ಮತಾಂತರ ನಿಷೇಧ ಕಾಯ್ದೆ ವಾಪಾಸ್ ಪಡುದ್ರೆ ಪ್ರತಿಭಟನೆ-ವಿಹಿಂಪ ಎಚ್ಚರಿಕೆ

0
123

ಮತಾಂತರ ನಿಷೇಧ ಕಾಯ್ದೆ ವಾಪಾಸ್ ಪಡುದ್ರೆ ಪ್ರತಿಭಟನೆ-ವಿಹಿಂಪ ಎಚ್ಚರಿಕೆ

ಸಾತ್ವಿಕ ನುಡಿ ಶಿವಮೊಗ್ಗ

ನಿನ್ನೆ ಸಚಿವ ಸಂಪುಟದಲ್ಲಿ ಮಂತಾತರ ನಿಷೇಧ ಕಾಯ್ದೆಯನ್ನ ಹಿಂಪಡೆಯುವ ನಿರ್ಧಾರ ಮಾಡಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ವಿಶ್ವ ಹಿಂದೂ ಪರಿಷದ್ ಶಿವಮೊಗ್ಗ ಜಿಲ್ಲೆ ಪ್ರತಿಭಟನೆಯ ಎಚ್ಚರಿಕೆ ನೀಡಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಂಘಟನೆಯ ಜಿಲ್ಲಾಧ್ಯಕ್ಷ ಜೆ.ಆರ್.ವಾಸುದೇವ್ ಹಿಂದೂಗಳೊಂದಿಗೆ ಅನ್ಯ ಧರ್ಮೀಯರು ಬದುಕುತ್ತಿದ್ದಾರೆ. ಅವರ ಧರ್ಮ ಆಚರಣೆ ನಡೆಸಲು ಯಾರಿಗೂ ಆಕ್ಷೇಪಣೆಯಿಲ್ಲ. ಆದರೆ ಆಮಿಷ ತೋರಿ ಮತಾಂತರ ನಡೆಸುವುದು. ದಬ್ಬಾಳಿಕೆಯಿಂದ ಮತಾಂತರ ನಡೆಸುವುದಬ್ನ ಸಂಘಟನೆ ಖಂಡಿಸಿದೆ. ಮತಾಂತರ ನಿಷೇಧ ಕಾಯ್ದೆಯನ್ನ ವಾಪಾಸ್ ಪಡೆದರೆ ನತ್ತೆ ದಬ್ವಾಳಿಕೆ, ಆಮಿಷವೊಡ್ಡುವುದು ಮತ್ತು ಬಲವಂತದ ಮತಾಂತರ ನಡೆಯುವ ಅಪಾವಿದೆ. ಹೀಗೆ ಆದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.

