Friday, November 15, 2024
spot_img

ಕುಂಸಿ ಪೊಲೀಸರ ಗಾಂಜಾ ರೈಡ್-ಓರ್ವ ಬಂಧನ ಶಿವಮೊಗ್ಗ ದ ಕುವೆಂಪುನಗರದಲ್ಲಿ ಗಾಂಜಾ ಸೇಲ್‌  ರಾಗಿಗುಡ್ಡದ ದಾಸ, ಬಸವನಗುಡಿ ಜಾನ್‌ ಅರೆಸ್ಟ್‌.!?

ಅ.25 ರಂದು ಮಧ್ಯಾಹ್ನ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗರಭಾವಿ ಬಸ್ ನಿಲ್ದಾಣದಲ್ಲಿ  ಮಾದಕ ವಸ್ತು ಗಾಂಜಾವನ್ನು  ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಕುಂಸಿ ಪೊಲೀಸರು ಖಡಕ್ ದಾಳಿ ನಡೆಸಿ ಓರ್ವನನ್ನ ಬಂಧಿಸಲಾಗಿದೆ.


ಶಿವಮೊಗ್ಗ-ಬಿ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ  ದೀಪಕ್ ಎಂ. ಎಸ್, ಪೊಲೀಸ್ ನಿರೀಕ್ಷಕರು, ಮತ್ತು ಶಾಂತರಾಜ್ ಪೊಲೀಸ್ ಉಪ ನಿರೀಕ್ಷಕರು, ಕುಂಸಿ ಪೊಲೀಸ್ ಠಾಣೆ  ರವರ ನೇತೃತ್ವದ ಸಿಬ್ಬಂಧಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ, ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ  ವ್ಯಕ್ತಿ  ಚಂದ್ರಾನಾಯಕ್, 46 ವರ್ಷ, ಬೀರನ ಕೆರೆ ಗ್ರಾಮ ಶಿವಮೊಗ್ಗ ಈತನನ್ನು ಬಂಧಿಸಲಾಗಿದೆ
ಗಾಂಜಾ ಮಾರಾಟ ಮಾಡುವ ವೇಳೆ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ.

ಆರೋಪಿಯಿಂದ ಅಂದಾಜು ಮೌಲ್ಯ 15,000/- ರೂಗಳ 640  ಗ್ರಾಂ ತೂಕದ ಒಣ ಗಾಂಜಾ ಅಮಾನತ್ತು ಪಡಿಸಿಕೊಂಡು ಠಾಣಾ ಗುನ್ನೆ ಸಂಖ್ಯೆ 0213/2024 ಕಲಂ  20(b), 8(c) NDPS ಕಾಯ್ದೆ ರೀತ್ಯಾ ಪ್ರಕಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಶಿವಮೊಗ್ಗ ದ ಕುವೆಂಪುನಗರದಲ್ಲಿ ಗಾಂಜಾ ಸೇಲ್‌  ರಾಗಿಗುಡ್ಡದ ದಾಸ, ಬಸವನಗುಡಿ ಜಾನ್‌ ಅರೆಸ್ಟ್‌

ಶಿವಮೊಗ್ಗ | ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆ ಪೊಲೀಸರು, ಮಾದಕವಸ್ತು ಮಾರುತ್ತಿದ್ದ ಇಬ್ಬರನ್ನ ಬಂಧಿಸಿದ್ದಾರೆ.

ದಿನಾಂಕಃ 24-10-2024 ರಂದು ಮಧ್ಯಾಹ್ನ ಕುವೆಂಪು ನಗರದಲ್ಲಿ ಇಬ್ಬರು ವ್ಯಕ್ತಿಗಳು ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. 

ಮಾಹಿತಿಯನ್ನ ಆಧರಿಸಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆಯ ಸಿಬ್ಬಂಧಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿದೆ. ಈ ವೇಳೆ ಇಬ್ಬರು ವ್ಯಕ್ತಿಗಳು ಸಿಕ್ಕಿಬಿದ್ದಿದ್ದಾರೆ

ಸಿಕ್ಕಿಬಿದ್ದವರು

1)ಭರತ್ ಟಿ @ ಜಾನ್ ಭರತ್, 27  ವರ್ಷ, ಬಸವನಗುಡಿ ಶಿವಮೊಗ್ಗ

2) ನರಸಿಂಹ ಎಸ್ @ ದಾಸ, 39  ವರ್ಷ, ರಾಗಿಗುಡ್ಡ ಶಿವಮೊಗ್ಗ

ಇನ್ನೂ ಬಂಧಿತರಿಂದ ಇಬ್ಬರು ಆರೋಪಿತರಿಂದ ಅಂದಾಜು ಮೌಲ್ಯ 28,000/-  ರೂಗಳ 668  ಗ್ರಾಂ ತೂಕದ ಒಣ ಗಾಂಜಾ ಮತ್ತು ರೂ 400/- ನಗದು ಹಣವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. 

ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಕಲಂ  20(b) (ii) A, 8(c) NDPS ಕಾಯ್ದೆ ಅಡಿಯಲ್ಲಿ ಕೇಸ್‌ ದಾಖಲಿಸಲಾಗಿದೆ

Related Articles

Stay Connected

0FansLike
3,912FollowersFollow
0SubscribersSubscribe

Latest Articles