ಮೆಸ್ಕಾಂ ಕಚೇರಿಗೆ ಕಲ್ಲು ತೂರಿದ ಬಿಜೆಪಿ ಕಾರ್ಯಕರ್ತರು ?

0
397

ಮೆಸ್ಕಾಂ ಕಚೇರಿಗೆ ಕಲ್ಲು ತೂರಿದ ಬಿಜೆಪಿ ಕಾರ್ಯಕರ್ತರು ????

ಶಿವಮೊಗ್ಗದ ರೈಲ್ವೆ ನಿಲ್ದಾಣದ ಬಳಿ ಇರುವ ಮೆಸ್ಕಾಂ ಕಚೇರಿಯನ್ನ ಬಿಜೆಪಿ ಮುತ್ತಿಗೆ ಹಾಕಲು ಯತ್ನಿಸಿದ್ದು, ಈ‌ವೇಳೆ ಮೆಸ್ಕಾಂ ಕಚೇರಿಗೆ ಬಿಜೆಪಿ ಕಾರ್ಯಕರ್ತ ಕಲ್ಲು ತೂರಿದ್ದಾನೆ. ಆತನನ್ನ ವಶಕ್ಕೆ ಪಡೆದ ಪೊಲೀಸರು

ವಿದ್ಯುತ್ ದರ ಬೆಲೆ ಏರಿಕೆಯ ವಿರುದ್ಧ ಜಿಲ್ಲಾ ಬಿಜೆಪಿ ಮೆಸ್ಕಾಂ ಮುತ್ತಿಗೆ ಹಾಕಿದೆ. ಕಾಂಗ್ರೆಸ್ ಪಕ್ಷದ ವಿರುದ್ಧ, ಸಿಎಂ ಸಿದ್ದರಾಮಯ್ಯನವರ ವಿರುದ್ಧ ಘೋಷಣೆ ಕೂಗಲಾಯಿತು. ಪುಕ್ಕಟ್ಟೆ ಭಾಗ್ಯ ಕೊಡುತ್ತೀನಿ ಎಂದು ಅಧಿಕಾರಕ್ಕೆ ಬಂದಿದ್ದು ಕುತಂತ್ರಗಳ ಮೂಲಕ ದರ ಏರಿಸಲಾಗಿದೆ ಎಂದು ಬಿಜೆಪಿ ಆಗ್ರಹಿಸಿದೆ.

ನಾಯಕರ ಭಾಷಣ ಮುಗಿಯುತ್ತಿದ್ದಂತೆ ಮೆಸ್ಕಾಂ ಕಚೇರಿಗೆ ಬೀಗ ಹಾಕಲು ಮುಂದಾದ ಬಿಜೆಪಿ ಕಾರ್ಯಕರ್ತರು ಮೆಸ್ಕಾಂ ಪ್ರವೇಶ ದ್ವಾರಕ್ಕೆ ನುಗ್ಗಿದ್ದಾರೆ. ಪೊಲೀಸರು ತಡೆದರೂ ಇದರಲ್ಲಿ ಮುರುಗೇಶ್ ಎಂಬ ಕಾರ್ಯಕರ್ತ ಕಲ್ಲು ತೂರಿದ್ದಾನೆ. ಮೆಸ್ಕಾಂ ಕಚೇರಿ ಗ್ಲಾಜು ಪೀಸ್ ಪೀಸ್ ,

ಇದ್ಕೂ ಮೊದಲು ಮಾತನಾಡಿದ ಬಿಜೆಪಿ ನಗರ ಅಧ್ಯಕ್ಷ ಜಗದೀಶ್ ಮಾತನಾಡಿ, ವಿದ್ಯುತ್ ಬೆಲೆ ಏರಿಕೆಯನ್ನ ಬಿಜೆಪಿ ಏರಿಸಿದೆ ಎಂದು ಸಿಎಂ ಹೇಳ್ತಾರೆ, ಬಿಜೆಪಿ ಸರ್ಕಾರ ತರುವ ಕಾನೂನು ಮತ್ತು ಯೋಜನೆ ನಿಲ್ಲಿಸಲು ಆಗುತ್ತೇ, ಈಗ ಬಿಜೆಪಿ ಬೆಲೆ ಏರಿಕೆಯನ್ನ‌ ತಡೆಯಲು ಆಗೊಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಚೆನ್ನಿ ಮಾತನಾಡಿ, ಯಂತ್ರಗಳ ಸಂಸಾರದ ಕಾಲದಲ್ಲಿ ವಿದ್ಯುತ್ ಬಳಕೆ ಅನಿವಾರ್ಯವಾಗಿದೆ. ಮನೆ ಮಠಗಳನ್ನ ಬೇರೆ ರೀತಿ ಯೋಚಿಸುತ್ತಿದ್ದೀರ. ಸಾವಿರಾರು ಕುಟುಂಬಗಳು ಕೈಗಾರಿಕೆಯ ಮೇಲೆ ಅವಲಂಭಿತರಾಗಿದ್ದಾರೆ.ಅವರನ್ನ‌ ಬೀದಿಗೆ ತರುತ್ತಿದೆ ಕಾಂಗ್ರೆಸ್ ಸರ್ಕಾರ ಎಂದು ಆರೋಪಿಸಿದರು.

