ಹಂದಿ ಅಣ್ಣಿ ಕೊಲೆ ಕಹಾನಿ ?????

0
408

ಚೀಲೂರು ಡಬ್ಬಲ್​ ಅಟ್ಯಾಕ್! ಹಂದಿ ಅಣ್ಣಿ ಕೊಲೆ ಆರೋಪಿಗಳ ಮೇಲಿನ ದಾಳಿಯಲ್ಲಿ ಯಾರೆಲ್ಲಾ ಆರೋಪಿಗಳು ಗೊತ್ತಾ?

ಚೀಲೂರು ಡಬ್ಬಲ್​ ಅಟ್ಯಾಕ್! ಹಂದಿ ಅಣ್ಣಿ ಕೊಲೆ ಆರೋಪಿಗಳ ಮೇಲಿನ ದಾಳಿಯಲ್ಲಿ ಯಾರೆಲ್ಲಾ ಆರೋಪಿಗಳು ಗೊತ್ತಾ? ಫಿಟ್ ಆದನಾ ಹೆಬ್ಬೆಟ್ಟು ಮಂಜು?

ದಾವಣಗೆರೆ ಜಿಲ್ಲೆಯಲ್ಲಿ ಚೀಲೂರು ಬಳಿ, ಹಣ್ಣಿ ಅಣ್ಣಿ ಕೊಲೆ ಆರೋಪಿಗಳ ಮೇಲೆ ನಡೆದಿದ್ದ ಡಬಲ್ ಅಟ್ಯಾಕ್ ಅಂಡ್ ಮರ್ಡರ್ ಪ್ರಕರಣ ಸಂಬಂಧ ದಾವಣಗೆರೆ ಪೊಲೀಸರು ಯಾರಿಗೂ ಕರುಣೆ ತೋರಿಸುವ ಇರಾದೆಗೆ ಹೋಗಿಲ್ಲ. ಪ್ರಕರಣದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪಾಲ್ಗೊಂಡವರನ್ನೆಲ್ಲಾ ಆರೋಪಿಯನ್ನಾಗಿಸಿದ ಹೊನ್ನಾಳಿ ಪೊಲೀಸರು, ಕೇಸ್​ನ್ನ ಕಾನೂನು ಕಟ್ಟಳೆಯಿಂದ ತಪ್ಪಿ ಹೋಗದಂತೆ ಎಚ್ಚರಿಕೆ ವಹಿಸುತ್ತಿದ್ಧಾರೆ.

ಹೊನ್ನಾಳಿ ತಾಲ್ಲೂಕು ಚೀಲೂರಿನ ಗೋವಿನ ಕೋವಿಯಲ್ಲಿನ ತೋಟದ ಬಳಿಯಲ್ಲಿ ಹಂದಿ ಅಣ್ಣಿ ಕೊಲೆ ಯ ಆರೋಪಿಗಳ ಮೇಲೆ ದುಷ್ಕರ್ಮಿಗಳ ತಂಡ ಮಾರಣಾಂತಿಕ ಅಟ್ಯಾಕ್ ಮಾಡಿತ್ತು. ಈ ಪೈಕಿ ಆಂಜನೇಯ ಸ್ಥಳದಲ್ಲಿಯೆ ಸಾವನ್ನಪ್ಪಿದರೆ, ಮಧು ಗಂಭೀರವಾಗಿ ಗಾಯಗೊಂಡಿದ್ದ.. ಇಲ್ಲಿ ಅಟ್ಯಾಕ್ ಆಗುವುದಕ್ಕೂ ಮೊದಲು ಶಿವಮೊಗ್ಗ ಕೋರ್ಟ್ ಸೇರಿದಂತೆ ಶಿವಮೊಗ್ಗ ನಗರದ ಕೆಲೆವೆಡೆ ಮಧು ಹಾಗೂ ಆಂಜನೇಯನನ್ನು ಸ್ಕಾರ್ಪಿಯೋ ಗಾಡಿಯಲ್ಲಿ ಫಾಲೋ ಮಾಡಲಾಗಿತ್ತು

