ಜನಸ್ನೇಹಿ ಸರ್ಕಲ್ ಇನ್ಸ್ಪೆಕ್ಟರ್ ಹರೀಶ್ ಪಾಟೀಲ್ ರವರು ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಗೆ ವರ್ಗ.!?

0
248

ಜನಸ್ನೇಹಿ ಸರ್ಕಲ್ ಇನ್ಸ್ಪೆಕ್ಟರ್ ಹರೀಶ್ ಪಾಟೀಲ್ ರವರು ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಗೆ ವರ್ಗ.!?

ಕುಂಸಿ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಹರೀಶ ಪಾಟೀಲ್ ಅವರು ತಮ್ಮ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ಮತ್ತು ಜನಸ್ನೇಹಿಯಾಗಿ ನಿರ್ವಹಿಸುತ್ತಿದ್ದಾರೆ. ಕುಂಸಿ ಪ್ರದೇಶವು ಹಳ್ಳಿಯ ಭಾಗವನ್ನೊಳಗೊಂಡಿರುವುದರಿಂದ,
ಇಲ್ಲಿ ಬಹುತೇಕ ಜಮೀನು ಸಂಬಂಧಿತ ವ್ಯಾಜ್ಯಗಳು ಹೆಚ್ಚು ಪ್ರಸಕ್ತವಾಗಿರುತ್ತವೆ. ಇಂತಹ ಸನ್ನಿವೇಶಗಳಲ್ಲಿ ಇನ್ಸ್ಪೆಕ್ಟರ್ ಪಾಟೀಲ್ ಅವರು ರೈತರ ಮನಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡು, ಅವರ ಸಮಸ್ಯೆಗಳನ್ನು ಕಾನೂನಾತ್ಮಕವಾಗಿ ಮತ್ತು ಮಾನವೀಯ ದೃಷ್ಟಿಯಿಂದ ಬಗೆಹರಿಸುವಲ್ಲಿ ಮುಂಚೂಣಿಯಲ್ಲಿದ್ದರು.

ಇತ್ತೀಚಿನ ದಿನಗಳಲ್ಲಿ, ಕುಂಸಿ ವ್ಯಾಪ್ತಿಯ ಮಂಚರಿಕೊಪ್ಪದ ಸಾವಿತ್ರಮನ ಕೊಲೆ ಒಂದು ಗಂಭೀರ ಘಟನೆ, ಇಡೀ ಗ್ರಾಮವನ್ನು ಶಾಕ್‌ನಲ್ಲಿಟ್ಟಿದಂತು ಸತ್ಯ ಈ ಕೇಸ್‌ನಲ್ಲಿಯೂ ಅವರು ತಮ್ಮ ವೃತ್ತಿಪರತೆಗೆ ತಕ್ಕಂತೆ ತಕ್ಷಣದ ಕ್ರಮಗಳನ್ನು ಕೈಗೊಂಡು, ಕೇವಲ ಎರಡು ದಿನಗಳಲ್ಲಿಯೇ ಅಪರಾಧಿಯನ್ನು ಬಂಧಿಸಿದರು. ಸಾವಿತ್ರಮ್ಮ  ಕೊಂದ ಅಪರಾಧಿ ಯಾವುದೇ ಸಾಕ್ಷಿಯನ್ನು ಬಿಟ್ಟು ಹೋಗದೆ ಹೊಂಚುಹಾಕಿದ್ದು, ಪ್ರಕರಣವನ್ನು ಬಗೆಹರಿಸುವಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಿತು. ಅತ್ಯಂತ ತಂತ್ರಜ್ಞಾನದ ಸಹಾಯದಿಂದ ಆರೋಪಿ ಬಗ್ಗೆ ಮಾಹಿತಿ ಸಂಗ್ರಹಿಸಿ, ದೋಷಿಯನ್ನು ಬಂಧಿಸಿದರು
ಸರ್ಕಲ್ ಇನ್ಸ್ಪೆಕ್ಟರ್ ಹರೀಶ ಪಾಟೀಲ್ ಅವರು ತಮ್ಮ ಕರ್ತವ್ಯದಲ್ಲಿ ಜನಸ್ನೇಹಿ ನಡೆ-ನುಡಿಗಳನ್ನ ಅವಲಂಬಿಸುತ್ತಿದ್ದಾರೆ. ಕಾನೂನು ಪಾಲನೆಯ ಸಂದರ್ಭದಲ್ಲಿ ಕೂಡ, ಅವರು ಜನರ ಸಮಸ್ಯೆಗಳಿಗೆ ದಾರಿದೀಪವಾಗಿದ್ದು, ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇಂತಹ ಅಧಿಕಾರಿಗಳು ನಮ್ಮ ಸಮಾಜಕ್ಕೆ ಮಾದರಿಯಾಗಿದ್ದು, ಶಿವಮೊಗ್ಗ ಕೋಟೆ ಪೋಲಿಸ್ ಠಾಣೆಗೆ ವರ್ಗವಾಗಿರುವ ಹರೀಶ್ ಪಾಟೀಲ  ಸೇವಾ ಮನೋಭಾವದ ಅಧಿಕಾರಿಗಳು ಹೆಚ್ಚಾಗಿ ಸಿಗಲಿ ಎಂದು ಕುಂಸಿ ಜನರು ಹಾಗೂ ಕುಂಸಿಠಾಣೆಯ ಸಿಬ್ಬಂದಿ ವರ್ಗ ಹಾರೈಸಿ ಬೀಳ್ಕೊಟ್ಟಿದ್ದಾರೆ.