ಯಾರನ್ನ ಮೆಚ್ಚಿಸಲು ಈ ಬೆಲೆ ಏರಿಕೆ? ಬಡ ಕಾರ್ಮಿಕ ನಿಮ್ಮ ಕಣ್ಣಿಗೆ ಕಾರೊಲ್ವಾ? ಜನಪರ ಮಾತನಾಡಲು ಸಿದ್ದರಾಮಯ್ಯ ಡಿಕೆಶಿ ತಾಮುಂದು ನಾಮುಂದು ಎನ್ಬುತ್ತಾರೆ. ವಿದ್ಯುತ್ ದರ ಏರಿಕೆ ಯಾವ ಕಾರಣಕ್ಕೆ? ಹೆಚ್ಚಳವನ್ನ ಕೈಬಿಡಬೇಕು. ಈ ನಾಲ್ಕು ಮಂಡಳಿಯನ್ನ ಲಾಭತರಲು ಆಗೊಲ್ಲವೆಂದರೆ ಬೇರೆಯವರು ಬಂದು ಆಡಳಿತ ಮಾಡ್ತಾರೆ. ನೀವು ಜಾಗ ಖಾಲಿ ಮಾಡಿ ಎಂದರು.

ಕೆಇಆರ್ ಸಿ ಬೆಲೆ ಏರಿಕೆಯನ್ನೇ ಮಾಡೋದು ಕೆಲಸನಾ? ಬೆಲೆ ಕಡಿಮೆ ಮಾಡಿದ ಒಂದು ಉದಾಹರಣೆನೂ ಇಲ್ಲ. ಜನರ ಮೇಲೆ ಬರೆ ಎಳೆಯುವ ಕೆಲಸ ಮಾಡುವ ಈ ನಿಯಂತ್ರಣ ಪ್ರಾಧಿಕಾರ ಏನುಕ್ಕೆ ಬೇಕು. ನ್ಯಾಯದರ ಮೆಸ್ಕಾಂ ಬೇಡ, ಸರಿಯಾದ ವಿದ್ಯುತ್ ವಿತರಿಸದ ಮೆಸ್ಕಾಂ ಬೇಡ, ಹಾಗಾಗಿ ಮೆಸ್ಕಾಂ ಕಚೇರಿ ಬೀಗ ಹಾಕಲು ಬಂದಿದ್ದೇವೆ ಎಂದರು.

ಬೆಲೆ ಏರಿಕೆ ಎಂಬುದು ಕೃತ್ಯವಿದು. ಭಯೋತ್ಪದಕ ಕೃತ್ಯವಿದು. ಸರ್ಕಾರ ನಡೆಸಲು ಆಗೊಲ್ಲವೆಂದರೆ ಹೇಳಿ ಭಿಕ್ಷೆ ಬೇಡಿ ಹಣ ತಂದು ಬಿಸಾಕುತ್ತೇವೆ. ಸರ್ಕಾರ ರಚನೆ ಆಗಿ 25 ದಿನಗಳ ಒಳಗೆ ಬಡವರ ಜೀವನಕ್ಕೆ ಕೈ ಹಾಕಿದ್ದೀರಿ. ಕಾರ್ಮಿಕರ ಜೇಬಿಗೆ ಕೈಹಾಕಿದ್ದೀರಿ.

 

ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡ, ಡಿ.ಎಸ್.ಅರುಣ್, ಮೇಯರ್ ಶಿವಕುಮಾರ್, ಸಂತೋಷ್ ಬೆಳ್ಳೇಕೆರೆ, ಮಾಜಿ ಸೂಡಾ ಅಧ್ಯಕ್ಷ ದತ್ತಾತ್ರಿ, ಪಾಲಿಕೆ ಸದಸ್ಯೆರಾದ ರಾಮು ರಾಮಣ್ಣ, ಸುರೇಖಾ ಮುರುಳೀಧರ್ ಮೊದಲಾದವರು ಭಾಗಿಯಾಗಿದ್ದರು.