Sunday, November 17, 2024
spot_img

ಹೊಳೆಹೊನ್ನೂರು ಪೋಲಿಸರ ಮಸ್ತ್ ಶಿಕಾರಿ!? ಕಳ್ಳ ಅಡಿಕೆ ಸಾಗಣೆಕೋರರು-ಲಾರಿ ಪರಾರಿ, ಅನ್ಯಾಯವಾಗಿ ಅಂದರ್ ಆಗಿದ್ದು ಪೆನ್ನಿಗ ತಲಾರಿ!?

“ಮಂಗ ಮೊಸರನ್ನ ತಿಂದು ಎಂಜಲು ಕೈ ಮೇಕೆ ಮುಸುಡಿಗೆ ಒರೆಸಿ ಬಲಿಕೊಟ್ಟ” ಕಥೆ ಗೊತ್ತಿರಬೇಕಲ್ಲವೇ ನಿಮಗೆ  ಈ ಹಗರಣವೂ ಅದೇ ಕಥಾನಕವನ್ನು ಹೋಲುವಂತಹದ್ದು…. ಇದು ಇತ್ತೀಚೆಗಷ್ಟೇ ನಡೆದ ಒಂದು ವಿಲಕ್ಷಣ ನಾಟಕೀಯ ಬೆಳವಣಿಗೆ! ಕಳ್ಳದಂಧೆ ಮಾಡುವ ಖದೀಮರೇ ಸ್ವತಃ ಕಾನೂನಿನ ಕಣ್ಣಿಗೆ ಮಣ್ಣೆರೆಚಿಯೂ, ಪತ್ರಕರ್ತನೋರ್ವರನ್ನು ಹಗರಣದಲ್ಲಿ ಹಣದ ವಿಚಾರವಾಗಿ ವ್ಯವಸ್ಥಿತ ರೀತಿಯಲ್ಲಿ ಸಿಲುಕಿಸಿ, ಉಪಾಯವಾಗಿ ಅವರನ್ನು ಪೊಲೀಸರ ಕೈಗೊಪ್ಪಿಸಿ ಕೈತೊಳೆದುಕೊಂಡ ಬಿಲ್‌ರಹಿತ ಅಡಿಕೆ ಕಳ್ಳಮಾಲು ಸಾಗಿಸುತ್ತಿದ್ದ ಖೂಳರು ಒಂದೆಡೆಯಾದರೆ, ಅದೇ ಬಿಲ್‌ಯಿಲ್ಲದ ಲಕ್ಷ ಲಕ್ಷ ಮೌಲ್ಯದ ಕಳ್ಳಸಾಗಾಟದ ಅಡಿಕೆ ತುಂಬಿದ ಲಾರಿಗೆ ಅಭಯನೀಡಿ ಕಳುಹಿಸಿಕೊಟ್ಟು, ‘ಕೈಬಿಸಿಮಾಡಿಕೊಂಡ’ ಖಾಕಿಗಳದ್ದು ಮತ್ತೊಂದು ಸಂಶಯಾಸ್ಪದ ಸೀನ್! ಆದರೆ, ಮಂಡಿಯಿಂದ ಬಿಲ್‌ಯಿಲ್ಲದೇ ಕಾನೂನುಬಾಹಿರವಾಗಿ ಬಹುಲಕ್ಷಮೌಲ್ಯದ ಅಡಿಕೆ ಕಳ್ಳ ಸಾಗಾಣೆಯಾಗುತ್ತಿದ್ದ ಮಾಹಿತಿಯ ಜಾಡುಹಿಡಿದು, ಕಾನೂನಿನ ಕಣ್ಣಿಗೆ ಮಣ್ಣೆರೆಚಿ ಹೀಗೆ ಅಡಿಕೆ ಕಳ್ಳಸಾಗಾಣೆಯಾಗುತ್ತಿದ್ದ ವಾಹನವನ್ನು ಬೆನ್ನುಹತ್ತಿಬಂದ ಪತ್ರಿಕಾವರದಿಗಾರರೊಬ್ಬರು ಆ ವಾಹನವನ್ನು ತಡೆದು ಪ್ರಶ್ನಿಸಿದ್ದೇ ಮಹಾಪರಾಧವೆಂಬಂತೆ ಬಿಂಬಿಸಿ, ಆ ಪತ್ರಿಕಾ ಸಂಪಾದಕನನ್ನು ಮಿಕವಾಗಿ ಬಳಸಿಕೊಂಡ ಬಿಲ್‌ರಹಿತ ಅಕ್ರಮ ಅಡಿಕೆಸಾಗಾಣೆ ಮಾಡುತ್ತಿದ್ದ ಆ ಲಾರಿಯಚಾಲಕ ಮತ್ತು ಪೊಲೀಸರು ಒಂದಾಗಿ – ನೇರವಾಗಿ ಅವರುಗಳ ನಡುವೆ ಅದೇನು ಒಪ್ಪಂದವೇರ್ಪಟ್ಟಿತ್ತೋ?!

