ಸಾಗರ ರಸ್ತೆ ಬ್ಲೂ ಮುನ್ ವೈನ್ಸ ಎದರು ಇಬ್ಬರಿಗೆ ಮಾರಣಾಂತಿಕ ಹಲ್ಲೆ.!?

0
320
Oplus_131072

 

ಶಿವಮೊಗ್ಗ ನಗರದ ಹೊರವಲಯದ ಸಾಗರ ರಸ್ತೆಯಲ್ಲಿ ಇಂದು ಸಂಜೆ ವೇಳೆ ಡಬ್ಬಲ್‌ ಅಟ್ಯಾಕ್‌ ಆಗಿದೆ. ಇಲ್ಲಿನ ಬ್ಲೂಮೂನ್‌ ವೈನ್ಸ್‌ ಎದುರುಗಡೆ ಘಟನೆ ನಡೆದಿದ್ದು, ಇಬ್ಬರ ಮೇಲೆ ರಾಡ್‌ ನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಇಬ್ಬರ ಸ್ಥಿತಿಯು ಗಂಭೀರವಾಗಿದೆ ಎಂಬ ಮಾಹಿತಿ ಬಂದಿದೆ

ಇಂದು  ಸಂಜೆ ಐದು ಗಂಟೆ ಸುಮಾರಿಗೆ ಘಟನೆ ನಡೆದಿದ್ದು,

ಹೊಸಮನೆ ನಿವಾಸಿಗಳಾದ ಹರೀಶ್(35) ಅವರ ಅಜ್ಜಿ  ತೀರಿಕೊಙಡಿದ್ದರಿಂದ ಅಂತ್ಯಕ್ರಿಯೆ ಮುಗಿಸಿ ಸ್ನೇಹಿತ ಮಂಜು (28) ಜೊತೆಗೆ ಸಾಗರ ರಸ್ತೆಯಲ್ಲಿರುವ  ಬ್ಲೂಮೂನ್ ಗೆ ಮದ್ಯ ಸೇವಿಸಲು  ಬರ್ತಾರೆ. ಕುಡಿದು ಹೊರಗಡೆ ನಿಂತಿದ್ದ ಹರೀಶ್ ಮತ್ತು ಮಂಜು ನಡುವೆ  ಭರ್ಜರಿ ಗಲಾಟೆಯಾಗಿದೆ. 

ಹರೀಶ್ ಮತ್ತು ಮಂಜು ಇಬ್ವರೂ ಕಬ್ಬಿಣದ ರಾಡಿನಲ್ಲಿ ಹೊಡೆದಾಡಿಕೊಂಡಿದ್ದಾರೆ. ಮಂಜು ಮೆಗ್ಗಾನ್ ಮತ್ತು ಹರೀಶ್ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.  ಸಧ್ಯಕ್ಕೆ ಇಬ್ಬರೂ ಚಿಕಿತ್ಸೆಯಲ್ಲಿದ್ದಾರೆ. ಘಟನೆ ಸಿಸಿ ಟಿವಿ ಫೂಟೇಜ್ ನಲ್ಲಿ ಸೆರೆಯಾಗಿದೆ.

 ವಿವಿಧ ಠಾಣೆಯ ಪೊಲೀಸರಿಂದ ಪರಿಶೀಲನೆ ನಡೆಯುತ್ತಿದೆ ಇನ್ನೂ ಹೆಚ್ಚಿನ ಮಾಹಿತಿ ಬರಬೇಕಾಗಿದೆ.