ಐದು ವರ್ಷದಿಂದ ಸರ್ಕಾರಿ ಆನೆ ಕಾವಾಡಿಗ ಹುದ್ದೆಗೇ ಅಲೆದು ಅಲೆದು ಕೊನೆಗೂ ಸುಸ್ತಾದ ಶಿವಕುಮಾರ ಆರೋಪವೇನು???

0
274

ಐದು ವರ್ಷದಿಂದ ಸರ್ಕಾರಿ ಆನೆ ಕಾವಾಡಿಗ ಹುದ್ದೆಗೇ
ಅಲೆದು ಅಲೆದು ಕೊನೆಗೂ ಸುಸ್ತಾದ ಶಿವಕುಮಾರ
ಆರೋಪವೇನು???
ಮುಂದೆ ಓದಿ

 

ಎಚ್ ಶಿವಕುಮಾರ್ ರವರು ಆನೆ ಕಾವಾಡಿಗ ಹುದ್ದೆಗೆ 5ಬಾರಿ ಅರ್ಜಿ ಸಲ್ಲಿಸಿದ್ದು, 5 ಬಾರಿ ಸಂದರ್ಶನಕ್ಕೆ ಹಾಜರಾಗಿರುತ್ತೇನೆ. ನನಗೆ 5 ಬಾರಿ ಸಂದರ್ಶನಕ್ಕೆ ಹಾಜರಾಗಿದ್ದು, ಈ ಬಾರಿ ನನ್ನನ್ನು ಆಯ್ಕೆ ಮಾಡಿಕೊಳ್ಳುವುದಾಗಿ ಹೇಳಿ ಸರ್ಕಾರದಿಂದ ಆದೇಶ ಬಂದಿರುತ್ತದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾನ್ಯ ಸಿ.ಸಿ.ಎಫ್ ರವರು ಈ ಬಾರಿ ನನ್ನನ್ನು ನೇಮಕ ಮಾಡಿಕೊಳ್ಳುವುದಾಗಿ ತಿಳಿಸಿ ನನ್ನನ್ನು ಸಂದರ್ಶನದ ಮಾಡುವ ಸಮಯದಲ್ಲಿ ಅರಣ್ಯವಾಸಿ ದೃಢೀಕರಣ ಪತ್ರವನ್ನು ಈ ಹಿಂದಿನ ನೇಮಕಾತಿ ಸಂದರ್ಶನದಲ್ಲಿ ಹಾಜರುಪಡಿಸಿಕೊಂಡಿರುತ್ತಾರೆ. ಮತ್ತು ದೃಢೀಕರಣ ಪತ್ರದ ಮೇಲೆ ಸಹಿ ಮಾಡಿಸಿಕೊಂಡು ಮತ್ತು ಹೊಸದಾಗಿ ಅರಣ್ಯವಾಸಿ ದೃಢೀಕರಣ ಪತ್ರವನ್ನು ಮಾಡಿಸಿಕೊಂಡು 28-05-2023 ರ ಸಂಜೆ 5:00 ಗಂಟೆ ಸಮಯದೊಳಗೆ ನೀವು ತಂದರೆ ಆಯ್ಕೆ ಮಾಡುತ್ತೇನೆ. ವಿಳಂಭವಾದಲ್ಲಿ ತಿರಸ್ಕರಿಸುತ್ತೇನೆ ಎಂದು ಹೇಳಿರುತ್ತಾರೆ. ಆದರೆ ನಾನು ತುಂಬಾ ಶ್ರಮಪಟ್ಟು ದಿನಾಂಕ: 24-05-2023 ರಂದೇ ಅರಣ್ಯವಾಸಿ ದೃಢೀಕರಣ ಪತ್ರವನ್ನು ತಂದು ಕೊಟ್ಟಿರುತ್ತೇನೆ.