ನೇರವಾಗಿ ಆ ಪತ್ರಿಕಾ ಸಂಪಾದಕನನ್ನೇ ತಪ್ಪಿತಸ್ಥನಸ್ಥಾನದಲ್ಲಿ ನಿಲ್ಲಿಸಿ, ಆತನ ಹಣೆಗೆ ದರೋಡೆಯತ್ನದ ಸುಳ್ಳು ಆರೋಪ ಸುತ್ತಿ, ಅನ್ಯಾಯವಾಗಿ ಆ ಪತ್ರಿಕಾಸಂಪಾದಕನನ್ನು ಬಂಧಿಸಿದ ಪೊಲೀಸರು ಒಳತಳ್ಳಿಬಿಡುತ್ತಾರೆ… ಬಿಲ್‌ಯಿಲ್ಲದೆ ಕಾನೂನು ಬಾಹಿರವಾಗಿ ಬಹುಲಕ್ಷಮೌಲ್ಯದ ಅಡಿಕೆಸಾಗಿಸುತ್ತಿದ್ದ ಲಫಂಗ ಲಾರಿಚಾಲಕನನ್ನು ‘ರಾಜಾಮಾರ್ಯದೆ’ಯಿಂದ ಕಳುಹಿಸಿಕೊಟ್ಟು ಬಿಡುತ್ತಾರೆ! ನೋಡಿ ಹೇಗಿದೆ ನಮ್ಮ ಪೊಲೀಸರ ನ್ಯಾಯ – ಕರ್ತವ್ಯ ನಿರ್ವಹಿಸುವ ಚೆೆಂದ? ಹಾಗಾದರೆ ಸಮಾಜದಲ್ಲಿನ ಅನ್ಯಾಯ – ಅಕ್ರಮ – ಅನೀತಿಯನ್ನು ಪ್ರಶ್ನಿಸುವ ಹಕ್ಕು ಪತ್ರಕರ್ತರಿಗೆ ಇಲ್ಲವೇ ಜಿಲ್ಲಾಧಿಕಾರಿಗಳೇ – ಜಿಲ್ಲಾ ರಕ್ಷಣಾಧಿಕಾರಿಗಳೇ??
ಘಟನೆಯ ವಿವರ:- ಈ ‘ಕಳ್ಳ ಪೊಲೀಸ್’ ಆಟದಲ್ಲಿ ಅನ್ಯಾಯವಾಗಿ ಅಂದರ್ ಆಗಿರುವ ಪತ್ರಕರ್ತ ‘ಚಂದ್ರೋದಯ ಪತ್ರಿಕೆ’ಯ ವ್ಯವಸ್ಥಾಪಕ ಸಂಪಾದಕ ‘ನವೀನ್‌ತಲಾರಿ’ ಪತ್ರಿಕೋದ್ಯಮದಲ್ಲಿ ಮಾತ್ರವಲ್ಲ ಸಮಾಜಸೇವೆಯ ವಿವಿಧಮುಖಿಯಾಗಿ ರಕ್ತದಾನ, ಸಂಘಸAಸ್ಥೆಗಳಲ್ಲಿ ಜವಾಬ್ದಾರಿಯುತ ಸ್ಥಾನಗಳಲ್ಲಿ ಗುರುತಿಸಿಕೊಳ್ಳುವಿಕೆ, ಕೊರೊನಾ – ನೆರೆಸಂದರ್ಭದಲ್ಲಿ ಸಂತ್ರಸ್ತರ ಸೇವೆಯಲ್ಲಿ ಕೈಜೋಡಿಸಿ  ಮಾನವೀಯತೆ ಮೆರೆಯುತ್ತಾ ಬಂದಿರುವ ಪತ್ರಕರ್ತ ನವೀನ್‌ತಲಾರಿ ಆ ಪೊಲೀಸರಿಗೆ ದರೋಡೆಕೋರನಂತೆ ಕಂಡಿರುವುದು ಅತ್ಯಾಶ್ಚರ್ಯ ಅಷ್ಟೇ ಹಾಸ್ಯಾಸ್ಪದ ಹಾಗೂ ಖಂಡನೀಯವಲ್ಲವೇ? ಅನೈತಿಕ ಚಟುವಟಿಕೆ – ಕಾನೂನುಬಾಹಿರ ಕೃತ್ಯಗಳು – ಸಮಾಜಭಂಜಕ ಚಟುವಟಿಕೆಗಳು ನಡೆಯುವಂತಹ ಅಡ್ಡೆಗಳಮೇಲೆ ಲಗ್ಗೆಯಿಡುವಂತಹ – ಅಕ್ರಮ ಕಳ್ಳಸಾಗಾಣೆ – ಕಾನೂನಿನಕಣ್ಣಿಗೆ ಮಣ್ಣೆರೆಚಿ ಬಿಲ್ – ದಾಖಲೆಗಳಿಲ್ಲದೆ ವ್ಯವಹರಿಸುವ – ಸಂಚರಿಸುವ ವಾಹನಗಳಮೇಲೆ ಕಣ್ಣಿಡುವ – ತಡೆದು ಪ್ರಶ್ನಿಸುವಹಕ್ಕು ಪ್ರತಿಯೊಬ್ಬ ಪತ್ರಕರ್ತನಿಗೆ ಮಾಧ್ಯಮವರದಿಗಾರರಿಗೆ – ತನಿಖಾವರದಿಗಾರರಿಗೆ ಕಾನೂನಾತ್ಮಕವಾಗಿ ಇದ್ದೇಯಿದೆ ಎಂಬುವುದನ್ನು,  ಪ್ರತಿಪಾದಿಸಿರುವ ಪ್ರಖ್ಯಾತ ಲೇಖಕಕ – ಹೆಸರಾಂತ ಹಿರಿಯ ಪತ್ರಕರ್ತ ರವಿಬೆಳಗೆರೆ ಹಾಗೂ ಬಿ. ವಿ ವೈಕುಂಠರಾಜು ಮೊದಲಾದ ಪತ್ರಿಕಾದಿಗ್ಗಜರುಗಳು ತಮ್ಮ ಲೇಖನದಲ್ಲಿ ಹೇಳಿಕೊಂಡಿದ್ದಾರೆ, ಅಷ್ಟು ಮಾತ್ರವಲ್ಲ ಇದೇ ನಿಟ್ಟಿನಲ್ಲಿ ಹಲವಾರು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಅಂತಹ ಘಟನಾಸ್ಥಳಗಳಿಗೆ ಜೀವದಹಂಗುತೊರೆದು ದಾಳಿಯಿಟ್ಟು, ಆ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿ – ದಿಟ್ಟಕಾರ್ಯಚರಣೆ ನಡೆಸಿ, ಸಮಾಜ ಬೆರಗಾಗುವಂತಹ ತನಿಖಾ ವರದಿಗಳನ್ನು ತಮ್ಮ ಪತ್ರಿಕೆಗಳಲ್ಲಿ ಬಿಂಬಿಸುತ್ತಾ ಬಂದಿದ್ದ ಮಾದರಿ ಪತ್ರಕರ್ತರು ಅವರುಗಳು. ಹಾಗಾದರೆ ಅಂತಹ ಶ್ರೇಷ್ಠ ಪರ್ತ್ರಕರ್ತರು ತಮ್ಮ ತನಿಖಾವರದಿಗಳಿಗಾಗಿ ಪಟ್ಟಕಷ್ಟಗಳೆಲ್ಲಾ – ತೆಗೆದುಕೊಂಡ ರಿಸ್ಕ್ಗಳೆಲ್ಲ ಕಾನೂನು ಉಲ್ಲಂಘಿಸಿದಂತಹವೇ?!
