ವಿಶ್ವೇಶ್ವರಯ್ಯ ರಸ್ತೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಆಗಿರುವ ಬಗ್ಗೆ ದೂರುಒಂದನ್ನು ಸಲ್ಲಿಸಿ ರುವದನೋ ಸರಿ ನಮ್ಮ ಶಿವಮೊಗ್ಗದಲ್ಲಿ ಸಂಚಾರಿ ಠಾಣೆ ಪೊಲೀಸರು ಇಡೀ ಶಿವಮೊಗ್ಗದಲ್ಲಿ ಬರಿ ಕೇಸ್ ಹಾಕುವುದರಲ್ಲೇ ತಲ್ಲಿನದಾಗಿರುತ್ತಾರೆ ಎನ್ನುವುದು ಸಾರ್ವಜನಿಕರ ದೂರಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಮೊನ್ನೆ ದೀಪಾವಳಿಯ ಹಬ್ಬದ ಸಮಯದಲ್ಲಿ ಹಬ್ಬದ ಖರೀದಿಗೆಂದು ಬಂದ ದ್ವಿಚಕ್ರ ವಾಹನ ಸವಾರರಿಗೆ ಸಣ್ಣ ಪುಟ್ಟ ಲೋಪಕ್ಕೆ ಕೇಸ್ ಹಾಕುವ ಮೂಲಕ
ಶಿವಮೊಗ್ಗ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದರು
ಹಲವು ವರ್ಷದಿಂದ ಆಟೋಗಳಿಗೆ ಮೀಟರ್ ಕಡ್ಡಾಯ ಮಾಡಿರುವುದು ಬರಿ ಕಾನೂನು ಮಾತ್ರ ಎಂಬಂತಾಗಿದೆ
ಈ ಹಿಂದೆ ಟ್ರಾಫಿಕ್ ಠಾಣಿ ಪೊಲೀಸ್ ಇನ್ಸ್ ಪೆಕ್ಟರ್ ಮಂಜುನಾಥ್ ರವರು ಬಿಎಚ್ ರಸ್ತೆಯಲ್ಲಿ ಇದೇ ತರ ಪುಟ್ ಪಾತ್ ಅಕ್ರಮಿಸಿಕೊಂಡ ಅಂಗಡಿ ಮಾಲೀಕರ ಗುಜರಿ ಸಾಮುನು ಗಳನ್ನು ಯಾವ ಮುಲಾಜಿಗೂ ತಲೆಬಾಗದೆ ತೆರವುಗೊಳಿಸಿದರು ಅದಾದ ನಂತರ ಟ್ರಾಫಿಕ್ ಪೊಲೀಸ್ ಠಾಣೆ ಅಧಿಕಾರಿಗಳು ಇದುವರೆಗೂ ಯಾವುದೇ ತೆರುಗೊಳಿಸುವ ಕಾರ್ಯದಲ್ಲಿ ತೊಡಗದಿರುವುದು ಶಿವಮೊಗ್ಗದ ವಿಪರ್ಯಾಸ ಎನ್ನಬೇಕು ಅಥವಾ ಮುಲಾಜಿಗೆ ಅದೇನೋ ಆದರೂ ಅಂತಾರಲ್ಲ ಹಾಗೋ.
