ಎಲ್ಲಿಗೆ ಬಂತು ಯಾರಿಗೆ ಬಂತು 47ರ ಸ್ವತಂತ್ರ.!

0
342
oplus_0

ಶಿವಮೊಗ್ಗ ನೀರು ಸರಬರಾಜು ಹೊರ ಗುತ್ತಿಗೆ ನೌಕರರ ಮುಷ್ಕರ ಎರಡನೇ ದಿನಕ್ಕೆ..!?

ನಾವು ಇನ್ನೂ ಕೆಲಸ ಮಾಡಲ್ಲ ರಾಜ್ಯದಲ್ಲಿ ಅಂದರೆ ಹೇಗೆ ಇರಬಹುದು ಇವರೆಲ್ಲರೂ
ನಗರದಲ್ಲಿ ಕಸ ಬಾಚುವವರೂ,ನಗರದ ಕಸ ಕ್ಲಿನಿಂಗ್ ಮಾಡುವವರು, ಪೋಲಿಸರು, ನೀರು ಸರಬರಾಜು ಮಾಡುವವರು, ಕಾರ್ಮಿಕರು, ಯುಜಿಡಿ(ಕಕ್ಕಸ್ ಗುಂಡಿ ಕ್ಲಿನೀಂಗ್)  ಇನ್ನೂ ಹಲವರು, ಇನ್ನಾದರು ಯೋಚಿಸವರೋ  ಮುರ್ಖ ಸರ್ಕಾರದ ಅಧಿಕಾರಿಗಳು ಹಾಗೂ ಸಂಬಂದ ಪಟ್ಟ ಸಚಿವರು .!?

ನಗರ ಪಾಲಿಕೆಯಲ್ಲಿ ಕಷ್ಟ ಪಟ್ಟು ಕೆಲಸ ಮಾಡುವವನು ಇವತ್ತಿಗೂ ಗುತ್ತಿಗೆ ಆಧಾರದ ಮೇಲೆ ಕೇಲಸ ನೀರ್ವಸುತಿದ್ದಾನೆ  ಅವನ ಸಂಬಳವು ಯಾವದಕ್ಕೂ ಸಾಲುವುದಿಲ್ಲ  ಅದರೆ ಮೇಲಧಿಕಾರಿಗಳ ಚೂ ಬಿಟ್ಟು ಹಲವು ಹೋರಾಟವನ್ನು ಹತ್ತಿಕ್ಕಲು ಎಲ್ಲಾ ಸರ್ಕಾರ ಗಳು ಸಫಲತೆಯನ್ನು ಕಂಡಿವೆ ಇದೆ ರೀತಿ ಕೆಳ ಮಟ್ಟದ ಕೆಲಸಗಾರರ ಮೇಲೆ ಸ್ವತಂತ್ರ ಬಂದಾಗಾಲಿಂದಲು  ದೌರ್ಜನ್ಯ ನಡೆಸತ್ತಲೆ ಬಂದಿವೆ ಪಕ್ಷಾತಿತ ಸರ್ಕಾರಗಳು
ಪ್ರಿಯ ಒದುಗರೆ ಇಷ್ಟಯಲ್ಲ ಪಿಲಾಸಪಿ ಯಾಕಪ್ಪಾ ಅಂತಿರ ,,,,,, ರೀ ರೀ ನಮಗೆ ಬೆಳಗಿನ ಜಾವ ಕುಡಿಲಿಕ್ಕೆ ನೀರು ಬಿಡತಾರಲ್ಲ ಹೋರ ಗುತ್ತಿಗೆ ನೌಕರರು  ಅವರ ಜೀವನಕ್ಕೆ ಇಲ್ಲ ಭದ್ರತೆ ಕನಿಷ್ಟ ಕೂಲಿ ಕೋಟ್ಟು ಜೀವನ ಪೂರ್ತಿ ಕೆಲಸ ಮಾಡಿಸಿ ಕೋಳ್ಳುತ್ತೀವೆ  ಸ್ವತಂತ್ರ ಬಂದಾಗಾಲಿಂದಲು ಆಳುವ ಪಕ್ಷಾತಿತ ಸರ್ಕಾರಗಳು,,,,,

ಶಿವಮೊಗ್ಗ  ಮಾ 3: ನೇರ ನೇಮಕಾತಿಗೆ ಆಗ್ರಹಿಸಿ, ಶಿವಮೊಗ್ಗ ಮಹಾನಗರ ಪಾಲಿಕೆ ಹೊರಗುತ್ತಿಗೆ ನೀರು ಸರಬರಾಜು ನೌಕರರ ಸಂಘವು, ಮಾರ್ಚ್ 3 ರಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಮುಷ್ಕರ ಮುಷ್ಕರ ಆರಂಭಿಸಿದೆ.

