ಪೋಸ್ಟ್ ಆಫೀಸ್ RD ಸ್ಕೀಂನಲ್ಲಿ ಕೇವಲ 5,000 ರೂ ಹೂಡಿಕೆ ಮಾಡಿದರೆ 8.54 ಲಕ್ಷ ರೂ ಆದಾಯ
ಪೋಸ್ಟ್ ಆಫೀಸ್‌ನಲ್ಲಿ ಸಣ್ಣ ಸಣ್ಣ ಹಲವು ಉಳಿತಾಯ ಯೋಜನೆಗಳಿವೆ. ಈ ಪೈಕಿ ಆರ್‌ಡಿ ಸೌಲಭ್ಯ ಹಾಗೂ ಆದಾಯ ಕೇಳಿದರೆ ಅಚ್ಚರಿಯಾಗುವುದು ಖಚಿತ. ಕೇವಲ 5,000 ರೂಪಾಯಿ ಹೂಡಿಕೆಯಲ್ಲಿ 8.54 ಲಕ್ಷ ರೂಪಾಯಿ ಪಡೆಯುವ ಸಣ್ಣ ಉಳಿತಾಯ ಯೋಜನೆ ಡಿಟೇಲ್ಸ್ ಇಲ್ಲಿದೆ.
ಅಂಚೆ ಕಚೇರಿ ಉಳಿತಾಯ
ಯೋಜನೆ: ಪ್ರತಿಯೊಬ್ಬರೂ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿ ಸಂಗ್ರಹಿಸಬೇಕೆಂದು ಕನಸು ಕಾಣುತ್ತಾರೆ.
ನೀವು ಭವಿಷ್ಯದಲ್ಲಿ ಉತ್ತಮ ಆದಾಯವನ್ನು ಪಡೆಯಲು ಬಯಸಿದರೆ, ಭಾರತ ಸರ್ಕಾರವು ನಿಮಗಾಗಿ ಹಲವು ಉತ್ತಮ ಯೋಜನೆಗಳನ್ನು ಜಾರಿಗೆ ತಂದಿದೆ. ಹೂಡಿಕೆ ಸುರಕ್ಷಿತವಾಗಿರುತ್ತದೆ. ಕಾರಣ ಪೋಸ್ಟ್ ಆಫೀಸ್ ಅಡಿಯಲ್ಲಿನ ಯಾವುದೇ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ ಅಂಜಿಕೆ ಬೇಡ.
ಪೋಸ್ಟ್ ಆಫೀಸ್‌ನಲ್ಲಿನ ರಿಕರಿಂಗ್ ಡೆಪಾಸಿಟ್(RD) ಉಳಿತಾಯ ಯೋಜನೆ ಕುರಿತು ತಿಳಿದೊಳ್ಳಲೇಬೇಕು. ಇದು ಸಣ್ಣ ಉಳಿತಾಯದ ಮೂಲಕದ ದೊಡ್ಡ ಆದಾಯ ಪಡೆಯುವ ಯೋಜನೆ. ಇದು ಸುರಕ್ಷಿತ ಹೂಡಿಕೆಯಾಗಿದೆ. ಈ ಯೋಜನೆಯ ಮೆಚ್ಯೂರಿಟಿ ಅವಧಿ ಒಟ್ಟು 5 ವರ್ಷಗಳು. ಸಣ್ಣ ಮೊತ್ತವನ್ನು ಉಳಿತಾಯ ಮಾಡೂವ ಮೂಲಕ ಶ್ರೀಮಂತರಾಗಲು ಸಾಧ್ಯವಿದೆ. ಈ ಯೋಜನೆಯಲ್ಲಿ ಎಷ್ಟು ಬಡ್ಡಿ ಸಿಗುತ್ತದೆ ತಿಳಿದುಕೊಳ್ಳೋಣ.