ಈ ವಿಚಾರಕ್ಕೆ ಸಂಬಂಧಿಸಿದಂತೆ, ಈಗ ಆಯ್ಕೆ ಮಾಡಿರುವ ತಾತ್ಕಾಲಿಕ ಪಟ್ಟಿಯಲ್ಲಿ ಸುದೀಪ ಎಂಬುವರು ಟಿ.ಎನ್ ಆಯ್ಕೆ ಮಾಡಿದ್ದು, ನಂತರ ಸುರೇಶ್, ಮಲ್ಲಪ್ಪ ಲಂಬಾಣಿ ಇವರುಗಳು ದಿನಗೂಲಿಯ ಮೇಲೆ ಕೆಲಸ ಮಾಡುತ್ತಿದ್ದು, ಹಾಗೂ ಸುದೀಪ್ ತಂದೆಯವರಾದ ನಾಗರಾಜ್ ರೇಂಜರ್ ಡ್ರೈವರ್ ಆಗಿ 10 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಇವರ ಶಿಫಾರಸಿನ ಆಧಾರದ ಮೇರೆಗೆ ಮತ್ತು ಎ.ಸಿ.ಎಫ್ ಸುರೇಶ್ ರವರ ಶಿಫಾರಸ್ಸಿನ ಆಧಾರದ ಮೇರೆಗೆ ಸುದೀಪ್ ರವರ ಮೇಲೆ ಸಂತೋಷ್’ ಎಂಬ ರೇಂಜರ್ ರವರನ್ನು ಸ್ವಂತ ಕೆಲಸಕ್ಕೆ ಕರೆದುಕೊಂಡು ಹೋಗಿದ್ದಗಾ ಆಕ್ಸಿಡೆಂಟ್ ಮಾಡಿಸಿ ಅವರು ಮರಣ ಹೊಂದಿರುತ್ತಾರೆ. ಈ ಬಗ್ಗೆ ಕೇಸ್ ದಾಖಲಾಗಿರುತ್ತದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ರೀತಿ ಕ್ರಿಮಿನಲ್ ಚಟುವಟಿಕೆ ಇರುವ ಈತನನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಈ ವಿಚಾರಕ್ಕೆ ನೇಮಕಾತಿಯ ಪ್ರಕ್ರಿಯೆಗಳು ಗಳಿಸಿರುವ ಅಂಕಗಳ ಆಧಾರದ ಮೇಲೆ ಮಾಡಿರುತ್ತೇವೆ ಎಂದು ತಿಳಿಸಿರುತ್ತಾರೆ.
ಆದರೆ ಈ ಹಿಂದೆ
2016 ರಲ್ಲಿ ವಯಸ್ಸಿನ ಮೇಲೆ ಆಧಾರದ ನೇಮಕಾತಿ ಮಾಡಿಕೊಂಡಿರುತ್ತಾರೆ. ಹಾಗೂ 2017 ರಲ್ಲಿ ಕೂಡ ಅಂಕಪಟ್ಟಿಯಲ್ಲಿ ಸಂದರ್ಶನ ದಿನದಂದು ಅವ ಕಾಮೋಂಡೋ ಗಳಿಸಿದ ಅಂಕಗಳಲ್ಲಿ ಅಲ್ಲಿಯೇ ತೋರಿಸಿ
ನಿರ್ವಹಣೆ.
ತೆಗೆದುಕೊಂಡಿರುತ್ತಾರೆ. ಆದರೆ ಸಿ.ಸಿ.ಎಫ್ ರವರು ಯಾರಿಗೂ ತೋರಿಸಿದೇ ಪ್ರಕ್ರಿಯೆ ಮುಗಿಸಿರುತ್ತಾರೆ. ಆದರೆ ಸಿ.ಸಿ.ಎಫ್ ರವರು ಇದಾವುದನ್ನು ಮಾಡದೇ ನೇಮಕಾತಿ ಮಾಡಿರುತ್ತಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ 2015 ರಿಂದ ಆನೆ ಕಾವಾಡಿಗ ಹುದ್ದೆಗೆ ನೋಟಿಫಿಕೇಶನ್ ಮಾಡಿ ಪತ್ರಿಕೆಯಲ್ಲಿ ಪ್ರಕಟಿಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಾ ಬಂದಿದ್ದು, ಈವರೆಗೂ ಸಾರ್ವಜನಿಕರಲ್ಲಿ ಯಾರನ್ನು ಸಹ ಹುದ್ದೆಗೆ ನೇಮಕಾತಿ ಮಾಡಿರುವುದಿಲ್ಲ. ಸುಮ್ಮನೆ ತೋರಿಸಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ.