ಮಹಾ ನಗರ ಪಾಲಿಕೆಯಲ್ಲಿ ಕಳೆದ ಸರಿಸುಮಾರು 15 ರಿಂದ 20 ವರ್ಷಗಳಿಂದ, ಹೋರ ಗುತ್ತಿಗೆ ಆಧಾರದ ಮೇಲೆ ರಾಜ್ಯದಲ್ಲಿ 5000 ಸಾವಿರ ನೌಕರರು ಮಹಾನಗರ ಪಾಲಿಕೆ, ನಗರ ಸಭೆ, ಪಟ್ಟಣ ಪಂಚಾಯತ ಪುರಸಭೆಗಳಲ್ಲಿ ಇದರಲ್ಲಿ ನೀರುಗಂಟಿ, ನೀರು ಸರಬರಾಜು ಸಹಾಯಕರಾಗಿ ವಿವಿಧ ವೃಂದದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.

ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿಯ 24*7 ಕುಡಿಯುವ ನೀರು ಯೋಜನೆ ಅನುಷ್ಠಾನದ ಹಿನ್ನೆಲೆಯಲ್ಲಿ, ಕರ್ನಾಟಕ ನೀರು ಸರಬರಾಜು ಮಂಡಳಿಗೆ ನೌಕರರನ್ನು ಹಸ್ತಾಂತರಿಸಲಾಗಿದೆ
ಅತ್ಯಂತ ದಕ್ಷತೆ, ಪ್ರಾಮಾಣಿಕತೆಯಿಂದ ಹಗಲು – ರಾತ್ರಿಗಳ ಪರಿವೆಯೇ ಇಲ್ಲದೆ,  ಹಬ್ಬ ಹರಿದಿನಗಳೆನ್ನೆದೆ ರಜಾ ದಿನಗಳ ವೇಳೆಯು ನೌಕರರು ವರ್ಷದ 365 ದಿನವು ಕೆಲಸ ಮಾಡುತ್ತಿದ್ದಾರೆ.

ಕರೊನಾ ವೇಳೆ ಇಬ್ಬರು ನೀರುಗಂಟಿಗಳು ತಮ್ಮ ಜೀವವನ್ನು ಕಳೆದು ಕೊಂಡರು  ಆದರು ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದ್ದಾರೆ. ಆದರೆ ಹೊರಗುತ್ತಿಗೆ ನೌಕರರಿಗೆ ಯಾವುದೇ ಜೀವನಾಂಶ, ಉದ್ಯೋಗದ ಭದ್ರತೆಯಿಲ್ಲವಾಗಿದೆ. ಇದರಿಂದ ನೌಕರರು ಕುಟುಂಬ ನಿರ್ವಹಣೆ ಸಂಕಷ್ಟಕರವಾಗಿ ಸೇವಾ ಭದ್ರತೆ  ಇಲ್ಲದೆ ಎಷ್ಟೋ ಜನಕ್ಕೆ ಮದುವೆಯಾಗಲು ಹೆಣ್ಣು ಕೊಡದ ಸ್ಥತಿ ಬಂದೋಗಿದೆ.

ಸರ್ಕಾರವು ನೀರು ಸರಬರಾಜು ನೌಕರರನ್ನು ನೇರ ನೇಮಕಾತಿ / ನೇರ ಪಾವತಿ ವ್ಯವಸ್ಥೆಯಡಿ ನೇಮಿಸಿಕೊಳ್ಳಲು, ಜಿಲ್ಲಾ ನಗರಾಭಿವೃದ್ದಿ ಕೋಶದಿಂದ ಮಾಹಿತಿ ಪಡೆದುಕೊಂಡ ನಗರಭಿವೃಧಿ ಸಚಿವ ಭೈರತಿ ಸುರೇಶ್‌ ಆದರೆ ಇಲ್ಲಿಯವರೆಗೂ ನೇಮಕಾತಿ ಆದೇಶವಾಗಿಲ್ಲ.