ನಿಜಕ್ಕೂ ಪತ್ರಕರ್ತನಾದವನು ಘಟನೆ ನಡೆದಸ್ಥಳಕ್ಕೆ – ಪ್ರಕರಣ ಘಟಿಸಿದ ಸನ್ನಿವೇಶದಲ್ಲಿ ಹಾಜರಿರದೆ – ಪ್ರಶ್ನಿಸದೇ ತನಿಖಾವರದಿಗಳನ್ನು ಸಿದ್ದಪಡಿಸುವುದಾರೂ ಹೇಗೆ? ಮಾಹಿತಿಗಳನ್ನು ಸಂಗ್ರಹಿಸಿಕೊಳ್ಳುವುದಾದರೂ ಹೇಗೆ? ‘ಬೆಚ್ಚಗೆ ತನ್ನ ಕಛೇರಿಯ ಕೋಣೆಯಲ್ಲಿ ಕುಳಿತು ಇಂತಹ ಹಗರಣಗಳನ್ನು ಆತ ಕಲ್ಪಿಸಿಕೊಂಡು ಸುದ್ದಿಮಾಡಬೇಕೆ? ಸತ್ಯಾಸತ್ಯತೆಗಳನ್ನು ಅರಿಯಲು – ಮಾಹಿತಿಗಳನ್ನುಸಂಗ್ರಹಿಸಲು ಈತ ಘಟನಾಸ್ಥಳಕ್ಕೆ ಧಾವಿಸಿಹೋದ ಸಂದರ್ಭವನ್ನೇ… ಪೊಲೀಸರಾಗಲೀ – ನಮ್ಮ ಮಾಧ್ಯಮರಂಗದ ಸಹೋದ್ಯೋಗಿಗಳೇ ಆಗಲೀ, ಸಹಜವಾಗಿ ಖಂಡಿಸದೇ, ಅದ್ಯಾವುದೋ ಪೂರ್ವಗ್ರಹಕ್ಕೆ ಒಳಗಾಗಿಯೋ, ಅದ್ಯಾವುದೋ ವೈಯಕ್ತಿಕ ವೈಶ್ಯಮಕ್ಕೆ ಹೀಗೆ ಉದ್ಯಮದ ಸಹೋದ್ಯೋಗಿಯನ್ನೇ ಬಲಿಕೊಡಲು ಹೋದರೆ…. ಅದೇ ದುರ್ಗತಿ ಮುಂದೊಂದುದಿನ ತಮಗೂ ಬಂದೆರೆಗಬಹುದೆಂಬ ಸೂಕ್ಷöದ ಅರಿವಿರಲಿ. ತೀರ ತಮ್ಮ ಸಹೋದ್ಯೋಗಿಯೋರ್ವನನ್ನು ‘ದರೋಡೆಕೋರ’ ಎಂದು ಹಣೆಪಟ್ಟಿಕಟ್ಟಿ ಬಂಧಿಸಿ ಕರೆದೊಯ್ದ ಹೊಳೆಹೊನ್ನೂರು ಠಾಣೆಯ ವೃತ್ತನಿರೀಕ್ಷಕ ಲಕ್ಷ್ಮಿಪತಿಯಂತಹವರಾಗಲೀ, ನಮ್ಮ ಪತ್ರಿಕಾರಂಗದ ಪತ್ರಕರ್ತಪ್ರಭ್ರೃತಿಗಳಾಗಲೀ ಸಂವಿಧಾನದ ನಾಲ್ಕನೇ ಅಂಗವೆoದೇ ಕರೆಯಲ್ಪಡುವ ಪತ್ರಿಕಾರಂಗವನ್ನು ಗೌರವಾದರದಿಂದ ಕಾಣುವ ರೀತಿಯೇ ಇದು? ಪತ್ರಕರ್ತ ಬಂಧುಗಳೇ ನಿಮ್ಮವನೇ ಆದ ಓರ್ವ ಸಹೋದ್ಯೋಗಿಯನ್ನು ಪೊಲೀಸ್ ಇಲಾಖೆಯ ಆ ಕೆಲ ಅಧಿಕಾರಿ ಸಿಬ್ಬಂದಿಗಳು – ಕಾನೂನುಬಾಹಿರ ಬಿಲ್‌ರಹಿತ ಅಡಿಕೆ ಸಾಗಣೆ ಮಾಡುತ್ತಿದ್ದ ಖದೀಮ ಲಾರಿಚಾಲಕ ಶಫೀವುಲ್ಲಾ ರೆಹಮಾನ್ ಬಿನ್ ಸಜಲೂರ ರೆಹಮಾನ್ ನಂತಹ ವ್ಯಕ್ತಿ ನೀಡಿದ ದೂರನ್ನೇ ಆಧಾರವಾಗಿಟ್ಟುಕೊಂಡು ಅಷ್ಟೊಂದು ತರಾತುರಿಯಲ್ಲಿ ಆ ಪರ್ತಕರ್ತನನ್ನು ಜೈಲಿಗದುಮುವಷ್ಟು ಆತುರವಾದರೂ ಏನಿತ್ತು ಆ ಪೊಲೀಸರಿಗೆ? ಇದು ಅತ್ಯಂತ ಸಂಶಯಾಸ್ಪದ ವಿಷಯ, ಬೇರೆ ಪ್ರಕರಣಗಳಲ್ಲಿ ಜಪ್ಪಯ್ಯ ಎಂದರೂ ಸಾರ್ವಜನಿಕರ ದೂರು ಸ್ವೀಕರಿಸದೇ ಸತಾಯಿಸುವ ಈ ಪೊಲೀಸರಿಗೆ, ಈ ಪ್ರಕರಣದಲ್ಲಿ ಅದೆಂತಹ ಆಸಕ್ತಿ – ಅದ್ಯಾವಪರಿ ಕರ್ತವ್ಯನಿಷ್ಠೆ… ಎನು ಕಥೆ ?! ಗಮನಿಸಿ… ಅಂದರೆ, ಇಂತಹ ‘ಕಳ್ಳ ಪೊಲೀಸ್ ಆಟದಲ್ಲಿ’ ಗ್ರಹಚಾರ ಕೆಟ್ಟರೆ ಅದ್ಯಾವ ನಿಷ್ಠ ಪತ್ರಕರ್ತನಾದರೂ ಬಜಾವಾಗುವುದು – ತಾನೂ ಪತ್ರಕರ್ತನೆಂದು ರುಜುವಾತುಪಡಿಸುವುದು, ಎನು ಕರ್ಮರೀ ನಮ್ಮ ದಟ್ಟದರಿದ್ರ ವ್ಯವಸ್ಥೆಯದ್ದು. ಪತ್ರಿಕೋದ್ಯಮದಲ್ಲಿ ಹಲವಾರು ದಶಕಗಳಿಂದ ಸೇವಾತತ್ಪರರಾಗಿರುವ ಪತ್ರಕರ್ತ ಮಿತ್ರರುಗಳೇ ಜೋಪಾನ! ನೀವು ಯಾವ ಸಂಘದ ಹಂಗುಬೇಡ, ಯಾವ ಗುಂಪಿನ ಸಹವಾಸವೂ ಬೇಡ… ಎಂದು ಪರಿಶುದ್ದ ಮನಸ್ಸಿನಿಂದ ಪತ್ರಿಕಾಸೇವೆಯಲ್ಲಿ ನಿರತರಾಗಿದ್ದರೆ, ಇಂತಹ ಹಗರಣಗಳನ್ನು ನಿಮ್ಮ ತಲೆಗೆಸುತ್ತಿ – ತಪ್ಪಿತಸ್ಥಸ್ಥಾನದಲ್ಲಿ ನಿಲ್ಲಿಸಲು ಹೊಂಚುಹಾಕುತ್ತಿರುವ ಹಿತಶತ್ರುಗಳು ನಿಮ್ಮ ಸುತ್ತಮುತ್ತಲೇ ಇರುತ್ತಾರೆ ಎಚ್ಚರದಿಂದಿರಿ. ಅಂದುನಡೆದ ಘಟನೆಯ ಒಂದು ಚಿಕ್ಕ ಝಲಕ್!… ಇದೇ ನವೆಂಬರ್ ೧ರ ಶುಕ್ರವಾರ ರಾತ್ರಿಯದು, ಚಂದ್ರೋದಯ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ನವೀನ್‌ತಲಾರಿ ತನಿಖಾವರದಿಗೆ ಸಿದ್ದರಾಗಿ ಘಟನಾಸ್ಥಳಕ್ಕೆ ಬಂದಿರುತ್ತಾರೆ, ಬಿಲ್ ಇಲ್ಲದೆ ಕಾನೂನುಬಾಹಿರವಾಗಿ ಅಡಿಕೆ ಸಾಗಿಸುತ್ತಿದ್ದ ಲಾರಿಯ ಬಗೆಗಿನ ಖಚಿತಮಾಹಿತಿಯ ಆಧಾರದ ಮೇರೆಗೆ, ಸದರಿ ಲಾರಿಯನ್ನು