ಮುಂಬೈನ ಕ್ಯಾಥೋಲಿಕ್ ಚರ್ಚ್‌ಗೆ ಹೋಗಿ ಅಲ್ಲಿ ಕ್ರಿಶ್ಚಿಯನ್ ಸನ್ಯಾಸಿನಿಯಾಗುವ ಕನಸು

0
37


ಕೊನೆಗೂ ಸುಖಾಂತ್ಯ ಕಂಡ ಚನ್ನಗಿರಿಯ ರಂಜಿತ ಕಿಡ್ನಾಪ್ ಕೇಸ್
ಈ ಕಿಡ್ನಾಪ್ ನ ಸಾರಾಂಶವೇನೆಂದರೆ
ದಿನಾಂಕ:-14-05-2023 ರಂದು ಸಂಜೆ ರಂಜಿತಾ ತಂದೆ ಬಸವರಾಜ, 20 ವರ್ಷ, ನಂಜಪ್ಪ ಕಾಲೇಜ್ ನಲ್ಲಿ ಫಿಸಿಯೋ ಥೆರಫಿ ವ್ಯಾಸಾಂಗ ಇವರು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೆ.ಎನ್ ಸ್ಟಡಿ ಹೋಂ ಅಂಡ್ ಹಾಸ್ಟೆಲ್ ನಿಂದ ಕಾಣೆಯಾಗಿದ್ದು, ಆಕೆಯ ಮೊಬೈಲ್ ನಂಬರ್ ನಿಂದ ಅವರ ತಂದೆಗೆ 20 ಲಕ್ಷ ರೂ ಒತ್ತೆ ಹಣವನ್ನು ತಯಾರು ಇಟ್ಟುಕೊಳ್ಳುವಂತೆ ತಪ್ಪಿದ್ದಲ್ಲಿ ಯುವತಿಯನ್ನು ಕೊಲ್ಲುವುದಾಗಿ ಎಸ್ಎಂಎಸ್ ಬಂದಿದ್ದು, ಈ ಕುರಿತಂತೆ ಯುವತಿಯ ತಂದೆ ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0046/2023 ಕಲಂ 365, 364 (ಎ) ಐಪಿಸಿ ದಾಖಲಿಸಿಕೊಳ್ಳಲಾಗಿರುತ್ತದೆ.
ಪರಕರಣದಲ್ಲಿ ಅಪಹರಣಕ್ಕೊಳಗಾದ ಯುವತಿ ಮತ್ತು ಆರೋಪಿತರ ಪತ್ತೆಗಾಗಿ ಜಯನಗರ ಪೊಲೀಸ್ ಠಾಣೆಯ ಮತ್ತು ರೌಡಿ ನಿಗ್ರಹ ದಳದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿದ್ದು, ಪ್ರಕರಣದ ತನಿಖೆಯ ಸಮಯದಲ್ಲಿ ಯುವತಿಯು ತಾನೇ ಖುದ್ದಾಗಿ ಎ.ಟಿ.ಎಂ ನಿಂದ
ರೂ 5,000/- ಹಣವನ್ನು ವಿಥ್ ಡ್ರಾ ಮಾಡಿಕೊಂಡು ಹೋಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದರಿಂದ ಯುವತಿ ಮೊಬೈಲ್ ನಂಬರ್ ನ ಜಾಡು ಹಿಡಿದ ತನಿಖಾ ತಂಡವು ಯುವತಿಯನ್ನು ಹುಬ್ಬಳ್ಳಿಯ ವಿ.ಆರ್.ಎಲ್ ಬಸ್ ನಿಲ್ದಾಣದಲ್ಲಿ ಪತ್ತೆ ಹಚ್ಚಿರುತ್ತಾರೆ.
ಯುವತಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ತಾನು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮದ ವಾಸಿಯಾಗಿದ್ದು, ಪ್ರೌಢಶಾಲಾ ಶಿಕ್ಷಣವನ್ನು ಚನ್ನಗಿರಿಯ ನವಚೇತನ ಕ್ರಿಶ್ಚಿಯನ್ ಶಾಲೆಯಲ್ಲಿ ಮಾಡಿರತ್ತೇನೆ. ಎಸ್.ಎಸ್.ಎಲ್.ಸಿಯಲ್ಲಿ 95% ಅಂಕಗಳನ್ನು ಗಳಿಸಿರುತ್ತೇನೆ. ಆ ಸಮಯದಲ್ಲಿ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕ್ರಿಶ್ಚಿಯನ್ ಸನ್ಯಾಸಿನಿಗಳು ಸಮಾಜಕ್ಕೆ ನೀಡುತ್ತಿದ್ದ ಸೇವೆಯಿಂದ ಪ್ರಭಾವಿತರಾಗಿ ತಾನು ಕೂಡ ಅವರಂತೆ ಸೇವೆ ಮಾಡಬೇಕೆಂದು ನಿರ್ಧರಿಸಿದ್ದೆನು. ನಂತರ ಪಿ.ಯು.ಸಿ ವಿಧ್ಯಾಭ್ಯಾಸಕ್ಕಾಗಿ ಶಿವಮೊಗ್ಗದ ಆದಿಚುಂಚನಗಿರಿ ಪಿಯು ಕಾಲೇಜಿನಲ್ಲಿ ಸೇರಿಸಿದ್ದು, ಪಿಯುಸಿಯಲ್ಲಿ 90% ಅಂಕಗಳನ್ನು ಗಳಿಸಿರುತ್ತೇನೆ.
