ಆಯನೂರು ವೀರಗಾರನ ಬೈರನಕೊಪ್ಪದಲ್ಲಿ ರೈತನ ಹೊಲದ ಸುತ್ತ ಹೊಡದಿರುವ ಕಾಲುವೆಯಲ್ಲಿ ಗಂಡು ಕಾಡಾನೆಯ ಮೃತದೇಹವೊಂದು ಪತ್ತೆಯಾಗಿದ್ದು,
ವೀರಗಾರನ ಬೈರನಕೊಪ್ಪದಲ್ಲಿ ಆನೆಗಳು ದಾಟದಂತೆ ತೋಡಿದ ಕಂದಕದಲ್ಲಿ ಕಾಡಾನೆಯ ಶವ ಪತ್ತೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ವನ್ನಜೀವಿ ಇಲಾಖೆಯ ಡಿಎಫ್ ಒ ಪ್ರಸನ್ನ ಕುಮಾರ್ ಪಟಗಾರ ಸಾವನ್ನಪ್ಪಿರುವುದು ಗಂಡಾನೆ ಆಗಿದ್ದು ಸುಮಾರು 30 ರಿಂದ 35 ವರ್ಷ ಇರಬಹುದಾಗಿ ತಿಳಿಸಿದ್ದಾರೆ. ಆನೆಯ ಮರಣೋತ್ತರ ಪರೀಕ್ಷೆಯ ನಂತರವೇ ಆನೆಯ ಸಾವಿನ ನಿಖರತೆ ಬಗ್ಗೆ ತಿಳಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪುರುದಾಳು, ಆಲದದೇವರ ಕೊಪ್ಪ, ಮಂಚರಿಕೊಪ್ಪ, ಸಿರಿಗೆರೆ ಮೊದಲಾದ ಕಡೆ ರೈತರ ಹೊಲಗಳಿಗೆ ಮತ್ತು ತೋಟಗಳಿಗೆ ಹಾವಳಿ ಇಡುತ್ತಿದ್ದ ಸುದ್ದಿಗಳ ನಡುವೆ ಕಾಡಾನೆಯೊಂದು ಸಾವನ್ನಪ್ಪಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ನಿನ್ನೆ ಗುಡ್ಡದ ಅರಕೆರೆ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳಿದಾಗ ಗದ್ದೆಗಳಿಗೆ ಮತ್ತು ತೋಟಗಳಿಗೆ ವಿದ್ಯುತ್ ತಂತಿ ಅಳವಡಿಸಿರುವ ದೃಶ್ಯ ಕಂಡುಬಂದಿದ್ದು, ಇದರ ತೆರವಿಗೆ ಡಿಎಫ್ ಒ ಸೂಚನೆ ನೀಡಿದ್ದರು. ಆ ಸೂಚನೆ ನೀಡಿದ ಬೆನ್ನಲ್ಲೇ ವೀರಭೈರನಕೊಪ್ಪದ ಗ್ರಾಮದಲ್ಲಿ ಕಂದಕದಲ್ಲಿ ಆನೆಯ ಮೃತದೇಹ ಪತ್ತೆಯಾಗಿರುವುದು ಹಲವು ಅನುಮಾನಕ್ಕೂ ಕಾರಣವಾಗಿದೆ. ಆದರೆ ಮರಣೋತ್ತರ ಪರೀಕ್ಷೆ ನಂತರವೇ ಸ್ಪಷ್ಟತೆ ತಿಳಿಯುವುದರಿಂದ ವರದಿ ಏನು ಬರಲಿದೆ ಎಂಬುದು ಕುತೂಹಲ ಮೂಡಿಸಿದೆ.
ಕಂದಕದಲ್ಲಿ ಪತ್ತೆಯಾಗಿರುವ ಕಾಡಾನೆಯ ಕಾಲು ಮುರಿದು ಹೋಗಿದೆ ಈ ಆನೆ ಸತ್ತು ಎರಡು ದಿನಕಳೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆನೆ ಸತ್ತಿರುವ ಹಿಂಭಾಗದಲ್ಲಿ ತಂತಿ ಬೇಲಿ ಸಹಾ ಕಂಡು ಬಂದಿದೆ.
ಒಟ್ಟಿನಲ್ಲಿ ಕಾಡಾನೆಗಳ ಹಾವಳಿಯ ಮಧ್ಯೆ ಸಾವಿನ ಸುದ್ದಿಯೊಂದು ಶಿವಮೊಗ್ಗದಲ್ಲಿ ಸಂಚಲನದ ಜೊತೆಗೆ ಅನುಮಾನಗಳನ್ನ ಹುಟ್ಟಿಸಿದೆ.