ಮಂಜುನಾಥ್ ಪತ್ರಿಕಾಗೋಷ್ಠಿ

0
150

ಸಾತ್ವಿಕ ನುಡಿ, ಶಿವಮೊಗ್ಗ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯನೂರು ಮಂಜುನಾಥ್,
ಪ್ರಜಾಪ್ರಭುತ್ವದ ತೇರು ಎಳೆಯಲಾಗಿದೆ. ನಿನ್ನೆಯ ಉತ್ಸವ ಮುಗಿದಿದೆ. ನಿನ್ನೆಯ ಚುನಾವಣೆ ಶಾಂತಿಯುತವಾಗಿ ನಡೆದಿದೆ.‌ಇದಕ್ಕಾಗಿ ವ್ಯವಸ್ಥೆ ಮಾಡಿದ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಚುನಾವಣೆ ಆಯೋಗಕ್ಕೆ ಧನ್ಯವಾಗಳನ್ನ ತಿಳಿಸಿದರು.

ನಿನ್ನೆ ಶೇ.68.5 ರಷ್ಟು ಮತದಾನವಾಗಿದೆ ಪೋಸ್ಟಲ್ ಬ್ಯಾಲೆಟ್ ಮತ್ತು ಹಿರಿಯ ಮತದಾರರ ಮತದಾನ ಶೇಖಡವಾರು ಪರಿಗಣಿಸಿದರೆ 70% ಮುಟ್ಟಬಹುದು. ಶಾಂತಿ ಸೌಹಾರ್ಧತೆ ಮತ್ತು ಅಭಿವೃದ್ಶಿ ಈ ಅಂಶಗಳ ಮೇಲೆ ನಾನು ಚುನಾವಣೆ ಸ್ಪರ್ಧಿಸಿದ್ದೇನೆ, ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ಇಂತಹ ಯಾವ ಅಂಶದ ಮೇಲೂ ಚುನಾವಣೆ ಮಾಡಿಲ್ಲ ಎಂದರು.

ಕಾಂಗ್ರೆಸ್ ಸಹ ಜಾತಿ ಆಧಾರದ ಮೇಲೆ ಮತಯಾಚಿಸಿದೆ. ಮತಗಟ್ಟೆಗಳಲ್ಲಿ ಬಿಜೆಪಿ ಬಜರಂಗಿಯ ಫೋಟೋ ಇಟ್ಟುಕೊಂಡು ಇರುವ ದೃಶ್ಯಗಳು ಲಭ್ಯವಾಗಿದೆ. ಅಭಿವೃದ್ಧಿಯ ಮೇಲೆ ಮತಕೇಳಲಿಲ್ಲ. ನಾನು ಅಭಿವೃದ್ಧಿಯ ಬಗ್ಗೆ ಮತ ಕೇಳಿದ್ದೇನೆ. ಕಡಿಮೆ ಅವಧಿಯಲ್ಲಿ ಮತ ಕೇಳಿದ್ದೇವೆ. ನಿನ್ನೆ ಮತದಾನ ನೋಡಿದಾಗ ನಗರದ ಎಲ್ಲಾ ಜಾತಿ ಜನಾಂಗದವರು ನಮ್ಮನ್ನ ಬೆಂಬಲಿಸಿದ್ದಾರೆ ಎಂದರು.

ಜಾತಿ ಆಧಾರದ ಮೇಲೆ ಬಿಎಸ್ ವೈ ಮತ ಪಡೆಯಲು‌ಪತ್ರ ಬರೆದಿರುವುದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆಗಿದೆ. ಇದರ ಬಗ್ಗೆ ದೂರು ದಾಖಲಾಗಿದೆ ಎಂದು ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ವಿಷಾದ ವ್ಯಕ್ತ ಪಡಿಸಿದರು