ಆ ಸಮಯದಲ್ಲಿ ಕೋವಿಡ್ ಸಮಸ್ಯೆ ಇದ್ದುದ್ದರಿಂದ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಸಿಗದ ಕಾರಣ ನನಗೆ ಶಿವಮೊಗ್ಗ ನಗರದ ನಂಜಪ್ಪ ಕಾಲೇಜಿನಲ್ಲಿ ಪಿಸಿಯೋ ಥೆರಪಿ ಕೋರ್ಸಗೆ ಸೇರಿರುತ್ತಾರೆ. ಈ ಸಮಯದಲ್ಲಿ ನಮ್ಮ ಕಾಲೇಜಿನಲ್ಲಿ ಓದುತ್ತಿದ್ದ ಕೇರಳದ ಕ್ರಿಶ್ಚಿಯನ್ ವಿಧ್ಯಾರ್ಥಿನಿಯವರೊಂದಿಗೆ ನನಗೆ ಪರಿಚಯವಾಗಿರುತ್ತದೆ.
ದಿನಾಂಕ:-14-05-2023 ರಂದು ಮುಂಬೈನ ಕ್ಯಾಥೋಲಿಕ್ ಚರ್ಚ್‌ಗೆ ಹೋಗಿ ಅಲ್ಲಿ ಕ್ರಿಶ್ಚಿಯನ್ ಸನ್ಯಾಸಿನಿಯಾಗಿ ಸೇರಿಕೊಂಡು ಸಮಾಜ ಸೇವೆ ಮಾಡುವ ಉದ್ದೇಶದಿಂದ, ಶಿವಮೊಗ್ಗದ ಜೆ.ಎನ್ ಸ್ಟಡಿ ಹೋಂ ನ ಹಾಸ್ಟೆಲ್ ನಿಂದ ಹೊರಟು ಶಿವಮೊಗ್ಗದಿಂದ ಮುಂಬೈಗೆ ಟಕೇಟ್ ಬುಕ್ಕಿಂಗ್ ಸಿಗದೇ ಇದ್ದುದ್ದರಿಂದ ತೀರ್ಥಹಳ್ಳಿಯಿಂದ ಶೃಂಗೇರಿ ಬೆಂಗಳೂರು ಹುಬ್ಬಳ್ಳಿಗೆ ಬಂದು ತಲುಪಿದೆನು. ಈ ಮಧ್ಯೆ ಮುಂಬೈನಲ್ಲಿ ನೆಲೆಸಲು ಹಣದ ಅವಶ್ಯಕತೆ ಇರುವುದರಿಂದ, ನಿಜ ಹೇಳಿದರೆ ತಂದೆಯವರು ಹಣ ನೀಡುವುದಿಲ್ಲ ಎಂದು ತಿಳಿದು ಸುಳ್ಳು ಕಥೆಯನ್ನು ಸೃಷ್ಟಿಮಾಡಿ ಅಪಹರಣ ಆಗಿರುವುದಾಗಿ ನಂಬಿಸಿ, 20,00,000/- ಒತ್ತೆ ಹಣಕ್ಕಾಗಿ ಬೇಡಿಕೆ ಇಡುವ ಮೆಸೇಜ್ ನ್ನು ತನ್ನದೆ ಮೊಬೈಲ್ ನಿಂದ ನಮ್ಮ ತಂದೆಯವರ ಮೊಬೈಲ್ ಗೆ ನಾನೆ ಕಳುಹಿಸಿದ್ದು, ಹುಬ್ಬಳ್ಳಿಯಲ್ಲಿ ವಿ.ಆರ್.ಎಲ್ ಬಸ್ ನಲ್ಲಿ ಮುಂಬೈಗೆ ಟಿಕೇಟ್ ಬುಕ್ ಮಾಡಿಕೊಂಡು ಬಸ್‌ಗಾಗಿ ಕಾಯುತ್ತಿದ್ದಾಗ ಪೊಲೀಸ್ ರವರು ಬಂದು ನನ್ನನ್ನು ವಶಕ್ಕೆ ಪಡೆದಿರುತ್ತಾರೆಂದು ತಿಳಿಸಿರುತ್ತಾಳೆ.
ಒಟ್ಟಿನಲ್ಲಿ ಹೇಳಬೇಕೆಂದರೆ ಮಕ್ಕಳನ್ನು ಕ್ರಿಶ್ಚಿಯನ್ ಶಾಲೆಗಳಲ್ಲಿ ಶಿಕ್ಷಣ ಕೊಡಿಸುವುದಕ್ಕೂ ತಂದೆ ತಾಯಿಗಳು ಯೋಚನೆ ಮಾಡಬೇಕೆಂಬುದು ಈ ಪ್ರಕರಣದಿಂದ ತಿಳಿಯುತ್ತದೆ. ಪೊಲೀಸರು ಈ ಪ್ರಕರಣವನ್ನು ಶೀಘ್ರದಲ್ಲಿ ಭೇದಿಸಿದ್ದರಿಂದ ಉವ ಪೋಹಗಳಿಗೆ ವಿರಾಮ ನೀಡಿದ್ದಾರೆ, ಆದ್ದರಿಂದ ಜಯನಗರ ಪೊಲೀಸ್ ನವರಿಗೆ ಒಂದು ಥ್ಯಾಂಕ್ಸ್.