ಶಿವಮೊಗ್ಗದಲ್ಲಿ ರಾತ್ರಿ ಇಡಿ ಸುರಿದ ಭಾರಿ ಮಳೆ ರಾಜಕಾಲುವೆ, ಚರಂಡಿಗಳು ತುಂಬಿ ರಸ್ತೆ, ಮನೆಗಳಿಗೆ ನೀರು ಎಲ್ಲಿ ಎನಾಯಿತು..!?

0
672
Oplus_131072

ಇನ್ನು, ಜೋರು ಮಳೆಗೆ ನಗರದ ವಿವಿಧೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಅಲ್ಲಲ್ಲಿ ರಾಜಕಾಲುವೆ, ಚರಂಡಿಗಳು ತುಂಬಿ ರಸ್ತೆ, ಮನೆಗಳಿಗೆ ನೀರು ನುಗ್ಗಿದೆ.

ಆರ್ ಎಂ ಎಲ್ ನಗರ
ಹೊಸಮನೆ – ವಿನೋಬನಗರ
ಗೋಪಾಳ ಗೌಡ ಬಡಾವಣೆ,
ಕಾಶಿಪುರ ತಮಿಳು ಕ್ಯಾಂಪ್,
ಎಲ್ಬಿಎಸ್ ನಗರ ಕೃಷ್ಣಮಠ ರಸ್ತೆ
ಅಶ್ವತ್ ನಗರದ ರೋಟರಿ ಭವನದ ಹಿಂಭಾಗ ರಸ್ತೆ,

ಶಿವಮೊಗ್ಗ ಗೋಪಾಲಗೌಡ ಬಡಾವಣೆಯ ಸಿ ಬ್ಲಾಕ್‌ನಲ್ಲಿ ರಾಜಾ ಕಾಲುವೆ, ಚರಂಡಿಳು ತುಂಬಿ ನೀರು ಹೊರಗೆ ಹರಿಯುತ್ತಿದೆ. ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ. ಮನೆ, ಅಂಗಡಿಗಳಿಗೆ ಚರಂಡಿ ನೀರು ನುಗ್ಗಿದ್ದು ಆಸ್ತಿಪಾಸ್ತಿ ಹಾನಿಯಾಗಿದೆ.

ಟ್ಯಾಂಕ್‌ ಮೊಹಲ್ಲಾ, ಅಂಗಳಯ್ಯನಕೆರೆ ಕೂಡ ಜಲಾವೃತವಾಗಿವೆ. ರಸ್ತೆ ಮೇಲೆ ನೀರು ಹರಿಯುತ್ತಿದೆ. ಬೈಕು, ಕಾರುಗಳು ನೀರಿನಲ್ಲಿ ಮುಳುಗಿವೆ.
ಮನೆಗಳು, ಮಳಿಗೆಗಳಿಗು ನೀರು ನುಗ್ಗಿದೆ. ದಿನ ಬಳಕೆ ವಸ್ತುಗಳು, ಪೀಠೋಪಕರಣಗಳು ಹಾನಿಯಾಗಿವೆ. ಇಲ್ಲಿನ ಮಾರಿಕಾಂಬ ದೇವಸ್ಥಾನದಲ್ಲಿ ಅಂಗಳದಲ್ಲಿ ನೀರು ನಿಂತಿದೆ. ಚರಂಡಿ ನೀರು ಮನೆಗಳಿಗೆ ನುಗ್ಗಿರುವುದರಿಂದ ದುರ್ವಾಸನೆ ಬೀರುತ್ತಿದೆ.

ಅಣ್ಣಾನಗರ ಬಡಾವಣೆಯಲ್ಲೂ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಮುಖ್ಯ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಇಲ್ಲಿಯು ಮನೆಗಳಿಗೆ ನೀರು ನುಗ್ಗಿದೆ.
ಅಶ್ವಥ ನಗರ, ಎಲ್‌ಬಿಎಸ್‌ ಬಡಾವಣೆಯಲ್ಲಿ ಹಾದು ಹೋಗಿರುವ ರಾಜಾಕಾಲುವೆ ಭರ್ತಿಯಾಗಿದೆ. ಇದರಿಂದ ಮೋರಿ ನೀರು ಹರಿದು ಹೋಗಲು ಸಾಧ್ಯವಾಗದೆ ರಸ್ತೆಗೆ ನುಗ್ಗಿದೆ. ಇಲ್ಲಿಯು ಮನೆಗಳಿಗೆ ನೀರು ನುಗ್ಗಿದೆ. ಕೆಲವು ಕಟ್ಟಡಗಳು ಅಕ್ಷರಶಃ ದ್ವೀಪದಂತಾಗಿವೆ. ಬೆಳಗ್ಗೆದ್ದು ಜನರು ಮನೆಗಳಿಂದ ಹೊರ ಬರಲು ಪರದಾಡುತಿದ್ದಾರೆ.

ಮಳೆಯಿದ್ದರೂ ಪಥಸಂಚಲನ ನಿಲ್ಲದು.
ಶತಾಬ್ದಿಯ (ನೂರನೆಯ ವರ್ಷದ) ಶಿವಮೊಗ್ಗ ನಗರದ ವಿಜಯದಶಮಿ ಪಥಸಂಚಲನ.

ಶಿವಮೊಗ್ಗ ನಗರದ ಹಲವು ಬಡಾವಣೆಗಳಿಗೆ ನೀರು ನುಗ್ಗಿರುವ ವರದಿಯಾಗಿದೆ. ಕೆಲವು ಬಡಾವಣೆಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ಇನ್ನು, ಯುಜಿಡಿ ಭರ್ತಿಯಾಗಿ ಕೆಲವು ಕಡೆ ನೀರು ಹೊರಗೆ ಬಂದಿದೆ.

ಶಿವಮೊಗ್ಗ ತಾಲ್ಲೂಕು ಮುದ್ದಿನಕೊಪ್ಪ ಮತ್ತು ಯರೇಕೊಪ್ಪ ಗ್ರಾಮದ ಮಧ್ಯ ಇಂದು ಬೆಳಗ್ಗೆ ಭಾರಿ ಮಳೆಗೆ ಹಾಗೂ ಸಿಡಿಲು ಬಡಿದು ರಸ್ತೆ ಬಿರುಕು ಬಿಟ್ಟಿರುವುದು

ಮಳೆಗೆ ಶಿವಮೊಗ್ಗ ನಗರ ತತ್ತರಿಸಿದೆ. ರಾತ್ರಿ ಪೂರ್ತಿ ಅಬ್ಬರಿಸಿದ್ದ ವರುಣ ಬೆಳಗ್ಗೆ 8 ಗಂಟೆ ಹೊತ್ತಿಗೆ ಕೊಂಚ ಬಿಡುವು ನೀಡಿದ್ದ. ಈಗ ಪುನಃ ಮಳೆ ಆರಂಭವಾಗಿದೆ. ಇನ್ನು, ಇಡೀ ದಿನ ಮತ್ತಷ್ಟು ಮಳೆಯಾಗುವ ಸಾಧ್ಯತೆ ಹವಾಮಾನ ಇಲಾಖೆ ಸೂಚಿಸುದೆ ಇದರಿಂದ ಇಡೀ ದಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಜನರಲ್ಲಿ ಅತಂಕ ಮೂಡಿಸಿದೆ.