ಮೂರೂ ಪಕ್ಷದ ಅಭ್ಯರ್ಥಿಗಳಿಂದ ರೋಡ್ ಶೋ…..

0
114

ಶಿವಮೊಗ್ಗ: ವಿಧಾನಸಭಾ ಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ಕಡೆಯ ದಿನವಾದ ಇಂದು ಮೂರೂ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ತಮ್ಮ ಶಕ್ತಿ ಪ್ರದರ್ಶನ ನಡೆಸಿದರು.
ವಿವಿಧೆಡೆ ಪಾದಯಾತ್ರೆ, ರೋಡ್ ಶೋ, ಬೈಕ್ ರ್ಯಾಲಿಗಳನ್ನು ನಡೆಸುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ.

ಮೆಗಾ ರೋಡ್ ಶೋ ನಡೆಸಿದ ಆಯನೂರು ಮಂಜುನಾಥ್:
ಜೆಡಿಎಸ್ ಅಭ್ಯರ್ಥಿ ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ಬೈಕ್ ಹಾಗೂ ಆಟೋಗಳ ಮೆಗಾ ರೋಡ್ ಶೋ ನಡೆಸುವ ಮೂಲಕ ಗಮನ ಸೆಳೆದರು.
ಎಂ.ಆರ್.ಎಸ್. ವೃತ್ತದಿಂದ ಆರಂಭವಾದ ಜೆಡಿಎಸ್‍ನ ಮೆಗಾ ರೋಡ್ ಶೋ ವಿನೋಬನಗರದ ಪೆÇಲೀಸ್ ಚೌಕಿಯಲ್ಲಿ ಕೊನೆಗೊಂಡಿತು.

ತೆರೆದ ವಾಹದಲ್ಲಿದ್ದ ಆಯನೂರು ಮಂಜುನಾಥ್‍ಗೆ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್, ಹಿರಣ್ಣಯ್ಯ, ಮೋಹನ್, ಆಯನೂರು ಸಂತೋಷ್ ಸೇರಿದಂತೆ ಪಕ್ಷದ ಮುಖಂಡರು ಸಾಥ್ ನೀಡಿದರು.
ಬಿಜೆಪಿಯಿಂದ ರೋಡ್‍ಶೋ:
ಬಿಜೆಪಿ ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪ ಪಕ್ಷದ ಮುಖಂಡರೊಂದಿಗೆ ರಾಮಣ್ಣಶ್ರೇಷ್ಠಿ ಪಾಕ್‍ನಿಂದ ಲಕ್ಷ್ಮೀ ಟಾಕೀಸ್ ವರೆಗೆ ಪ್ರಮುಖ ಮಾರ್ಗಗಳಲ್ಲಿ ರೋಡ್ ಶೋ ನಡೆಸಿದರು.

ಈ ಸಂದರ್ಭದಲ್ಲಿ ವಿವಿಧ ಕಲಾತಂಡಗಳೊಂದಿಗೆ ನೂರಾರು ಮಹಿಳೆಯರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ, ಡಿ.ಎಸ್. ಅರುಣ್, ಮಾಜಿ ಜಿ.ಪಂ. ಸದಸ್ಯ ಕೆ.ಈ. ಕಾಂತೇಶ್, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಮುಖಂಡರು ಸಾಥ್ ನೀಡಿ ಮತ ಯಾಚಿಸಿದರು.

ಕಾಂಗ್ರೆಸ್‍ನಿಂದ ಪಾದಯಾತ್ರೆ:
ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ. ಯೋಗೀಶ್ ನಗರದ ಹಲವೆಡೆ ಪಾದಯಾತ್ರೆ ನಡೆಸುವ ಮೂಲಕ ಮತದಾರರನ್ನು ಸೆಳೆದರು.
ಬೆಳಿಗ್ಗೆ ಬೊಮ್ಮನಕಟ್ಟೆಯಿಂದ ಆರಂಭವಾದ ಅವರ ಪಾದಯಾತ್ರೆ ಸಂಜೆ ಎಲ್‍ಬಿಎಸ್ ನಗರ-ಕೃಷಿ ನಗರದಲ್ಲಿ ಕೊನೆಗೊಂಡಿತು. ಸುಮಾರು 30 ಕಿ.ಮೀ.ಗೂ ಅಧಿಕ ಪಾದಯಾತ್ರೆ ಮೂಲಕ ಮತ ಯಾಚಿಸಿದರು.

ಈ ಸಂದರ್ಭದಲ್ಲಿ ಅವರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಪ್ರಮುಖರಾದ ಇಸ್ಮಾಯಿಲ್ ಖಾನ್, ಯಮುನಾರಂಗೇಗೌಡ, ರೇಖಾ ರಂಗನಾಥ್, ಎಸ್. ಗಿರೀಶ್, ಚಿನ್ನಪ್ಪ, ಸೌಗಂಧಿಕಾ ರಘುನಾಥ್ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು ಸಾಥ್ ನೀಡಿದ್ದರು.

ಒಟ್ಟಾರೆ ಬಹಿರಂಗ ಪ್ರಚಾರಕ್ಕೆ ಕಡೆಯ ದಿನವಾದ ಇಂದು ಮೂರೂ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಮತದಾರರ ಮನಗೆಲ್ಲಲು ಕಸರತ್ತು ನಡೆಸಿದ್ದು ಕಂಡುಬಂತು.