ಶಿವಮೊಗ್ಗ ಜೈಲ್ ಸರ್ಕಲ್ ಸಿಗ್ನಲ್ ನ ಕಥೆ ವ್ಯಥೆ ಏನು..!?

0
104
Oplus_131072

ಅಂಬೇಡ್ಕರ್ ವೃತ್ತದಲ್ಲಿ ಸಿಗ್ನಲ್ ಲೈಟ್ ಮೇಲೆ ಮರದ ಕೊಂಬೆ – ಸಾರ್ವಜನಿಕರ ಆತಂಕ ಮುಡುಸುತ್ತಿರವ ವ್ಯವಸ್ಥೆ 

ಶಿವಮೊಗ್ಗ ನಗರದ ಹೃದಯಭಾಗದಲ್ಲಿರುವ ಅಂಬೇಡ್ಕರ್ ವೃತ್ತ, ಜನಪ್ರಿಯವಾಗಿ ಜೈಲ್ ಸರ್ಕಲ್ ಎಂಬ ಹೆಸರಿನಿಂದ ಖ್ಯಾತವಾಗಿದೆ. ಈ ವೃತ್ತವು ಬಹುಪಾಲು ಪ್ರಮುಖ ರಸ್ತೆಗಳ ಸೇರ್ಪಡೆಯಾಗಿದೆ. ಲಕ್ಷ್ಮೀಟಾಕೀಸ್ ಕಡೆಯಿಂದ ದುರ್ಗಿಗುಡಿ ಕಡೆಗೆ ಹೋಗುವ ದಾರಿಯಲ್ಲಿರುವ ವಾಹನ ಸವಾರರು ಸಿಗ್ನಲ್ ಲೈಟ್ ಬಳಿ ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಕಾರಣ – ಸಿಗ್ನಲ್ ಲೈಟ್‌ಗೆ ಅಡ್ಡವಾಗಿ ಮರದ ಒಂದು ಕೊಂಬೆ ಬೇಳದಿದ್ದು, ಚಾಲಕರಿಗೆ ಸಿಗ್ನಲ್ ಲೈಟ್ ಕಾಣಿಸದೇ ಹೋಗುತ್ತಿದೆ.

ಈ ಸ್ಥಿತಿಯಲ್ಲಿ ಸಿಗ್ನಲ್ ಬೆಳಕನ್ನು ಕಾಣದೆ ನಿರ್ದಿಷ್ಟ ಗಮನೆ ಇಲ್ಲದೆ ಸಾಗುವ ವಾಹನ ಸವಾರರಿಗೆ ಇದೊಂದು ಅಪಾಯದ ಸೂಚನೆಯಾಗಿದೆ. ಸಿಗ್ನಲ್ ಬೆಳಕು “ಯುಗಾದಿ ಹಬ್ಬದಲ್ಲಿ ಕಾಣುವ ಚಂದ್ರನಂತೆ” ಎಂದು ಸಾರ್ವಜನಿಕರು ವ್ಯಂಗ್ಯವಾಗಿ ಹೇಳಿಕೊಳ್ಳುತ್ತಿರುವುದು ಅವರ ಅಸಹನೆಗೆ ಸಾಕ್ಷಿಯಾಗಿದೆ. ನಿತ್ಯವೂ ಸಾವಿರಾರು ವಾಹನಗಳು ಈ ಮಾರ್ಗದಿಂದ ಸಾಗುತ್ತಿದ್ದು, ಯಾವುದೇ ಸಮಯದಲ್ಲಾದರೂ ಅಪಘಾತ ಸಂಭವಿಸಬಹುದಾದ ಭೀತಿಯೊಂದಿಗೆ ಜನರು ದಿನ ಕಳೆಯುತ್ತಿದ್ದಾರೆ.

ಸಾಮಾನ್ಯವಾಗಿ, ಇಂತಹ ಸಂದರ್ಭಗಳಲ್ಲಿ ಟ್ರಾಫಿಕ್ ಇಲಾಖೆಯು ಶೀಘ್ರ ಕ್ರಮವಹಿಸಿ ಸಾರ್ವಜನಿಕರ ಸುರಕ್ಷತೆಯ ಕಡೆ ಗಮನ ಹರಿಸಬೇಕಾದ್ದು ಅತ್ಯಾವಶ್ಯಕ. ಆದರೆ ಇಲ್ಲಿ ಸ್ವಲ್ಪವೂ ತಕ್ಷಣದ ಕ್ರಮ ಕಾಣಿಸದೇ, ಸಂಬಂಧಿತ ಇಲಾಖೆಗಳ ನಿರ್ಲಕ್ಷ್ಯವು ಜನರ ನಿಶ್ಚಲತೆಯ ಕಾರಣವಾಗಿದೆ.
ಸಂಚಾರಿ ಠಾಣೆಯ ವೃತ್ತ ನಿರೀಕ್ಷಕರು ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಈ ಸಮಸ್ಯೆಯ ಬಗ್ಗೆ ತಾನು ಕೇಳಿಲ್ಲ ಎನ್ನುವಂತೆ ಕಿವಿಗೊಡದೆ ಕೆಲಸ ಮಾಡುತ್ತಿರುವುದು ಕಂಡುಬರುತ್ತದೆ.