ಮಲೆನಾಡು ಕೇಸರಿ ಪಡೆ, ಶಿವಮೊಗ್ಗ ಇವರ ದೂರಿನ ವಿವರ
ಶಿವಮೊಗ್ಗ ನಗರದ ವಿಶ್ವೇಶ್ವರಯ್ಯ ರಸ್ತೆಯ (ವೀರಭದ್ರ ಟಾಕೀಸ್ ಮುಂಭಾಗ ಇರುವ) ಮುಸ್ಲಿಂ ಹಾಸ್ಟೆಲ್ ಕಾಂಪ್ಲೆಕ್ಸ್ ನಲ್ಲಿರುವ ದ್ವಿಚಕ್ರ ವಾಹನ ಗ್ಯಾರೇಜ್ ರವರಿಂದ ಪಾದಚಾರಿ ಮಾರ್ಗ ಮತ್ತು ರಸ್ತೆಯ ಮಾರ್ಗಗಳಲ್ಲಿ ರಿಪೇರಿಗೆ ಬಂದ ವಾಹನಗಳನ್ನು ನಿಲ್ಲಿಸುವುದರಿಂದ ಮತ್ತು ಪಕ್ಕದಲ್ಲೇ ಇರುವ ಫರ್ನಿಚರ್ ಅಂಗಡಿಯವರು ಫರ್ನಿಚರ್‌ಗಳನ್ನು ಪಾದಚಾರಿ ಮಾರ್ಗದಲ್ಲಿ ಇಡುವುದರಿಂದ ಪಾದಚಾರಿ ಮಾರ್ಗದಲ್ಲಿ ಓಡಾಡಲು ಸಾಧ್ಯವಾಗದೇ ಮುಖ್ಯರಸ್ತೆಯಲ್ಲಿಯೇ ಓಡಾಡುವ ಅನಿವಾರ್ಯತೆ ನಿರ್ಮಾಣವಾಗಿದೆ. ಇಲ್ಲಿ ಶಾಲಾ-ಕಾಲೇಜುಗಳು ಇರುವುದರಿಂದ ಮಕ್ಕಳು ಮತ್ತು ವಯೋವೃದ್ಧರು ಮುಖ್ಯರಸ್ತೆಯಲ್ಲಿ ಸಾಗುವ ಸಂದರ್ಭದಲ್ಲಿ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ತಾವು ಈ ಕೂಡಲೇ ಒತ್ತುವರಿಯನ್ನು ತೆರವುಗೊಳಿಸಬೇಕು. ಹಾಗೂ ಈ ಮಾರ್ಗದಲ್ಲಿ ನೋ-ಪಾರ್ಕಿಂಗ್ (NO PARKING) ಇರುವ ಜಾಗಗಳಲ್ಲಿ ಪಾರ್ಕಿಂಗ್ ಮಾಡುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು. ಹಾಗೂ ಈ ರಸ್ತೆಯು ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಬಾರೀ ವಾಹನಗಳ ಓಡಾಟ ನಿಷೇಧವಿದ್ದರೂ ಇಲ್ಲಿ ಬಾರೀ ವಾಹನಗಳ ಓಡಾಟ ನಿತ್ಯ ನಡೆಯುತ್ತಿರುವುದು ಕಂಡುಬರುತ್ತಿದೆ. ಇಲ್ಲಿದ್ದ ಬಾರೀ ವಾಹನಗಳ ಓಡಾಟ ನಿಷೇದದ ಫಲಕವು ಸ್ಮಾರ್ಟ್ ಸಿಟಿ ಕಾಮಗಾರಿ ಸಂದರ್ಭದಲ್ಲಿ ಕಣ್ಮರೆಯಾಗಿದ್ದು, ಇದನ್ನು ನಿಮ್ಮ ಗಮನಕ್ಕೆ ಈ ಮೂಲಕ ತರುತ್ತಿದ್ದೇವೆ. ತಾವು ಈ ಕೂಡಲೇ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಕಾನೂನು ರೀತ್ಯಾ ನಿವಾರಿಸಬೇಕೆಂದು ಇನ್ಸ್‌ಪೆಕ್ಟರ್, ಪೂರ್ವ ಸಂಚಾರಿ ಪೊಲೀಸ್ ಠಾಣೆ, ಶಿವಮೊಗ್ಗ ಇವರಿಗೆ ಮನವಿ ಸಲ್ಲಿಸಿವ ಸಮಯದಲ್ಲಿ
ಕೇಸರಿ ಪಡೆಯ ಅಧ್ಯಕ್ಷರಾದ ಚಂದ್ರಶೇಖರ(ರಾಜು)
ಅಂಕುಶ್, ಜನಾರ್ದನ,ಸತೀಶ್ ಇನ್ನೂ ಮುಂತಾದವರು ಇದ್ದರು.