Thursday, November 14, 2024
spot_img

ಮಿಥುನ್ ಕುಮಾರ್ ಜಿ.ಕೆ. ಐಪಿಎಸ್ ಅವರು, ಬ್ಯಾಂಕ್ ಅಧಿಕಾರಿಗಳಿಗೆ ಸ್ಮಾರ್ಟ್ ಸುರಕ್ಷಾ ಕ್ರಮಗಳ ಕುರಿತು ಮಾರ್ಗದರ್ಶನ ಎನು..!?

ಶಿವಮೊಗ್ಗ ನಗರದಲ್ಲಿ ಬ್ಯಾಂಕ್ ಮತ್ತು ಎಟಿಎಮ್‌ಗಳ ಸುರಕ್ಷತೆ ಬಗ್ಗೆ ಜನರಲ್ಲಿ ಕಾಳಜಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿಯೇ, ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶ್ರೀ ಮಿಥುನ್ ಕುಮಾರ್ ಜಿ.ಕೆ. ಐಪಿಎಸ್ ಅವರು, ಬ್ಯಾಂಕ್ ಅಧಿಕಾರಿಗಳಿಗೆ ಸ್ಮಾರ್ಟ್ ಸುರಕ್ಷಾ ಕ್ರಮಗಳ ಕುರಿತು ಮಾರ್ಗದರ್ಶನ ನೀಡಿದರು. ವಿಶೇಷವಾಗಿ ನ್ಯಾಮತಿ ಎಸ್‌ಬಿಐ ಕಳ್ಳತನ ಪ್ರಕರಣವು ಈ ಸಭೆಯಲ್ಲಿ ಹೆಚ್ಚು ಪ್ರಸ್ತಾಪವಾಯಿತು.

ಎಸ್‌ಬಿಐ ನ್ಯಾಮತಿ ಶಾಖೆಯಲ್ಲಿ 30-40 ಕೋಟಿಯಷ್ಟು ಹಣ ಮತ್ತು 17 ಕೆಜಿ  ಬಂಗಾರ ಕಳವು ಪ್ರಕರಣವು, ಬ್ಯಾಂಕ್‌ಗಳಲ್ಲಿನ ಭದ್ರತೆ ಕುರಿತು ಗಂಭೀರ ಚಿಂತನೆಗಳಿಗೆ ಕಾರಣವಾಗಿದೆ. ಈ ಪ್ರಕರಣವು ಬ್ಯಾಂಕ್‌ಗಳಲ್ಲಿ ಕ್ಯಾಮಮರಾಗಳ ಅಭಾವ, ದೌರ್ಬಲ್ಯದಿಂದ ದೂರವಿರುವ ಅಲಾರ್ಮ್ ವ್ಯವಸ್ಥೆ, ಹಾಗೂ ಪುನರಾವೃತ್ತಿ ಸಮೀಕ್ಷೆಗಳ ಅಗತ್ಯವಿದೆ ಎಂಬುದನ್ನು ಸ್ಪಷ್ಟಪಡಿಸಿದೆ.
ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಎಲ್ಲಾ ಬ್ಯಾಂಕ್‌ಗಳಿಗೂ ಭದ್ರತೆಯ ನಿಷ್ಠೆ ಉಳಿಸಲು ಹೊಸ ಮಾರ್ಗಸೂಚಿಗಳನ್ನು ಅಳವಡಿಸಿಕೋಳ್ಳಲು ಸೂಚನೆ ನೀಡಲಾಯಿತು.

ಅನಿಲ್ ಬೂಮರೆಡ್ಡಿ ಅವರು ಬ್ಯಾಂಕ್ ಮತ್ತು ಎಟಿಎಮ್‌ಗಳ ಸುರಕ್ಷತೆಯನ್ನು ಉತ್ತೇಜಿಸುವ ಸಲುವಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ತಿಳಿಸಿದರು. ಇತ್ತೀಚೆಗೆ, ವಿನೋಬನಗರದಲ್ಲಿ ಜೆಸಿಬಿ ಯಂತ್ರವನ್ನು ಬಳಸಿಕೊಂಡು ಎಟಿಎಮ್ ದರೋಡೆಗೆ ಯತ್ನಿಸಿದ ಘಟನೆಯು ಕೂಡಾ ಬ್ಯಾಂಕ್‌ಗಳ ಭದ್ರತಾ ಲೋಪದ ಅಂಶವನ್ನು ಎತ್ತಿ ತೋರಿಸಿದೆ.
ಈ ದರೋಡೆ ಪ್ರಕರಣದಲ್ಲಿ ಶಿಕಾರಿಪುರ ಮೂಲದ ಕೆಲವು ಆರೋಪಿಗಳನ್ನು ಬಂಧಿಸಿರುವುದರಿಂದ, ಈ ರೀತಿಯ ಕಳ್ಳತನಗಳ ಕುರಿತು ಸಾರ್ವಜನಿಕರ ಪ್ರಜ್ಞೆಯನ್ನು ಜಾಗೃತಗೊಳಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಬ್ಯಾಂಕ್‌ಗಳಿಗೆ ಅನುಸಾರವಾಗಿ ಪ್ರತಿ ಶಾಖೆಯಲ್ಲಿ ನೈಟ್ ವಿಷನ್ ಸಿಸಿ ಕ್ಯಾಮೆರಾ, ಕನಿಷ್ಟ 100 ದಿನಗಳ ವಿಡಿಯೋ ಸ್ಟೋರೇಜ್ ಮತ್ತು ಡಿವಿಅರ್ ಅನ್ನು ಅತಿದೊಡ್ಡ ಸುರಕ್ಷಿತ ಸ್ಥಳದಲ್ಲಿ ಇಡುವಂತೆ ಸೂಚಿಸಲಾಗಿದೆ. ಇನ್ನು, ಸೆಕ್ಯೂರಿಟಿ ಗಾರ್ಡ್‌ಗಳಿಗೆ ಸೂಕ್ತ ತರಬೇತಿಯನ್ನು ನೀಡಲು, ಲೈಸೆನ್ಸುಗಳನ್ನು ಪಡೆಯಲು ಮತ್ತು ನೈಸರ್ಗಿಕ ತೊಂದರೆಗಳಿಗೂ ತಕ್ಕಂತೆ ಸಿದ್ಧರಾಗಲು ತಿಳಿಸಲಾಯಿತು

Related Articles

Stay Connected

0FansLike
3,912FollowersFollow
0SubscribersSubscribe

Latest Articles