ಕೇವಲ ಕಡತಗಳಿಗಷ್ಟೆ ಸೀಮಿತವಾಗಿದೆ ಎಂದು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಣೆ ಮಾಡುತ್ತಿರುತ್ತಿವ ನೌಕರರ ಆರೋಪ ಅದರೆ ಈ ಹಿಂದೆ ಗುತ್ತಿಗೆ ಆದರಾದ ಪೌರಕರ್ಮಿಕರನ್ನ  ನೇರಪಾವತಿಗೆ ಒಳಪಡಿಸಿ ನೇರ ನೇಮಕಾತಿ ಮಾಡಿಕೋಂಡಿದೆ ಸರ್ಕಾರ ಅದೇ ರೀತಿ ನಮ್ಮನ್ನು ಸಹಾ ನೇಮಕಾತಿ ಮಾಡಿಕೋಳ್ಳ ಬೇಕು ಅದನ್ನ ಬಿಟ್ಟು ಸಮ್ಮನೆ ಸರ್ಕಾರ ಕಲಾಹರಣ ಮಾಡುತ್ತಿದೆ   ಎಂಬುದು ಹೋರಾಟಗಾರ ನೌಕರರ ಆರೋಪವಾಗಿದೆ

ಈ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಮಾರ್ಚ್ 3 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತಿದೆ. ಬೇಡಿಕೆ ಈಡೇರುವವರೆಗೂ ಮುಷ್ಕರ ಸ್ಥಗಿತಗೊಳಿಸುವುದಿಲ್ಲ ಎಂದು ಹೋರಾಟಗಾರರು ಸರ್ಕಾರವನ್ನು ಎಚ್ಚರಿಸಿದ್ದಾರೆ

ರಾಜಕೀಯ ಪಕ್ಷಗಳು ಚುನಾವಣಾ ಸಮಯದಲ್ಲಿ ನಾವು ಬಡವರ ಪರ ಎಂದು ಪಕ್ಷತಿತಾವಾಗಿ ಘೋಷಣೆ ಮಾಡುತ್ತವೆ ಆದರೆ ಆಯ್ಕೆಯಾಗಿ ಬಂದ ಮೇಲೆ ಅದೆ ಬಡವರ ಮಕ್ಕಳ ಶೋಷಣೆ 
ರಾಜಕೀಯ ನಾಯಕರ ಮಕ್ಕಳು ಏನಾದರು  ಕಕ್ಕಸಿನ ಪೀಟ್ ಕ್ಲೀನಿಂಗ್, ನೀರು ಸರಬರಾಜು, ಶೂಶ್ರಕರು,(ನರ್ಸ್) ಕಟ್ಟಡ ನಿರ್ಮಾಣ ಕಾರ್ಯ, ಇನ್ನಿತರೆ ಯಾವುದೇ ಸಣ್ಣ ಪುಟ್ಟ ಕೆಲಸದಲ್ಲಿ ಇದ್ದರೆ ಗೋತ್ತಾಗುತಿತ್ತು ಬಡವರ ಕಷ್ಟ …..

ರಾಜಕೀಯ ನಾಯಕರ ಹತ್ತಿರ  ತಮ್ಮ ನೋವನ್ನು ತಿಳಿಸಿದರೆ ಅಯ್ಯೋ ರಾಜ್ಯದ ಇಶ್ಯು ಎಂದು ತೆಪೆಹಚ್ಚುವ ಕೇಲಸ ಮಾಡಿದರೆ ವಿನಹಾ ಇಂತಹಾ ಹೋರ ಗುತ್ತಿಗೆ ನೌಕರರ ಕಷ್ಟವನ್ನ ಯಾರು ಗಂಭಿರವಾಗಿ ಚಿಂತಸಲೇ ಇಲ್ಲ,.. ಈಗ ನಾವು ನಿಮ್ಮ ಪರ ಎಂದರೆ ಹೇಗೆ.?
ಲೋ ರಾಜಕೀಯ ನಾಯಕ ರೇ ತಮ್ಮ ಡೋಂಗಿತನದ ಪ್ರದರ್ಶನ ಬಿಟ್ಟು  ಕೇಲಸ ಮಾಡುವ ಕೈಗಳಿಗೆ ಸಹಕಾರ ನೀಡಿ,..  ಅದೇ ನಿಮ್ಮ ಭತ್ಯೆ ಎರಿಸಿ ಕೋಳ್ಳಲು ನೀಮ್ಮ ಆಯ್ಕೆ ಮಾಡಿದ ಜನರ ಪರ್ಮಿಶನ್ ತೆಗೆದುಕೋಳ್ಳತಿರಾ?? ಪಕ್ಷಾತಿತಾವಾಗಿ ತಮ್ಮ ಮನೋಸೋ ಇಚ್ಚೇ ಎರಿಸಿಕೋಂಡರಲ್ಲಪಾ !!
ಓಂದು ದಿನ ಪೋಲಿಸ್, ರೈತ , ಕಾರ್ಮಿಕರು, ದೀನಗೂಲಿ ನೌಕರರು ಯಾವುದೇ ಕೆಲಸ ನಾವು ಮಾಡಲ್ಲ ಅಂದರೆ ದೇಶದ ಸ್ಥತಿ ಏನಾಗಾಬಹುದು ಯೋಚಿಸಿ,,,…!?