ನಾವು ಕಳಕಳಿಯಿಂದ ನಿರೀಕ್ಷಿಸುತ್ತಿದ್ದ ಕೃಷಿ ಮೇಳ 2024, ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಅಕ್ಟೋಬರ್ 19, 20, 21 ರಂದು ಆಯೋಜನೆಗೊಳ್ಳುತ್ತಿದೆ. ಕೃಷಿ ಹಾಗೂ ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಈ ಮೇಳವನ್ನು ಹಮ್ಮಿಕೊಂಡಿರುವುದು ಸಂತಸದ ಸಂಗತಿ. ಆದರೆ, ಪೂರ್ವಸಿದ್ಧತೆಗಳ ಕೊರತೆಯಿಂದ ಈ ಮೇಳವು ಕೆಲ ತೊಂದರೆಗಳನ್ನು ಎದುರಿಸುತ್ತಿರುವುದು ಅಧಿಕಾರಿಗಳು ಇಲ್ಲಿಯ ವರೆಗೂ ಎನುಮಾಡಿದರು ಎಂಬುದು ಯಕ್ಷಪ್ರಶ್ನೆಯಾಗಿದೆ.
ಮೇಳದ ಪೂರ್ವಸಿದ್ಧತೆಗಳು ಬಹುತೇಕ ಪೂರ್ಣಗೊಂಡಿಲ್ಲ. ಸಭಾಂಗಣದ ಸುತ್ತಮುತ್ತದ ಪರಿಸರಕ್ಕೆ ಸರಿಯಾದ ನಿರ್ವಹಣೆ ಇಲ್ಲದೇ, ಮೀನಿನ ವಾಸನೆ ಹಾಗು ಸಭಾಂಗಣಕ್ಕೆ ಭೇಟಿ ನೀಡಲು ಕಷ್ಟಕರವಾದ ಕೆಸರಿನ ಪರಿಸ್ಥಿತಿ ಹಾನಿಯಾಗಿದೆ. ಹಠಾತ್ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸ್ಥಳೀಯ ಅಧಿಕಾರಿಗಳು ಜೆ.ಸಿ.ಬಿ. ಬಳಸಿ ಪರಿಸ್ಥಿತಿಯನ್ನು ತಕ್ಷಣ ಸರಿಪಡಿಸಲು ಯತ್ನಿಸುತ್ತಿರು ಇದು “ಬೆಂಕಿ ಬಿದ್ದಮೇಲೆ ಬಾವಿ ತೋಡುವಂತ” ಆಗಿದೆ ಎಂಬ ಮಾತು ಸಧ್ಯಾವಸ್ಥೆಗೆ ಹೊಂದುತ್ತದೆ.
ಆದರೂ, ಮೇಳದಲ್ಲಿ ನಡೆಯಲಿರುವ ಚರ್ಚಾ ಗೋಷ್ಠಿಗಳು ಹಾಗು ತಾಂತ್ರಿಕ ಸಮಾವೇಶಗಳು ಪ್ರಮುಖ ಮನ್ನಣೆ ಗಳಿಸಬಹುದಾದವು. ಸುಸ್ಥಿರ ಅಡಿಕೆ ಕೃಷಿಯ ಕುರಿತು ವಿಜ್ಞಾನಿಗಳು ಮತ್ತು ಪ್ರಗತಿಪರ ರೈತರು ಚರ್ಚೆ ನಡೆಸಲಿದ್ದು, ಪೌಷ್ಟಿಕ ಆಹಾರದ ಉತ್ಪಾದನೆಗೆ ಒತ್ತು ನೀಡಲಾಗುತ್ತದೆ. ಈ ಮೇಳವು ಪೌಷ್ಟಿಕ ಆಹಾರಕ್ಕಾಗಿ ನವೀಕೃತ ಕೃಷಿ ತಂತ್ರಗಳನ್ನು ಪ್ರಚಾರ ಮಾಡುವುದರ ಜೊತೆಗೆ ಆರ್ಥಿಕ ಸದೃಢತೆಗಾಗಿ ಸಾಂಬಾರು ಮತ್ತು ವಾಣಿಜ್ಯ ಬೆಳೆಗಳ ಕುರಿತು ವಿವರಣೆ ನೀಡಲಿದೆ.
ಮೇಳವು ಭೂಮಿಯ ಸೃಜನಶೀಲ ಬಳಕೆ, ಪೋಷಕಾಂಶಗಳಿಂದ ಹಣ್ಣು-ತರಕಾರಿ ಬೆಳೆಯುವ ತಂತ್ರಗಳು, ಹಾಗು ಕೃಷಿಕರು ಮುಂದೆ ಸಾಗಲು ಬೇಕಾದ ತಂತ್ರಜ್ಞಾನಗಳ ಪರಿಚಯದ ವೇದಿಕೆ ಆಗುವುದು ರೈತರು ಇದರ ಸದುಪಯೋಗ ಪಡೆದು ಕೊಳ್ಳಬಹುದು.