ವಿವೇಕಾನಂದ ವಿದ್ಯಾರ್ಥಿ ಯುವ ವೇದಿಕೆಯಿಂದ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಏನು!?

0
197

ಪೊಲೀಸ್ ಇಲಾಖೆಯ ದಕ್ಷಾ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಕುಗ್ಗಿಸದಿರಲು ಮನವಿ 

ಇತ್ತೀಚೆಗೆ ಶಿವಮೊಗ್ಗ ನಗರದಲ್ಲಿ ಹಲವು ಸಲ  ಎಲ್ಲಾ ವಾಹನಗಳ ಕರ್ಕಶ ಹಾರನ್ ಶಬ್ದಕ್ಕೆ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ವಾಹನಗಳಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದರು, ಕ್ಯಾರೆ ಎನ್ನದ ಚಾಲಕರು ತಮ್ಮ ಹಳೇ ಚಾಳಿಯನ್ನೇ ಮುಂದುವರೆಸುತ್ತಾ ಬರುತ್ತಿದ್ದಾರೆ. ಇದರಿಂದ ವೃದ್ದರು ಗರ್ಭೀಣಿಯರಿಗೆ ಮತ್ತು ಹೃದಯ ಸಂಬಂಧಿತ ರೋಗಿಗಳಿಗೆ ಮತ್ತು ಶಾಲಾ ಕಾಲೇಜು ಮಕ್ಕಳಿಗೆ, ಮುಖ್ಯ ರಸ್ತೆಯ ಪಕ್ಕದಲ್ಲಿರುವ ಆಸ್ಪತ್ರೆಗಳು, ವಸತಿಗಳಿಗೆ ಇದರಿಂದ ಕಿರಿಕಿರಿಯಾಗುತ್ತಿದ್ದು ನಗರ ವ್ಯಾಪ್ತಿಯಲ್ಲಿ ಓಡಾಡುವ ನಗರ ಸಂಚಾರಿ ಬಸ್ಸುಗಳು ಮತ್ತು ಶಾಲಾ ವಾಹನಗಳಿಗೆ ಅತೀ ಹೆಚ್ಚು ಶಬ್ದ ಮಾಲಿನ್ಯ ಮಾಡುವ ಹಾರನ್ ಅವಶ್ಯಕತೆ ಇರುವುದೇ? ಎಂದು ಬೇಸತ್ತು ಸಾರ್ವಜನಿಕರ ವಲಯದಿಂದ ದೂರುಗಳು ಸಂಚಾರಿ ಠಾಣಾಧಿಕಾರಿಗಳಿಗೆ ಶಿವಮೊಗ್ಗದ ಸಮಸ್ತ ಜನತೆ ಪ್ರಶ್ನೆಮಾಡುತ್ತದ್ದರ ಸಲುವಾಗಿ ಸಂಚಾರಿ ಠಾಣೆಯ ಪಿ.ಎಸ್.ಐ ತಿರುಮಲ್ಲೇಶ್ ರವರು ಸಿಟಿ ಬಸ್ ಚಾಲಕರುಗಳಿಗೆ ಇತ್ತಿಚೆಗೆ ತಮ್ಮ ವಾಹನದ ಹಾರನ್ ಶಬ್ದವನ್ನು ಹತ್ತಿರದಿಂದ ಕೇಳಿ ಎಷ್ಟು ಕರ್ಕಶವಾಗಿರುತ್ತದೆ ಎಂದು ತೋರಿಸಿದ್ದಾರೆ,
 
ಈ ವಿಚಾರವಾಗಿ ಸಂಘಟನೆಯೊಂದು ಇದರಲ್ಲಿ ಚಾಲಕರ ತಪ್ಪಿಲ್ಲ ಎಂದು ಮನವಿ ಸಲ್ಲಿಸಿದ್ದಾರೆ, ವಾಹನದ ಮಾಲೀಕರು ಹಾರನ್ ನನ್ನು ಹಾಕಿಸಿರುತ್ತಾರೆ ಎಂದು ಮನವಿಯಲ್ಲಿ  ತಿಳಿಸಿದ್ದಾರೆ ಹಾಗಾದರೆ ವಾಹನ ಮಾಲಿಕರ ಮೇಲೂ ಕ್ರಮ ಕೈಗೊಂಡು ದೂರು ದಾಖಲಿಸಬೇಕು ಮತ್ತು ಇನ್ನು ಮುಂದೆ ಈ ತರಹದ ಕರ್ಕಶ ಶಬ್ದ ಮಾಡುವ ಎಲ್ಲಾ ವಾಹನವನ್ನು ವಶಪಡಿಸಿಕೊಂಡು, ಅವರುಗಳ ಮೇಲೆ ದೂರು ದಾಖಲಿಸಿ ಶಿವಮೊಗ್ಗದ ಜನತೆ ನೆಮ್ಮದಿಯಿಂದ ನೆಲಸಲು ಅವಕಾಶ ಮಾಡಿಕೊಡಬೇಕು ಹಾಗೂ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳ ಕಾರ್ಯವನ್ನು ಕುಗ್ಗಿಸದೇ ಇಂತಹ ಸಮಾಜ ಮುಖಿ ಒಳ್ಳೆಯ ಕೆಲಸವನ್ನು ಮಾಡುವ ಇಲಾಖೆಯ ಯಾವುದೇ ಅಧಿಕಾರಿಗಳು ಮಾಡಿದರು ಅವರಿಗೆ ಪ್ರಶಂಸಿಸಿ  ಸಹಕಾರ ನೀಡಬೇಕಾಗಿ  ವಿಶ್ವಮಾನವ
ವಿವೇಕಾನಂದ ವಿದ್ಯಾರ್ಥಿ ಯುವ ವೇದಿಕೆ  ವತಿಯಿಂದ ಜಿಲ್ಲಾ ರಕ್ಷಾಣಾಧಿಕಾರಿಗಳು ಶಿವಮೊಗ್ಗ ಇವರಿಗೆ ಮನವಿ ಸಲ್ಲಿಸಲಾಯಿತು.


ಈ ಸಂಧರ್ಭದಲ್ಲಿ ಸತೀಶ್ ಮುಂಚೆಮನೆ, ಸತೀಶ್ ಗೌಡ, ಯೋಗೀಶ್ ಪಾಟೀಲ್, ಪ್ರಕಾಶ್, ಯುವರಾಜ್, ಜಗದೀಶ್ ಹಿರೇಮಠ, ಚಂದ್ರಚಾರ್, ಗಂಗಾಧರ್, ಪೆರುಮಾಳ್, ಅವಿನಾಶ್ ಇದ್ದರು.