Terrorist attack ನಡೆಸಿದ್ದು, ಶಿವಮೊಗ್ಗದ ಮಂಜುನಾಥ್ ಸಾವು.!?

0
271

  ಹೊಟೇಲ್‌ವೊಂದರ ಮೇಲೆ ಉಗ್ರರು Terrorist attack ನಡೆಸಿದ್ದು, ಶಿವಮೊಗ್ಗದ ಮಂಜುನಾಥ್ ಎಂಬ ವ್ಯಕ್ತಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಜಮ್ಮು ಕಾಶ್ಮೀರದ #Jammu Kashmira ಪ್ರವಾಸಕ್ಕೆಂದು ಶಿವಮೊಗ್ಗದ ಕುಟುಂಬವೊಂದು ತೆರಳಿತ್ತು. ಪಹಲ್‌ಗ್ರಾಮ್‌ನ ಹೊಟೆಲ್‌ವೊಂದರಲ್ಲಿ ಈ ಕುಟುಂಬ ಕುಳಿತಿದ್ದ ವೇಳೆ ಉಗ್ರರು ಗುಂಡಿನ ಸುರಿಮಳೆಗೈದಿದ್ದಾರೆ. ಪರಿಣಾಮವಾಗಿ ಶಿವಮೊಗ್ಗದ ವಿಜಯನಗರ ನಿವಾಸಿ ಮಂಜುನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸ್ಥಳೀಯ ರ ಮಾಹಿತಿ ಪ್ರಕಾರ ಮಂಜುನಾಥ್    ರಿಯಲ್‌ಎಸ್ಟೇಟ್ ಉದ್ಯಮಿ ಎಂದು ಹೇಳಲಾಗಿದೆ. ಪತ್ನಿ ಎದುರೇ ಮಂಜುನಾಥ್ ರಕ್ತದ ಮಡುವಿನಲ್ಲಿ ನರಳಿ ಪ್ರಾಣಬಿಟ್ಟಿದ್ದಾರೆ. ಮಂಜುನಾಥ್ ಪತ್ನಿ ಪಲ್ಲವಿ ಹಾಗೂ  ಮಗ ಸುರಕ್ಷಿತವಾಗಿದ್ದು, ಘಟನೆಯಲ್ಲಿ ಅಭಿಜ್ಞಾರಾವ್‌ ಎನ್ನುವವರಿಗೆ ಗಾಯಗಳಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ವರದಿಯಾಗಿದೆ.

ಕಣಿವೆ ರಾಜ್ಯದಲ್ಲಿ ಉಗ್ರರು ಮತ್ತೆ ಬಾಲಬಿಚ್ಚಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಹಾಗೂ ಗೃಹಸಚಿವ ಅಮಿತ್ ಶಾ ಅವರಿಗೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದಾರೆ.