ಶಿವಮೊಗ್ಗದ ಹೆಮ್ಮೆ: UPSC ರ‍್ಯಾಂಕ್ ಪಡೆದ ಮೇಘನ ಅವರಿಗೆ ಮಾಜಿ ಶಾಸಕ ಎಸ್. ರುದ್ರೇಗೌಡರಿಂದ ಅಭಿನಂದನೆ
ಯುಪಿಎಸ್ ಪರೀಕ್ಷೆಯಲ್ಲಿ 421
ಪಡೆಯುವ ಮೂಲಕ ಶಿವಮೊಗ್ಗ ನಗರಕ್ಕೆ ಕೀರ್ತಿ ತಂದ ಬಸವೇಶ್ವರ ನಗರದ ನಿವಾಸಿ ವಕೀಲ ಡಿ.ಜಿ.ಮೋಹನ್ ಕುಮಾರ್ ಮತ್ತು ನಿವೃತ್ತ ಪ್ರಾಧ್ಯಾಪಕಿ ಎ.ಎಸ್.ವತ್ಸಲಾ ಅವರ ಪುತ್ರಿ ಕುಮಾರಿ ಬಿ.ಎಂ.ಮೇಘನಾ ಅವರಿಗೆ ಹಾರ್ದಿಕ ಅಭಿನಂದನೆ ಸಲ್ಲಿಸಿದ ವಿಧಾನ ಪರಿಷತ್ ಸದಸ್ಯರಾದ ಶ್ರೀಎಸ್.ರುದ್ರೇಗೌಡರು ಮೇಫನಾ ಅವರ ಮನೆಗೆ ಭೇಟಿ ನೀಡಿ ಹಾರ ಹಾಕಿ, ಅಭಿನಂದಿಸಿ, ಆಶೀರ್ವಾದಿಸಿದರು.
ಈ ಸಂದರ್ಭದಲ್ಲಿ ನರೇಂದ್ರ ಮೋದಿ ವಿಚಾರ ಮಂಚ್ ರಾಷ್ಟೀಯ ಉಪಾಧ್ಯಕ್ಷರಾದ ಶ್ರೀ ಬಳ್ಳೇಕೆರೆ ಸಂತೋಷ್ ಹಾಗೂ ಶಿವಾಲಯ ದೇವಸ್ಥಾನ ಸಮಿತಿಯ ಸದಸ್ಯರು ಮತ್ತು ಹಲವು ಸ್ಥಳೀಯರು ಉಪಸ್ಥಿತರಿದ್ದು, ಮೇಫನಾ ಅವರ ಸಾಧನೆಗೆ ಶ್ಲಾಘನೆ ಸಲ್ಲಿಸಿದರು. ಯುವಪೀಳಿಗೆಗೆ ಪ್ರೇರಣೆಯಾದ ಮೇಫನಾ ಅವರ ಈ ಯಶಸ್ಸು ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ದಿಕ್ಸೂಚಿಯಾಗಿ ಹೊರಹೊಮ್ಮಿದ್ದಾರೆ.