ಅಂಚೆ ಕಚೇರಿ ಯೋಜನೆಗೆ ಸಂಬಂಧಿಸಿದ ಪ್ರಮುಖ ವಿಷಯಗಳು
ಅಂಚೆ ಕಚೇರಿ RD ಯೋಜನೆ ಜನರಿಗೆ ವರದಾನವಿದ್ದಂತೆ. ಈ ಯೋಜನೆಯ ಮೆಚ್ಯೂರಿಟಿ ಅವಧಿ 5 ವರ್ಷಗಳು, ಆದರೆ ನಿಮ್ಮ ಇಚ್ಛೆಯಂತೆ 10 ವರ್ಷಗಳವರೆಗೆ ವಿಸ್ತರಿಸಬಹುದು. ಈ ಯೋಜನೆಯಲ್ಲಿ, ನೀವು ಸುಲಭವಾಗಿ 6.7% ವರೆಗೆ ಬಡ್ಡಿಯನ್ನು ಪಡೆಯಬಹುದು. ಒಟ್ಟು ₹100 ಠೇವಣಿ ಮಾಡಿ, RD ಯೋಜನೆಯಲ್ಲಿ ನಿಮ್ಮ ಖಾತೆಯನ್ನು ಪ್ರಾರಂಭಿಸಬಹುದು.
ಇದರಿಂದ ಯಾವುದೇ ಸಮಸ್ಯೆ ಬರುವುದಿಲ್ಲ. ಯೋಜನೆಯಲ್ಲಿ ಹೂಡಿಕೆ ಮಾಡಲು ಮಿತಿಯಿಲ್ಲ. ನಿಮ್ಮ ಮಕ್ಕಳ ಹೆಸರಿನಲ್ಲಿಯೂ ಖಾತೆಯನ್ನು ಪ್ರಾರಂಭಿಸಬಹುದು. ಮೆಚ್ಯೂರಿಟಿಗೆ ಮೊದಲು ಖಾತೆಯನ್ನು ಮುಚ್ಚುವ ಸೌಲಭ್ಯವೂ ಇದರಲ್ಲಿದೆ. ಈ ಯೋಜನೆಯಲ್ಲಿ ಸಾಲ ಸೌಲಭ್ಯವೂ ಸುಲಭವಾಗಿ ಲಭ್ಯವಿದೆ. ಒಂದು ವರ್ಷದ ಮೊತ್ತವನ್ನು ಠೇವಣಿ ಮಾಡಿದ ನಂತರ, ಒಟ್ಟು ಮೊತ್ತದ 50% ಸಾಲವಾಗಿ ಪಡೆಯಬಹುದು. ಈ ಸಾಲಕ್ಕೆ 2% ಬಡ್ಡಿಯನ್ನು ಠೇವಣಿ ಮಾಡಬೇಕು.
ಲಕ್ಷಾಧಿಪತಿಯಾಗುವ ಮಾರ್ಗ
ಅಂಚೆ ಕಚೇರಿಯ RD ಯೋಜನೆಯಲ್ಲಿ ಲಕ್ಷಾಧಿಪತಿಯಾಗುವ ಮಾರ್ಗವೂ ತುಂಬಾ ಸರಳ. ಇದರಿಂದ ಯಾವುದೇ ಸಮಸ್ಯೆ ಇರುವುದಿಲ್ಲ. ಇದರಲ್ಲಿ, ನೀವು ತಿಂಗಳಿಗೆ ₹5,000 ಹೂಡಿಕೆ ಮಾಡಬೇಕು. 5 ವರ್ಷಗಳ ಮೆಚ್ಯೂರಿಟಿ ನಂತರ, ನೀವು ಒಟ್ಟು ₹3 ಲಕ್ಷವನ್ನು ಠೇವಣಿ ಮಾಡಿರಬೇಕು. ಈ ಹೂಡಿಕೆಯಲ್ಲಿ 6.7% ಬಡ್ಡಿಯೊಂದಿಗೆ, ₹56,830 ಹೆಚ್ಚುವರಿಯಾಗಿ ಸೇರ್ಪಡೆಯಾಗುತ್ತದೆ.
ಯೋಜನಾ ಖಾತೆಯನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಿದರೆ, ಠೇವಣಿ ಮೊತ್ತ ಸುಲಭವಾಗಿ ₹6,00,000 ಆಗುತ್ತದೆ. ಅದೇ ಸಮಯದಲ್ಲಿ, ಮೊತ್ತಕ್ಕೆ ಬಡ್ಡಿಯೂ ₹2,54,272ಕ್ಕೆ ಏರುತ್ತದೆ. 10 ವರ್ಷಗಳು ಪೂರ್ಣಗೊಂಡ ನಂತರ, ನೀವು ₹8,54,272 ರ ಮಾಲೀಕರಾಗುತ್ತೀರಿ.