ಇತ್ತ, ಟ್ರಾಫಿಕ್ ಪೊಲೀಸರು ಅಥವಾ ಸಂಚಾರಿ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಂದ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ದಂಡ ವಸೂಲಿಯಲ್ಲಿ ಮಾತ್ರ ತಲ್ಲೀನರಾಗಿದ್ದು, ಸಾರ್ವಜನಿಕ ಸುರಕ್ಷತೆ, ಮಾರ್ಗದ ವೀಕ್ಷಣೆ ಮತ್ತು ನಿರ್ವಹಣೆಯಂತಹ ಮೂಲಭೂತ ಕರ್ತವ್ಯಗಳ ಕಡೆ ಗಮನ ಹರಿಸದೆ  ಇರುವುದು ವಿಪರ್ಯಸವೆ ಸರಿ.
ಶಿವಮೊಗ್ಗದ ಸಾರ್ವಜನಿಕರು ಚರ್ಚೆಮಾಡುತ್ತಿರುವಂತೆ, “ನಿಯಮ ಉಲ್ಲಂಘನೆಗೆ ದಂಡ ವಿಧಿಸುವ ಮೊದಲು, ನಿಯಮಾನುಸಾರ ಸಾರ್ವಜನಿಕರಿಗೆ ಅನುವು ಮಾಡಿಕೊಡುವುದು ಹೆಚ್ಚು ಮುಖ್ಯ.”

ಅಂಬೇಡ್ಕರ್ ವೃತ್ತದ ಸುತ್ತಲಿನ ಪರಿಸರವು ಜನಸಂದಣಿ, ಶಾಲಾ-ಕಾಲೇಜುಗಳು, ಆಸ್ಪತ್ರೆಗಳು, ವ್ಯಾಪಾರ ಕೇಂದ್ರಗಳು ಹೀಗೆ ಹಲವಾರು ಸಾರ್ವಜನಿಕ ಉದ್ದೇಶಗಳ ತಾಣವಾಗಿದೆ. ಇಂತಹ ಪ್ರದೇಶಗಳಲ್ಲಿ ಸಂಚಾರ ಕಳಪೆಗೊಂಡರೆ, ಅದರ ಪರಿಣಾಮ ತೀವ್ರವಾಗಿರುತ್ತದೆ. ಕೇವಲ ಒಂದು ಮರದ ಕೊಂಬೆ ಕತ್ತರಿಸದೇ ಇರೋದು ಯಾರಾದರೂ ಅಪಾಯಕ್ಕೀಡಾಗೋ ಪರಿಸ್ಥಿತಿ ನಿರ್ಮಾಣ ಮಾಡಬಹುದು.

ಇದೊಂದು ಪ್ರಶ್ನೆ ಎತ್ತುತ್ತಿದೆ – ಸಾರ್ವಜನಿಕರ ಪರವಾಗಿ ಕಾರ್ಯನಿರ್ವಹಿಸಬೇಕಾದ ಸಂಸ್ಥೆಗಳು ತಮ್ಮ ಕರ್ತವ್ಯ ಪಾಲನೆ ಮಾಡುತ್ತಿವೆಯೆ?
ಪಾಲಿಕೆ ಆಯುಕ್ತರು, ನಗರ ಯೋಜನಾ ಅಧಿಕಾರಿಗಳು ಈ ರೀತಿಯ ಸುಲಭವಾಗಿ ಬಗೆಹರಿಸಬಹುದಾದ ಸಮಸ್ಯೆಗೂ ಪ್ರಾಮುಖ್ಯತೆ ನೀಡದೆ ಇರುವುದು ಅವರ ನಿರ್ಲಕ್ಷ್ಯತೆ ಅಲ್ವವೇ ಮತ್ತಿಇನ್ನೆನು?

