ಚಿನ್ಮಯಾನುಗ್ರಹ ದೀಕ್ಷೆ ಅಂದರೇನು, ಬಹಿರಂಗ ಅಧಿವೇಶನ ಎಲ್ಲಿ ,ಯಾವಗ!?

0
142

ಇಂದಿನ ಬಸವಕೇಂದ್ರದ ಪತ್ರಿಕಾ ಗೋಷ್ಠಿಯಲ್ಲಿ ರುದ್ರೆಗೌಡರು ಮಾತನಾಡುತ್ತಾ  ಪೂಜ್ಯ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮಿಗಳವರ ಚಿನ್ಮಯಾನುಗ್ರಹ ದೀಕ್ಷಾ ಸಮಾರಂಭವು ಇದೇ ಡಿಸೆಂಬರ್ 7 5 ನೇ ತಾರೀಖನಂದು ನಡೆಯಲಿದೆ.
ಪೂಜ್ಯ ಜಗದ್ಗುರು ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳವರು ತಮ್ಮ ಲಿಂಗ ಹಸ್ತದಿಂದ ಈ ದೀಕ್ಷೆಯನ್ನು ಅನುಗ್ರಹಿಸಲಿದ್ದಾರೆ.

ಬಸವ ತತ್ವದ ಪ್ರಕಾರ, ಚಿನ್ನಯಾನುಗ್ರಹ ದೀಕ್ಷೆ ಎಂದರೆ, ಶ್ರೀಗಳಿಗೆ ಭಗವಂತನ ಚೈನ್ನಯ (ಜ್ಞಾನ ರೂಪಿ) 7 ಅನುಗ್ರಹವನ್ನು ನೀಡುವ ಆಧ್ಯಾತ್ಮಿಕ ದೀಕ್ಷೆ. ಇದು ಭೌತಿಕ ಪೂಜಾ ಪ್ರಕ್ರಿಯೆಗಳಿಂದ ಮುಕ್ತವಾಗಿದ್ದು, ಜೀವಾತ್ಮ 7 ಮತ್ತು ಪರಮಾತ್ಮನ ಏಕತೆಯನ್ನು ಅನುಭವಿಸುವ ಪರಮಜ್ಞಾನವನ್ನು ಪಡೆಯಲು ಸಹಾಯ ಮಾಡುತ್ತದೆ.

ಚೆನ್ನಯಾನುಗ್ರಹವು ಕೇವಲ ಭಕ್ತಿ ಪ್ರಕ್ರಿಯೆಯ ಆರಂಭವಲ್ಲ; ಅದು ಜೀವಾತ್ಮ ಮತ್ತು ಶಿವಾತ್ಮನ ಒಂದಾಗುವ ಪರಮಾವಸ್ಥೆ. ಚಿನ್ನಯಾನುಗ್ರಹ ದೀಕ್ಷೆಯನ್ನು ಜ್ಞಾನಪೂರ್ಣ ಗುರುಗಳು ಭಕ್ತನಿಗೆ ನೀಡುತ್ತಾರೆ, ಅದು ಶರಣನ  ಜೀವನವನ್ನು ಆಧ್ಯಾತ್ಮಿಕ ಪಥದಲ್ಲಿ ಸಂಪೂರ್ಣವಾಗಿ ಪರಿವರ್ತಿಸುತ್ತದೆ. ಕುಲ, ಜಾತಿ ಅಥವಾ ಲಿಂಗ  ಯಾವುದಕ್ಕೂ ಆದ್ಯತೆಯಿಲ್ಲ, ಅಂತರಂಗ ಶುದ್ಧತೆ ಮಾತ್ರ ಮುಖ್ಯವಾಗುತ್ತದೆ ಎಂದರು
ಯೋಗಿಶ್ ರವರು ಇ ಕಾರ್ಯಕ್ರಮವು ಒಂದು ಸಮಾಜದ ಕಾರ್ಯಕ್ರಮವಾಗದೆ ಎಲ್ಲಾ ಸಮಾಜದ ದವರು ಒಗೋಡಿ ನಡೆಸುವ ಕಾರ್ಯಕ್ರಮ ಇಂತಹ ಮಹತ್ವದ ಚಿನ್ಮಯನುಗ್ರಹ ದೀಕ್ಷೆಯನ್ನು ಡಿಸೆಂಬರ್ 5, 2024 ರ ಬೆಳಗ್ಗೆ 5 ಗಂಟೆಗೆ ಶಿವಮೊಗ್ಗದ ವೆಂಕಟೇಶ ನಗರದಲ್ಲಿರುವ ಬಸವ ಕೇಂದ್ರದಲ್ಲಿ ಪೂಜ್ಯ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳವರು ತಮ್ಮ ಲಿಂಗ ಹಸ್ತದಿಂದ ಪೂಜ್ಯ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮಿಗಳವರಿಗೆ ಅನುಗ್ರಹಿಸಲಿದ್ದಾರೆ. ಈ ದೀಕ್ಷಾ ವಿಧಿ ವಿಧಾನದ ಸಂದರ್ಭದಲ್ಲಿ, ಈರ್ವರು ಶ್ರೀಗಳ ಜೊತೆಯಲ್ಲಿ 6 ಷಡುಸ್ಥಲ ಮೂರ್ತಿಗಳು, ಒಬ್ಬರು ವಚನಮೂರ್ತಿಗಳು ಹಾಗೂ ನಾಡಿನ ಹಲವು ಸ್ವಾಮೀಜಿಗಳು ಉಪಸ್ಥಿತರಿದ್ದು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಡಲಿದ್ದಾರೆ.

