Wednesday, September 25, 2024
spot_img

ಶಿವಮೊಗ್ಗ ಜಿಲ್ಲೆಯಲ್ಲಿ ಗೆದ್ದವರು ಯಾರು?

ಶಿವಮೊಗ್ಗ ಜಿಲ್ಲೆಯಲ್ಲಿ ಗೆದ್ದವರು ಯಾರು? ಸೋತವರು ಯಾರು? ಅಂತಿಮ ರಿಸಲ್ಟ್​ನಲ್ಲಿ ಇರುವ ಕುತೂಹಲದ ಅಂಶಗಳೇನು ???

ಗ್ರಾಮಾಂತರದಲ್ಲಿ ಶಾರದಾಪುರಯನಾಯಕ್ ವಿಜಯ

 

 

 

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಶಿವಮೊಗ್ಗ ಜಿಲ್ಲೆಯಲ್ಲಿ ಜೆಡಿಎಸ್​ನ ಗೌರವವನ್ನ ಕಾಪಾಡಿದೆ. ಮೂರು ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆಯಿಟ್ಟಿದ್ದ ಪಕ್ಷಕ್ಕೆ ಗ್ರಾಮಾಂತರದಲ್ಲಿ ಮಾತ್ರ ನಿರೀಕ್ಷಿತ ಗೆಲುವು ಸಿಕ್ಕಿದೆ. ಶಾಸಕರಾಗಿದ್ದ ಅಶೋಕ್ ನಾಯ್ಕ್​ರ ಅಭಿವೃದ್ಧಿಪರ ಮತದಾನ ವಾಗದದೇ ಶಾರದಾ ಪೂರ್ಯ ನಾಯ್ಕ್​ರ ಮೇಲಿದ್ದ ಅನುಕಂಪ ಮತ್ತು ಅಭಿಮಾನ ಮತಗಳಾಗಿ ಗೆಲುವು ತಂದುಕೊಟ್ಟಿದೆ. ಇಲ್ಲಿ ಶ್ರೀನಿವಾಸ್ ಕರಿಯಣ್ಣ
ಗ್ರಾಮಾಂತರ ಕ್ಷೇತ್ರದಲ್ಲಿ ಮತಯಾಚಿಸದಿರುವುದು ಶಾರದಾಪುರಯ ನಾಯಕ್ ಅವರಿಗೆ ಅನುಕೂಲವಾಗಿದೆ ಕಾರಣ ಏನು ?!?
ಹಲವಾರು ಬೂತುಗಳಲ್ಲಿ ಶ್ರೀನಿವಾಸ್ ಕರಿಯಣ್ಣನವರಿಗೆ ಮತ ಕೇಳದಿರುವುದರಿಂದ ಆ ಮತಗಳೆಲ್ಲ ಶಾರದಾಪುರಯು ನಾಯಕರಿಗೆ ಮತವಾಗಿ ಪರಿಗಣಿಸಿವೆ ಹಾಗಾಗಿ ಕೆ ಬಿ ಅಶೋಕ್ ನಾಯಕ್ ರವರ ಸೋಲು ಅನುಭವಿಸಲು ಪ್ರಮುಖ ಕಾರಣವಾಗಿದೆ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಶ್ರೀನಿವಾಸ್ ಕರಿಯಣ್ಣನವರ ಅವರ ರಾಜಕೀಯ ಭವಿಷ್ಯವು ಸಹ ಕಮರಿದಂತಾಗಿದೆ.

 

ಶಿಕಾರಿಪುರದಲ್ಲಿ ಸೋತು ಗೆದ್ದ ಬಂಡಾಯ

ವಿಶೇಷವಾಗಿ ಇಡೀ ರಾಜ್ಯದೆಲ್ಲೆಡೆ ಪ್ರವಾಸ ಮಾಡಿ ಬಿಜೆಪಿಗೆ ಗೆಲ್ಲಿಸುವ ಪ್ರಯತ್ನದಲ್ಲಿದ್ದ ಬಿ.ವೈ ವಿಜಯೇಂದ್ರ ನಿಜಕ್ಕೂ ಸ್ವತಂತ್ರ ಅಭ್ಯರ್ಥಿ ನಾಗರಾಜ್ ಗೌಡರ ಬಂಡಾಯ ಎದುರು ಪ್ರಯಾಸದ ಗೆಲುವು ದಾಖಲಿಸಿದ್ದಾರೆ. ಭಾರೀ ಬಹುಮತದ ಗೆಲುವು ನಿರೀಕ್ಷಿಸಿದ್ದ ಬಿಎಸ್​ವೈ ಕುಟುಂಬಕ್ಕೆ ಫಲಿತಾಂಶ ಗೆಲುವು ನೀಡಿದ್ದರು, ಅದರ ಸಂತೋಷವನ್ನು ಕಿತ್ತುಕೊಂಡಂತಿದೆ. ಇನ್ನೂ ನಾಗರಾಜ್​ ಗೌಡ, ಕಾಂಗ್ರೆಸ್​ ಪಕ್ಷದ ಅಭ್ಯರ್ಥಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದಷ್ಟೆ ಅಲ್ಲದೆ ತಮಗೆ ಟಿಕೆಟ್ ನೀಡದ ಕಾಂಗ್ರೆಸ್​ ಎದುರು, ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಅದೇ ರೀತಿಯಲ್ಲಿ ಎದುರಾಳಿ ಬಿಜೆಪಿಗೆ ಫೋಟೋ ಫಿನಿಶ್​ನ ಆತಂಕವನ್ನು ಮೂಡಿಸಿದ್ದರು.

