥಿಗಳಾಗಿದ್ದಾರೆ. ಈ ಮೂವರು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ದಾಳಿಯಲ್ಲಿ 150 ಗ್ರಾಂ ಡ್ರೈಗಾಂಜಾ ಆರ್ಟಿಪಿಷಿಯಲ್ ಆಗಿ ಗಾಂಜಾ ಬೆಳೆದಿರುವುದು ಬೆಳಕಿಗೆ ಬಂದಿದೆ. ಮನೆಯನ್ಬ ರೆಂಟ್ ಗೆ ಪಡೆದು ಬೆಡ್ ರೂಂ ನಲ್ಲೇ ಅರ್ಟಿಫಿಷಿಯಲ್ ಟೆಂಟ್ ನಲ್ಲಿ ಗಾಂಜಾ ಬೆಳೆದಿದ್ದಾರೆ ಎಂದು ಹೇಳಿದರು.

ಆನ್ ಲೈನ್ ನಲ್ಲಿ ಗಾಂಜಾ ಪಡೆದು ರಸಾಯನಿಕ ಗೊಬ್ಬರವನ್ನೂ ಖರೀದಿಸಿದ್ದಾರೆ. ಸಿಗರೇಟ್ ಬಟ್ಸ್ ಮೆಟರಿಯಲ್ ಸಿಕ್ಕಿದೆ ಈ ಮೂವರು ಮೆಡಿಕಲ್ ಕೊನೆಯ ವರ್ಷದ ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿಸಿದರು.‌

 

ಸ್ಥಳೀಯರಿಗೆ ಮತ್ತು ತಮಿಳು‌ನಾಡಿಗೆ ಮಾರಾಟ ಮಾಡಿರುವ ಅನುಮಾನವಿದೆ. ನಾಲ್ಕೈದು ತಿಂಗಳಿಂದ ಬೆಳೆಸಿರಬಹುದು ಎಂಬ ಮಾಹಿತಿ ಇದೆ. ಈ ಬಗ್ಗೆ ತನಿಖೆ ಆರಂಭವಾಗಿದೆ. ಶಿವಮೊಗ್ಗದಲ್ಲಿ ಮೊದಲಬಾರಿ ಈ ಪ್ರಕರಣ ಪತ್ತೆಯಾಗಿದೆ ಎಂದರು.

ಮನೆಯಲ್ಲಿಯೇ ಬ್ಲಾಕ್ ಕಲರ್ 5×10 ಅಡಿ ಯಲ್ಲಿ ಟೆಂಟ್ ರೀತಿಯಲ್ಲಿ ಬೆಳೆಸಲಾಗಿದೆ. ಕಸ್ಟಮರ್ ಬಗ್ಗೆ ಪುರಾವೆ ಸಿಕ್ಕಿದೆ. ಕಾಲೇಜಿನ ಹಾಸ್ಟೆಲ್ ನಲ್ಲಿ ಗಾಂಜಾ ಮಾರಾಟದ ಯಾವುದೇ ಮಾಹಿತಿ ಇಲ್ಲ. ಶಿವಮೊಗ್ಗದಲ್ಲಿ ಗಾಂಜಾ ಕಂಟ್ರೋಲ್ ಆಗಿದೆ. ಮಾಹಿತಿ ಬಂದ ತಕ್ಷಣ ನಾನು ಸಹ ಸ್ಪಾಟ್ ಗೆ ವಿಸಿಟ್ ಮಾಡುತ್ತಿದ್ದೇನೆ, ಹಲವಾರು ಕಾಲೇಜುಗಳಲ್ಲಿ ಗಾಂಜಾ ಹಾಗೂ ಮಾದಕ ಸೇವನೆ ಬಗ್ಗೆಜಾಗೃತಿ ಮೂಡಿಸುವ ಬಗ್ಗೆನೂ ಇಲಾಖೆ ಮುಂದುವರೆಸಿದೆ.
ಇಂಜಿನಿಯರ್, ಮೆಡಿಕಲ್ ಡಿಗ್ರಿ ಓದುತ್ತಿರುವವರ ಬಗ್ಗೆನೂ ಸಂಬಂಧಿಕರು ಸ್ನೇಹಿತರು ಗಮನ ಹರಿಸಬೇಕಿದೆ. ಏನಾದರೂ ಅನುಮಾನವಿದ್ದಲ್ಲಿ ಮಾಹಿತಿ ನೀಡಬೇಕಿದೆ. ಇದು ಕೆಟ್ಟ ಪರಿಣಾಮ ಬೀರಲಿದೆ. ಬಂಧಿತ ವಿದ್ಯಾರ್ಥಿಗಳಲ್ಲಿ ಇಬ್ಬರು ತಮಿಳುನಾಡು ಮತ್ತು ಕೇರಳದ ವಿದ್ಯಾರ್ಥಿಯಾಗಿದ್ದಾರೆ. ಈ ಪ್ರಕರಣವೂ ನಮ್ಮ ಶಿವಮೊಗ್ಗದ ಪುರಲೆಯಲ್ಲಿ ಪತ್ತೆಯಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ರಮೇಶ್, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಅಭಯ್ ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.