ಹೆಬ್ಬೆಟ್ಟು ಮಂಜುನ ಪಾತ್ರ!
ಅಂತಿಮವಾಗಿ ಚೀಲೂರಿನ ಗೋವಿನ ಕೋವಿಯ ಬಳಿಯಲ್ಲಿ ಮಧು ಮತ್ತು ಆಂಜನೇಯರಿದ್ದ ಬೈಕ್ಗೆ ಸ್ಕಾರ್ಪಿಯೋ ಮೂಲಕ ಡಿಕ್ಕಿ ಹೊಡೆಸಿ ಅವರ ಮೇಲೆ ದಾಳಿ ಮಾಡಲಾಗಿತ್ತು. ಇದೊಂದು ಪೂರ್ವ ನೀಯೋಜಿತ ಕೃತ್ಯವಾಗಿದ್ದು, ನಟೋರಿಯಸ್ ರೌಡಿ ಹೆಬ್ಬೆಟ್ಟು ಮಂಜುನ ಅಣತಿಯಂತೆ ಈ ಕೊಲೆ ನಡೆದಿತ್ತು ಎಂಬುದು ಪೊಲೀಸ್ ಮೂಲಗಳಿಂದ ತಿಳಿದು ಬಂದಿತ್ತು
23 ಮಂದಿ ಆರೋಪಿಗಳು???
ಪೊಲೀಸರು ಈ ಡಬಲ್ ಅಟ್ಯಾಕ್ ನ್ನು ಬಹಳ ಆಳವಾಗಿ ತನಿಖೆ ಮಾಡಿದ್ದು, ಪ್ರಕರಣದಲ್ಲಿ 23 ಮಂದಿ ಮಂದಿಗಳನ್ನು ಆರೋಪಿಗಳನ್ನಾಗಿ ಮಾಡಿದ್ದಾರೆ. ತನ್ನ ಸಹಚರ ರೌಡಿ ಹಂದಿ ಅಣ್ಣಿಯ ಕೊಲೆಗೆ ಪ್ರತಿಕಾರ ತೀರಿಸಿಕೊಳ್ಳಲು ಹೆಬ್ಬೆಟ್ಟು ಮಂಜು ದೂರದಲ್ಲಿಯೇ ಕೂತು ಸಂಚು ರೂಪಿಸಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ಹೀಗಾಗಿ ಪ್ರಕರಣದಲ್ಲಿ ಹೆಬ್ಬೆಟ್ಟು ಮಂಜುನನ್ನು ಕೂಡ ಆರೋಪಿಯನ್ನಾಗಿ ಮಾಡಲಾಗಿದೆ.
ಹಂದಿ ಅಣ್ಣಿ ಕೊಲೆ ಆರೋಪಿಗಳ ಮೇಲಿನ ದಾಳಿ ತಮಿಳ್ ರಮೇಶ್ ಹಾಗೂ ದೀಪು ಬೆಂಗಳೂರಲ್ಲಿ ಸೆರೆಂಡರ್​

ತನಿಖೆಯ ವೇಳೆ ಆಳಕ್ಕಿಳಿದ ಪೊಲೀಸರು, ಸಂಚು ರೂಪಿಸಿದವರು, ವಾಹನ ವ್ಯವಸ್ಥೆ ರೂಪಿಸಿದವರ. ಸಹಾಯ ಮಾಡಿದವರು, ವಾಚ್ ಅಂಡ್ ಗಾರ್ಡ್ ಮಾಡಿದವರು ಹೀಗೆ ..ಕೊಲೆಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನೆರವಾದವರ ವಿರುದ್ಧವೂ ಕೇಸ್ ದಾಖಲಿಸಿದ್ದಾರೆ.

ಯಾರೆಲ್ಲಾ ಆರೋಪಿತರು?
ರಮೇಶ್ ಅಲಿಯಾಸ್ ತಮಿಳು ರಮೇಶ್

ಸುನಿಲ್ ಅಲಿಯಾಸ್ ತಮಿಳ್ ಸುನಿಲ್

ಪವನ್ ಕುಮಾರ್

ಅಭಿಲಾಷ್ ಅಲಿಯಾಸ್ ಜಂಗಲ್

ವೆಂಕಟೇಶ್ ಅಲಿಯಾಸ್ ಕಿಂಗ್

ಸಂದೀಪ್ ಅಲಿಯಾಸ್ ದೀಪು

ಮಹೇಶ ಅಲಿಯಾಸ್ ಮಹೇಶ ನಾಯ್ಕ್

ಮೆಹಬೂಬ್ ಸುಭಾನಿ

ಸಲ್ಲು ಯಾನೆ ಸಯ್ಯದ್

ಮೊಹಮ್ಮದ್ ಗೌಸ್

ಸಯ್ಯದ್ ಅಬ್ರಾರ್

ಫಯಾಝ್

ಶಕೀಲ್ ಅಹಮ್ಮದ್

ಮಂಜುನಾಥ್ ಅಲಿಯಾಸ್ ಹೆಬ್ಬೆಟ್ಟು ಮಂಜು

ಕಿರಣ್ ಕುಮಾರ್ ಅಲಿಯಾಸ್ ಕುಳ್ಳಿ

ದರ್ಶನ್ ಅಲಿಯಾಸ್ ಜೋಗಿ

ರಘು ಅಲಿಯಾಸ್ ತಿಮ್ಮ

ಎಸ್.ಆರ್ ಮಧು

ಮಹೇಶ್ ಅಲಿಯಾಸ್ ಮಂಡೆ

ಕಾಂತ ಅಲಿಯಾಸ್ ಆಟೋ ಕಾಂತ

ಗಣಿ ಅಲಿಯಾಸ್ ಗಣೇಶ

ಅರುಣ ಅಲಿಯಾಸ್ ಅಮ್ಮು
ಹೀಗೆ ಹೊನ್ನಾಳಿ ಪೊಲೀಸರೇನೋ ಚಾರ್ ಶೀಟ್ ಹಾಕಿ ಕೈ ತೊಳೆದುಕೊಂಡಿದ್ದಾರೆ ಆದರೆ ಕೋರ್ಟ್ಗೆ ಯಾವ ರೀತಿ ಸಾಕ್ಷಿ ಒದಗಿಸುತ್ತಾರೆ ಎಂಬುದೇ ಕೌತುಕ, ಅಥವಾ ಇನ್ಯಾವ ರೌಡಿಗಳು ಶಿವಮೊಗ್ಗದ ರಕ್ತ ಚರಿತ್ರೆಯಲ್ಲಿ ಇನ್ಯಾವ ರೌಡಿಯ ಹೆಣ ಬೀಳುಸುತಾರೊ ಕಾದು ನೋಡಬೇಕಾಗಿದೆ.