ಶಿವಮೊಗ್ಗ ದಿಂದ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುವ ಮಹಾಕುಂಭ ಮೇಳಕ್ಕೆ ತೆರಳಲಿಚ್ಛಿಸುವ  ಭಕ್ತಾದಿಗಳಿಗೆ ವಿಶೇಷ ರೈಲು ಸೇವೆ.!?

0
375
Oplus_131072

 

ಶಿವಮೊಗ್ಗದ ಮಾನ್ಯ ಲೋಕಸಭಾ ಸದಸ್ಯರಾದ ಬಿ ವೈ ರಾಘವೇಂದ್ರರವರ ವಿಶೇಷ ಪ್ರಯತ್ನದ ಫಲವಾಗಿ
ದಿನಾಂಕ – 25-02-25ರಂದು ಕುಂಭಮೇಳಕ್ಕೆ  ಸ್ಪೆಷಲ್ ರೈಲು ಹೊರಡಲಿದೆ.
*ONLINE BOOKING* ಪ್ರಾರಂಭವಾಗಲಿದೆ. ಹೋಗಲಿಚ್ಚಿಸುವವರು ತಕ್ಷಣ IRCTC ಯಲ್ಲಿ Booking ಮಾಡಬಹುದು.

ಪ್ರಯಾಗರಾಜ್‌ನಲ್ಲಿ 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳಕ್ಕೆ ತೆರಳಲಿಚ್ಛಿಸುವ ಮಲೆನಾಡಿನ ಭಕ್ತಾದಿಗಳಿಗೆ ವಿಶೇಷ ರೈಲು ಸೇವೆ ಘೋಷಿಸಲಾಗಿದೆ.

ಫೆಬ್ರವರಿ 22ರ ಶನಿವಾರ ಸಂಜೆ 4:40ಕ್ಕೆ ಶಿವಮೊಗ್ಗದಿಂದ (ರೈಲು ಸಂಖ್ಯೆ. 06223) ರಂದು ಹೊರಟು ಫೆಬ್ರವರಿ 24ರ ಬೆಳಿಗ್ಗೆ 11:10ಕ್ಕೆ ಪ್ರಯಾಗರಾಜ್‌ ತಲುಪಲಿದೆ ಹಾಗೂ ಫೆಬ್ರವರಿ 25ರಂದು ಬೆಳಿಗ್ಗೆ 5.40ಕ್ಕೆ ಪ್ರಯಾಗರಾಜ್‍ನಿಂದ (ರೈಲು ಸಂಖ್ಯೆ 06224) ಫೆಬ್ರವರಿ 27ರ ಬೆಳಿಗ್ಗೆ 06:45ಕ್ಕೆ ಶಿವಮೊಗ್ಗ ತಲುಪಲಿದೆ ವಿಶೇಷ ರೈಲು ಚಲಿಸಲಿದ್ದು, ಯಾತ್ರಾರ್ಥಿಗಳು ಈ ಸೇವೆಯ ಸದುಪಯೋಗಪಡಿಸಿಕೊಳ್ಳಬೇಕಾಗಿ

 

ಫೆಬ್ರವರಿ 15 ರ ಮಧ್ಯಾಹ್ನದ ನಂತರ ವಿಶೇಷ ರೈಲಿನ ಬುಕಿಂಗ್ ಸೇವೆ ಆರಂಭವಾಗಲಿದ್ದು, ಯಾತ್ರಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಬಿ.ವೈ ರಾಘವೇಂದ್ರ ಅವರು ಸಾರ್ವಜನಿಕರಲ್ಲಿ ಮನವಿ
ಮಾಡಿದ್ದಾರೆ.

ಮಹಾ ಕುಂಭಮೇಳ ಯಾತ್ರಾರ್ಥಿಗಳ ಪ್ರಯಾಣಕ್ಕೆ ಅನುಕೂಲ ಮಾಡಿ ಕೊಟ್ಟಿರುವ ರೈಲ್ವೆ ಇಲಾಖೆಗೆ ತುಂಬು ಹೃದಯದ ಧನ್ಯವಾದಗಳನ್ನು ಸಹಾ ಪತ್ರಿಕೆ ಮುಲಕ ತಿಳಿಸಿದ್ದಾರೆ.

#MahaKumbhMela2025