Thursday, November 14, 2024
spot_img

ಭದ್ರಾವತಿ ಬುಡ್ಡಾ ಮತ್ತು ತಿಕಲನ ಬಂಧನವೇಕೆ.!?

 

ಕಾರ್ಖಾನೆಯ ಒಳಗಡೆ ಸೆಂಟ್ರಲ್ ಎಲೆಕ್ಟ್ರಿಕಲ್ ವರ್ಕ್ ಶಾಪ್‌ಗೆ ರಿಪೇರಿಗೆ ತಂದಿದ್ದ ವೆಲ್ಡಿಂಗ್ ಮಷಿನ್‌ನ 50 ಕೆಜಿ ತಾಂಮ್ರದ ವೈಂಡಿಂಗ್‌ನ್ನ ಕದ್ದುಕೊಂಡು ಹೋಗಿದ್ದ ಇಬ್ವರು ಆರೋಪಿಯನ್ನ ಮಾಲು ಸಮೇತ ಭದ್ರಾವತಿ ನ್ಯೂ ಟೌನ್ ಪೊಲೀಸರು ಬಂಧಿಸಿದ್ದಾರೆ. 

      ದಿನಾಂಕ:-08-09-2024 ರಂದು ರಾತ್ರಿ  ಕಳ್ಳರು ವಿ.ಐ.ಎಸ್.ಎಲ್ ಫ್ಯಾಕ್ಟರಿ ಒಳಗಡೆ ಸೆಂಟ್ರಲ್ ಎಲೆಕ್ಟಿಕಲ್ ವರ್ಕ ಶಾಪ್ ರಿಪೇರಿ ಮಾಡಲು ತಂದಿದ್ದ ವೇಲ್ಡಿಂಗ್ ಮಷಿನ್ ನಲ್ಲಿ ಇದ್ದ 35,000/-ರೂ ಬೆಲೆ ಬಾಳುವ  50 ಕೆ ಜಿ ತೂಕದ ತಾಮ್ರದ ವೈಂಡಿಂಗ್ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಶ್ರೀ ಎಲ್ ಪ್ರವೀಣ್ ಕುಮಾರ್ ರವರು ವಿ ಐ ಎಸ್ ಎಲ್ ಸೆಕ್ಯೂರಿಟಿ ಗಾರ್ಡ್ ರವರು ನೀಡಿದ ದೂರಿನ ಮೇರೆಗೆ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0151/2024 ಕಲಂ 331(3) 331(3) 305 ಬಿಎನ್ಎಸ್ ಆಕ್ಟ್-2023 ರೀತ್ಯಾ ಪ್ರಕರಣ ದಾಖಲಿಸಲಾಗಿತ್ತು

      ಈ ಪ್ರಕರಣದಲ್ಲಿ ಆರೋಪಿ ಮತ್ತು ಕಳುವಾದ ಮಾಲು ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶ್ರೀ ಎ.  ಜಿ. ಕಾರಿಯಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು -2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಶ್ರೀ ನಾಗರಾಜ್,ಪೊಲೀಸ್ ಉಪಾದೀಕ್ಷಕರವರು ಭದ್ರಾವತಿ ಉಪ ವಿಭಾಗ ಶ್ರೀ ಶ್ರೀಶೈಲಕುಮಾ‌ರ್ ಸಿಪಿಐ ನಗರ ವೃತ್ತ ಭದ್ರಾವತಿ ರವರ ಮೇಲ್ವಿಚಾರಣೆಯಲ್ಲಿ ಶ್ರೀ ರಮೇಶ್. ಟಿ.ಪಿ.ಎಸ್.ಐ ನ್ಯೂಟೌನ್ ಪೊಲೀಸ್ ಠಾಣೆ ಮತ್ತು ಶ್ರೀ ಮಂಜಪ್ಪ ಎಎಸ್‌ಐ ಹಾಗೂ ಸಿಬ್ಬಂದಿಗಳಾದ ಸಿ ಹೆಚ್ ಸಿ – ನವೀನ್ ಮತ್ತು ಸಿಪಿಸಿ ಪ್ರಸನ್ನ ರವರನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು

    ತನಿಖಾ ತಂಡವು ಪ್ರಕರಣದ ಆರೋಪಿಗಳಾದ
1) ವೆಂಕಟೇಶ @ ಬುಡ್ಡಾ,  29 ವರ್ಷ, ಹೊಸ ಕೋಡಿಹಳ್ಳಿ ಗ್ರಾಮ ದೇವನರಸೀಪುರ,  ಭದ್ರಾವತಿ,
2) ಮುನೀರ್ ಜಾನ್ ತಿಕಲ, ಎಕಿನ್ಸಾ ಕಾಲೋನಿ ಭದ್ರಾವತಿ ರವರನ್ನು ದಸ್ತಗಿರಿ ಮಾಡಿ ಸದರಿಯವರಿಂದ  ಪ್ರಕರಣಕ್ಕೆ ಸಂಬಂಧಿಸಿದ,  ಅಂದಾಜು ಮೌಲ್ಯ  36,500/- ರೂಗಳ ಬೆಲೆಯ 37 ಕೆಜಿ ತೂಕದ ತಾಮ್ರದ ತಂತಿ ಮತ್ತು ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ  50,000/- ರೂಗಳ ದ್ವಿಚಕ್ರವಾಹನ ಮತ್ತು ಅಂದಾಜು ಮೌಲ್ಯ   50,000/- ರೂಗಳ ಪ್ಯಾಸೆಂಜರ್ ಆಟೋ  ಸೇರಿ ಒಟ್ಟು 1,36,500/- ರೂಗಳ ಮಾಲನ್ನು ಅಮಾನತ್ತು  ಪಡಿಸಿಕೊಂಡಿರುತ್ತಾರೆ.

    ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

Related Articles

Stay Connected

0FansLike
3,912FollowersFollow
0SubscribersSubscribe

Latest Articles