ಶಾಲೆಯಲ್ಲಿ ವಿಶಿಷ್ಟ ಗುರುವಂದನೆ ಕಾರ್ಯಕ್ರಮ!

0
121

 

ಬಾಲ್ಯದಲ್ಲಿ ಆಟ-ಪಾಠದ ಜೊತೆಗೆ ತುಂಟಾಟ ಮಾಡಿದವರೆಲ್ಲಾ ಬರೋಬ್ಬರಿ 25 ವರ್ಷಗಳ ಬಳಿಕ ಹಾಗೂ ಇನ್ನೂ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿದ್ದರು. ಕಲಿಸಿದ ಗುರುಗಳ ಕಂಡು ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ಸಂತೋಷ. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಶಿವಮೊಗ್ಗ ತಾಲ್ಲೂಕಿನ ಯರೇಕೋಪ್ಪ,ಹೊಸುರು,ಎರೇಕೊಪ್ಪ ತಾಂಡದಲ್ಲಿ,

ಯರೇಕೊಪ್ಪ  ಸರ್ಕಾರಿ ಕನ್ನಡ  ಪ್ರಾಥಮಿಕ ಶಾಲೆ ಶಾಲೆಯಲ್ಲಿ, 2000ನೇ ಇಸವಿಯಲ್ಲಿ ಶಾಲೆಗೆ ಅಗಮಿಸಿದ ವೇದಾ ಟಿಚರ್ ಈದರೋಂದಿಗೆ 25 ವರುಷ ಪೂರೈಸಿದ  ಹರುಷ  ಅದರೋಟ್ಟಿಗೆ   ಇಡಿ ಹಳ್ಳಿಯಲ್ಲಿ ಖ್ಯಾತಿಯಾಗಿರುವ ನಮ್ಮ ಸಂಪತ್ ಮಾಸ್ಟರ್  ಇವರಿಬ್ಬರ ಜಿಗಲ್ ಬಂದಿಯ ನಡುವೆ ಶಾಲೆಯಲ್ಲಿ ಓದಿರುವ ಮಕ್ಕಳು ಸರ್ಕಾರಿ ಕೆಲಸ ಪಡಿಯುವಲ್ಲಿ ಯಶಸ್ವಿಯಾಗಿರುವುದು ಹಳ್ಳಿಯ ಹೆಮ್ಮೆಯ ಸಂಗತಿ ಅವರೆಲ್ಲರ ಇಚ್ಚೆಯಂತೆ ಕಲಿತ ವಿದ್ಯಾರ್ಥಿಗಳು ಗುರುವಂದನೆ  ಕಾರ್ಯಕ್ರಮ ಆಯೋಜಿಸಿದ್ದರು.

ಸುಮಾರು 25 ವರ್ಷಗಳ ಬಳಿಕ ಹೀಗೆ ಗುರು-ಶಿಷ್ಯರು ಒಂದು ಕಡೆ ಸೇರಿ ಹಳೆಯ ದಿನಗಳನ್ನು ಮೆಲುಕು ಹಾಕಿದರು. ಅಲ್ಲದೇ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಸಂತಸಪಟ್ಟರು.

ತಮ್ಮ ಶಾಲಾ ದಿನಗಳನ್ನು ನೆನೆದು ಅನೇಕ ಹಳೆಯ ವಿದ್ಯಾರ್ಥಿಗಳು ತಮ್ಮ ಭಾವನೆಗಳನ್ನು ಶಾಲೆಯ ಕುರಿತಾದ  ಹಳೆಯ ನೆನಪುಗಳನ್ನು ಶಿಕ್ಷಕರು ವಿದ್ಯಾರ್ಥಿಗಳು ಮೆಲುಕು ಹಾಕಿದರು.