32 ವಾರ್ಡ್ ಗಳಲ್ಲಿ 14 ವಾರ್ಡ್ ಅಲ್ಪಸಂಖ್ಯಾತ ಹೆಚ್ಚಿರುವ ವಾರ್ಡ್ ಆಗಿದೆ. 5-6 ವಾರ್ಡ್ ತ್ರಿಕೋನ ಸ್ಪರ್ಧೆ ಇದೆ, 12-13 ವಾರ್ಡ್ ಗಳಲ್ಲಿ ಬಿಜೆಪಿ vs ಜೆಡಿಎಸ್ ನಡುವೆ ಸ್ಪರ್ಧೆ ಇದೆ. 14 ವಾರ್ಡ್ ನಲ್ಲಿ ಬಿಜೆಪಿ ಇಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್, 12-13 ವಾರ್ಡ್ ನಲ್ಲಿ ಬಿಜೆಪಿ ಇದೆ. ಆದರೆ 32 ವಾರ್ಡ್ ಗಳಲ್ಲಿ ಜೆಡಿಎಸ್ ಮತ ಪಡೆಯುತ್ತಿದೆ. ಇಲ್ಲಿ ರಾಜಕೀಯ ಪಾರ್ಶ್ವವಾಯು ಹೊಡೆದಿದೆ ಎಂದರು.

ಕಾಂಗ್ರೆಸ್ ಮತ ಕಸಿದುಕೊಂಡಿದ್ದೇವೆ. ಅಧಿಕಾರಿಗಳು, ಆಟೋ ಚಾಲಕರು ನಮಗೆ ಮತ ಹಾಕಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ನಮಗೆ ಸಹಾಯ ಮಾಡಿದ್ದಾರೆ. ಗೆಲ್ಲುವ ಸಾಧ್ಯತೆ ನಮಗೆ ಹೆಚ್ಚಿದೆ. ಈ ಬಾರಿ ಜೆಡಿಎಸ್ ಇತಿಹಾಸ ಸೃಷ್ಠಿಸಲಿದೆ ಎಂದರು.

ಸರ್ವೆಯಲ್ಲಿ ಕಾಂಗ್ರೆಸ್ ಮುನ್ಬಡೆ ಇದೆ ಎಂದು ಟಿವಿಯಲ್ಲಿ ಬರ್ತಾ ಇದೆ. ಆದರೆ ಕುಮಾರ ಸ್ವಾಮಿಯವರು ಜೆಡಿಎಸ್ 60 ಸ್ಥಾನ ಬರಲಿದೆ ಎಂದು ಹೇಳಿದ್ದಾರೆ. ಯಾವ ಪಕ್ಷಕ್ಕೂ ಬಹುನತವಿಲ್ಲ. ಅತಂತ್ರ ವಿಧಾನ ಸಭೆ ಪಕ್ಕವೆಂದರು.
ಈ ಸಲ ಜೆಡಿಎಸ್ ಪರವಾಗಿ ನೌಕರ ವೃಂದದವರು
ಒಕ್ಕಲಿಗ ಬ್ರಾಹ್ಮಣ ಅಲ್ಪಸಂಖ್ಯಾತರು ಜೆಡಿಎಸ್ ಪರವಾಗಿ ಅತಿ ಹೆಚ್ಚು ಮತವನ್ನು ನೀಡಿದ್ದಾರೆ.
ಕೆಬಿ ಪ್ರಸನ್ನ ಕುಮಾರ್ ಅವರು ಮಾತನಾಡಿ bjp
ಕಾಂಗ್ರೆಸ್ನವರು ನಗರದಲ್ಲಿ ಹಣದ ಹೊಳೆಯನೇ
ಹರಸಿ ಚುನಾವಣೆ ಮಾಡಿದ್ದಾರೆ ಎಂದು ದೂರಿದರು
ಜೆಡಿಎಸ್ ಜಿಲ್ಲಾ ಅಧ್ಯಕ್ಷರಾದ ಶ್ರೀಕಾಂತ್ ರವರು ಮಾತನಾಡಿ ಜಿಲ್ಲೆಯಲ್ಲಿ ಜೆಡಿಎಸ್ ಮೂರು ಸಿಟ್ ಬರುವುದು ಖಚಿತ ಎಂದರು ಕೊನೆಯಲ್ಲಿ ಜೆಡಿಎಸ್ ಕಾರ್ಯಕರ್ತರಿಗೂ ಹಾಗೂ ಮಾಧ್ಯಮದ ಧನ್ಯವಾದಗಳು ತಿಳಿಸಿದರು

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಶ್ರೀಕಾಂತ್, ಮಾಜಿ ಶಾಸಕ ಪ್ರಸನ್ನ ಕುಮಾರ್, ಐಡಿಯಲ್ ಗೋಪಿ, ದೀಪಕ್ ಸಿಂಗ್, ಸತ್ಯನಾರಾಯಣ, ರಘುನಾಥ್ ಮೊದಲಾದವರು ಉಪಸ್ಥಿತರಿದ್ದರು‌.