ಅಂದು ಬೆಳಗ್ಗೆ 11 ಗಂಟೆಯಿಂದ ಮಾಚೇನಹಳ್ಳಿ ಡೈರಿ ಪಕ್ಕದಲ್ಲಿರುವ ಬಸವನೆಲೆಗೆ ನೀಡಿರುವ ಜಾಗದಲ್ಲಿ ನಡೆಯುವ ಬಹಿರಂಗ ಅಧಿವೇಶನದಲ್ಲಿ ಈರ್ವರು ಶ್ರೀಗಳ ಜೊತೆಯಲ್ಲಿ ಜಗದ್ಗುರು ಶ್ರೀ ರೇಣುಕಾನಂದ ಮಹಾಸ್ವಾಮಿಗಳವರು, ಶ್ರೀ ಬ್ರಹ್ಮಶ್ರೀ ನಾರಾಯಣಗುರು ಸಂಸ್ಥಾನ, ನಿಟ್ಟೂರು ಹಾಗೂ ಜಗದ್ಗುರು ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಮಹಾಸ್ವಾಮಿಗಳವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ನಾಡಿನ ಹಲವು ಸ್ವಾಮೀಜಿಗಳು ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ಸಮಾಜದ ಹಿರಿಯರು ಆದ ಶ್ರೀ ಬಿ ಎಸ್ ಯಡಿಯೂರಪ್ಪನವರು ಉದ್ಘಾಟಿಸಲಿದ್ದು, ಸಂಸದರಾದ ಬಿ ವೈ ರಾಘವೇಂದ್ರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್ ಮಧು ಬಂಗಾರಪ್ಪನವರು ವಿಶೇಷ ಉಪಸ್ಥಿತಿ ನೀಡಲಿದ್ದಾರೆ. ಚಿನ್ಮಯನುಗ್ರಹ ದೀಕ್ಷೆಯ ಕುರಿತಾಗಿ ನಾಡಿನ ಹಿರಿಯ ಸಂಶೋಧಕರಾದ ಡಾ. ವೀರಣ್ಣ ರಾಜೂರ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ
ಇಂದಿನ ಪತ್ರಿಕಾ ಗೋಷ್ಠಿಯಲ್ಲಿ  ಧನಂಜಯ ಸರ್ಜಿ,ಎಸ್.ಪಿ.ದಿನೇಶ್, ಯೋಗಿಶ್, ಜ್ಯೊತಿಪ್ರಕಾಶ್,ಕಿರಣ್,ಹಾಲಸ್ವಾಮಿ,ಜಗದೀಶ್, ವಿಜಯಕುಮಾರ್, ಮೋಹನ್ ಇದ್ದರು.