ಶಿವಮೊಗ್ಗ ನಗರದ ಕೋಟೆ ಶ್ರೀ ಸೀತಾ ರಾಮಾಂಜನೇಯ ದೇಗುಲದಲ್ಲಿ  ಹಾಗೂ ಮಲೆನಾಡಲ್ಲಿ ಗೋ ಪೂಜೆ ಸಂಭ್ರಮ: ಹಳ್ಳಿಗಳಲ್ಲಿ ದನಕರುಗಳಿಗೆ ಸಿಂಗಾರ, ವಿಶೇಷ ಪೂಜೆ..

0
199

ಶಿವಮೊಗ್ಗದ ವಿವಿಧ ಬಡಾವಣೆ, ವಾರ್ಡ್‌‌ಗಳ ಪ್ರಮುಖ ದೇಗುಲದಲ್ಲಿ ಗೋವು ಸಮೇತ ಪೂಜೆ ಸಲ್ಲಿಸಲಾಗಿದೆ. ಗಾಂಧಿ ಬಜಾರ್‌ನ ಬಸವೇಶ್ವರ ದೇವಸ್ಥಾನ, ಸೀಗೆಹಟ್ಟಿಯ ಜಾನಕೀ ರಾಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ.

ಮಲೆನಾಡಿನ ಹೊಸೂರುನಲ್ಲಿ ಶಿವಮೊಗ್ಗ ಜಿಲ್ಲೆಯ ಸಮಾಜಿಕ ಸಾಮರಸ್ಯ ಅಧ್ಯಕ್ಷ ಸತೀಶ್ ಮುಂಚಮನೆ ಅವರ ಮನೆಯಲ್ಲಿ ಗೋಪೂಜೆ ನೆರವೇರಿಸಿದರು

ಶಿವಮೊಗ್ಗ: ದೀಪಾವಳಿ ಅಂಗವಾಗಿ ಬಲಿ ಪಾಡ್ಯಮಿ ದಿನ ಎಲ್ಲೆಡೆ ಗೋ ಪೂಜೆ ಅಥವಾ ಗೋವರ್ಧನ ಪೂಜೆ ನೆರವೇರಿಸುವುದು ವಾಡಿಕೆ. ರಾಜ್ಯಾದ್ಯಂತ ಶನಿವಾರ ಸಂಭ್ರಮ ಸಡಗರದಿಂದ ಗೋ ಪೂಜೆ ನೆರವೇರಿಸಲಾಗಿದೆ.

ಶಿವಮೊಗ್ಗ ನಗರದ ಕೋಟೆ ಶ್ರೀ ಸೀತಾ ರಾಮಾಂಜನೇಯ ದೇಗುಲದಲ್ಲಿ ನಗರ ವಾಸಿಗಳು ಪೂಜೆ ಸಲ್ಲಿಸಿದರು.

ಶನಿವಾರ ಮುಂಜಾನೆಯಿಂದಲೇ ಮಹಿಳೆಯರು ದೇವಸ್ಥಾನದತ್ತ ಹರಿದು ಬರುತ್ತಿದ್ದರು. ಕೋಟೆ ಶ್ರೀ ಸೀತಾ ರಾಮಾಂಜನೇಯ ದೇಗುಲದಲ್ಲಿ  ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಗೋ ಪೂಜೆ ನೆರವೇರಿಸಿದರು.

ಶಿವಮೊಗ್ಗದ ಶಾಸಕರದ ಚೆನ್ನಿ, ಚನ್ನಬಸಪ್ಪ ಗೋ ಪೂಜೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿವಮೊಗ್ಗದ ವಿವಿಧ ಬಡಾವಣೆ, ವಾರ್ಡ್‌‌ಗಳ ಪ್ರಮುಖ ದೇಗುಲದಲ್ಲಿ ಗೋವು ಸಮೇತ ಪೂಜೆ ಸಲ್ಲಿಸಲಾಗಿದೆ. ಗಾಂಧಿ ಬಜಾರ್‌ನ ಬಸವೇಶ್ವರ ದೇವಸ್ಥಾನ, ಸೀಗೆಹಟ್ಟಿಯ ಜಾನಕೀ ರಾಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿ ಕೋಳ್ಳಲಾಗಿತ್ತು ಸಾಂಕೇತಿಕವಾಗಿ ಕೋಟೆ ಆಂಜನೇಯನಯ ಸ್ವಾಮಿ ದೇವಸ್ಥಾನದಲ್ಲಿ ಶಾಸಕ ಚೆನ್ನಬಸಪ್ಪ ಗೋಪೂಜೆ ನೆರವೇರಿಸಿದರು  ವಿಶ್ವಹಿಂದೂ ಪರಿಷತ್  ಜಿಲ್ಲಾ ಅಧ್ಯಕ್ಷ ವಾಸುದೇವ ನಗರ ಅಧ್ಯಕ್ಷ ವಿನೋದ್ ಕುಮಾರ್ ಜೈನ್,  ಜಿಲ್ಲಾ ಉಪಾಧ್ಯಕ್ಷರು ನಟರಾಜ್, ಜಿಲ್ಲಾ ಕಾರ್ಯದರ್ಶಿ ನಾರಯಣವರ್ಣೇಕರ್, ಬಜರಂಗದಳ ಸಹ ಸಂಚಾಲಕ ಸುರೇಶ್ ಬಾಬು, ನಗರ ಕಾರ್ಯದರ್ಶಿ ಅರವಿಂದ್, ಮಾತೃಶಕ್ತಿ ಪ್ರಮುಖ್ ಸುನೀತಮ್ಮ, ಲಕ್ಷ್ಮೀ ಉಪಸ್ಥಿತರಿದ್ದರು.