ದಿನಾಂಕ: 15.06.2023 ನೇ ಗುರುವಾರದಂದು ನಡೆದ ಸಚಿವ ಸಂಪುಟದಲ್ಲಿ ಕಾಂಗ್ರೆಸ್ ಸರ್ಕಾರವು ಈ ಹಿಂದೆ ಜಾರಿಯಲ್ಲಿದ್ದ ಮತಾಂತರ ನಿಷೇಧ ಕಾನೂನನ್ನು ಹಿಂಪಡೆಯಲು ತೀರ್ಮಾನಿಸಿರುವುದನ್ನು ವಿಶ್ವ ಹಿಂದೂ ಪರಿಷದ್ ಖಂಡಿಸುತ್ತದೆ. ಭಾರತವು ಹಿಂದೂ ರಾಷ್ಟ್ರವಾಗಿದ್ದು ಇಲ್ಲಿ ಹಿಂದುಗಳೊಡನೆ ಅನ್ಯ ಧರ್ಮೀಯರೂ ಸಹ ಸಹಬಾಳ್ವೆಯನ್ನು ಮಾಡಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಅದರಂತೆ ಕರ್ನಾಟಕದಲ್ಲೂ ಸಹ ಹಿಂದೂಗಳೊಡನೆ ಅನ್ಯ ಧರ್ಮೀಯರೂ ಸಹ ತಮ್ಮ ಧರ್ಮ-ಮತಾಚರಣೆ ಮಾಡಲು ಅವಕಾಶವಿದೆ. ಇದನ್ನು ನಾವು ಒಪ್ಪುತ್ತೇವೆ ಮತ್ತು ಪ್ರಶ್ನಿಸುವುದಿಲ್ಲ. ಆದರೆ ಹಿಂದೂಗಳಿಗೆ ಆಮಿಷ ತೋರಿಸಿ ಅಥವಾ ಹೆದರಿಸಿ ಬಲವಂತವಾಗಿ ಮತಾಂತರಿಸುವುದನ್ನು ಅಥವಾ ಮರುಳು ಮಾಡಿ ಮತಾಂತರಿಸುವುದನ್ನು ನಾವು ಖಂಡಿಸುತ್ತೇವೆ. ಭಾರತವು ಹಿಂದೂ ರಾಷ್ಟ್ರವಾಗಿದೆ ಮತ್ತು ಕರ್ನಾಟಕವು ಭಾರತದ್ದೇ ಒಂದು ಭಾಗವಾಗಿದೆ. ಇಲ್ಲಿನ ಹಿಂದೂಗಳನ್ನು ಮತಾಂತರದಿಂದ ರಕ್ಷಿಸಿ ನಮ್ಮ ಧರ್ಮವನ್ನು ಕಾಪಾಡುವುದು ಪ್ರತಿಯೊಬ್ಬ ಹಿಂದುವಿನ ಕರ್ತವ್ಯವಾಗಿದೆ.
ಕಾಂಗ್ರೆಸ್ ಸರ್ಕಾರಕ್ಕೆ ಅನ್ಯ ಧರ್ಮೀಯರಲ್ಲದೆ ಅತಿ ಸಂಖ್ಯೆಯಲ್ಲಿ ಹಿಂದೂಗಳೂ ಸಹ ಮತ ಹಾಕಿದ್ದು ಅವರ ಮತದಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆಯೇ ಹೊರತು ಕೇವಲ ಅಲ್ಪಸಂಖ್ಯಾತರಿಂದಲ್ಲ. ಇದು ಕಾಂಗ್ರೆಸ್ ತನಗೆ ಮತ ನೀಡಿದ ಸಮಸ್ತ ಹಿಂದೂ ಸಮಾಜಕ್ಕೆ ದ್ರೋಹ ಬಗೆದಂತಾಗಿದೆ. ಕರ್ನಾಟಕದ ಹಿಂದುಗಳು ಇದನ್ನು ಖಂಡಿಸುವುದರೊಂದಿಗೆ ಮಂತ್ರಿಮಂಡಲವು ತಾನು ತೆಗೆದುಕೊಂಡಿರುವ ನಿರ್ಧಾರವನ್ನು ಕೂಡಲೇ ಹಿಂತೆದುಕೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ
ಈ ಹಿಂದಿನ ಸರ್ಕಾರವು ಶಾಲಾ ಪಠ್ಯದಲ್ಲಿ ರಾಷ್ಟ್ರಪುರುಷರ ಪರಿಚಯವನ್ನು ಸೇರಿಸಿದ್ದನ್ನೂ ಸಹ ಸಂಕುಚಿತ ಭಾವನೆಯಿಂದ ಮತ್ತು ಅಲ್ಪ ಸಂಖ್ಯಾತರನ್ನು ತುಷ್ಟಿಕರಿಸುವ ಸಲುವಾಗಿ ಸಾವರ್ಕರ್ ರವರಂತಹ ಅಪ್ರತಿಮ ದೇಶಭಕ್ತರ ಪರಿಚಯದ ಪಾಠಗಳನ್ನು ತೆಗೆಯಲು ನಿರ್ಧರಿಸುವುದನ್ನೂ ಸಹ ನಾವು ಖಂಡಿಸುತ್ತೇವೆ. ಈ ರೀತಿ ಸಮಾಜದಲ್ಲಿ ಶಾಂತಿಯನ್ನು ಕದಡುವ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ ಉತ್ತಮ ಆಡಳಿತ ನೀಡಲೆಂದು ಸರ್ಕಾರವನ್ನು ವಿನಂತಿಸುತ್ತೇವೆ. ಹಾಗೂ
ಹಿಂದೂ ಧರ್ಮ ರಕ್ಷಣೆ ಮಾಡುವುದು ಹಿಂದೂಗಳ ರಕ್ಷಣೆ ಮಾಡಬೇಕಿದೆ. ಕಾಂಗ್ರೆಸ್ ಸಹ ಹಿಂದೂಗಳ ಮತಗಳ ಸಹಾಯದಿಂದ ಅಧಿಕಾರಕ್ಕೆ ಬಂದಿದೆ ವಿನಃ ಕೇವಲ ಅಲ್ಪಸಂಖ್ಯಾತರ ಮತಗಳಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿಲ್ಲವೆಂಬುದನ್ನ ಅರಿಯಬೇಕೆಂದು ವಾಸುದೇವ್ ಆಗ್ರಹಿಸಿದ್ದಾರೆ. ಇಂದಿನ ಪತ್ರಿಕಾಗೋಷ್ಠಿಯಲ್ಲಿ ,ನಾರಾಯಣ ವರ್ಣೇಕರ್ ಸಚಿನ್ ರಾಯ್ಕರ್ ಸುರೇಶ್ ಬಾಬು ರಾಘವನ್ ವಡಿವೇಲು ಕುಮಾರಸ್ವಾಮಿ ನಟರಾಜ್ ಇನ್ನು ಮುಂತಾದವರು ಇದ್ದರು.