 

ಸೊರಬದಲ್ಲಿ ಸೋದರ ವಿಜಯ

 

ಸೊರಬ ತಾಲ್ಲೂಕಿನಲ್ಲಿ ಕುಮಾರ ಬಂಗಾರಪ್ಪನವರ ವಿರುದ್ಧ ಅವರ ಸಹೋದರ ಮಧು ಬಂಗಾರಪ್ಪ ಗೆದ್ದಿದ್ದಾರೆ. 44258 ಮತಗಳಿಂದ ಕುಮಾರಬಂಗಾರಪ್ಪನವರನ್ನ ಸೋಲಿಸಿರುವ ಮಧು ಬಂಗಾರಪ್ಪ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗುವ ಸಾಧ್ಯತೆಗಳಿವೆ.

 

ಭದ್ರಾವತಿಯಲ್ಲಿ ಗೆದ್ದ ಸಂಗಮೇಶ್​!

 

ಇನ್ನೂ ಅತ್ತ ಭದ್ರಾವತಿಯಲ್ಲಿ ಜೆಡಿಎಸ್​ನ ಶಾರದಾ ಅಪ್ಪಾಜಿಗೆ, ಅನುಕಂಪದ ಅಲೆ ಇತ್ತು ಎನ್ನಲಾಗಿತ್ತು. ಆದಾಗ್ಯು ಬಿ.ಕೆ.ಸಂಗಮೇಶ್​ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿಯ ಮಂಗೋಟೆ ರುದ್ರೆಶ್ ಮೂರನೇ ಸ್ಥಾನದಲ್ಲಿದ್ದು ಉತ್ತಮ ಮತಗಳನ್ನು ಪಡೆಯುವಲ್ಲಷ್ಟೆ ಯಶಸ್ವಿಯಾಗಿದ್ದಾರೆ.

ತೀರ್ಥಹಳ್ಳಿಯಲ್ಲಿ ಕಡೆ ಆಟದಲ್ಲಿ ಗೆದ್ದ ಆರಗ, ಗೆಲುವಿಗೆ ನಿಲುಕದ ಜೋಡೆತ್ತು!

ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್​ ಒಳಮನೆಯ ಅಪಸ್ವರಗಳೆಲ್ಲಾ ಮುಗಿದು, ಅಂತಿಮವಾಗಿ ಸಂಧಾನ ಆಗಿ, ಜೋಡೆತ್ತುಗಳಾಗಿ ಎಲೆಕ್ಷನ್​ ನಡೆಸಿದ್ರು ಕಿಮ್ಮನೆ ರತ್ನಾಕರ್ ಹಾಗೂ ಆರ್​ಎಂ ಮಂಜುನಾಥ್ ಗೌಡ. ಆದರೆ ಇಬ್ಬರು ಶ್ರಮವಹಿಸಿದ್ದರಾದರೂ ಸಹ ಗೆಲುವಿನ ಹೊಸ್ತಿಲವರೆಗೂ ಬರಲು ಕಿಮ್ಮನೆಯವರಿಗೆ ಸಾಧ್ಯವಾಗಲಿಲ್ಲ. ಕಡೆಯ ಆಟದಲ್ಲಿ ಗೃಹಸಚಿವರಾಗಿದ್ದ ಆರಗ ಜ್ಞಾನೇಂದ್ರರವರು ಗೆಲುವಿನ ನಗೆ ಬೀರಿದ್ದಾರೆ.

