ಶಿವಮೊಗ್ಗದ ಜಯನಗರ ಪೋಲೀಸ್ ಠಾಣೆಗೆ ಬಂಗ್ಲಾದೇಶದ ಅನಧಿಕೃತ ವಲಸಿಗರು ನಗರದಲ್ಲಿದ್ದಾರೆ ಎಂಬ ಮಾಹಿತಿ ದೊರೆತಿದ್ದು, ಪೊಲೀಸರು ತಕ್ಷಣವಾಗಿ ಕ್ರಮ ಕೈಗೊಂಡಿದ್ದಾರೆ
ಸವಳಂಗ ರಸ್ತೆಯಲ್ಲಿ ನೂತನವಾಗಿ ಕಟ್ಟಲಾಗುತ್ತಿರುವ ಕಟ್ಟಡದ ನಿರ್ಮಾಣದ ವೇಳೆ ಕಾರ್ಮಿಕರಾಗಿ ಬಂದಿದ್ದ 7 ಜನರನ್ನ ಬಾಂಗ್ಲಾ ದೇಶಿಗರೆಂದು ದೃಢಪಟ್ಟಿದೆ.
ಜಯನಗರ ಪೊಲೀಸ್ ಪಿಐ ಸಿದ್ದೇಗೌಡರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ದಾಳಿಯ ವೇಳೆ ದಾಖಲಾತಿ ಇಲ್ಲದವರನ್ನ ಠಾಣೆಗೆ ಕರೆಯಿಸಲಾಗಿದೆ. ಇವರಲ್ಲಿ ಯಾರಿಗೂ ದಾಖಲಾತಿಗಳಿಲ್ಲವೆಂದು ತಿಳಿದು ಬಂದಿದೆ. ಮಂಗಳೂರು ವಿಳಾಸವಿರುವ ಆಧಾರ್ ಕಾರ್ಡ್ ಗಳು ಸಹ ಇವರ ಬಳಿಯಿರುವುದು ಪತ್ತೆಯಾಗಿದೆ. ಕಟ್ಟಡ ಕಾರ್ಮಿಕರ ರೂಪದಲ್ಲಿ ಬಾಂಗ್ಲದೇಶಿಗರು ನಗರದಲ್ಲಿ ಪತ್ತೆಯಾಗಿದ್ದರು.
ನಗರದಲ್ಲಿ ಬಾಂಗ್ಲದೇಶಿಗರು ಪತ್ತೆಯಾಗಿರುವುದು ಇದು ಮೊದಲಬಾರಿಯಲ್ಲ. ಪತ್ತೆಯಾದವರಿಗೆ ಬಾಂಗ್ಲ ಭಾಷೆ ಮಾತನಾಡುತ್ತಾರೆ. ಇನ್ನುಕೆಲವರಿಗೆ ಹಿಂದಿ ಭಾಷೆ ಗೊತ್ತಿದೆ. ಇವರನ್ನ ಮೇಸ್ತ್ರಿ ಕರೆದುಕೊಂಡು ಬಂದಿರುವುದು ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ಪ್ರಮುಖವಾಗಿ ಒಂದು ಸುಳ್ಳು ದಾಖಲೆಯ ಆಧಾರದ ಮೇಲೆ ಮಂಗಳೂರು ನಗರದಲ್ಲಿ ಆಧಾರ್ ಕಾರ್ಡ್ ಮಾಡಿಸಿಕೊಳ್ಳಲಾಗಿದೆ ಎಂಬ ಮಾಹಿತಿ ದೊರೆತಿದ್ದು, ಶಿವಮೊಗ್ಗದಲ್ಲಿ ಗುತ್ತಿಗೆದಾರರ ಸಹಕಾರದಿಂದ ಮತದಾರರ ಗುರುತಿನ ಚೀಟಿ ಸಹ ಮಾಡಿಸಲಾಗಿದೆ ಎಂಬುದು ಪ್ರಾಥಮಿಕ ತನಿಖೆಯೇ ತಿಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ FIR (ಪೊಲೀಸ್ ವರದಿ) ದಾಖಲಿಸಲಾಗಿದೆ ಮತ್ತು ಹೆಚ್ಚಿನ ಮಾಹಿತಿ ಬರುವ ನಿರೀಕ್ಷೆಯಲ್ಲಿದೆ.