ಸರ್ವಸಾಮಾನ್ಯ ನಾಗರಿಕನಿಗೆ, ನಗರವನ್ನು ಸುರಕ್ಷಿತವಾಗಿ ತಲುಪುವುದು ಅತೀ ಮುಖ್ಯ. ದೂರು ನೀಡುವ ವ್ಯವಸ್ಥೆ ಇದ್ದರೂ ಅದಕ್ಕೆ ಸ್ಪಂದನೆ ಬರದಿದ್ದರೆ, ಸಾರ್ವಜನಿಕರಲ್ಲಿ ವಿಶ್ವಾಸ ಕುಸಿಯುವುದು ಸಹಜ. ಅಂತಹ ಸಂದರ್ಭದಲ್ಲಿಯೇ ಪತ್ರಿಕೆಗಳಲ್ಲಿ ಜನರ ಅಸಹನೆ ಹರಿದುಬರುತ್ತದೆ. ಆದರೆ ತಕ್ಷಣ ಕ್ರಮವೇನೂ ಜರುಗದೆ ದಂಡ ವಸೂಲಿ ಮಾತ್ರ ನಡೆಯುತ್ತಿದೆ ಎನ್ನುತ್ತಾರೆ ಜನ ಸಮನ್ಯರು.

ಸಾರ್ವಜನಿಕರ ಆಗ್ರಹ ಏನೆಂದರೆ, “ಇಂತಹ ತೊಂದರೆಗಳನ್ನು ತಕ್ಷಣ ಗಮನಿಸಿ, ಸರಿ ಮಾಡಲು ಕ್ರಮ ಕೈಗೊಳ್ಳಬೇಕಾಗಿದೆ. ಮರದ ಕೊಂಬೆ ತೆಗೆದುಹಾಕಿ, ಸಿಗ್ನಲ್ ಲೈಟ್ ಕಾಣುವಂತೆ ಮಾಡಿ ವಾಹನ ಸಂಚಾರಿ ಸುರಕ್ಷತೆಗೆ ಗಮನ ಹರಿಸಬೇಕು.” ಇದು ಕೇವಲ ಒಂದು ಪ್ರದೇಶದ ಸಮಸ್ಯೆಯಲ್ಲ, ಇಂಥ ಅಪಾರದೃಷ್ಟಿಯಿಂದ ನಿರ್ವಹಣೆಯ ಕೊರತೆಯು ನಗರವ್ಯಾಪ್ತಿಯ ಸಮಸ್ಯೆಯಾಗಬಲ್ಲದು.

ನಗರದ ಅಭಿವೃದ್ದಿಗೆ ಪಾಲಿಕೆಗಳು, ಸಂಚಾರಿ ಠಾಣೆಗಳು, ಸಾರ್ವಜನಿಕ ಇಲಾಖೆಗಳು ಒಂದಾಗಿ ಕಾರ್ಯನಿರ್ವಹಿಸಬೇಕಾಗಿರುವುದು ಅತ್ಯಗತ್ಯ. ಈಗಿನ ಸಮಸ್ಯೆಗೆ ಕಣ್ಣುಮುಚ್ಚುವ ನೀತಿಯೆಂದರೆ, ಅದು ನಾಳೆಯ ವಿಪತ್ತಿಗೆ ಆಹ್ವಾನವೊಡ್ಡಿದಂತಾಗುತ್ತದೆ.

ಇದಲ್ಲದೆ, ಸಾರ್ವಜನಿಕರ ನಿರಂತರ ಒತ್ತಡವೇ ಅಧಿಕಾರಿಗಳನ್ನು ಗಮನೆಹರಿಸಲು ಮಾಡಬೇಕಾದ ಪ್ರಮುಖ ಕಾರಣವಾಗಬಾರದು. ಸ್ವಯಂಪ್ರೇರಿತ, ಜವಾಬ್ದಾರಿಯುತ ಆಡಳಿತ ವ್ಯವಸ್ಥೆ, ನಗರಾಭಿವೃದ್ಧಿಗೆ ಮೂಲಸ್ತಂಭವಾಗಬೇಕು. ಈಗಿರುವ ಉದಾಹರಣೆಗಳು, ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಸ್ಥಿತಿಗೆ ಧೃತಿಗೆಟ್ಟುದಾಗಿದೆಶಿವಮೊಗ್ಗ ದಲ್ಲಿ ಸಾರ್ವಜನಿಕರ ಹಿತಾಸಕ್ತಿ ಬಗ್ಗೆ ಕಿಂಚಿತ್ತೂ ಗಮನ ಹರಿಸಿದ ಸಾಂಚಾರಿ ಠಾಣೆ ಪೋಲಿಸ್  ರವರು ಸಾರ್ವಜನಿಕರಿಂದ ಸಂಚಾರ ನಿಯಮ ಉಲ್ಲಂಘಿಸುವ ದಂಡ ವಸೂಲಿಯಲ್ಲಿ ತಲ್ಲಿನರಾಗಿರುವ ಅಧಿಕಾರಿಗಳು ಇತ್ತಕಡೆ ಸ್ವಲ್ಪ ಗಮನ ವಹಿಸಿ ಎಂದು ಸಾರ್ವಜನಿಕರ ಆಗ್ರಹವಾಗಿದೆ.