ಮಹಿಳೆಯರಿಗೆ
ಆನೆ ಕಾವಾಡಿಗ ಹುದ್ದೆಯಲ್ಲಿ 1 ಕೆಟಗರಿಯಲ್ಲಿ 1 ಎಸ್.. | ಎಸ್.ಟಿ, ಜನರಲ್ -1 ಹಾಗೂ ಈ ರೀತಿ ನೇಮಕಾತಿ ಮಾಡಬೇಕಾಗಿರುತ್ತದೆ. ಆದರ ಅಭ್ಯರ್ಥಿಯನ್ನು ನೇಮಕಾತಿ ಮಾಡಬೇಕಾದಲ್ಲಿ ಪತ್ರಿಕೆಗಳಲ್ಲಿ ಪ್ರಕಟಿಸಿ ಮತ್ತು ಸರ್ಕಾರದ ಅನುಮತಿ ಪಡೆದು ನೇಮಕಾತಿ ಮಾಡಿಕೊಳ್ಳಬೇಕಿತ್ತು. ಆದರೆ 4 ಜನ ಪುರುಷರನ್ನು ನೇಮಕಾತಿ ಮಾಡಿಕೊಂಡು ನೇಮಕಾತಿ ಪ್ರಕ್ರಿಯೆಯನ್ನು ಉಲ್ಲಂಘನೆ ಮಾಡಿರುತ್ತಾರೆ. ಸಂಬಂಧಿಸಿದಂತೆ ದಾಂಡೇಲಿ, ಸೀರಸಿ, ಮಡಿಕೇರಿ, ಮೈಸೂರು ಎಲ್ಲಾ ಸಂದರ್ಶದಿನದಂದೇ ಅಭ್ಯರ್ಥಿಗಳಿಗೆ ಅಂಕಪಟ್ಟಿಯನ್ನು ತೋರಿಸಿ ಅವರಿಂದ ಸಹಿ ಪಡೆದುಕೊಂಡು ಆಯ್ಕೆ ಮಾಡಿರುತ್ತಾರೆ.

ಆದರೆ ನನಗೆ ಅಲೆದಾಡಿಸಿ ಸಂದರ್ಶನಕ್ಕೆ 5 ಬಾರಿ ಕರೆದು ಸುಮ್ಮನೆ ನಾಟಕೀಯ ನೇಮಕಾತಿ ಪ್ರಕ್ರಿಯೆಯನ್ನು ನಡೆಸಿ ನಾನು ಸುಮಾರು ಕಳೆದ 8 ವರ್ಷಗಳಿಂದ ಈ ಹುದ್ದೆಗೆಗಾಗಿ ಪ್ರಯತ್ನ ಮಾಡುತ್ತಾ ನಾನು ಬೇರೆ ಯಾವ ಕೆಲಸ ಮಾಡದೇ ಕೆಲಸಕ್ಕಾಗಿ ಅಲ್ಲಿ ಇಲ್ಲಿ ಸಾಲ ಮಾಡಿಕೊಂಡು ಇಲ್ಲಿಯವರೆಗೂ ಪ್ರಯತ್ನಿಸಿದರೂ ನನ್ನನ್ನು ನೇಮಕಾತಿ ಮಾಡದೇ ನಾಟಿಕೀಯ ನೇಮಕಾತಿ ಪ್ರಕ್ರಿಯೆಯಲ್ಲಿ ನನ್ನನ್ನು ಆಟದ ವಸ್ತುವಾಗಿ ಬಳಸಿಕೊಂಡು ನನ್ನ ಜೀವನದ ಜೊತೆ ಆಟವಾಡಿರುತ್ತಾರೆ. ಎಂಬುದು ಶಿವಕುಮಾರ್ ಅವರ ಆರೋಪ ಇದರಿಂದ ಶಿವಕುಮಾರ್ ಅವರು ಬೇಸತ್ತು ಇಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಶಿವಮೊಗ್ಗ ವೃತ್ತ ಕಚೇರಿಯ ಎದುರು ಏಕಾಂಗಿ ಹೋರಾಟ ನಡೆಸಿದರು
ಅಧಿಕಾರಿಗಳು ಸಂಜೆವರೆಗೂ ಮನವೊಲಿಸಲು ವಿಫಲ ಪ್ರಯತ್ನಪಟ್ಟು ಕೊನೆಗೆ ಸಂಜೆ ಯಾದರಿಂದ ನಮ್ಮ ಕಚೇರಿಯ ಎದುರಿಗೆ ಹೋರಾಟವನ್ನು ನಿಲ್ಲಿಸು ಇಲ್ಲದಿದ್ದರೆ ನಿನ್ನ ಮೇಲೆ ದೂರನ್ನು ದಾಖಲಿಸ ಲಾಗುವುದು ಎಂದು ಬೆದರಿಸಿ ಜಿಲ್ಲಾಧಿಕಾರಿಗೆ ಬೇಕಾದರೆ ಮನವಿ ಕೊಡು ಎಂದು ಹೇಳಿ ಕಳಸಿ ಕೊಟ್ಟಿರುತ್ತಾರೆ.