ತಡೆದುನಿಲ್ಲಿಸಿದ ಈ ಪತ್ರಕರ್ತ, ತಮ್ಮ ಮೊಬೈಲ್‌ನಲ್ಲಿ ಅಷ್ಟು ಸನ್ನಿವೇಶಗಳನ್ನು ಚಿತ್ರೀಕರಣ ಮಾಡಿಕೊಂಡು, ಸಹಜವಾಗಿಯೇ ಅಡಿಕೆಸಾಗಟದ ಸಂಬoಧದ ಅಧೀಕೃತ ಬಿಲ್ ಎಲ್ಲಿ ಎಂದು ಪ್ರಶ್ನಿಸುತ್ತಾರೆ ಅಲ್ಲಿಂದ ಲಾರಿಯನ್ನು ಸ್ಥಳೀಯ ಹೊಳೆಹೊನ್ನೂರು ಪೊಲೀಸ್‌ಠಾಣೆಗೆ ಕೊಂಡೊಯ್ಯಲಾಗುತ್ತದೆ ಅಲ್ಲಿ ಅಡಿಕೆ ಲೋಡ್‌ಗೆ ಸಂಬoಧಪಟ್ಟoತಹ ಜಿ.ಎಸ್.ಟಿ ಆಗಲೀ ಎ.ಪಿ.ಎಂ.ಸಿ ಸುಂಕಪಾವತಿಯ ವಿವರವಾಗಲೀ ಯಾವುದು ಇರುವುದಿಲ್ಲ. ಆದರೂ ಈ ಅಡಿಕೆ ತುಂಬಿದ ಲಾರಿಗೆ ಸಂಬoಧಪಟ್ಟರ‍್ಯಾರೂ ತಪ್ಪಿತಸ್ಥರಾಗಲೇ ಇಲ್ಲ. ಆದರೆ ಸುದ್ದಿಮಾಡಲೆಂದು ಹೋಗಿದ್ದ ಪತ್ರಕರ್ತ ನವೀನ್‌ತಲಾರಿ, ಅವರ ಜೊತೆಗಿದ್ದ ಸಹಾಯಕ ಇವರಿಬ್ಬರು ತಕ್ಷಣ ‘ನಕಲಿ ಪತ್ರಕರ್ತರಂತೆ – ದರೋಡೆಕೋರರಂತೆ ಆ ಪೊಲೀಸರಿಗೆ ಕಂಡುಬಿಡುತ್ತಾರೆ! ಆ ಲಾರಿಚಾಲಕನನ್ನು ಅಡ್ಡಗಟ್ಟಿ ಅದೆಷ್ಟೋ ಲಕ್ಷರೂಪಾಯಿಗಳಿಗೆ ಬೇಡಿಕೆಯಿಟ್ಟಿದ್ದರು, “ಪೊಲೀಸರಾದ ತಾವುಗಳು ಸಕಾಲಕ್ಕೆ ಅಲ್ಲಿಗೆ ಎಂಟ್ರಿ ಕೊಡದೇ ಹೋಗಿದ್ದರೆ ಬಹಳ ದೊಡ್ಡ ಅನಾಹುತವೇ ಆಗಿ ಹೋಗುತ್ತಿತ್ತು…” ಎಂದೆಲ್ಲಾ ಶುದ್ದಾಂಗ ಸುಳ್ಳಿಗೆ ರೆಕ್ಕೆ ಪುಕ್ಕಗಳನ್ನೆಲ್ಲಾ ಹಚ್ಚಿ ಕಾಗೆಹಾರಿಸಿಬಿಟ್ಟರು ಖಾಕಿಗಳು! ಪಾಪ ಕೆಲವು ಪತ್ರಿಕೆಯವರು ಹೀಗೆ ಹರಿಬಿಟ್ಟ ಸುದ್ದಿಯನ್ನೇ ‘ಹರಿನಾಮ ಸ್ಮರಣೆಯಂತೆ’ ಗಿಳಿಪಾಠದ ರೀತಿಯಲ್ಲಿ ಸುದ್ದಿಮಾಡಿಯೂ ಬಿಟ್ಟರು. “ಲಾರಿಯ ತುಂಬಾ ಕಳ್ಳಮಾಲ್‌ಯಿದ್ದರೂ ಪೊಲೀಸರ ಕೃಪೆಯಿಂದ ಅಡ್ಡಿಯಿಲ್ಲದೆ ಆಚೆ ಹೋಯಿತು, ಭಾರಿ ಉಡುಗೊರೆ ಪಡೆದವರು ಸುದ್ದಿಗಾರ ತಲಾರಿಯನ್ನು ತಡಮಾಡದೆ ಒಳಕಳುಹಿಸಿ ಬಿಟ್ಟರು!” ೧೫ ವರ್ಷದಿಂದ ‘ಚಂದ್ರೋದಯ ಪತ್ರಿಕೆ’ ನಡೆಸಿಕೊಂಡು ಬರುತ್ತಿರುವ ವಾರಪತ್ರಿಕೆಯ ಸಂಪಾದಕ ಹ್ಯಾಂಡ್‌ಬಿಲ್ ಪ್ರಿಂಟ್ ಮಾಡುವವನಲ್ಲ, ಜವಾಬ್ದಾರಿಯುತವಾಗಿ ಒಂದು ವಾರಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿರುವ, ದೆಹಲಿಯ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದಿoದ ಮಾನ್ಯತೆ ಪಡೆದು, ಅಧಿಕೃತ ಆರ್.ಎನ್.ಐ ನಂಬರನ್ನು ಪಡೆದುಕೊಂಡು, ಸ್ಥಳೀಯ ಉಪ ಕಮಿಷನರ್ ಅನುಮತಿ ನೀಡಿದಂತಹ ಪತ್ರಿಕೆಯ ಹೊಣೆಗಾರಿಕೆ ಹೊತ್ತವರು. ದಿನನಿತ್ಯ ಪತ್ರಿಕೆಗೆ ಸುದ್ದಿಸಂಗ್ರಹಿಸಲು – ಮುದ್ರಣದ, ಇನ್ನಿತರೆ ವೆಚ್ಚ ಸರಿದೂಗಿಸಲು ಕಷ್ಟಪಟ್ಟು ದುಡಿಯುವಂತಹ ಪತ್ರಕರ್ತರೆನಿಸಿದವರು. ಇಂತಹ ಓರ್ವ ಜವಾಬ್ದಾರಿಯುತ ಪತ್ರಕರ್ತನನ್ನು ಅದ್ಯಾವ ಧೈರ್ಯದ ಮೇಲೆ – ನೈತಿಕತೆಯ ಮೇಲೆ “ದರೋಡೆಕೋರ – ನಕಲಿ ಪತ್ರಕರ್ತ – ಪತ್ರಕರ್ತರ ಸೋಗಿನಲ್ಲಿ ಬಂದಾತ” ಎಂದು ಟ್ಯಾಗ್‌ಲೈನ್ ಹಾಕುವ ನಿರ್ಲಜ್ಜತನ – ದಾರ್ಷ್ಟ ತೋರುತ್ತೀರಲ್ಲಾ… ಇದು ಒಬ್ಬ ಪತ್ರಕರ್ತನಿಗೆ ಮಾಡುತ್ತಿರುವ ಅವಮಾನವಲ್ಲ, ಇವತ್ತು ಪತ್ರಿಕೆ ನಡೆಸುವ ಪ್ರತಿಯೊಬ್ಬ ಪತ್ರಿಕೋದ್ಯಮಿಗೂ – ವರದಿಗಾರರಿಗೂ ಮಾಡುತ್ತಿರುವ ಅವಮಾನ, ಸಂವಿಧಾನದ ನಾಲ್ಕನೇ ಅಂಗ ಪತ್ರಿಕಾರಂಗಕ್ಕೆ ಆಗುತ್ತಿರುವ ಬಹುದೊಡ್ಡ ಅಪಮಾನ ಹಾಗಾದರೆ ಸಮಾಜದಲ್ಲಿ ನಕಲಿಯಲ್ಲದ ನೈಜಪತ್ರಕರ್ತರು ಯಾರು… ‘ಅವರುಗಳಿಗೇನು ತಲೆಮೇಲೆ ಎರಡು ಕೋಡುಮೂಡಿರುತ್ತದಾ? ಅಥವಾ ಸೊಂಟದ ಹಿಂದೆ ಬಾಲಮೂಡಿರುತ್ತದಾ?! 

Related Articles

Stay Connected

0FansLike
3,912FollowersFollow
0SubscribersSubscribe

Latest Articles