 

ಶಾಲೆಯ ಹಳೆಯ ವಿದ್ಯಾರ್ಥಿನಿಯಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳಾದ ರತ್ನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ನಮ್ಮ ಹಳ್ಳಿಯಲ್ಲಿ ಜನಸಂಖ್ಯೆ ಕಡಿಮೆಯಿದ್ದು ಕಲಿಯುವ ಮಕ್ಕಳ ಸಂಖ್ಯೆ ಯು ಕಡಿಮೆಯಿದೆ ಹಳ್ಳಿ ಉದ್ದಾರ ವಾಗಬೆಕು ಎಂದರೆ ಶಿಕ್ಷಣ ಮುಖ್ಯ ವಾಗುತ್ತದೆ ಎಂದರು, ಮಹಿಳೆಯರಿಗೆ ಸಮಾನತೆ ನೀಡಬೇಕು
ಮಹಿಳೆಯರಿಗೆ ಜಿಲ್ಲಾ ಪಂಚಾಯತ ತಾಲ್ಲೂಕು ಪಂಚಾಯತನಲ್ಲಿ 40% ಮೀಸಲಾತಿ ಸಿಗುವಂತ ಆಗಬೇಕು ನಮ್ಮ ಹಳ್ಳಿಯಲ್ಲಿ ಮಹಿಳೆಯರು ತುಂಬಾ ಹಿಂದೆ ಉಳಿದಿದ್ದಾರೆ ಅನ್ನಿಸುತ್ತದೆ.
ನನ್ನ ಶಿಕ್ಷಣ ಕ್ಕೆ ನಮ್ಮ ಮನೆಯವರು ತುಂಬಾ ಸಹಕಾರ ನೀಡುರುವದನ್ನ ನೇನಪು ಮಾಡಿಕೋಂಡರು ಹಾಗು ಸರ್ಕಾರದ  ಗೃಹಲಕ್ಷ್ಮಿಯೋಜನೆ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು
ನನ್ನ ಮುಲಾ ಕೆಲಸ ಈಗ ಗಂಡ ಹೆಂಡತಿ ಜಗಳ ಬಿಡಿಸುವುದು ಎಂದು ನಗೆ ಚಟಾಕಿ ಹಾರಿಸಿದರು
ನಮ್ಮ ಹಳ್ಳಿಯಲ್ಲಿ ಗಂಡ ಹೆಂಡತಿಯರು  ತುಂಬಾ ಅನನ್ಯವಾಗಿದ್ದಾರೆ ಹಾಗೂ ನಮ್ಮ ಹಳ್ಳಿಯ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಮೊಬೈಲ್ ಹಾಗು ದುಶ್ಚಟಂದಿದ ಮಕ್ಕಳು ದೂರ ಇರಬೇಕೆಂದು ತಿಳಿಸಿದರು

ಭವಿಷ್ಯಕ್ಕೆ ಅಡಿಪಾಯ ಹಾಕಿದ ಶಿಕ್ಷಕರ ಕಾರ್ಯವನ್ನು ವಿದ್ಯಾರ್ಥಿಗಳು ಭಕ್ತಿಪೂರ್ವಕವಾಗಿ ನೆನೆದರು. ಬಳಿಕ ಈಗಿನ ಶಾಲಾ ಮಕ್ಕಳು ಸಂಸ್ಕೃತಿಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಈ ಕಾರ್ಯಕ್ರಮದಲ್ಲಿ  ವಿದ್ಯಾರ್ಥಿ ಮಿತ್ರರು ಹಾಗು ಹಳೆಯ ವಿದ್ಯಾರ್ಥಿ ಸಂಘದ ಎಲ್ಲಾ ಸದಸ್ಯರು ಹಾಗು ಊರಿನ ಹಿರಿಯರು SDMC ಅಧ್ಯಕ್ಷರು ಹಾಗು ಉಪಾದ್ಯಕ್ಷರು ಹಾಗು ಸದಸ್ಯರು ಉಪಸ್ಥಿತರಿದ್ದು ಕಾರ್ಯವನ್ನು ಯಶಸ್ವಿಗೋಳಿಸಿದರು.