ಸಾಗರ ಬೇಳೂರು ಗೆಲುವು ಹಾಲಪ್ಪ ಸೋಲು

ಮಾಜೆ ಗೆಳಯರ ಫೈಟ್​ನಲ್ಲಿ ಕೊನೆಗೆ ಬೇಳೂರು ಗೋಪಾಲಕೃಷ್ಣರಿಗೆ ಗೆಲುವು ಸಿಕ್ಕಿದೆ. ಪಕ್ಷಾಂತರ ಪರ್ವಗಳ ನಡುವೆ ಕಾಗೋಡು ತಿಮ್ಮಪ್ಪರ ಮಾರ್ಗದರ್ಶನದಲ್ಲಿಯೇ ಚುನಾವಣೆ ನಡೆಸಿದ ಬೇಳೂರು ಗೋಪಾಲಕೃಷ್ಣರಿಗೆ ಹಿರಿಯರ ಆಶೀರ್ವಾದ ಹಾಗೂ ಮಗಳು ಮೇಘರ ಪ್ರಚಾರ ಗೆಲುವು ತಂದುಕೊಟ್ಟಿದೆ. ಜನಪ್ರತಿನಿಧಿಯಾಗಲು ಕಾದಿದ್ದ ವನವಾಸ ಬೇಳೂರು ಗೋಪಾಲಕೃಷ್ಣರಿಗೆ ಅಂತ್ಯ ಕಂಡಿದ್ದು, ಗೆಲುವಿನ ಜೊತೆ ಜೊತೆಗೆ ಸರ್ಕಾರ ಸಹ ಅಸ್ತಿತ್ವಕ್ಕೆ ಬರುತ್ತಿರುವುದು ಸಚಿವಗಿರಿಯ ನಿರೀಕ್ಷೆ ಹುಟ್ಟಿಸಿದೆ.

ಶಿವಮೊಗ್ಗ ನಗರದಲ್ಲಿ ಗೆದ್ದ ಹಿಂದೂ ಕಾರ್ಯಕರ್ತ

ಶಿವಮೊಗ್ಗ ನಗರದಲ್ಲಿ ಮಾತಿನ ಚುನಾವಣೆ ನಡೆಯಲಿಲ್ಲ. ಆಯನೂರು ಮಂಜುನಾಥ್​ ಹೈಲೈಟ್​ ಆಗಿದ್ದು ಬಿಟ್ಟರೇ, ಅವರ ಇಮೇಜ್​ ಹಾಗೂ ಕೆಬಿ ಪ್ರಸನ್ನಕುಮಾರ್​ರವರ ಕೆಲಸ ಯಾವುದು ಸಹ ಮತ ಹಾಕಿಸುವಲ್ಲಿ ಯಶಸ್ವಿಯಾಗಿಲ್ಲ. ನಿರೀಕ್ಷಿತ ಮತಗಳನ್ನು ಸಹ ಅವರು ಪಡೆಯದಿರುವುದು ಅಚ್ಚರಿ ಮೂಡಿಸಿದೆ.

ವಿಶೇಷವಾಗಿ ಚೆನ್ನಬಸಪ್ಪ ತೆಗೆದುಕೊಂಡ ಲೀಡ್​ ಇನ್ನಷ್ಟು ಅಚ್ಚರಿ ಹುಟ್ಟಿಸುತ್ತಿದ್ದು, ಟ್ರೆಂಡ್​ ಸೆಟ್ ಮಾಡಿದೆ. ಪಕ್ಷದಲ್ಲಿ ಯಾರೆ ನಿಂತರೂ ದಿಗ್ವಿಜಯ ಸಾಧಿಸುತ್ತೇವೆ ಎಂಬುದನ್ನ ಬಿಜೆಪಿಯ ಹಿಂದೂ ಹಿಂದೂ ಕಾರ್ಯಕರ್ತರು ಯಶಸ್ವಿಯಾಗಿ ತೋರಿಸಿದ್ದಾರೆ.

ವಿಶೇಷ ಅಂದರೆ,ಶಿವಮೊಗ್ಗ ನಗರದಲ್ಲಿ ಉತ್ತಮ ಪ್ರಜಾಕೀಯ ಪಕ್ಷ ನಾಲ್ಕು ಅಂಕಿಯ ಮತಗಳನ್ನ ಪಡೆದಿದೆ. 2ಸಾವಿಕ್ಕೂ ಹೆಚ್ಚು ಮತ ಪಡೆದ ಇವರು ಶಿವಮೊಗ್ಗದಲ್ಲಿ ಆಮ್ ಆದ್ಮಿ ಪಕ್ಷವನ್ನು ಹಿಂದಿಕ್ಕಿದ್ದಾರೆ. ಇನ್ನೂ ಸಾವಿರಕ್ಕೂ ಅಧಿಕ ನೋಟಾ ಮತಗಳು ಜಾರಿಯಾಗಿದ್ದು ಕೂಡ ಮುಂದಿನ ದಿನದಲ್ಲಿ ಇನ್ನಷ್ಟು ಜಾಸ್ತಿ ಆಗುವ ಸಂಭವ ಗಮನಾರ್ಹವಾಗಿದೆ.

Related Articles

Stay Connected

0FansLike
3,912FollowersFollow
0SubscribersSubscribe

Latest Articles